26/0:
ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರ ಸಭೆ, ಪುರಸಭೆಯ ಪೌರ ಕಾರ್ಮಿಕರ ಮಹಾಸಂಘದ ಶ್ರೀ ನಾರಾಯಣ ರಾಜ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಪತ್ರಿಕಾ ಗೋಷ್ಠಿ ನಡೆಸಿದ್ದ ರು.
ಪ್ರಮುಖವಾಗಿ ಈ ತಿಂಗಳ ಒಳಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲ್ಲಿ ಸ್ವಚ್ಚತಾ ಕಾರ್ಯಕಾರ್ಯನಿರ್ವಹಿಸುತ್ತಿರುವ ನೇರವೇತನ ಪೌರಕಾರ್ಮಿಕರಿಗೆ “ಖಾಯಂ ಭಾಗ್ಯ” ಕೊಟ್ಟು, ಖಾಯಂ ಪಟ್ಟಿ ಬಿಡುಗಡೆ ಮಾಡಲೇಬೇಕೆಂದು ಒತ್ತಾಯಿಸುತ್ತಿದ್ದೇವೆ ಹಾಗೂ ರಾಜ್ಯಾದ್ಯಂತ ಕೆಲವೊಂದು ಜಿಲ್ಲೆಗಳಲ್ಲಿ ಆದೇಶಗಳನ್ನು ಜಾರಿಗೊಳಿಸಿರುವುದಿಲ್ಲ. ಈ ಕೂಡಲೇ ಆದೇಶಗಳನ್ನು ಜಾರಿಗೊಳಿಸಬೇಕೆಂದು, ಪತ್ರಿಕೆ ಹಾಗೂ ಮಾಧ್ಯಮದ ಮುಖಾಂತರ ಸರ್ಕಾರ ಹಾಗೂ ಪಾಲಿಕೆಯನು ಒತಾಯಿಸುತಿದ್ದೇವೆ.” ವೆಂದು ತಿಳಿಸಿದರು.
ಕರ್ನಾಟಕ ರಾಜ್ಯ ನಗರ ಪಾಲಿಕೆ ನಗರ ಸಭೆಗಳ ಪೌರ ಕಾರ್ಮಿಕರ ಮಹಾಸಂಘದ ವತಿಯಿಂದ ಹಲವಾರು ಹೋರಾಟಗಳ ಫಲವೇ ರಾಜ್ಯಾದ್ಯಂತ 24500 ಪೌರಕಾರ್ಮಿಕರನ್ನು ಖಾಯಂ ಮಾಡುವುದಾಗಿ, ಹಿಂದಿನ ಸರಕಾರ ಹಾಗೂ ಇಂದಿನ ಸರಕಾರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದರು ಸಹ ಇಲ್ಲಿಯವರವಿಗೂ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇರವೇತನ ಪೌರಕಾರ್ಮಿಕರ ಖಾಯಂ ಪಟ್ಟಿ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವುದು ದುರ್ದೈವದ ಸಂಗತಿ, ಅದೇ ರೀತಿ ರಾಜ್ಯದ ಇನ್ನೂ ಕೆಲವೊಂದು ಜಿಲ್ಲೆಗಳಲ್ಲಿ (ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ) 2018ರಲ್ಲೇ ಗುತ್ತಿಗೆ ಪದ್ದತಿ ರದ್ದಾಗಿದ್ದರೂ, ಸಹ ಇಂದಿಗೂ ಗುತ್ತಿಗೆ ಪದ್ಧತಿಯಲ್ಲೇ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿರುವುದು ಗಮನಾರ್ಹ ವಿಷಯವಾಗಿರುತ್ತದೆಂದು ವಿಷಾದಿಸಿದರು.
ಆದ್ದರಿಂದ ಈ ಕೆಳಕಂಡ ಆದೇಶಗಳನ್ನು ಜಾರಿಗೊಳಿಸದೆ ತಡ ಮಾಡುತ್ತಿರುವ ಸರ್ಕಾರ ಹಾಗೂ ನಗರಪಾಲಿಕೆಗಳಿಗೆ ಈ ಕೂಡಲೇ ಜಾರಿಗೊಳಿಸಲು ಒತ್ತಾಯಿಸುತ್ತಿದ್ದೇವೆ ಅಗ್ರಹಿಸಿದರು.
‘1) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಈಗಾಗಲೇ ಘೋಷಿಸಿದಂತೆ ಈ ತಿಂಗಳ ಒಳಗಾಗಿ ಖಾಯಂ ಪಟ್ಟಿ (ಮೊದಲನೇ ಹಂತ 3673 ಹಾಗೂ ಎರಡನೇ ಹಂತ 11307 ಒಟ್ಟು 14980) ಬಿಡುಗಡೆ ಮಾಡಲೇಬೇಕು.
2) ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ (ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ) ಇನ್ನೂ ಗುತ್ತಿಗೆ ಪದ್ದತಿ ಮುಂದುವರೆಯುತ್ತಿದ್ದು, ಈ ಕೂಡಲೇ ಗುತ್ತಿಗೆ ಪದ್ಧತಿ ರದ್ದು ಮಾಡಿ ಖಾಯಂ ಮಾಡಬೇಕು.
3) ಬೆಂಗಳೂರು ಮಹಾನಗರ ಪಾಲಿಕೆಯೂ ಸೇರಿದಂತೆ ರಾಜ್ಯಾದ್ಯಂತ ಕಸಸಾಗಾಣಿಕೆ ಲಾರಿ ಚಾಲಕರು, ಆಟೋ ಚಾಲಕರು, ಹೆಲ್ಪರ್‌ಗಳು ಹಾಗೂ ಕ್ಲೀನರ್‌ಗಳನ್ನು ಗುತ್ತಿಗೆ ಪದ್ಧತಿಯಿಂದ ವಿಮುಕ್ತಿಗೊಳಿಸಿ ನೇರವೇತನ ಅಡಿಯಲ್ಲಿ ನೇಮಿಸಿಕೊಳ್ಳಬೇಕು.
4) ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಒಳಚರಂಡಿ ಮಂಡಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರನ್ನು ಖಾಯಂ ಮಾಡಲೇಬೇಕು.
5) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 60 ವರ್ಷ ತುಂಬಿದ ನೇರವೇತನ ಪೌರಕಾರ್ಮಿಕರನ್ನು ಕೆಲಸದಿಂದ ನಿಲ್ಲಿಸಿದ್ದು, ನಿವೃತ್ತಿ ವೇತನ ಕೊಡಲು ಆದೇಶವಾಗಿದ್ದರೂ ಸಹ ಇದುವರೆಗೂ ಬಿಡುಗಡೆ ಮಾಡಿರುವುದಿಲ್ಲ, ಈ ಕೂಡಲೇ ನಿವೃತ್ತಿ ವೇತನ ಬಿಡುಗಡೆ ಮಾಡಬೇಕು. ಹಾಗೆ ನಿವೃತ್ತಿಯಾದ ಹಾಗೂ ಮರಣ ಹೊಂದಿದ ಕುಟುಂಬದ ಅವಲಂಬಿತರಿಗೆ ಒಂದು ಹುದ್ದೆ ನೀಡಬೇಕು.
6) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಚ್ಛತಾ ಕಿರಿಯ ಆರೋಗ್ಯ ಪರಿವೀಕ್ಷಕರುಗಳನ್ನು ಪಾಲಿಕೆಯೇ ನೇರವೇತನ ಅಡಿಯಲ್ಲಿ ನೇಮಿಸಿಕೊಳ್ಳಬೇಕು.
ಈ ಎಲ್ಲವು ಆದೇಶಗಳಾಗಿದ್ದು, ಈ ಕೂಡಲೇ ಜಾರಿಗೊಳಿಸಲು ಮತ್ತೊಮ್ಮೆ ಸರ್ಕಾರಕ್ಕೆ ಹಾಗೂ ಪಾಲಿಕೆಗೆ ಒತ್ತಾಯಿಸುತ್ತಿದ್ದೇವೆ. “ಇದನ್ನು ತಮ್ಮ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಪ್ರಕಟಿಸಲು ತಿಳಿಸಿ ದರು..