https://photos.app.goo.gl/K5jsTy5oh6yBTjZa7
ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ
ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಪ್ರೈವೇಟ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ಸ್
ದಿನಾಂಕ27/8/24 ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರೆಸ್ ಕ್ಲಬನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ್ದರು
29 ರಿಂದ 31 ಆಗಸ್ಟ್ 2024 ರಂದು, BOCI ವತಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಿಗದಿಪಡಿಸಲಾದ Prawas 4.0 ಪ್ರದರ್ಶನವನ್ನು, ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘ ಮತ್ತು ಇತರೆ ರಾಜ್ಯದ ಸಂಘಗಳು ಬಹಿಷ್ಕರಿಸುತ್ತೇವೆಂದು ತಿಳಿಸಿದ್ದರು.
ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘವು ಮತ್ತು ಇತರ ರಾಜ್ಯ ಸಂಘಗಳೊಂದಿಗೆ ಒಟ್ಟಾಗಿ 29 ರಿಂದ 31 ಆಗಸ್ಟ್ 2024 ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ಮುಂಬರುವ PRAWAS 4.0 ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರವನ್ನು ಹಲವು ಸಂಘಗಳ ಜೊತೆಯಲ್ಲಿ ಸಭೆಯನ್ನು ನಡೆಸಿ, ಬಸ್ ಅಂಡ್ ಕಾರ್ ಆಪರೇಟರ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ರಾಜ್ಯದ ಸಂಘಟನೆಗಳಿಗೆ ಆಗುತ್ತಿರುವ ಅನ್ಯಾಯ, ಧೋರಣೆ, ಹಣಕಾಸು ಅವ್ಯವಹಾರ, ಎಲ್ಲವನ್ನು ಪರಿಗಣನೆಗೆ ತೆಗೆದುಕೊಂಡು ನಂತರ ಮೇಲಿನ
ತೀರ್ಮಾನವನ್ನು ಈ ಕೆಳಗಿನ ಕಾರಣಗಳನ್ನು ಆಧರಿಸಿ ತೆಗೆದುಕೊಳ್ಳಲಾಗಿದೆಂದು ತಿಳಿಸಿದ್ದರು.
ಕಾರಣಗಳು:
1. ನಿಧಿಯ ದುರ್ಬಳಕೆ; ಪ್ರವಾಸ್ 4.0 ಪ್ರದರ್ಶನಕ್ಕೆ ಸಂಬಂಧಿಸಿದಂತೆ ನಿಧಿಯ ನಿರ್ವಹಣೆಯಲ್ಲಿ
ಹಣಕಾಸಿನ ಅಕ್ರಮಗಳು ಮತ್ತು ಪಾರದರ್ಶಕತೆಯ ಕೊರತೆಯ ಹಲವಾರು ನಿದರ್ಶನಗಳು ಇರುವ ಕಾರಣ ಮತ್ತು ಹಿಂದಿನ ಮೂರು ಪ್ರವಾಸಿಗೆ ಸಂಬಂಧಿಸಿದಂತೆ ಸದಸ್ಯರಿಗೆ ಯಾವುದೇ ರೀತಿಯಾದಂತಹ ಹಣಕಾಸು ವ್ಯವಹಾರದ ಮಾಹಿತಿ ನೀಡದೆ ಇರುವುದು ನಿಧಿಯ ದುರ್ಬಳಕೆಗೆ ನಿದರ್ಶನವಾಗಿದೆ.
ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲತೆ: ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ (AITP), ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸಸ್ (VLTD), ಮತ್ತು ಪ್ಯಾನಿಕ್ ಬಟನ್‌ಗಳಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು BOCI ಸಂಘಟಕರು ಸಮರ್ಪಕವಾಗಿ ನಿರ್ವಹಿಸುವಲ್ಲಿ ಎಡವಿರುವುದು ಎದ್ದು ಕಾಣುತ್ತದೆ. ಬಸ್ ಮಾಲೀಕರು ಎಐಟಿಪಿ ಅಡಿಯಲ್ಲಿ ಕೇಂದ್ರಕ್ಕೆ ರಸ್ತೆ ತೆರಿಗೆಯನ್ನು ಕಟ್ಟಿ, ರಾಜ್ಯದಲ್ಲೂ ಸಹ ರಸ್ತೆ ತೆರಿಗೆಯನ್ನು ಕಟ್ಟುವ ಪರಿಸ್ಥಿತಿಯು 1 ಉದ್ಭವವಾಗಿದ್ದು ಇದರಿಂದ ಹಲವು ಮಧ್ಯಮ ಮತ್ತು ಸಣ್ಣ ಮಾಲೀಕರಿಗೆ ಬಹು ದೊಡ್ಡ ಸಮಸ್ಯೆ ಮತ್ತು ತೊಂದರೆಗೆ ಈಡಾಗಿರುತ್ತದೆ.
3.ಅಗ್ರಿಗೇಟರ್ ಸಮಸ್ಯೆಗಳು: ಆನ್‌ಲೈನ್ ಅಗ್ರಿಗೇಟರ್ ಕಂಪನಿಗಳು ಕಮಿಷನ್‌ನಲ್ಲಿ ಮಾಲೀಕರನ್ನು ಸುಲಿಗೆ ಮಾಡುತ್ತಿರುವುದಲ್ಲದೆ ಅವರು ತಮ್ಮ ಪ್ರಚಾರ ಜಾಹೀರಾತುಗಳಿಗಾಗಿ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಅಗ್ರಿಗೇಟರ್ ಕಂಪನಿಗಳು ಮಾಲೀಕರಿಂದ 12 ಪರ್ಸೆಂಟ್ ಕಮಿಷನ್ ನಿಂದ 20% ಕಮಿಷನ್ ಪಡೆಯುತ್ತಿರುವುದು ಹಲವು ಸದಸ್ಯರು ಮತ್ತು BOCI ಗಮನದಲ್ಲಿದ್ದರೂ ಸಹ, ಅಗ್ರಿಗೇಟರ್ ಕಂಪನಿಗಳ ಬಳಿ Prawas 4.0 ಪ್ರದರ್ಶನದಲ್ಲಿ ಜಾಹೀರಾತುಗಳನ್ನು ಪಡೆಯುವುದಕ್ಕೋಸ್ಕರ, ಇದರ ವಿರುದ್ಧ ಯಾವುದೇ ರೀತಿಯ ಧ್ವನಿಯನ್ನು ಎತ್ತದೆ ಇರುವುದು ಎದ್ದು ಕಾಣುತ್ತಿರುತ್ತದೆ.
4. BOCI ವಿರುದ್ಧ ಹಲವು ದೂರುಗಳು ದಾಖಲಾಗಿರುವ ಕಾರಣ: ಬಸ್ ಆಪರೇಟರ್ಸ್ ಕಾನ್ಸೆಡರೇಶನ್ ಆಫ್ ಇಂಡಿಯಾ (BOCI) ವಿರುದ್ಧ ನೀತಿ ಆಯೋಗ, ಆರ್ಥಿಕ ಅಪರಾಧಗಳ ໖ (EOW) ದೆಹಲಿ ಮತ್ತು ಸೊಸೈಟಿಗಳ ರಿಜಿಸ್ಟ್ರಾರ್‌ಗೆ ಹಲವಾರು ದೂರುಗಳನ್ನು ಸದಸ್ಯರಿಂದ ಸಲ್ಲಿಸಲಾಗಿರುತ್ತದೆ.
5. ದಿವಾಳಿಯಾದ ಪ್ರಧಾನ ಕಾರ್ಯದರ್ಶಿಯ ಮುಂದುವರಿಕೆ: ಪ್ರಸ್ತುತ ಪ್ರಧಾನ BOCI ಕಾರ್ಯದರ್ಶಿ ದಿವಾಳಿ ಎಂದು ಘೋಷಿಸಲ್ಪಟ್ಟರೂ, Bankruptcy act section 142(2) ಉಲ್ಲಂಘಿಸಿ ಅಧಿಕಾರವನ್ನು ಮುಂದುವರೆಸುತ್ತಿದ್ದಾರೆ, ಇದು ಸಂಸ್ಥೆಯ ಆಡಳಿತದ ಬಗ್ಗೆ ಗಂಭೀರವಾದ ಕಳವಳವನ್ನು, ಚಿಹ್ನೆಯನ್ನು ಉಂಟು ಮಾಡಿರುತ್ತದೆ
6. ಪಾರದರ್ಶಕತೆಯ ಕೊರತೆ: ಒಕ್ಕೂಟದೊಳಗಿನ ಕಾರ್ಯಾಚರಣೆಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ನಿರಂತರ ಪಾರದರ್ಶಕತೆಯ ಕೊರತೆ ಇದ್ದು, ರಾಜ್ಯ ಸಂಘಟನೆಗಳು ಕೇಂದ್ರ ಸಂಘಟನೆಯಾದಂತಹ ಬಿ ಓ ಸಿ ಐ ಬಳಿ ಪ್ರಶ್ನೆ ಮಾಡಿದರು ಸಹ ಯಾವುದೇ ರೀತಿಯಾದ ಉತ್ತರಗಳು ಬರದೇ ಇರುವ ಕಾರಣ ಮತ್ತು ಪ್ರಶ್ನೆಯನ್ನು ಮಾಡಿದಂತಹ ಸದಸ್ಯರುಗಳನ್ನು ಯಾವುದೇ ನೋಟಿಸ್ ನೀಡದೆ ತೆಗೆದು ಹಾಕುತ್ತಿರುವುದು ಕಂಡುಬಂದಿರುತ್ತದೆ.
7. ಬೈಲಾ ಉಲ್ಲಂಘನೆ: ಫೆಡರೇಶನ್‌ನ ಬೈಲಾ ಉಲ್ಲಂಘಿಸಿ ಹೊಸ ಸದಸ್ಯರನ್ನು ತೆಗೆದುಹಾಕುವುದು ಮತ್ತು ಸೇರಿಸುವುದು ನಡೆಸಲಾಗಿದೆ.
8. ಒಕ್ಕೂಟ ದ ಅರ್ಥವನ್ನೇ ತಪ್ಪು ನಿರೂಪಣೆ ಮಾಡಿರುವುದು ಕಂಡುಬಂದಿರುತ್ತದೆ: ಒಕ್ಕೂಟವು ವಿವಿಧ ರಾಜ್ಯಗಳ ಸಂಘಟನೆಗಳನ್ನು ಒಳಗೊಂಡು, ಒಕ್ಕೂಟ ರಚನೆಯಾಗಿದ್ದು ಅದರ ಮೂಲಭೂತ ತತ್ವಗಳಿಗೆ ವಿರುದ್ಧವಾಗಿ, ಒಕ್ಕೂಟದ ಬದಲಿಗೆ ಸಂಘವಾಗಿ ಕಾರ್ಯನಿರ್ವಹಿಸುತ್ತಿರುತ್ತದೆ.
9. ಉದ್ಯಮದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲತೆ:
BOCI ಪ್ರಾರಂಭವಾಗಿ ಏಳು ವರ್ಷಗಳು ಕಳೆದರೂ ಸಹ, ಉದ್ಯಮ ಎದುರಿಸುತ್ತಿರುವ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಬಗೆಹರಿಸಲು, ಮಾರ್ಪಾಟುಗಳನ್ನು ತರಲು BOCI ವಿಫಲವಾಗಿದೆ, ಇದು ಪ್ರಾಥಮಿಕವಾಗಿ ಪ್ರದರ್ಶನಗಳನ್ನು ಆಯೋಜಿಸುವುದರ ಮೇಲೆ ಕೇಂದ್ರೀಕರಿಸಿದ್ದು, ಪ್ರದರ್ಶನಗಳನ್ನು ಮಾತ್ರ ಆಯೋಜಿಸುವ ಸಂಸ್ಥೆಯಂತೆ ನಡೆದುಕೊಳ್ಳುತ್ತಿದೆ.
10. VLTD ಮತ್ತು ಪ್ಯಾನಿಕ್ ಬಟನ್ ಹಗರಣಗಳ ಬಗ್ಗೆ ಧ್ವನಿಯುತ್ತದೆ ಕುಳಿತಿರುವುದು: VLTD ಮತ್ತು ಪ್ಯಾನಿಕ್ ಬಟನ್‌ಗಳ ಸುತ್ತಲಿನ ಸಮಸ್ಯೆಗಳು ನ್ಯಾಯಾಲಯದ ಆದೇಶಗಳ ನೆಪದಲ್ಲಿ ಹಗರಣಗಳಾಗಿ ಪ್ರತಿನಿಧಿಸುತ್ತವೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಧರವನ್ನು ನಿಗದಿಪಡಿಸಿರುವುದು ಕಾಣಬಹುದಾಗಿದೆ, ಮತ್ತು ಇದರ ಕಾರ್ಯ ತಂತ್ರವನ್ನು ನಿಯಂತ್ರಿಸುವ ಯಾವುದೇ ರೀತಿಯಾದಂತಹ ಮಾಹಿತಿ ರಾಜ್ಯ ಸರ್ಕಾರಗಳು ನೀಡದೇ ಇದ್ದರೂ, ಅನುಷ್ಠಾನಗೊಳಿಸುವ ಗೊಳಿಸುವಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಿರುವುದು, ದೊಡ್ಡ ಹಗರಣದ ವಾಸನೆ ಇದ್ದರೂ ಸಹ ಕೇಂದ್ರ ಸರ್ಕಾರದ ಮುಂದೆ ಪ್ರತಿನಿಧಿಸುತ್ತಿರುವ BOCI ಯಾವುದೇ ಧ್ವನಿ ಎತ್ತದೇ ಇರುವುದು ಅನುಮಾನಕ್ಕೆ ಈಡು ಮಾಡಿಕೊಟ್ಟಿದೆ. ವಿ ಎಲ್ ಟಿ ಡಿ ಮತ್ತು ಪ್ಯಾನಿಕ್ ಬಟನ್ ಹಳೆಯ ವಾಹನಗಳಿಗೆ ರಿಯಾಯಿತಿಯನ್ನು ನೀಡಲು, ಸದಸ್ಯರಿಂದ ಒತ್ತಡವಿದ್ದರೂ ಸಹ ಯಾವುದೇ ರೀತಿಯಾದಂತಹ ಬೇಡಿಕೆಯನ್ನು ಕೇಂದ್ರದ ಮುಂದೆ ಇಡದೇ ಇರುವುದು BOCI ಕಾರ್ಯ ವೈಫಲ್ಯತೆಯನ್ನು ಎತ್ತಿ ತೋರಿಸುತ್ತಿದೆ.
11. AITP ಗೆ ತಿದ್ದುಪಡಿಗಳನ್ನು ಹುಡುಕುವಲ್ಲಿ ವಿಫಲತೆ: BOCI ಫೆಡರೇಶನ್ ಆಕ್ಷೇಪಣೆಗಳನ್ನು ಸಲ್ಲಿಸಲು ಅಥವಾ AITP ಗೆ ಅಗತ್ಯ ತಿದ್ದುಪಡಿಗಳನ್ನು ಪಡೆಯಲು ವಿಫಲವಾಗಿದೆ ಆದ್ದರಿಂದ ರಾಜ್ಯಗಳು ಅದರ ಸರಿಯಾದ ಅನುಷ್ಠಾನವನ್ನು ಮಾಡುವಲ್ಲಿ ವಿಫಲವಾಗಿದೆ.
12. ನಿರಂಕುಶಾಧಿಕಾರದ ನಿರ್ಧಾರ ಕೈಗೊಳ್ಳುವಿಕೆ: AITP ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ರಾಜ್ಯ ಸಂಘಗಳೊಂದಿಗೆ ಯಾವುದೇ ಸಮನ್ವಯತೆಯನ್ನು ಕಾಯ್ದುಕೊಳ್ಳದೆ ಇರುವುದು ಬಹುತೇಕ ವಾಹನ ಮಾಲೀಕರ ಮೇಲೆ ನಕಾರಾತ್ಮಕ ಪರಿಣಾಮ
ಬೀದಿದ್ದು, ಸಣ್ಣ ಮತ್ತು ಮಧ್ಯಮ ವರ್ಗದ ಮಾಲೀಕರು ತೊಂದರೆಗೆ ಈಡಾಗುವ ಪರಿಸ್ಥಿತಿಗೆ ದೂಡಿರುತ್ತಾರೆ.
13. ಕಳಂಕಿತ ಪ್ರತಿನಿಧಿಗಳು: ಪ್ರಶ್ನಾರ್ಹ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ರಾಜ್ಯದ ಪ್ರತಿನಿಧಿಗಳಾಗಿ ನಾಮನಿರ್ದೇಶನ ಮಾಡಲಾಗಿದೆ, ರಾಜ್ಯ ಸಂಘಗಳೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದಿದ್ದರೂ ಸಹ, ಹಲವೆ ವ್ಯಕ್ತಿಗ ಳನ್ನು ಸ್ವಂತ ನಿರ್ಧಾರದ ಮೇಲೆ ಆಯ್ಕೆ ಮಾಡಿ ನಮ್ಮ ನಿರ್ದೇಶನವನ್ನು ಮಾಡಿರುತ್ತದೆ.
ಈ ಬಹಿಷ್ಕಾರದ ಕಾರಣಗಳನ್ನು ಮತ್ತು ಬಹಿಷ್ಕಾರವನ್ನು, ದೇಶದಾ ಮತ್ತು ರಾಜ್ಯದಲ್ಲಿನ ಸಾರಿಗೆ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರತಕ್ಕಂತಹ, ಸಂಘಗಳು, ಸದಸ್ಯರು ಮತ್ತು ಪ್ರದರ್ಶನಕ್ಕೆ ಜಾಹೀರಾತು ನೀಡಿರುವ ಕಂಪನಿಗಳಿಗೆ ಮತ್ತು ಎಲ್ಲಾ ಸಾರಿಗೆ ವರ್ಗದವರಿಗೆ ಈ ಮಾಹಿತಿಯನ್ನು
ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘ ಪ್ರಧಾನ ಕಾರ್ಯದರ್ಶಿ ಪತ್ರಿಕೆ ಗೋಷ್ಠಿಯಲ್ಲಿ ತಿಳಿಸಿದ್ದರು