“ಗುಬ್ಬಿ ವಿವೇಕಾನಂದ ವಿದ್ಯಾಪೀಠದ ವಿರಾಟ್ ಸಮಾರಂಭ” – ಇದು ತವರಿನ ಸಂಭ್ರಮ
ಕಲ್ಪನಾತೀತ ವೇದಿಕೆ, ಊಹಾತೀತ ಕಾರ್ಯಕ್ರಮಗಳು, ವರ್ಣನಾತೀತ ವರ್ಣರಂಜಿತ ವೈವಿಧ್ಯಮಯ ವಿರಾಟ್ ಸಮಾರಂಭ. ಇದು ಮೊನ್ನೆ ಶನಿವಾರ ಮತ್ತು ಭಾನುವಾರ 20 ಹಾಗೂ 21.01.2024 ರಂದು ನನ್ನ ಹುಟ್ಟೂರು ಗುಬ್ಬಿಯಲ್ಲಿ ನಡೆದ ವಿವೇಕಾನಂದ ವಿದ್ಯಾಪೀಠದ ರಜತ ಮಹೋತ್ಸವದ ವೈಭವ.
ಈ ನನ್ನ ಜೀವಮಾನದಲ್ಲಿ ದೇಶಾದ್ಯಂತ ನೂರಾರು ಸಮಾರಂಭದಲ್ಲಿ ಭಾಗವಹಿಸಿರುವ ನಾನು, ಅದೂ ಗುಬ್ಬಿಯಂತಹ ತಾಲ್ಲೋಕು ಕೇಂದ್ರದಲ್ಲಿ ಇಂತಹ ಅದ್ಭುತ, ಅಮೋಘ, ಅನನ್ಯ ಸಮಾರಂಭವನ್ನು ಕಂಡಿರಲಿಲ್ಲ.. ಕೇಳೂ ಇರಲಿಲ್ಲ. ಸಮಾರಂಭದ ಅದ್ದೂರಿತನ, ವೈಭವ, ನೆರೆದಿದ್ದ ಸಹಸ್ರಗಟ್ಟಲೆ ಜನಸಾಗರದ ಜೊತೆಜೊತೆಗೆ ಮಕ್ಕಳ ಅರ್ಥಪೂರ್ಣ, ಭಾವಪೂರ್ಣ, ಔಚಿತ್ಯಪೂರ್ಣ, ಕೌಶಲ್ಯಪೂರ್ಣ ಮತ್ತು ಪರಿಪೂರ್ಣ ಮನರಂಜನೆಯ ಸತ್ವಯುತ ಸುಸಂಸ್ಕೃತ ಆದರ್ಶಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆರಗು ಹುಟ್ಟಿಸುತ್ತಾ, ಅನನ್ಯ ಮೆರುಗನ್ನೂ, ಅಪೂರ್ವ ರಂಗನ್ನು ಹರಡಿದವು. ಸಮಾರಂಭದ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಪ್ರತಿಯೊಂದು ಮಗು, ಇಡೀ ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯ ಸಮಸ್ತ ಪದಾಧಿಕಾರಿಗಳು ಅಭಿನಂದನಾರ್ಹರು.
20 ನೆಯ ತಾರೀಖಿನಂದೇ ನಾನು ಮುಖ್ಯ ಅತಿಥಿಯಾಗಿ ಆಮಂತ್ರಿತನಾಗಿದ್ದೆ. ಆದರೆ ಅಂದೇ ರಾಜ್ಯಮಟ್ಟದ ಪ್ರತಿಷ್ಟಿತ ‘ಹರಿಹರ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆಗೊಂಡಿದ್ದರಿಂದ ಗುಬ್ಬಿಗೆ ಹೋಗಲಾಗಲಿಲ್ಲ. ವಿವೇಕಾನಂದ ವಿದ್ಯಾಪೀಠದ ಮುಖ್ಯಸ್ಥರಾದ ಶ್ರೀಯುತ ಅರುಣ್ ಅವರು ನನ್ನ ಗೈರುಹಾಜರಿಯನ್ನು ಮನ್ನಿಸಿ, 21 ರಂದು ಭಾಗವಹಿಸಲು ಅನುವು ಮಾಡಿಕೊಟ್ಟರು. ಪದ್ಮಶ್ರೀ ಜೋಗತಿ ಮಂಜಮ್ಮ, ಜಾನಪದ ತಜ್ಞ ಡಾ.ಚಕ್ಕೆರೆ ಶಿವಶಂಕರ್, ಜನಪ್ರಿಯ ಕಲಾವಿದೆ ಡಾ.ವತ್ಸಲಾ ಮೋಹನ್ ಅವರಂತಹ ದಿಗ್ಗಜರೊಡನೆ ವೇದಿಕೆ ಏರುವ ಸುವರ್ಣಾವಕಾಶ ಕಲ್ಪಿಸಿಕೊಟ್ಟರು. ಇಂತಹ ಅದ್ವಿತೀಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಸನ್ಮಾನಿತಗೊಂಡು, ತವರಿನ ಪ್ರೀತಿ ಸಂಭ್ರಮವನ್ನು ಎದೆತುಂಬಿಕೊಂಡು, ಹುಟ್ಟೂರಿನ ವೈಭವ ಸಡಗರವನ್ನು ಕಣ್ತುಂಬಿಕೊಂಡು ಕೃತಾರ್ಥನಾಗಲು ಕಾರಣರಾದ ಶ್ರೀ ಅರುಣ್, ಸಂಗೀತಾ ಮೇಡಂ, ಅಚಲ, ಅಭಿಷೇಕ್ ಅವರಿಗೆ ನಾನು ಅಕ್ಷರಶಃ ಚಿರಋಣಿ. ನನ್ನೂರಿನ ಜೀವದ ಗೆಳೆಯರಾದ ಶ್ರೀ ಕೆಂಪೇಗೌಡರು ಹಾಗೂ ಶ್ರೀ ಜಗದೀಶ್ ಅವರಿಗೆ ನಾನು ಆಭಾರಿ.
ನನ್ನೂರು ನನ್ನನ್ನು ಗುರುತಿಸಿ ಸನ್ಮಾನಿಸಲು ಕಾರಣ ಈ ಅಕ್ಷರಲೋಕ ಮತ್ತು ನಿಮ್ಮಂತಹ ಅಕ್ಷರಬಂಧುಗಳು. ನೀವು ನಿತ್ಯವೂ ನನ್ನ ಅಕ್ಷರಗಳನ್ನು ಅಕ್ಕರೆಯಿಂದ ಓದಿ, ಮೆಚ್ಚಿ, ಹಾರೈಸಿ ಮುನ್ನಡೆಸದೇ ಇದ್ದಿದ್ದರೆ ನಾನು ಅನಾಮಿಕನಾಗೇ ಉಳಿದುಬಿಡುತ್ತಿದ್ದೆ. ಈ ನನ್ನೆಲ್ಲ ಅಕ್ಷರಗಳ ಯಶಸ್ಸು ಹಾಗೂ ಶ್ರೇಯಸ್ಸಿಗೆ ನೀವೇ ಕಾರಣ, ನೀವೇ ನಿತ್ಯ ಪ್ರೇರಣ. ಹಾಗಾಗಿ ತವರಿನ ಈ ಸಂಭ್ರಮ, ಸಂತಸ ಸಕಲವೂ ನಿಮಗೇ ಅರ್ಪಣ. ಅಂದಿನ ಅನನ್ಯ ದೃಶ್ಯಾವಳಿಯೊಂದಿಗೆ ಒಪ್ಪಿಸಿಕೊಳ್ಳಿ ನನ್ನ ಅಂತರಾಳದ ಅನಂತ ನಮನಗಳನ್ನು.” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
“ಗುಬ್ಬಿ ವಿವೇಕಾನಂದ ವಿದ್ಯಾಪೀಠದ ವಿರಾಟ್ ಸಮಾರಂಭ” – ಇದು ತವರಿನ ಸಂಭ್ರಮ
ಕಲ್ಪನಾತೀತ ವೇದಿಕೆ, ಊಹಾತೀತ ಕಾರ್ಯಕ್ರಮಗಳು, ವರ್ಣನಾತೀತ ವರ್ಣರಂಜಿತ ವೈವಿಧ್ಯಮಯ ವಿರಾಟ್ ಸಮಾರಂಭ. ಇದು ಮೊನ್ನೆ ಶನಿವಾರ ಮತ್ತು ಭಾನುವಾರ 20 ಹಾಗೂ 21.01.2024 ರಂದು ನನ್ನ ಹುಟ್ಟೂರು ಗುಬ್ಬಿಯಲ್ಲಿ ನಡೆದ ವಿವೇಕಾನಂದ ವಿದ್ಯಾಪೀಠದ ರಜತ ಮಹೋತ್ಸವದ ವೈಭವ.
ಈ ನನ್ನ ಜೀವಮಾನದಲ್ಲಿ ದೇಶಾದ್ಯಂತ ನೂರಾರು ಸಮಾರಂಭದಲ್ಲಿ ಭಾಗವಹಿಸಿರುವ ನಾನು, ಅದೂ ಗುಬ್ಬಿಯಂತಹ ತಾಲ್ಲೋಕು ಕೇಂದ್ರದಲ್ಲಿ ಇಂತಹ ಅದ್ಭುತ, ಅಮೋಘ, ಅನನ್ಯ ಸಮಾರಂಭವನ್ನು ಕಂಡಿರಲಿಲ್ಲ.. ಕೇಳೂ ಇರಲಿಲ್ಲ. ಸಮಾರಂಭದ ಅದ್ದೂರಿತನ, ವೈಭವ, ನೆರೆದಿದ್ದ ಸಹಸ್ರಗಟ್ಟಲೆ ಜನಸಾಗರದ ಜೊತೆಜೊತೆಗೆ ಮಕ್ಕಳ ಅರ್ಥಪೂರ್ಣ, ಭಾವಪೂರ್ಣ, ಔಚಿತ್ಯಪೂರ್ಣ, ಕೌಶಲ್ಯಪೂರ್ಣ ಮತ್ತು ಪರಿಪೂರ್ಣ ಮನರಂಜನೆಯ ಸತ್ವಯುತ ಸುಸಂಸ್ಕೃತ ಆದರ್ಶಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆರಗು ಹುಟ್ಟಿಸುತ್ತಾ, ಅನನ್ಯ ಮೆರುಗನ್ನೂ, ಅಪೂರ್ವ ರಂಗನ್ನು ಹರಡಿದವು. ಸಮಾರಂಭದ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಪ್ರತಿಯೊಂದು ಮಗು, ಇಡೀ ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯ ಸಮಸ್ತ ಪದಾಧಿಕಾರಿಗಳು ಅಭಿನಂದನಾರ್ಹರು.
ನದಲ್ಲಿ ದೇಶಾದ್ಯಂತ ನೂರಾರು ಸಮಾರಂಭದಲ್ಲಿ ಭಾಗವಹಿಸಿರುವ ನಾನು, ಅದೂ ಗು.
“ಗುಬ್ಬಿ ವಿವೇಕಾನಂದ ವಿದ್ಯಾಪೀಠದ ವಿರಾಟ್ ಸಮಾರಂಭ” – ಇದು ತವರಿನ ಸಂಭ್ರಮ
ಕಲ್ಪನಾತೀತ ವೇದಿಕೆ, ಊಹಾತೀತ ಕಾರ್ಯಕ್ರಮಗಳು, ವರ್ಣನಾತೀತ ವರ್ಣರಂಜಿತ ವೈವಿಧ್ಯಮಯ ವಿರಾಟ್ ಸಮಾರಂಭ. ಇದು ಮೊನ್ನೆ ಶನಿವಾರ ಮತ್ತು ಭಾನುವಾರ 20 ಹಾಗೂ 21.01.2024 ರಂದು ನನ್ನ ಹುಟ್ಟೂರು ಗುಬ್ಬಿಯಲ್ಲಿ ನಡೆದ ವಿವೇಕಾನಂದ ವಿದ್ಯಾಪೀಠದ ರಜತ ಮಹೋತ್ಸವದ ವೈಭವ.
20 ನೆಯ ತಾರೀಖಿನಂದೇ ನಾನು ಮುಖ್ಯ ಅತಿಥಿಯಾಗಿ ಆಮಂತ್ರಿತನಾಗಿದ್ದೆ. ಆದರೆ ಅಂದೇ ರಾಜ್ಯಮಟ್ಟದ ಪ್ರತಿಷ್ಟಿತ ‘ಹರಿಹರ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆಗೊಂಡಿದ್ದರಿಂದ ಗುಬ್ಬಿಗೆ ಹೋಗಲಾಗಲಿಲ್ಲ. ವಿವೇಕಾನಂದ ವಿದ್ಯಾಪೀಠದ ಮುಖ್ಯಸ್ಥರಾದ ಶ್ರೀಯುತ ಅರುಣ್ ಅವರು ನನ್ನ ಗೈರುಹಾಜರಿಯನ್ನು ಮನ್ನಿಸಿ, 21 ರಂದು ಭಾಗವಹಿಸಲು ಅನುವು ಮಾಡಿಕೊಟ್ಟರು. ಪದ್ಮಶ್ರೀ ಜೋಗತಿ ಮಂಜಮ್ಮ, ಜಾನಪದ ತಜ್ಞ ಡಾ.ಚಕ್ಕೆರೆ ಶಿವಶಂಕರ್, ಜನಪ್ರಿಯ ಕಲಾವಿದೆ ಡಾ.ವತ್ಸಲಾ ಮೋಹನ್ ಅವರಂತಹ ದಿಗ್ಗಜರೊಡನೆ ವೇದಿಕೆ ಏರುವ ಸುವರ್ಣಾವಕಾಶ ಕಲ್ಪಿಸಿಕೊಟ್ಟರು. ಇಂತಹ ಅದ್ವಿತೀಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಸನ್ಮಾನಿತಗೊಂಡು, ತವರಿನ ಪ್ರೀತಿ ಸಂಭ್ರಮವನ್ನು ಎದೆತುಂಬಿಕೊಂಡು, ಹುಟ್ಟೂರಿನ ವೈಭವ ಸಡಗರವನ್ನು ಕಣ್ತುಂಬಿಕೊಂಡು ಕೃತಾರ್ಥನಾಗಲು ಕಾರಣರಾದ ಶ್ರೀ ಅರುಣ್, ಸಂಗೀತಾ ಮೇಡಂ, ಅಚಲ, ಅಭಿಷೇಕ್ ಅವರಿಗೆ ನಾನು ಅಕ್ಷರಶಃ ಚಿರಋಣಿ. ನನ್ನೂರಿನ ಜೀವದ ಗೆಳೆಯರಾದ ಶ್ರೀ ಕೆಂಪೇಗೌಡರು ಹಾಗೂ ಶ್ರೀ ಜಗದೀಶ್ ಅವರಿಗೆ ನಾನು ಆಭಾರಿ.
ನನ್ನೂರು ನನ್ನನ್ನು ಗಪ್ಪಿಸಿಕೊಳ್ಳಿ ನನ್ನ ಅಂತರಾಳದ ಅನಂತ ನಮನಗಳನ್ನು.” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.