ಭಾನುವಾರ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಎಚ್‌ಪಿಯ ಕಾನೂನು ಕೋಶ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನ್ಯಾಯಮೂರ್ತಿ ಯಾದವ್ “ನಮ್ಮ ಶಾಸ್ತ್ರಗಳು ಮತ್ತು ವೇದಗಳಲ್ಲಿ ದೇವತೆ ಎಂದು ಗುರುತಿಸಲ್ಪಟ್ಟ ಮಹಿಳೆಯನ್ನು ನೀವು ಅಗೌರವಿಸಲು ಸಾಧ್ಯವಿಲ್ಲ. ನೀವು ನಾಲ್ಕು ಹೆಂಡತಿಯರನ್ನು ಹೊಂದಲು, ಹಲಾಲಾ ಮಾಡಲು ಅಥವಾ ತ್ರಿವಳಿ ತಲಾಖ್ ನೀಡುವುದು ಸಾಧ್ಯವಿಲ್ಲ. ‘ತ್ರಿವಳಿ ತಲಾಖ್’ ಹೇಳುವ ಹಕ್ಕು ನಮಗಿದೆಯೇ ಹೊರತು ಮಹಿಳೆಯರಿಗೆ ಜೀವನಾಂಶ ನೀಡುವುದಿಲ್ಲ ಎಂದು ನೀವು ಹೇಳುತ್ತೀರಿ ಎಂದು ಹೇಳಿದ್ದರು. ವಿಪಕ್ಷಗಳು ಈ ಹೇಳಿಕೆಯನ್ನು ವಿವಾದಾತ್ಮಕ ಎಂದು ಹೇಳುತ್ತಿವೆ. ಇದೇ ವೇಳೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹೇಳಿಕೆ ಕುರಿತು ವರದಿ ಕೇಳಿದೆ.
ಸೆಪ್ಟೆಂಬರ್ 2021 ರಲ್ಲಿ, ನ್ಯಾಯಮೂರ್ತಿ ಯಾದವ್ ಅವರು “ವಿಜ್ಞಾನಿಗಳು ಹಸು ಆಮ್ಲಜನಕವನ್ನು ಹೊರಹಾಕುವ ಏಕೈಕ ಪ್ರಾಣಿ ಎಂದು ನಂಬುತ್ತಾರೆ” ಎಂದು ತಮ್ಮ ಹೇಳಿಕೆಯೊಂದಿಗೆ ವಿವಾದವನ್ನು ಸುದ್ದಿಯಾಗಿದ್ದರು. ಅವರು ಗೋವನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಸಂಸತ್ತಿಗೆ ಪ್ರತಿಪಾದಿಸಿದರು ಮತ್ತು ಗೋಸಂರಕ್ಷಣೆಯನ್ನು “ಹಿಂದೂಗಳ ಮೂಲಭೂತ ಹಕ್ಕು” ಎಂದು ಗುರುತಿಸಬೇಕೆಂದು ಪ್ರಸ್ತಾಪಿಸಿದ್ದರು