🕉️ಶ್ರೀ ಗುರುಭ್ಯೋನಮಃ 🕉️

🌼ಗ್ರಹಗಳ ದೃಷ್ಟಿ ವಿಚಾರ 🌼

ಒಂದು ಜನ್ಮ ಕುಂಡಲಿಯಲ್ಲಿ ಗ್ರಹಗಳ ದೃಷ್ಟಿ ವಿಚಾರ ಬಂದಾಗ, ಎಲ್ಲಾ ಗ್ರಹಗಳು ತಾನಿರುವ ಭಾವದಿಂದ ಸಪ್ತಮ ಭಾವವನ್ನು ದೃಷ್ಟಿಸುತ್ತದೆ.
ಆದರೆ ನವ ಗ್ರಹಗಳಲ್ಲಿ ಮೂರು ಗ್ರಹಗಳಿಗೆ ವಿಶೇಷ ದೃಷ್ಟಿ ಹೊಂದಿರುತ್ತವೆ.. ಅವುಗಳು..

  1. ಗುರು ಗ್ರಹ…. 5.. 9… 7

2.. ಶನಿ ಗ್ರಹ….. 3.. 10.. 7

3.. ಕುಜ ಗ್ರಹ… 4… 8.. 7

4… ಸೂರ್ಯ, ಚಂದ್ರ, ಬುಧ, ಶುಕ್ರ.. ಇವು ಸಪ್ತಮ ಭಾವವನ್ನು ಪೂರ್ಣ ದೃಷ್ಟಿ ಯಿಂದ ದೃಷ್ಟಿಸುತ್ತವೆ. ಶನಿ, ಗುರು, ಕುಜ ರು ಸಾಮಾನ್ಯ ದೃಷ್ಟಿ ಇರುತ್ತದೆ.

ಶನಿ, ತೃತೀಯ ದಶಮವನ್ನು, ಗುರು, ಪಂಚಮ, ನವಮವನ್ನು, ಕುಜನು, ಚತುರ್ಥ ಅಷ್ಟಮ ವನ್ನು ಪೂರ್ಣ ದೃಷ್ಟಿಯಿಂದ ವೀಕ್ಷಿಸುತ್ತಾರೆ.

🌼.. ಗ್ರಹ ದೃಷ್ಟಿಯಲ್ಲಿ ವಿಧಾನ..

1…ಸೂರ್ಯ, ಅಂಗಾರಕ… ಊರ್ಧ್ವದೃಷ್ಟಿ

2… ಶುಕ್ರ, ಬುಧ…. ಕಟಾಕ್ಷ ದೃಷ್ಟಿ (ಕಡೆಗಣ್ಣ ನೋಟ )

3… ಬೃಹಸ್ಪತಿ, ಚಂದ್ರ… ಸಮಾನವಾದ ಎದುರು
ದೃಷ್ಟಿ.

4.. ರಾಹು, ಶನಿ… ಅರ್ಧ ಕಣ್ಣು ಮುಚ್ಚಿ ಕೊಂಡು
ನೋಡುವಂಥಾ ದೃಷ್ಟಿ

ಇನ್ನು ರಾಹು, ಕೇತು ಗಳು ಛಾಯಾ ಗ್ರಹಗಳು… ಇವುಗಳಿಗೂ ವಿಶೇಷ ದೃಷ್ಟಿ.. 5, 7, 9ನೆ ದೃಷ್ಟಿ ಉಂಟೆಂದು ವಾದವಿದೆ ಹಾಗೂ ಪ್ರಚಲಿತದಲ್ಲೂ ಇದೆ.
ಧನ್ಯವಾದಗಳೊಂದಿಗೆ,

ಜ್ಯೋತಿಷಸೇವೆಯಲ್ಲಿ 🕉️🙏.

Related Posts