ಸಂತೋಷದ ವಿವಾಹ ಜೀವನ :

1-7-9 ಅಧಿಪತಿಗಳಿಗೆ ಸಂಬಂಧವಿದ್ದರೆ ಉತ್ತಮ ಪತ್ನಿ .

ಶುಕ್ರ ಪ್ರಬಲನಾಗಿದ್ದರೆ
ಅದರಲ್ಲೂ ನವಾಂಶದಲ್ಲಿ ಬಲವಾಗಿದ್ದರೆ
ವಿವಾಹ ಜೀವನ ಸುಖಮಯ

ಪತಿ-ಪತ್ನಿಯ ರಾಶಿ ಕುಂಡಲಿಯಲ್ಲಿ
ಚಂದ್ರನು
ಒಬ್ಬರಿಗೊಬ್ಬರು
1-5-9 ಕೋನಗಳಲ್ಲಿ ಇದ್ದರೆ ಅಥವಾ ಲಗ್ನಗಳು ಕೋನಗಳಲ್ಲಿ ಇದ್ದರೆ
ಸುಖಮಯ ವಿವಾಹ ಜೀವನ.

ಚಂದ್ರನನ್ನು ಗುರು ಶುಕ್ರರು ದೃಷ್ಟಿ ಸುತ್ತಿದ್ದರೆ ಉತ್ತಮ ವಿವಾಹ ಜೀವನ.

ಪತಿ-ಪತ್ನಿಯರು ಒಂದೇ ರಾಶಿಯಾಗಿದ್ದರೆ ಸುಖಮಯ ಜೀವನ.

ಸಪ್ತಮದಲ್ಲಿ ಗುರು ಚಂದ್ರರು ಸ್ಥಿತರಿದ್ದಾರೆ
ಸುಖಜೀವನ.

ಸಪ್ತಮಾಧಿಪತಿ ಲಗ್ನದಲ್ಲಿದ್ದರೆ.
ಪರಸ್ತ್ರೀಯರಲ್ಲಿ ರಮಿಸುತ್ತಾನೆ.

ದ್ವಿತೀಯ ಭಾವದಲ್ಲಿದ್ದರೆ:
ಬಹು ಪತ್ನಿಯರು.

ತೃತೀಯದಲ್ಲಿ ಇದ್ದರೆ
ಹುಟ್ಟಿದ ಮಕ್ಕಳು ಸಾಯುತ್ತಾರೆ.

ಚತುರ್ಥದಲ್ಲಿ ಇದ್ದರೆ
ಈತನ ಹೆಂಡತಿ ಈತನ ಈತನ ವಸದಲ್ಲಿ ಸದಾ ಇರುವುದಿಲ್ಲ.

ಪಂಚಮದಲ್ಲಿದ್ದರೆ
ಮಾನವಂತ ಗುಣವಂತ.

ಷಷ್ಟದಲ್ಲಿದ್ದಾರೆ :
ಹೆಂಡತಿ ರೋಗಿಷ್ಟೆ.
ಅಥವಾ ಪತ್ನಿಯಲ್ಲಿ ವೈರತ್ವ.

ಸಪ್ತಮದಲ್ಲಿದ್ದರೆ:
ಪತ್ನಿ ಸುಖ ಸದಾ ಇರುತ್ತದೆ

ಅಷ್ಟಮದಲ್ಲಿ ಇದ್ದರೆ.
ಪತ್ನಿ ಸುಖ ಇರುತ್ತದೆ
ಪತ್ನಿ ರೋಗಿಷ್ಠೆ

ಸಪ್ತಮಾಧಿಪತಿ ನವಮದಲ್ಲಿ ಇದ್ದರೆ.
ವಿವಿಧ ಸ್ತ್ರೀಯರ ಸಂಪರ್ಕ.ಹೆಂಡತಿ ಈತನ ಮನಸ್ಸನ್ನು ಅರಿತು ಗೆಲ್ಲುತ್ತಾಳೆ.

ದಶಮದಲ್ಲಿದ್ದರೆ:
ಈತನ ಹೆಂಡತಿ ಇವನ ಅನುಮತಿಯಂತೆ
ಆಜ್ಞಾಧಾರಕಳು.

ಏಕಾದಶದಲ್ಲಿ ಇದ್ದರೆ
ಸ್ತ್ರೀ ಮೂಲಕ ಅರ್ಥ ಲಾಭ ಪುತ್ರ ಸುಖ.

ವ್ಯಯ ಭಾವದಲ್ಲಿದ್ದರೆ:
ದರಿದ್ರ ಈತನ ಹೆಂಡತಿ ವಿಶೇಷವಾಗಿ ವೆಚ್ಚ ಮಾಡುತ್ತಾಳೆ.

✍️ವಿಶು ಕುಮಾರ್🦚

Related Posts