ಪದ್ಮಶ್ರೀ ರುದ್ರ ವೀಣೆ ಶ್ರೀಮತಿ ಜ್ಯೋತಿ ಹೆಗಡೆ

ಸಂಗೀತದಲ್ಲಿ ವಿರಳರಲ್ಲಿ ವಿರಳ ಕಲಾವಿದರನ್ನೊಳಗೊಂಡ ರುದ್ರ ವೀಣೆಯನ್ನು ನುಡಿಸುವುದರಲ್ಲಿ “ಏಷ್ಯಾ ಖಂಡದ ಪ್ರಥಮ ಮಹಿಳೆ” ಎಂಬ ಹೆಗ್ಗಳಿಕೆಗೆ ಪಾತ್ರರಾದ ಶ್ರೀಮತಿ ಜ್ಯೋತಿ ಹೆಗಡೆಯವರು ನಮ್ಮ ಭಾರತ ದೇಶ ಕಂಡ ಅಪರೂಪದ ಸಾಧಕಿ.
ಇವರು ಕೂಡ ಮೂಲತಃ ನಮ್ಮ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಸಿಲಕೊಪ್ಪದವರು.ಜೆಂಟ್ಸ್ ಡೊಮೇನ್ ಎಂದು ಪುರುಷ ವರ್ಗಕ್ಕೆ ಸೀಮಿತವಾಗಿದ್ದ ಕಲಿಕೆಯನ್ನು ಅತ್ಯಾಸಕ್ತಿಯಿಂದ ಕಲಿತು ಶ್ರಮಿಸಿ ಪ್ರಕೃತಿಯ ವಿರುದ್ಧವೆ ನಿಂತು ಮಹಿಳೆಯರು ಇದನ್ನು ಕಲಿಯಬಹುದು ಎಂದು ತೋರಿಸಿಕೊಟ್ಟವರು.ತಮ್ಮ ಬಿಸಿಲುಕೊಪ್ಪದ ಮನೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ವಿದೇಶಗಳಿಂದಲೂ ವಿದ್ಯಾರ್ಥಿಗಳು ಬಂದು ರುದ್ರ ವೀಣೆಯನ್ನು ಆಸಕ್ತಿಯಿಂದ ಕಲಿಯುತ್ತಿದ್ದಾರೆ.ದೇಶ ವಿದೇಶಗಳಲ್ಲಿ ಸುಮಾರು ಏಳೆಂಟು ದೇಶಗಳಲ್ಲಿ ಪ್ರದರ್ಶನ ನೀಡಿದ ಕಲಾವಿದೆ ಅಷ್ಟೇ ಅಲ್ಲದೆ ನಮ್ಮ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ರುದ್ರ ವೀಣೆಯ ಮಹತ್ವದ ಬಗ್ಗೆ ತಿಳಿ ಹೇಳಿದ್ದಾರೆ.ಪಂಡಿತ್ ಬಿಂದು ಮಾಧವ್ ಪಾಠಕ್ ಅವರ ಬಳಿ ಸಂಗೀತಾಭ್ಯಾಸವನ್ನು ಆರಂಭಿಸಿದ ಇವರು ಹತ್ತಾರು ಉದಯೋನ್ಮುಖ ಕಲಾವಿದರ ಉದಯಕ್ಕೂ ಕಾರಣರಾಗಿದ್ದಾರೆ.

ಈ ಹಿರಿಯ ಸಾಧಕಿಯ ವಿರಳ ಮಹಾನ್ ಸಾಧನೆಯನ್ನು ಇನ್ನು ಮುಂದಾದರೂ ಕೇಂದ್ರ ಸರ್ಕಾರ ಗಮನಿಸಬೇಕು.ಇಂತಹ ವ್ಯಕ್ತಿಗಳು ಪದ್ಮಶ್ರೀಗೆ ಯೋಗ್ಯರು,ಅಷ್ಟೇ ಅಲ್ಲದೆ ಭಾರತ ಸರ್ಕಾರ ನೀಡುವ ಉನ್ನತ ಮಟ್ಟದ ಗೌರವಕ್ಕೂ ಇವರು ಅರ್ಹರು.ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಈ ಅಪರೂಪದ ಸಾಧಕಿ ಜ್ಯೋತಿ ಹೆಗಡೆಯವರಿಗೆ ಪದ್ಮಶ್ರೀ ದಕ್ಕಿದರೆ ಇವರು ನಡೆದು ಬಂದ ಕಲ್ಲು ಮುಳ್ಳಿನ ಹಾದಿಯ ಬದುಕಿನ ಅನಾವರಣ ಇಡೀ ಪ್ರಪಂಚಕ್ಕೆ ಆಗುತ್ತದೆ ಎಂಬುದು ನನ್ನ ಉದ್ದೇಶ.ಇತರರಿಗೂ ಸ್ಪೂರ್ತಿಯಾಗುವುದರಲ್ಲಿ ಸಂಶಯವಿಲ್ಲ.

PadmaShri

PadmaAwards


Jyoti Hegde

Related Posts