ಗುತ್ತಿಗೆ ನೌಕರಿಗೂ ಸಮಾನ ವೇತನ ಸಿಗುವಂತೆ ಆಗಬೇಕು. ರಾಷ್ಟೀಯ ಕಾರ್ಮಿಕ ಹಿತ ಸಂರಕ್ಷಣೆ ಮುಖಂಡರು ಮತ್ತು ದಿ ಕಾಮನ್ ಪೀಪಲ್ ವೆಲ್ಫೇರ್ ಫೌಂಡೇಶನ್ ಅಧ್ಯಕ್ಷರ ಅಗ್ರಹ


ಗುತ್ತಿಗೆ ನೌಕರರ ಬಿಸಿ ಊಟ ತಯಾರಿಸುವ ಮಹಿಳೆಯರ ಸಮಸ್ಯೆಗಳು
ನಮ್ಮ ದೇಶದಲ್ಲಿ ಗುತ್ತಿಗೆ ನೌಕರರ ಕಾನೂನನ್ನು
1972 ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದು ಇಂದು ನಮ್ಮ ದೇಶದಲ್ಲಿ ಪ್ರತಿಯೊಂದು ಸರಕಾರಿ ಆಫೀಸ್ ಗಳಲ್ಲಿ ಮುನಿಸಿಪಾಲಿಟಿ ಪಂಚಾಯತ್ ಹಾಗು ಖಾಸಗಿ ಕಂಪನಿಗಳಲ್ಲಿ ಗುತ್ತಿಗೆದಾರರ ಅಡಿಯಲ್ಲಿ ನೌಕರರನ್ನು ತೆಗೆದುಕೊಳ್ಳುತ್ತಾರೆ.
ಈ ಗುತ್ತಿಗೆ ನೌಕರರಿಗೆ ಸಮಾನ ವೇತನದ ಬದಲಾಗಿ ಕನಿಷ್ಠವನ್ನು ನೀಡಲಾಗುತಿದ್ದೆ.
ನಮ್ಮ ಸರಕಾರವಾಗಲಿ ಅಥವಾ ಖಾಸಗಿ ಕಂಪನಿಗಳಾಗಲಿ ಯೋಚನೆಯನ್ನು ಮಾಡುವುದಿಲ್ಲ ಕೇವಲ ಅವರಿಗೆ ಕನಿಷ್ಠ ವೇತನವನ್ನು ಕೊಟ್ಟು ಸುಮ್ಮನೀರಿಸುತ್ತಾರೆ. ಅವರ ಕಷ್ಟವನ್ನು ನಮ್ಮ ದೇಶದ ಯಾವುದೇ ಕಾರ್ಮಿಕ ಸಂಘಟನೆ ಆಗಲಿ ಅಥವಾ ಕಾರ್ಮಿಕ ಆಯೋಗವಾಗಲಿ ಪರಿಹರಿಸಲು ಮುಂದೆ ಬರುವುದಿಲ್ಲ, ಇದಕ್ಕೆ ಮೂಲ ಕಾರಣ ನಮ್ಮ ದೇಶದ ಭ್ರಷ್ಟಾಚಾರ ಹಾಗೂ ಕಾರ್ಮಿಕ ಸಂಘಗಳು ದೇಶ ಕಾನೂನುಗಳನ್ನು ಸರಿಯಾಗಿ ಜಾರಿಗೊಳಿಸಲು ಸರಕಾರಕೆ, ಖಾಸಗಿ ಕಂಪನಿ, ಕಾರಖಾನೆಗಳಿಗೆ ಒತ್ತಾಯಮಾಡುತ್ತಿಲ್ಲ.
ಈ ಗುತ್ತಿಗೆ ನೌಕರರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನವನ್ನು ಮಾಡೋತ್ತಿಲ್ಲ.
ನಮ್ಮ ಕಾಮನ್ ಪೀಪಲ್ ವೆಲ್ಫೇರ್ ಪೌಂಡೇಶನ್ ಕಳೆದ 8 ವರ್ಷಗಳಿಂದ ಕರ್ನಾಟಕದಲ್ಲಿ ಗುತ್ತಿಗೆ ನೌಕರರ ಸಮಸ್ಯೆಗಳ ಬಗ್ಗೆ ಹೋರಾಟವನ್ನು ಮಾಡುತ್ತಾ ಬಂದಿದೆ. ಅದು ಅಲ್ಲದೆ ಫೌಂಡೇಶನ್ ಪತ್ರಂದೋಲನವನ್ನು ಮಾಡಿ ಸರಕಾರ, ಖಾಸಗಿ ಕಂಪನಿ, ಕಾರಖಾನೆ, ಸಂಘ, ಸಂಸ್ಥೆಗಳ ಗಮನ ಕೆ ತಂದು,ಕೆಲವೊಂದು ಸಮಸ್ಯೆಗಳನ್ನು ಪರಿಸರಿಸಿದೆ. ಸತತ ಪ್ರಯತ್ನ ಮೂಲಕ ಯಶಸ್ಸು ಕಂಡಿದೆ.

ಗುತ್ತಿಗೆ ನೌಕರರು ಕೂಡ ಸರಕಾರಿ ನೌಕರರಂತೆ ಅವರಿಗೆ ಸಮಾನ ವೇತನವನ್ನು ಕೊಡುವುದು ಸರಕಾರದ ಅಧ್ಯಕರ್ತವ್ಯ.
ಗುತ್ತಿಗೆ ನೌಕರರಿಗೂ ಸಮಾನವೇತನ ಕೊಡಲೇಬೇಕು.
ಅದೇ ರೀತಿ ಬಿಸಿ ಊಟ ತಯಾರಿಸುವ ಮಹಿಳೆಯರಿಗೂ ಕೂಡ ಕನಿಷ್ಠ /ಸಮಾನ ವೇತನ ಸರಕಾರ ಕೊಡಬೇಕೆಂದು ನಮ್ಮ ಅಗ್ರಹ.
ಕಾರ್ಮಿಕಕರಿಗೆ ನ್ಯಾಯಯುಕ್ತ ಸಿಗಬೇಕಾದ ಸೌಲಭ್ಯ, ಸವಲತ್ತು,ಬೇಡಿಕೆಗಳು ಈ ಕೆಳಗೆ ಇಟ್ಟಿದ್ದೇವೆ
1,) ಸಮಾನ ವೇತನ
2) ಸೋಶಿಯಲ್ ಸೆಕ್ಯೂರಿಟಿ ಅಂದರೆ ಕಾರ್ಮಿಕ ವಿಮಾ ಯೋಜನೆ ಕಾರ್ಮಿಕ ಭವಿಷ್ಯ ನಿಧಿ ಹಾಗೂ ಗ್ರಾಜುಟಿಯನ್ನು ಕಡ್ಡಾಯವಾಗಿ ಕೊಡತಕ್ಕದ್ದು
೩) ಬಿಸಿ ಊಟ ತಯಾರಿಸುವ ಮಹಿಳೆಯರಿಗೆ ಕಾನೂನಾತ್ಮಕವಾಗಿ ಕನಿಷ್ಠ ವೇತನವನ್ನು ಕೊಡತಕ್ಕದ್ದು ಅವರಿಗೂ ಕಾರ್ಮಿಕ ವಿಮಾ,ಪಿಂಚಣಿ, ವೈದ್ಯಕೀಯ ಸೌಲಬ್ಯ, ಸರಕಾರಿ ಕಾರ್ಖಾನೆ ಕಾರ್ಮಿಕಕರಿಗೆ ಸಿಗುವ ಯೋಜನೆಯನ್ನು ಕೊಡತಕ್ಕದ್ದು.
ಕಾರ್ಮಿಕ ಭವಿಷ್ಯ ನಿಧಿ ಹಾಗೂ ಗ್ರ್ಯಡ್ಯೂಟಿಯನ್ನು ಕೊಡತಕ್ಕದ್ದು
ಎಂದು ನೌಕರರಿಗೆ ಗುತ್ತಿಗೆ ನೌಕರಾಗಲಿ ಬಿಸಿ ಊಟ ತಯಾರಿಸುವ ಮಹಿಳೆಯರಾಗಲಿ ಅವರಿಗೆ ಕಾರ್ಮಿಕ ಭದ್ರತೆಯನ್ನು ಕೊಡುವುದು ನಮ್ಮ ಸರಕಾರದ ಕರ್ತವ್ಯ ಈ ಎಲ್ಲ ಬೇಡಿಕೆಗಳನ್ನು ಸರಕಾರ ಕಾನೂನಾತ್ಮಕವಾಗಿ ಮಾಡದೆ ಇದ್ದಲ್ಲಿ ನಮ್ಮ ಫೌಂಡೇಶನ್ ಫ್ರೀಡಂ ಪಾರ್ಕಲ್ಲಿ ದೊಡ್ಡ ಜನ ಆಂದೋಲನವನ್ನು ಮಾಡುವುದಕ್ಕೆ ಸಿದ್ಧತೆಯನ್ನು ಮಾಡುತ್ತಿದೆ.
ಈಗಾಗಲೇ ನಮ್ಮ ಪತ್ರ ಆಂದೋಲನ ಪ್ರಾರಂಭಗೊಂಡಿದೆ ಎಲ್ಲ ವಿಷಯಗಳನ್ನು ಮಾಧ್ಯಮದ ಮುಂದೆ ಯೂಟ್ಯೂಬ್ಗಳ ಮುಂದೆ ಟಿವಿ ಚಾನಲ್ಗಳ ಮುಂದೆ ಹೇಳಲಾಗಿದೆ ಅದೇ ರೀತಿ ನಮ್ಮ ದೇಶದ ಪತ್ರಕರ್ತರ ಕೆಲವು ಸಮಸ್ಯೆಗಳು ನಮ್ಮ ಮುಂದೆ ಬಂದಿದೆ ಅವರ ಹಕ್ಕಿಗಾಗಿಯು ನಮ್ಮ ಫೌಂಡೇಶನ್ ಹೋರಾಟವನ್ನು
ಮಾಡುವುದಕ್ಕೆ ಸಜ್ಜುಗೋಳುತ್ತಿದೆಂದು ಶ್ರೀ ಗೋಪಾಲ ಕೋಟಿಯರ ಕಾರ್ಮಿಕ ಹಕ್ಕು ಸಂರಕ್ಷಣೆ ಹಾಗೂ ರಾಷ್ಟೀಯ ಕಾರ್ಮಿಕ ಹೋರಾಟಗಾರರು ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದ್ದರು.

Related Posts