ಬೆಂಗಳೂರು ನಗರ ಜಿಲ್ಲೆಯ ಚಾಮರಾಜಪೇಟೆ, ಇಂದಿರಾ ನಗರ, ರಾಜಾಜಿನಗರ, ಯಲಹಂಕ ಮತ್ತು ಜೆ.ಪಿ.ನಗರದ ಉಪ ನೋಂದಣಿ ಕಚೇರಿಗಳು ತಿಂಗಳ ಎಲ್ಲ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ.
ಇನ್ನು ಮುಂದೆ, ಈ ಕಚೇರಿಗಳಲ್ಲಿ ತಿಂಗಳ ಎಲ್ಲ ಭಾನುವಾರಗಳು, ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಈ ಕಚೇರಿಗಳಲ್ಲಿ ನೋಂದಾವಣೆ ಕಾರ್ಯ ನಡೆಯಲಿದೆ ಎಂದು ಮುದ್ರಾಂಕ ಇಲಾಖೆ ತಿಳಿಸಿದೆ.
ಆದರೆ, ರಜೆಯ ದಿನಗಳಲ್ಲೂ ಕೆಲಸ ನಿರ್ವಹಿಸಲು ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಜನರ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕರಿಗೆ ಅನುಕೂಲ ಒದಗಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.