ಕಾವೇರಿ ನಮ್ಮ ಹಕ್ಕು

ಕಾವೇರಿನದಿ ರಕ್ಷಣಾ ಸಮಿತಿ



ಪತ್ರಿಕಾಗೋಷ್ಠಿ ವಿವರ

ದಿನಾಂಕ 26-9-2024 ರಂದು ಮಧ್ಯಾಹ್ನ 12 ಗಂಟೆಗೆ ಕಬ್ಬನ್ ಉದ್ಯಾನವನ ಪ್ರೆಸ್ ಕ್ಲಬ್ಬಿನಲ್ಲಿ ಕಾವೇರಿ ನದಿ ರಕ್ಷಣಾ ಸಮಿತಿ, ಬೆಂಗಳೂರು ಅಧ್ಯಕ್ಷರಾದ ಎಚ್. ಕೆ. ರಾಮುರವರ ಅಧ್ಯಕ್ಷತೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ.

೧) ಕಾವೇರಿ ನದಿ ರಕ್ಷಣಾ ಸಮಿತಿಯನ್ನು ದಿನಾಂಕ 4-9-2024ರಂದು ಕರ್ನಾಟಕ ಸರ್ಕಾರ, ಸಹಕಾರ ಇಲಾಖೆ, ಸಹಕಾರ ಸಂಘದ ಉಪನಿಬಂಧಕರು ಹಾಗೂ ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳು ಬೆಂಗಳೂರು ವಲಯ ೪ ಜಿಲ್ಲೆ ಇಲ್ಲಿ ನೋಂದಾವಣೆ ಮಾಡಲಾಗಿದೆ. ಈ ಅಧಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ‘ನಾಥ ಮಹಾಸ್ವಾಮಿಜಿಯವರು ಮಹಾಪೋಷಕರಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ, ಮಾರ್ಗದರ್ಶನ ಹಾಗೂ ಸಹಕಾರದೊಡನೆ ಜಾತ್ಯತೀತ ಪಕ್ಷಾತೀತ ರಾಜ್ಯದ ಎಲ್ಲಾ ಮಠ ಮಾನ್ಯರನ್ನು ಒಳಗೊಂಡ ಹಾಗೂ ಸುಪ್ರೀಂ ಕೋರ್ಟಿ ಹಾಗೂ ರಾಜ್ಯ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರುಗಳು ಮತ್ತು ನೀರಾವರಿ ತಜ್ಞರ ನುರಿತ ವಕೀಲರು ತಂಡದೊಡನೆ ಚರ್ಚಿಸಿ ಮತ್ತು ವಿಚಾರಗೋಷ್ಠಿಗಳನ್ನು ಮಾಡಲಾಗಿದೆ.

9) 1925 ರಲ್ಲಿ ಶ್ರೀ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರು ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ನೀರಿನ ಹಂಚಿಕೆಯ ವಿಚಾರವಾಗಿ ಒಡಂಬಡಿಕೆಯನ್ನು ಮಾಡಿಕೊಂಡು, ಕಾವೇರಿ ನದಿಯ ಕನ್ನಂಬಾಡಿ ಕಟ್ಟೆಯನ್ನು ನಿರ್ಮಾಣ ಮಾಡಿರುತ್ತಾರೆ ಇದೆ ಮುಂಬರುವ 2025 ಕ್ಕೆ 100 ವರ್ಷಗಳು ತುಂಬುತ್ತಿದ್ದು ಕೇಂದ್ರ ಹಾಗೂ ರಾಜ್ಯದಲ್ಲಿ ಹಲವು ಸರ್ಕಾರಗಳು ಬಂದು ಹೋಗಿದ್ದರು ಸಹ ಕಾವೇರಿ ನದಿ ನೀರಿನ ಹಂಚಿಕೆಯು ಜ್ವಲಂತ ಸಮಸ್ಯೆಯಾಗಿ ನಿಂತಿದೆ. ಹಾಗೂ ನಿರಂತರವಾಗಿ ಮುಂದುವರಿಯುತ್ತಾ ಬಂದಿದೆ ವರ್ಣನ ಕೃಪೆ ಇಲ್ಲದಿರುವ ಸಂದರ್ಭದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯದ ರೈತರ ನಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಾ ಬಂದಿರುತ್ತದೆ.

೩) ದಿನಾಂಕ 24 ಜೂನ್ 2024 ರಂದು ಕಾವೇರಿ ನದಿ ರಕ್ಷಣಾ ಸಮಿತಿಯ ವತಿಯಿಂದ ಬೆಂಗಳೂರು ವಿಜಯನಗರದ ಆದಿಚುಂಚನಗಿರಿ ಮರದ ಕಲ್ಯಾಣ ಮಂಟಪದಲ್ಲಿ ಶ್ರೀ ಶ್ರೀ ಶ್ರೀ ನಿರ್ಮಲಾನಂದ ನಾಥ ಮಹಾ ಸ್ವಾಮೀಜಿಗಳ ಮಾರ್ಗದರ್ಶನ, ಘನ ಉಪಸ್ಥಿತಿಯಲ್ಲಿ ಸಭೆ ಮತ್ತು ವಿಚಾರಗೋಷ್ಠಿ ನಡೆಸಿದಾಗ, ಭಾರತ ಸರ್ಕಾರದ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಗೋಪಾಲಗೌಡರು ಕಾವೇರಿ ನದಿ ನೀರಿನ ಹಂಚಿಕೆಯ ಬಗ್ಗೆ ಕಾನೂನಿನ ಸಮಸ್ಯೆಗಳ ಬಗ್ಗೆ ವಿವರಿಸುತ್ತಾ, ಎಲ್ಲದಕ್ಕು ಪರಿಹಾರವೆಂದರೆ ಕಾವೇರಿ ನದಿ ರಕ್ಷಣಾ ಸಮಿತಿಯು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರ ಘನ ಮುಂದಾಳತ್ರದಲ್ಲಿ ಮುಂದೆ ನಡೆಸುವ ಎಲ್ಲಾ ಕಾರ್ಯಕ್ರಮಗಳು ರೂಪಿಸಿದರೆ ಮಾತ್ರ ಪರಿಹಾರ ಸಿಗಲು ಸಾಧ್ಯ. ಸ್ವಾಮೀಜಿಗಳ ಮಾರ್ಗದರ್ಶನ ಏನು ನಿರ್ದೇಶನ ನೀಡುತ್ತಾರೋ ಆ ಪ್ರಕಾರ ನಾವುಗಳು ಅವರ ಜೊತೆ ಇದ್ದು ಶ್ರಮಿಸಲು ಬದ್ಧರಾಗಿರುತ್ತೇವೆ ಎಂದು ಘೋಷಿಸಿದರು. ಮತ್ತು ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್ ರವರು ಕಾವೇರಿ ಅಚ್ಚುಕಟ್ಟು ಪ್ರದೇಶದ ಸಮಸ್ಯೆಗಳನ್ನು ಬಿಚ್ಚಿಟ್ಟರು. ಹಿಂದೆ ನೀರು ಹಂಚಿಕೆ ಮಾಡಿಕೊಂಡಾಗ ಅಂದು ಇದ್ದ ನೀರು ಎಷ್ಟು ಇತ್ತೋ ಇಂದು ಅಷ್ಟೇ ಇದೆ. ಅದರೆ ನೀರಾವರಿ ಪ್ರದೇಶ, ಜನಸಂಖ್ಯೆ ಹೆಚ್ಚಾಗಿದೆ ಇದ್ದ ನೀರನ್ನೇ ಎಲ್ಲರೂ ಹಂಚಿಕೊಳ್ಳಬೇಕು ಅದಕ್ಕೆ ಪರಿಹಾರ ಸೂತ್ರ ಕಂಡುಕೊಳ್ಳಬೇಕು ಎಂದರು.

ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ಇತರ ಎಲ್ಲ ಮಠದ ಮಠಾಧೀಶರ

ಸಲಹೆಯೊಂದಿಗೆ, ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರು ನ್ಯಾಯವಾದಿಗಳು ಕಾನೂನು ತಜ್ಞರು ನೀರಾವರಿ ತಜ್ಞರು ಹಿರಿಯ ವಕೀಲರು ಹಾಗೂ ಈ ಭಾಗದ ಕಾವೇರಿ ನೀರನ್ನು ಅವಲಂಬಿಸಿರುವ ಮುಖ್ಯವಾಗಿ ಬೆಂಗಳೂರಿನ ಪ್ರಮುಖರನ್ನು ಒಳಗೊಂಡು ಸಮಿತಿ ರಚಿಸಿ ಕಾರ್ಯಕ್ರಮ ರೂಪಿಸಲು ಸಲಹೆ ನೀಡಿದರು.

೪) ಕಾವೇರಿ ನದಿ ನೀರಿನ ಹಂಚಿಕೆಯ ದೃಷ್ಟಿಯಿಂದ ಸಮಿತಿಯ ಜೊತೆ ಗುರುತಿಸಿಕೊಂಡಿರುವ ಪದಾಧಿಕಾರಿಗಳನ್ನು ಒಳಗೊಂಡಂತೆ, ಕಾವೇರಿ ನದಿಯ ಅಚ್ಚು ಕಟ್ಟು ಪ್ರದೇಶದ ಎಲ್ಲ ಜಿಲ್ಲೆಯ ಬೆಂಗಳೂರು ರಾಮನಗರ ಮಂಡ್ಯ ಮೈಸೂರು ಮಡಿಕೇರಿ ಹಾಸನ ತುಮಕೂರು ಹಾಗೂ ಕಾವೇರಿ ನದಿ ನೀರನ್ನು ಅವಲಂಬಿಸಿರುವ ಎಲ್ಲಾ ರೈತರನ್ನು ನಾಗರಿಕ ಪ್ರಮುಖರನ್ನು ಸೇರಿಸಿ ಸಮಿತಿಯನ್ನು ರಚಿಸಲಾಗುವುದು.

೫) ಶ್ರೀ ಶ್ರೀ ಶ್ರೀ ನಿರ್ಮಲಾನಂದ ನಾಥ ಮಹಾ ಸ್ವಾಮೀಜಿಯವರ ನಿರ್ದೇಶನದಂತೆ ಸಮಿತಿ ರಚನೆಗೊಂಡ ನಂತರ ಮಹಾಸ್ವಾಮೀಜಿಯವರಿಂದ ದಿನಾಂಕವನ್ನು ಪಡೆದು ಮುಂದಿನ ಸಭೆಯನ್ನು ಬೆಂಗಳೂರು ವಿಜಯನಗರದ ಮಠದ ಕಲ್ಯಾಣ ಮಂಟಪದಲ್ಲಿ ನಡೆಸಲಾಗುವುದು.

ವಂದನೆಗಳೊಂದಿಗೆ.

ದರು ತಮ್ಮ ವಿಶ್ವಾಸಿಗಳು,

ಎಚ್.ಕೆ. ರಾಮು,

ರಾಜುಗೌಡ

(ಅಧ್ಯಕ್ಷರು)

(ಪ್ರಧಾನ ಕಾರ್ಯದರ್ಶ)



ವಿಳಾಸ : 405/144, 2ನೇ ಮಹಡಿ, ಮಾರುತಿ ನಗರ ಬಸ್ ನಿಲ್ದಾಣದ ಹತ್ತಿರ, ನಾಗರಭಾವಿ ಬೆಂಗಳೂರು-570072

Related Posts