ಸನ್ಮಾನ್ಯ ಸಿದ್ದರಾಮಯ್ಯರವರ 50 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಬೆಳಗಾವಿಯ ಗಂಡು ಮೆಟ್ಟಿದ ಸ್ಥಳದಲ್ಲಿ ಜನರು ಹೆಮ್ಮೆಯಿಂದ ನಿಲ್ಲಿಸುವುದು ಸಮಯೋಜಿತ



(ಪಂಚಾಕ್ಷರಯ್ಯ ಗಣಾಚಾರಿ)
[27/12, 00:48] Consumer Live News: ಗಾಂಧೀಜಿಯವರ ಮೂರನೇ ಯುಗಃ ಬೆಳಗಾವಿಯಲ್ಲಿ ಸಿದ್ದರಾಮಯ್ಯರವರ ಪ್ರತಿಮೆ.

ಬೆಂಗಳೂರು: ಮಹಾತ್ಮ ಗಾಂಧೀಜಿಯವರ ಮೂರನೇ ಯುಗ ಗಾಂಧೀಜಿಯವರ ಕನಸಿನ ಭಾರತ

ಗ್ರಾಮ ಸ್ವರಾಜ್ಯ ಸರ್ವೋದಯ ಸಮಾಜ ರಚನೆಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕರ್ನಾಟಕವನ್ನು ಸುರಾಜ್ಯವನ್ನಾಗಿ ಮಾಡಿದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕಾರ್ಯಕ್ರಮಗಳು ಸಮಯೋಚಿತವಾಗಿ ಕರ್ನಾಟಕದಲ್ಲಿ ಅನುಷ್ಠಾನ ಗೊಂಡಿವೆ. ಅಲ್ಲದೆ ಹಿಂದುಳಿದ ವರ್ಗಗಳ ಅಗ್ರ ನಾಯಕರಾದ ಸಿದ್ದರಾಮಯ್ಯನವರ ಪ್ರತಿಮೆಯನ್ನು ಗಂಡು ಮೆಟ್ಟಿದ ಸ್ಥಳ ಬೆಳಗಾವಿಯಲ್ಲಿ 50 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಿಲ್ಲಿಸಲಾಗುವುದೆಂದು ಸರ್ವೋದಯ ಧುರೀಣ ಪಂಚಾಕ್ಷರಯ್ಯ ಗಣಾಚಾರಿ ಯವರು ತಿಳಿಸಿದ್ದಾರೆ.

1947ರಲ್ಲಿ ಭಾರತವನ್ನು ಜಾಗೃತಗೊಳಿಸಿ ಗಾಂಧೀಜಿಯವರು ತಮ್ಮದೇ ಆದ ತತ್ವಗಳಾದ ಶಾಂತಿ, ಅಹಿಂಸೆ, ಪ್ರೇಮ ಇವೆಲ್ಲವುಗಳ ಮೂಲಕ ಬ್ರಿಟಿಷರಿಂದ ಸ್ವಾತಂತ್ರ ಪಡೆದಿದ್ದು ಇತಿಹಾಸವಾಗಿದೆ. ಇದು ಮೊದಲ ಯುಗವಾಗಿ ಭಾರತದಾಧ್ಯಂತ ಜನರು ಸುಖಶಾಂತಿಯಿಂದ ನೆಲೆಸುವಂತಾಯಿತು.

ನಂತರದ ದಿನಗಳಲ್ಲಿ ಮಹಾತ್ಮ ಗಾಂಧೀಜಿಯವರ ಎರಡನೇ ಯುಗ ಕರ್ನಾಟಕದ ಬೆಳಗಾವಿ ಜಿಲ್ಲೆ, ರಾಮದುರ್ಗ ತಾಲ್ಲೂಕು, ಕಲಾಳ ಗ್ರಾಮದಲ್ಲಿ ತತ್ವಗಳ ಅನುಷ್ಠಾನ ಮಾಡಿದ ಸರ್ವೋದಯ ಸಂತ ನೀಲಕಂಠಯ್ಯ ಗೊಡಚಯ್ಯ ಗಣಾಚಾರಿ ಯವರ ನೇತೃತ್ವದಲ್ಲಿ ಗ್ರಾಮದ ಜನರು ಸ್ವಾವಲಂಬಿಗಳಾಗಿ ಹತ್ತಿ ಬೆಳೆದು ಬಟ್ಟೆ ತಯಾರಿಸಿ ಶುದ್ಧ ಖಾದಿದಾರಿಗಳಾದರು. ಅಲ್ಲದೆಗ್ರಾಮದ ಎಲ್ಲ ಜನರು ಸಹೋದರರ ಭಾವದಿಂದ ಸುಖಶಾಂತಿಯಿಂದ ನೆಲೆಸಿ ಖಾದಿ ಗ್ರಾಮೋದ್ಯೋಗ, ಹರಿಜನ ಸಮಾಜ ಸೇವೆ, ಗ್ರಾಮ ಸ್ವಚ್ಚತೆ ಮತ್ತು ದುಶ್ಚಟಗಳಿಂದ ದೂರವಾದ ಗ್ರಾಮವಾಗಿ ಭಾರತದಲ್ಲಿಯೇ ಪ್ರಸಿದ್ದಿ ಪಡೆಯಿತು. ಈ ಪ್ರಯೋಗವು ಭಾರತದಾಧ್ಯಂತ ಪ್ರಸಾರವಾಗಿ ದೇಶಕ್ಕೆ ದೇಶವೇ ಶಾಂತಿಯುತವಾಗಿ ಬಾಳಲು ಹಾಗೂ ಸ್ವಾವಲಂಬಿಗಳಾಗಲು ಸಾಧ್ಯವಾಯಿತು.

ಇಂದು ಕರ್ನಾಟಕದ ಬೆಳಗಾವಿಯಲ್ಲಿ ಮಹಾತ್ಮಗಾಂಧೀಜಿಯವರು ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ 39ನೇ ಅಧ್ಯಕ್ಷರಾಗಿ ಭಾಗವಹಿಸಿದ್ದು ಹೆಮ್ಮೆಯ ಮಾತಾಗಿದೆ. ಈ ನಿಟ್ಟಿನಲ್ಲಿ ಅವರ ಪ್ರತಿಮೆಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಿಲ್ಲಿಸುವ ಕಾರ್ಯಕ್ರಮ ಇಟ್ಟುಕೊಂಡಿದೆ. ಅದೇ ರೀತಿ ಕರ್ನಾಟಕದಲ್ಲಿ ಗಾಂಧೀಜಿಯವರ ತತ್ವಗಳನ್ನು ಅನುಷ್ಠಾನ ಮಾಡಿದ ಭಾರತದ ಮೊದಲ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯರವರ 50 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಬೆಳಗಾವಿಯ ಗಂಡು ಮೆಟ್ಟಿದ ಸ್ಥಳದಲ್ಲಿ ಜನರು ಹೆಮ್ಮೆಯಿಂದ ನಿಲ್ಲಿಸುವುದು ಸಮಯೋಜಿತವಾಗಿದೆ. ಹೀಗಾಗಿ ಕರ್ನಾಟಕವು ಜಗತ್ತಿಗೆ ಮಾದರಿ ರಾಜ್ಯವಾಗಿ ಹೊರಹೊಮ್ಮಿ ಗಾಂಧೀಜಿಯ ನಾಡಾಗಿ ಪರಿವರ್ತನೆಗೊಂಡಿದೆ.

ಈ ನಿಟ್ಟಿನಲ್ಲಿ ಕರ್ನಾಟಕದ ಸರ್ವೋದಯ ಮಂಡಳವು ಮತ್ತು ಅವರ ಸದಸ್ಯರು ಸಮಯೋಚಿತವಾಗಿ ಮುಖ್ಯಮಂತ್ರಿಯವರ ಕಾರ್ಯಕ್ರಮಗಳ ಅನುಷ್ಠಾನವನ್ನು ಸಂಪೂರ್ಣವಾಗಿ ಬೆಂಬಲಿಸಿದೆ. ಅದೇ ರೀತಿ ಇಂದು ನಾವು ನಿಜವಾಗಿ ಮಹಾತ್ಮಾ ಗಾಂಧೀಜಿಯವರಿಗೆ ಹಾಗೂ ಸಿದ್ದರಾಮಯ್ಯರವರಿಗೆ ಭಕ್ತಿಪೂರ್ವಕವಾಗಿ ನಮನಗಳನ್ನು ಸಲ್ಲಿಸಿದಂತಾಗುತ್ತದೆ.

(ಪಂಚಾಕ್ಷರಯ್ಯ ಗಣಾಚಾರಿ)

Related Posts

Leave a Reply

Your email address will not be published. Required fields are marked *