ಶ್ರೀ ದತ್ತಾತ್ರೇಯ ಜಯಂತಿ

🕉️✡️ಹರೇರಾಮ✡️🕉️
🌸🌸🌸🌸🌸🌸🌸🌸 ‌ ‌ ‌ ‌ ‌ ‌ ‌ ‌ ದತ್ತಾತ್ರೇಯ ಜಯಂತಿ
‌ ‌ ಇದೇ ಶನಿವಾರ ಡಿಸೆಂಬರ್ 18, ಮಾರ್ಗಶಿರ ಮಾಸದ ಶುಕ್ಲಪಕ್ಷದ ಪೌರ್ಣಮೆಯಂದು ತ್ರಿಮೂರ್ತಿಗಳ ಅಂಶವಾದ ದತ್ತನು ಜನಿಸಿದ ದಿನವನ್ನು ದತ್ತಾತ್ರೇಯ ಜಯಂತಿಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಪೂಜೆ ಮಾಡಿದರೆ ಸಿಗುವಂತಹ ಫಲ ಅತ್ಯಂತ ಉನ್ನತವಾದುದೆಂದು ಹೇಳಲಾಗುತ್ತದೆ.
ದತ್ತಾತ್ರೇಯನೆಂದರೆ ತ್ರಿಮೂರ್ತಿಗಳ ಅಂಶ. ಋಷಿ ದಂಪತಿಗಳಾದ ಅತ್ರಿ ಹಾಗೂ ಅನುಸೂಯಾರಿಗೆ ತ್ರಿಮೂರ್ತಿಗಳು ತಮ್ಮನ್ನು ತಾವೇ ಅರ್ಪಿಸಿದ್ದರಿಂದ ದತ್ತನೆಂದು ಕರೆಯಲ್ಪಡುತ್ತಾನೆ. ಜೀವನವನ್ನು ಯೋಗ್ಯ ರೀತಿಯಲ್ಲಿ ಸಾಗಿಸಲು ಭಕ್ತರಿಗೆ ಮಾರ್ಗದರ್ಶನ ನೀಡುವವನು ದತ್ತಾತ್ರೇಯನಾಗಿದ್ದಾನೆ.
ಮಾರ್ಗಶಿರ ಮಾಸದಲ್ಲಿ ಬರುವ ಶುಕ್ಲಪಕ್ಷದ ಪೂರ್ಣಿಮೆಯಂದು ದತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಜಯಂತಿಯನ್ನು ಪ್ರಮುಖವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವೆಡೆ ಆಚರಿಸಲಾಗುತ್ತದೆ. ಈ ದಿನಂದು ಭಕ್ತರು ದತ್ತಾತ್ರೇಯನಿಗೆ ವಿವಿಧ ರೀತಿಯಲ್ಲಿ ಪೂಜೆಯನ್ನು ಸಲ್ಲಿಸಿ, ಆಶೀರ್ವಾದವನ್ನು ಪಡೆಯುತ್ತಾರೆ. ಬೇರೆಲ್ಲಾ ದಿನಗಳಿಗೆ ಹೊರತುಪಡಿಸಿ, ಮುಖ್ಯವಾಗಿ ಈ ದಿನದಂದು ದತ್ತಾತ್ರೇಯನ್ನು ಪೂಜಿಸಿದರೆ ಹೆಚ್ಚಿನ ಫಲ ದೊರೆಯುವುದೆಂದು ಹೇಳಲಾಗುತ್ತದೆ.
ದತ್ತ ಜಯಂತಿಯ ಮಹತ್ವ
‌ ‌ ದತ್ತ ಜಯಂತಿಯಂದು ಪೂಜಾ ವಿಧಿಗಳನ್ನು ಮಾಡುವುದರಿಂದ ಜೀವನದ ಪ್ರತಿಯೊಂದು ಹಂತದಲ್ಲೂ ಪ್ರತಿಫಲವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಅಲ್ಲದೇ ಜಯಂತಿಯ ಮುನ್ನಾದಿನ ಮಾಡುವ ಪೂಜೆಯಿಂದ ಪೂರ್ವಜರಿಗೆ ಮುಕ್ತಿ ಹಾಗೂ ಅವರಿಂದ ಉಂಟಾಗುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುವುದು. ದತ್ತಜಯಂತಿಯಂದು ಮಾಡುವ ಪೂಜೆಯು ಜೀವನದಲ್ಲಿ ಉತ್ಸಾಹ ಹಾಗೂ ಸಮೃದ್ಧಿಯನ್ನು ನೀಡುತ್ತದೆ.
ದತ್ತ ಜಯಂತಿ ಪೂಜಾ ವಿಧಿ
‌ ಸೂರ್ಯೋದಯಕ್ಕೆ ಮುನ್ನ ಎದ್ದು ಪವಿತ್ರ ಸ್ನಾನ ಮಾಡಿ ಉಪವಾಸ ವ್ರತವನ್ನು ಕೈಗೊಳ್ಳಬೇಕು.
ಪೂಜೆಯ ಸಮಯದಲ್ಲಿ ಸಿಹಿತಿಂಡಿ, ಗಂಧದ ಕಡ್ಡಿ, ದೀಪ ಹಾಗೂ ಹೂಗಳನ್ನು ಅರ್ಪಿಸಬೇಕು.
ಪೂಜಾ ಸಮಯದಲ್ಲಿ ಅರಿಶಿನ, ಕುಂಕುಮ ಹಾಗೂ ಗಂಧವನ್ನು ದತ್ತನ ಮೂರ್ತಿಗೆ ಹಚ್ಚಬೇಕು
ಧಾರ್ಮಿಕ ಮಂತ್ರಗಳ ಪಠಣದ ಜೊತೆಗೆ ಜೀವನ್ಮುಕ್ತ ಗೀತಾ ಹಾಗೂ ಅವಧೂತ ಗೀತವನ್ನು ಓದುವುದು ಒಳ್ಳೆಯದು.
ಆತ್ಮ ಹಾಗೂ ಮನಸ್ಸಿನ ಶುದ್ಧೀಕರಣ, ಜ್ಞಾನೋದಯಕ್ಕಾಗಿ ‘ಓಂ ಶ್ರೀ ಗುರುದೇವ ದತ್ತ’ ಮತ್ತು ‘ಶ್ರೀ ಗುರು ದತ್ತಾತ್ರೇಯ ನಮಃ’ ಈ ಮಂತ್ರವನ್ನು ಪಠಿಸಬೇಕು.
ಪೂಜೆಯ ಪ್ರಯೋಜನಗಳು
ದತ್ತಾತ್ರೇಯ ಉಪನಿಷದ್‌ ಹೇಳುವಂತೆ ಯಾರು ದತ್ತಾತ್ರೇಯ ಜಯಂತಿಯ ಮುನ್ನಾ ದಿನ ಉಪವಾಸ ಮಾಡುತ್ತಾರೋ ಅವರಿಗೆ ದತ್ತನ ಆಶೀರ್ವಾದದೊಂದಿಗೆ ಈ ಕೆಲವು ಪ್ರಯೋಜನಗಳು ಪ್ರಾಪ್ತಿಯಾಗುವುದು.
‌ ‌ ಸಂಪತ್ತು ಹಾಗೂ ವಸ್ತುಗಳನ್ನು ಖರೀದಿಸುವಂತಹ ಭಾಗ್ಯವು ಒದಗಿಬರುವುದು.
ಸರ್ವೋಚ್ಛ ಜ್ಞಾನವನ್ನು ಪಡೆದುಕೊಳ್ಳುವುದರ ಜೊತೆಗೆ ಜೀವನದ ಗುರಿ ಹಾಗೂ ಗುರಿ ಸಾಧನೆಯನ್ನು ಮಾಡಬಹುದು.
ಭಯ ಹಾಗೂ ಉದ್ವೇಗದಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಗ್ರಹದೋಷಗಳಿಂದ ಕಂಡು ಬರುವ ಸಮಸ್ಯೆಗೆ ದತ್ತಾತ್ರೇಯನ ಪೂಜೆಯು ಪರಿಹಾರ ನೀಡುವುದು.
‌ಪೂರ್ವಜರಿಂದ ಬರುವ ಸಮಸ್ಯೆಗಳು ಹಾಗೂ ಮಾನಸಿಕ ಒತ್ತಡದ ಸಮಸ್ಯೆ ನಿವಾರಣೆಯಾಗುತ್ತವೆ.
ಜೀವನದಲ್ಲಿ ನೀತಿವಂತರಾಗಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.
ಎಲ್ಲಾ ಕರ್ಮಬಂಧಗಳಿಂದ ಆತ್ಮವನ್ನು ಮುಕ್ತಗೊಳಿಸುವುದು ಹಾಗೂ ಆಧ್ಯಾತ್ಮಿಕತೆಯತ್ತ ಒಲವು ಬೆಳೆಸುವುದು. ‌ ‌ ‌ ‌ ‌ ‌ ‌ ‌ ಶ್ರೀ ದತ್ತಾತ್ರೇಯ ಅಷ್ಟೋತ್ತರ ಶತನಾಮಾವಳೀ
‌ ಓಂ ಶ್ರೀದತ್ತಾಯ ನಮಃ |
ಓಂ ದೇವದತ್ತಾಯ ನಮಃ |
ಓಂ ಬ್ರಹ್ಮದತ್ತಾಯ ನಮಃ |
ಓಂ ವಿಷ್ಣುದತ್ತಾಯ ನಮಃ |
ಓಂ ಶಿವದತ್ತಾಯ ನಮಃ |
ಓಂ ಅತ್ರಿದತ್ತಾಯ ನಮಃ |
ಓಂ ಆತ್ರೇಯಾಯ ನಮಃ |
ಓಂ ಅತ್ರಿವರದಾಯ ನಮಃ |
ಓಂ ಅನಸೂಯಾಯ ನಮಃ | ೯
ಓಂ ಅನಸೂಯಾಸೂನವೇ ನಮಃ |
ಓಂ ಅವಧೂತಾಯ ನಮಃ |
ಓಂ ಧರ್ಮಾಯ ನಮಃ |
ಓಂ ಧರ್ಮಪರಾಯಣಾಯ ನಮಃ |
ಓಂ ಧರ್ಮಪತಯೇ ನಮಃ |
ಓಂ ಸಿದ್ಧಾಯ ನಮಃ |
ಓಂ ಸಿದ್ಧಿದಾಯ ನಮಃ |
ಓಂ ಸಿದ್ಧಿಪತಯೇ ನಮಃ |
ಓಂ ಸಿದ್ಧಸೇವಿತಾಯ ನಮಃ | ೧೮
ಓಂ ಗುರವೇ ನಮಃ |
ಓಂ ಗುರುಗಮ್ಯಾಯ ನಮಃ |
ಓಂ ಗುರೋರ್ಗುರುತರಾಯ ನಮಃ |
ಓಂ ಗರಿಷ್ಠಾಯ ನಮಃ |
ಓಂ ವರಿಷ್ಠಾಯ ನಮಃ |
ಓಂ ಮಹಿಷ್ಠಾಯ ನಮಃ |
ಓಂ ಮಹಾತ್ಮನೇ ನಮಃ |
ಓಂ ಯೋಗಾಯ ನಮಃ |
ಓಂ ಯೋಗಗಮ್ಯಾಯ ನಮಃ | ೨೭
ಓಂ ಯೋಗಾದೇಶಕರಾಯ ನಮಃ |
ಓಂ ಯೋಗಪತಯೇ ನಮಃ |
ಓಂ ಯೋಗೀಶಾಯ ನಮಃ |
ಓಂ ಯೋಗಾಧೀಶಾಯ ನಮಃ |
ಓಂ ಯೋಗಪರಾಯಣಾಯ ನಮಃ |
ಓಂ ಯೋಗಿಧ್ಯೇಯಾಂಘ್ರಿಪಂಕಜಾಯ ನಮಃ |
ಓಂ ದಿಗಂಬರಾಯ ನಮಃ |
ಓಂ ದಿವ್ಯಾಂಬರಾಯ ನಮಃ |
ಓಂ ಪೀತಾಂಬರಾಯ ನಮಃ | ೩೬
ಓಂ ಶ್ವೇತಾಂಬರಾಯ ನಮಃ |
ಓಂ ಚಿತ್ರಾಂಬರಾಯ ನಮಃ |
ಓಂ ಬಾಲಾಯ ನಮಃ |
ಓಂ ಬಾಲವೀರ್ಯಾಯ ನಮಃ |
ಓಂ ಕುಮಾರಾಯ ನಮಃ |
ಓಂ ಕಿಶೋರಾಯ ನಮಃ |
ಓಂ ಕಂದರ್ಪಮೋಹನಾಯ ನಮಃ |
ಓಂ ಅರ್ಧಾಂಗಾಲಿಂಗಿತಾಂಗನಾಯ ನಮಃ |
ಓಂ ಸುರಾಗಾಯ ನಮಃ | ೪೫
ಓಂ ವಿರಾಗಾಯ ನಮಃ |
ಓಂ ವೀತರಾಗಾಯ ನಮಃ |
ಓಂ ಅಮೃತವರ್ಷಿಣೇ ನಮಃ |
ಓಂ ಉಗ್ರಾಯ ನಮಃ |
ಓಂ ಅನುಗ್ರರೂಪಾಯ ನಮಃ |
ಓಂ ಸ್ಥವಿರಾಯ ನಮಃ |
ಓಂ ಸ್ಥವೀಯಸೇ ನಮಃ |
ಓಂ ಶಾಂತಾಯ ನಮಃ |
ಓಂ ಅಘೋರಾಯ ನಮಃ | ೫೪
ಓಂ ಗೂಢಾಯ ನಮಃ |
ಓಂ ಊರ್ಧ್ವರೇತಸೇ ನಮಃ |
ಓಂ ಏಕವಕ್ತ್ರಾಯ ನಮಃ |
ಓಂ ಅನೇಕವಕ್ತ್ರಾಯ ನಮಃ |
ಓಂ ದ್ವಿನೇತ್ರಾಯ ನಮಃ |
ಓಂ ತ್ರಿನೇತ್ರಾಯ ನಮಃ |
ಓಂ ದ್ವಿಭುಜಾಯ ನಮಃ |
ಓಂ ಷಡ್ಭುಜಾಯ ನಮಃ |
ಓಂ ಅಕ್ಷಮಾಲಿನೇ ನಮಃ | ೬೩
ಓಂ ಕಮಂಡಲಧಾರಿಣೇ ನಮಃ |
ಓಂ ಶೂಲಿನೇ ನಮಃ |
ಓಂ ಡಮರುಧಾರಿಣೇ ನಮಃ |
ಓಂ ಶಂಖಿನೇ ನಮಃ |
ಓಂ ಗದಿನೇ ನಮಃ |
ಓಂ ಮುನಯೇ ನಮಃ |
ಓಂ ಮೌನಿನೇ ನಮಃ |
ಓಂ ಶ್ರೀವಿರೂಪಾಯ ನಮಃ |
ಓಂ ಸರ್ವರೂಪಾಯ ನಮಃ | ೭೨
ಓಂ ಸಹಸ್ರಶಿರಸೇ ನಮಃ |
ಓಂ ಸಹಸ್ರಾಕ್ಷಾಯ ನಮಃ |
ಓಂ ಸಹಸ್ರಬಾಹವೇ ನಮಃ |
ಓಂ ಸಹಸ್ರಾಯುಧಾಯ ನಮಃ |
ಓಂ ಸಹಸ್ರಪಾದಾಯ ನಮಃ |
ಓಂ ಸಹಸ್ರಪದ್ಮಾರ್ಚಿತಾಯ ನಮಃ |
ಓಂ ಪದ್ಮಹಸ್ತಾಯ ನಮಃ |
ಓಂ ಪದ್ಮಪಾದಾಯ ನಮಃ |
ಓಂ ಪದ್ಮನಾಭಾಯ ನಮಃ | ೮೧
ಓಂ ಪದ್ಮಮಾಲಿನೇ ನಮಃ |
ಓಂ ಪದ್ಮಗರ್ಭಾರುಣಾಕ್ಷಾಯ ನಮಃ |
ಓಂ ಪದ್ಮಕಿಂಜಲ್ಕವರ್ಚಸೇ ನಮಃ |
ಓಂ ಜ್ಞಾನಿನೇ ನಮಃ |
ಓಂ ಜ್ಞಾನಗಮ್ಯಾಯ ನಮಃ |
ಓಂ ಜ್ಞಾನವಿಜ್ಞಾನಮೂರ್ತಯೇ ನಮಃ |
ಓಂ ಧ್ಯಾನಿನೇ ನಮಃ |
ಓಂ ಧ್ಯಾನನಿಷ್ಠಾಯ ನಮಃ |
ಓಂ ಧ್ಯಾನಸ್ಥಿಮಿತಮೂರ್ತಯೇ ನಮಃ | ೯೦
ಓಂ ಧೂಲಿಧೂಸರಿತಾಂಗಾಯ ನಮಃ |
ಓಂ ಚಂದನಲಿಪ್ತಮೂರ್ತಯೇ ನಮಃ |
ಓಂ ಭಸ್ಮೋದ್ಧೂಲಿತದೇಹಾಯ ನಮಃ |
ಓಂ ದಿವ್ಯಗಂಧಾನುಲೇಪಿನೇ ನಮಃ |
ಓಂ ಪ್ರಸನ್ನಾಯ ನಮಃ |
ಓಂ ಪ್ರಮತ್ತಾಯ ನಮಃ |
ಓಂ ಪ್ರಕೃಷ್ಟಾರ್ಥಪ್ರದಾಯ ನಮಃ |
ಓಂ ಅಷ್ಟೈಶ್ವರ್ಯಪ್ರದಾಯ ನಮಃ |
ಓಂ ವರದಾಯ ನಮಃ | ೯೯
ಓಂ ವರೀಯಸೇ ನಮಃ |
ಓಂ ಬ್ರಹ್ಮಣೇ ನಮಃ |
ಓಂ ಬ್ರಹ್ಮರೂಪಾಯ ನಮಃ |
ಓಂ ವಿಷ್ಣವೇ ನಮಃ |
ಓಂ ವಿಶ್ವರೂಪಿಣೇ ನಮಃ |
ಓಂ ಶಂಕರಾಯ ನಮಃ |
ಓಂ ಆತ್ಮನೇ ನಮಃ |
ಓಂ ಅಂತರಾತ್ಮನೇ ನಮಃ |
ಓಂ ಪರಮಾತ್ಮನೇ ನಮಃ | ೧೦೮ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ಶ್ರೀ ದತ್ತಾತ್ರೇಯ ಸ್ತೋತ್ರಂ
ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ |
ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ || ೧ ||
ಅಸ್ಯ ಶ್ರೀದತ್ತಾತ್ರೇಯಸ್ತೋತ್ರಮಂತ್ರಸ್ಯ ಭಗವಾನ್ನಾರದಋಷಿಃ | ಅನುಷ್ಟುಪ್ ಛಂದಃ | ಶ್ರೀದತ್ತಃ ಪರಮಾತ್ಮಾ ದೇವತಾ | ಶ್ರೀದತ್ತಾತ್ರೇಯ ಪ್ರೀತ್ಯರ್ಥೇ ಜಪೇ ವಿನಿಯೋಗಃ ||
ನಾರದ ಉವಾಚ |
‌ ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರಹೇತವೇ |
ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋಽಸ್ತು ತೇ || ೧ ||
ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ |
ದಿಗಂಬರ ದಯಾಮೂರ್ತೇ ದತ್ತಾತ್ರೇಯ ನಮೋಽಸ್ತು ತೇ || ೨ ||
ಕರ್ಪೂರಕಾಂತಿದೇಹಾಯ ಬ್ರಹ್ಮಮೂರ್ತಿಧರಾಯ ಚ |
ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯ ನಮೋಽಸ್ತು ತೇ || ೩ ||
ಹ್ರಸ್ವದೀರ್ಘಕೃಶಸ್ಥೂಲನಾಮಗೋತ್ರವಿವರ್ಜಿತ |
ಪಂಚಭೂತೈಕದೀಪ್ತಾಯ ದತ್ತಾತ್ರೇಯ ನಮೋಽಸ್ತು ತೇ || ೪ ||
ಯಜ್ಞಭೋಕ್ತೇ ಚ ಯಜ್ಞಾಯ ಯಜ್ಞರೂಪಧರಾಯ ಚ |
ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋಽಸ್ತು ತೇ || ೫ ||
ಆದೌ ಬ್ರಹ್ಮಾ ಹರಿರ್ಮಧ್ಯೇ ಹ್ಯಂತೇ ದೇವಸ್ಸದಾಶಿವಃ |
ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೬ ||
ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ |
ಜಿತೇಂದ್ರಿಯ ಜಿತಜ್ಞಾಯ ದತ್ತಾತ್ರೇಯ ನಮೋಽಸ್ತು ತೇ || ೭ ||
ದಿಗಂಬರಾಯ ದಿವ್ಯಾಯ ದಿವ್ಯರೂಪಧರಾಯ ಚ |
ಸದೋದಿತಪರಬ್ರಹ್ಮ ದತ್ತಾತ್ರೇಯ ನಮೋಽಸ್ತು ತೇ || ೮ ||
ಜಂಬೂದ್ವೀಪೇ ಮಹಾಕ್ಷೇತ್ರೇ ಮಾತಾಪುರನಿವಾಸಿನೇ |
ಜಯಮಾನ ಸತಾಂ ದೇವ ದತ್ತಾತ್ರೇಯ ನಮೋಽಸ್ತು ತೇ || ೯ ||
ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ |
ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯ ನಮೋಽಸ್ತು ತೇ || ೧೦ ||
ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶಭೂತಲೇ |
ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಽಸ್ತು ತೇ || ೧೧ ||
ಅವಧೂತ ಸದಾನಂದ ಪರಬ್ರಹ್ಮಸ್ವರೂಪಿಣೇ |
ವಿದೇಹದೇಹರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೧೨ ||
ಸತ್ಯರೂಪ ಸದಾಚಾರ ಸತ್ಯಧರ್ಮಪರಾಯಣ |
ಸತ್ಯಾಶ್ರಯಪರೋಕ್ಷಾಯ ದತ್ತಾತ್ರೇಯ ನಮೋಽಸ್ತು ತೇ || ೧೩ ||
ಶೂಲಹಸ್ತಗದಾಪಾಣೇ ವನಮಾಲಾಸುಕಂಧರ |
ಯಜ್ಞಸೂತ್ರಧರ ಬ್ರಹ್ಮನ್ ದತ್ತಾತ್ರೇಯ ನಮೋಽಸ್ತು ತೇ || ೧೪ ||
ಕ್ಷರಾಕ್ಷರಸ್ವರೂಪಾಯ ಪರಾತ್ಪರತರಾಯ ಚ |
ದತ್ತಮುಕ್ತಿಪರಸ್ತೋತ್ರ ದತ್ತಾತ್ರೇಯ ನಮೋಽಸ್ತು ತೇ || ೧೫ ||
ದತ್ತ ವಿದ್ಯಾಢ್ಯ ಲಕ್ಷ್ಮೀಶ ದತ್ತ ಸ್ವಾತ್ಮಸ್ವರೂಪಿಣೇ |
ಗುಣನಿರ್ಗುಣರೂಪಾಯ ದತ್ತಾತ್ರೇಯ ನಮೋಽಸ್ತು ತೇ || ೧೬ ||
ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾನದಾಯಕಮ್ |
ಸರ್ವಪಾಪಂ ಶಮಂ ಯಾತಿ ದತ್ತಾತ್ರೇಯ ನಮೋಽಸ್ತು ತೇ || ೧೭ ||
ಇದಂ ಸ್ತೋತ್ರಂ ಮಹದ್ದಿವ್ಯಂ ದತ್ತಪ್ರತ್ಯಕ್ಷಕಾರಕಮ್ |
ದತ್ತಾತ್ರೇಯಪ್ರಸಾದಾಚ್ಚ ನಾರದೇನ ಪ್ರಕೀರ್ತಿತಮ್ || ೧೮ ||
ಇತಿ ಶ್ರೀನಾರದಪುರಾಣೇ ನಾರದವಿರಚಿತಂ ಶ್ರೀ ದತ್ತಾತ್ರೇಯ ಸ್ತೋತ್ರಮ್ |

Related Posts