Consumer News
ಸಂಯಮ
ನಾವು ಎಷ್ಟೇ ಒಳ್ಳೆಯ ಕೆಲಸ, ಸಹಾಯ, ಸೇವೆಮಾಡಿ ಆತ್ಮಸಂತೃಪ್ತಿ ಉಳ್ಳವರಾದರು,
ಮಾತಾಡುವಾಗ ಸಂಯಮ ಇರಬೇಕು. ಯಾರಿಗೂ ಟೀಕಿಸಬಾರದು. ಬದಲಾವಣೆ ಜಗದ ನಿಯಮ, ಅವಶ್ಯಕತೆ ಅನುಗುಣವಾಗಿ ಕಾಲ ಕಾಲಕೆ ಬದಲಾವಣೆ ಹೊಂದಾಣಿಕೆವಾಗುತ್ತೆ, ಟೀಕೆಯಿಂದ ಯಾರೂ ಬದಲಾಗೋದಿಲ್ಲ. ಆದರೆ ಅವರ ಅನುಭವ ಅವರರಿಗೆ ಪಾಠ ಕಲಿಸುತ್ತದೆ. ಸಂದರ್ಭಅನುಸಾರ ಸಮಾಜವೂ ಬದಲಾವಣೆ ಅನುಸರಿಸುತ್ತದೆ, ನಮ್ಮ ಟೀಕೆಯಿಂದ ಬದಲಾಗೋದವದೆಂದು ಬಯಸಬಾರದು. ಮೇಲಾಗಿ ಸಮಾಜದಲ್ಲಿ ನೀನೇ ಕ್ಷುಲ್ಲಕ ಆಗತೀಯಾ.
ನಿಜಕ್ಕೂ ಟೀಕೆ ಅಂದರೇನು ? ಯಾರೋ ಒಬ್ಬ ನಿನಗೆ ಟೀಕಿಸಿದ ಅಂದರೆ ನೀನು ಮಾಡಿದ್ದು ಅವನಿಗೆ ಇಷ್ಟ ಇಲ್ಲ ಅಂತ ಅರ್ಥ. ನಿನ್ನ ನಡುವಳಿಕೆಯಿಂದ ಅವನಿಗೆ ಕಷ್ಟ ಬಂದಾಗ ಅಥವಾ ನಷ್ಟ ಆದಾಗ ಅಥವಾ ಅವನಿಗೆ ಇಷ್ಟವಿಲ್ಲದ್ದು ಆದಾಗ, ಅಸೂಯೆ, ಅಹಂಕಾರ, ಅಜ್ಞಾನ ಅವಿವೇಕ ದಿಂದ ಟೀಕಿಸುವನು.
ನಿನ್ನ ದೃಷ್ಟಿಯಲ್ಲಿ ಸರಿ ಇದ್ದರೂ ಅವನ ಕಣ್ಣಲ್ಲಿ ತಪ್ಪು ಇರಬಹುದು. ಅವನ ಟೀಕೆಯನ್ನು ಅವನ ಕಣ್ಣಿನಿಂದಲೇ ನೋಡು. ಅದು ರಚನಾತ್ಮಕ ಇದ್ದರೆ ಸ್ವೀಕರಿಸು.
ಡಾ ವಿನಯಕುಮಾರ ಎಸ್.