ಮನೋಬಲ ತಂದುಕೊಡುವ ಏಕೈಕ ಸಾಧನ ಅಂದರೆ ಏಕಾದಶಿ ಉಪವಾಸ .

14-03-2022 EKAADASHI
🌺🌺🌺🌺🌺🌺🌺
ಏಕಾದಶೀ ಮಾತ್ರ ತಿನ್ನದಿರಿ
🌺🌺🌺🌺🌺🌺🌺
ಎಲ್ಲವನ್ನೂ ಕೊಟ್ಟ ದೇವರು ಹೇಳಿದ್ದಾನೆ

” ನನಗಾಗಿ ನನ್ನ ಪ್ರೀತಿಗಾಗಿ ನಿಮ್ಮ ಮನೋಬಲಕ್ಕಾಗಿ , ಆತ್ಮಬಲಕ್ಕಾಗಿ , ನಿಮ್ಮ ಸಕಲ ಪಾಪಗಳ ಪರಿಹಾರಕ್ಕಾಗಿ ಒಂದು ದಿನ ಉಪವಾಸ ಮಾಡಿ. ೧೪ ದಿನಗಳಲ್ಲಿ ಯಥೇಚ್ಛವಾಗಿ ತಿಂದು ಭೋಗ ಮಾಡಿ. ಆದರೆ ನನ್ನ ದಿನದಲ್ಲಿ ಅಂದರೆ ಹರಿದಿನದಲ್ಲಿ ಒಂದು ಹನಿ ನೀರನ್ನೂ ಸೇವಿಸ ಕೂಡದು ” ಶ್ರೀಹರಿಯೇ ಈ ಮಾತನ್ನು ಹೇಳಿಕೊಂಡಿದ್ದಾನೆ

ಯಾರೋ ಸ್ನೇಹಿತರು , ಆಪ್ತರು ಮನೆಗೆ ಬರುತ್ತಾರೆಂದು ಅಡುಗೆ ಮಾಡಿಕೊಂಡು ಗಂಟೆಗಟ್ಟಲೇ ಕಾಯುತ್ತೇವೆ.ಅವರು ಬಂದಮೇಲೆ ಅವರಿಗೆ ಊಟಕ್ಕೆ ಹಾಕಿ ಊಟ ಮಾಡುತ್ತೇವೆ.

ಗಮನಿಸಿ ಪರಮ ಆಪ್ತನಾದ , ಜನ್ಮ ಜನ್ಮಾಂತರಕ್ಕೂ ಸಖನಾದ ಭಗವಂತನು ನಮ್ಮ ಮನವೆಂಬ ಮಂದಿರಕ್ಕೆ ಬರುತ್ತಿದ್ದಾನೆ. ಅವನಿಗಾಗಿ ಒಂದು ದಿನ ಉಪವಾಸವಿದ್ದು ಕಾಯಲು ಸಾಧ್ಯವಿಲ್ಲವೇ ?

ದೇವರು ಪ್ರತ್ಯಕ್ಷ ಆಗುವವರೆಗೂ ಸಣ್ಣ ಬಾಲಕ ಧ್ರುವರಾಜ ಆಹಾರ ಸೇವಿಸಲಿಲ್ಲ. ಆ ಯೋಗ್ಯತೆ ನಮ್ಮದಲ್ಲ . ಬೇಡ ಆದರೆ ಹದಿನೈದು ದಿನಕ್ಕೊಮ್ಮೆ ಉಪವಾಸ ಮಾಡುವುದು ಬೇಡವೇ ?

ಮನುಷ್ಯನಿಗೆ ಉತ್ತಮ ಆತ್ಮಬಲ , ಮನೋಬಲ ತಂದುಕೊಡುವ ಏಕೈಕ ಸಾಧನ ಅಂದರೆ ಏಕಾದಶಿ ಉಪವಾಸ . ಇದು ಹಿರಿದಾದ ವೈಷ್ಣವದೀಕ್ಷೆ . ಏಕಾದಶಿಯನ್ನು ಎಲ್ಲರೂ ಮಾಡುವುದೇ ಅಂದರೆ ಆ ದೇವರು ನಮ್ಮ ಹತ್ತಿರ ಬೇಗ ಬರುತ್ತಾನೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಯಾಕೆಂದರೆ ಮಕ್ಕಳು ಉಪವಾಸ ಇದ್ದಾರೆಂದರೆ ತಾಯಿ ತಡ ಮಾಡುವುದಿಲ್ಲ. ಬೇಗನೇ ಹತ್ತಿರ ಬಂದು ಉಣಿಸುತ್ತಾಳೆ. ಹಾಗೆ ನಮ್ಮೆಲ್ಲರ ತಂದೆ-ತಾಯಿಯಾದ ಭಗವಂತ ನಮ್ಮ ಹತ್ತಿರ ಬೇಗ ಬರುತ್ತಾನೆ. ದೇವರನ್ನು ಕಾಣುವುದಕ್ಕಾಗಿ ಉಪವಾಸ ಮಾಡಿ. – ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು
|| ಶ್ರೀಕೃಷ್ಣಾರ್ಪಣ ಮಸ್ತು ||

Related Posts