ದಕ್ಷಿಣಾಮೂರ್ತಿ ವಿದ್ಯೆಗೆ ಅಧಿಷ್ಠಾತ್ಮ ದೇವತೆ

💎 ಸರ್ವವಿದ್ಯೆಗಳಿಗೆ ನಿಧಿಯಾಗಿರುವ ಬಲಿಷ್ಠ ದಕ್ಷಿಣಾ ಮೂರ್ತಿ ಸ್ತೋತ್ರವನ್ನು ಮಕ್ಕಳಿಗೆ ಹೇಳಿಕೊಡಿ. ಮಕ್ಕಳಲ್ಲಿ ಎಂತಹ ಅದ್ಭುತ ಬದಲಾವಣೆ ಆಗುತ್ತದೆ ಎಂದು ನೀವೇ ನೋಡಿ.

💎 ದಕ್ಷಿಣಾಮೂರ್ತಿ ವಿದ್ಯೆಗೆ ಅಧಿಷ್ಠಾತ್ಮ ದೇವತೆ ಎಂದು ಉಪನಿಷತ್ತು ಮತ್ತು ಸ್ತೋತ್ರಗಳಿಂದ ತಿಳಿದು ಬರುತ್ತದೆ. ದಕ್ಷಿಣಾಮೂರ್ತಿಯು ಪರಮೇಶ್ವರನ ಲೀಲಾ ವಿಭೂತಿಗಳಲ್ಲಿ ಒಂದು.

💎 ದಕ್ಷಿಣಾ ಎಂದರೆ ಬುದ್ಧಿ. ಆ ಬುದ್ಧಿಯ ಜ್ಞಾನದ ಕಡೆಗೆ ಅಭಿಮುಖ ನಾಗಿರುವುದರಿಂದ
ಈ ಹೆಸರು. ಮಕ್ಕಳಲ್ಲಿ ಜ್ಞಾನ ವಾಕ್ಚಾತುರ್ಯ, ಸಿದ್ಧಿ ಲಭಿಸುತ್ತದೆ.. ಅತ್ಯಂತ ಸರಳ ಸ್ತೋತ್ರ ಪ್ರತಿದಿನ ಹನ್ನೊಂದು ಸಲ ಹೇಳಿಸಿ ನೋಡಿ …

💎 ದಕ್ಷಿಣಾಮೂರ್ತಿಯು ಪರಮೇಶ್ವರನ ಲೀಲಾ ವಿಭೂತಿಗಳಲ್ಲಿ ಒಂದು. ವೀಣಾ, ಸಾಂಬ, ಯೋಗ, ಸಂಹಾರ, ಶಕ್ತಿ, ಜ್ಞಾನ, ಅನುಷ್ಠಾನ, ವ್ಯಾಖ್ಯಾನ, ವಿದ್ಯಾ, ವಟಮೂಲ ಎಂಬ ಹತ್ತು ವಿಧ ಶಿವಮೂರ್ತಿಗಳಲ್ಲಿ ಕೊನೆಯದೇ ಇದು. ದಕ್ಷಿಣಾ ಎಂದರೆ ಬುದ್ಧಿ. ಆ ಬುದ್ಧಿಯ (ಜ್ಞಾನದ) ಕಡೆಗೆ ಅಭಿಮುಖನಾಗಿರುವುದರಿಂದ ಈ ಹೆಸರು. ಮೂರ್ತಿ ದಕ್ಷಿಣಾಭಿಮುಖವಾಗಿ ಇರುವುದರಿಂದ ಈ ಹೆಸರು ಎಂದು ಕೆಲವರ ಅಭಿಪ್ರಾಯ.

💎 ಸರ್ವವಿದ್ಯೆಗಳಿಗೆ ನಿಧಿ

ಗುರುವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ |
ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||

ಅರ್ಥ:-ಸರ್ವಲೋಕಗಳಿಗೆ ಗುರುವೂ ಭವರೋಗಿಗಳಿಗೆ ವೈದ್ಯನೂ ಸರ್ವವಿದ್ಯೆಗಳಿಗೆ ನಿಧಿಯೂ ಆದ ದಕ್ಷಿಣಾಮೂರ್ತಿಗೆ ನಮಸ್ಕಾರ.

💎 ಹೀಗೆಂದು ಈ ದೇವತೆಯನ್ನು ಪ್ರಾರ್ಥಿಸುವುದು ರೂಢಿಯಲ್ಲಿದೆ. ದಕ್ಷಿಣಾಮೂರ್ತಿ ವಿದ್ಯೆಗೆ ಅಧಿಷ್ಠಾತ್ಮ ದೇವತೆ ಎಂದು ಉಪನಿಷತ್ತು ಮತ್ತು ಸ್ತೋತ್ರಗಳಿಂದ ತಿಳಿದು ಬರುತ್ತದೆ. ವ್ಯಾವಹಾರಿಕ ರೂಪದ ಉಪದೇಶ ಮಿಥ್ಯೆಯಾದ ಕಾರಣ ಜ್ಞಾನ (ಬ್ರಹ್ಮ) ಮೂರ್ತಿಯಾದ ಈ ದೇವತೆ ಮುಖದಿಂದ ಯಾವ ಉಪದೇಶವನ್ನೂ ಮಾಡುವುದಿಲ್ಲ. ಆದಕಾರಣ ಈ ಮೂರ್ತಿಯ ಗುರುರೂಪವಾದ ಉಪದೇಶ ಮೌನವಷ್ಟೇ. ಶಿಷ್ಯರು ಈ ಮುದ್ರೆಯಿಂದಲೇ ಸಂಶಯಮುಕ್ತರಾಗಿ ಜ್ಞಾನಿಗಳಾಗುತ್ತಾರೆ. ಇತರ ದೇವತೆಗಳಿಗೆ ಪುರಾಣಪ್ರಸಿದ್ಧಿ ಇರುವಂತೆ ಈ ದೇವತೆಯ ವಿಚಾರ ಪುರಾಣಗಳಲ್ಲಿ ಅಧಿಕವಾಗಿ ಕಂಡುಬರುವುದಿಲ್ಲ. ಮಂತ್ರಶಾಸ್ತ್ರಕ್ಕೆ ಸಂಬಂಧಪಟ್ಟ ಉಪಾಸನಾದಿ ವಿಭಾಗದಲ್ಲಿ ಈ ದೇವತೆಯ ವಿಚಾರವಿದೆ. ಜ್ಞಾನವನ್ನು ಬಯಸುವವರು ಈ ದೇವತೆಯನ್ನು ಉಪಾಸನೆ ಮಾಡುತ್ತಾರೆ.

ಧ್ಯಾನ_ಕ್ರಮ

💎 ಕರ್ಪೂರದಂತೆ ಶುಭ್ರನೂ ತರ್ಕಮುದ್ರೆಯನ್ನು ಧರಿಸಿ ಬ್ರಹ್ಮತತ್ತ್ವವನ್ನು ತಿಳಿಸುವವನೂ ಯೋಗಾಸನದಲ್ಲಿ ಮಂಡಿತನೂ ಆದ ದಕ್ಷಿಣಾಮೂರ್ತಿಯನ್ನು ಧ್ಯಾನಿಸಬೇಕೆಂದು ಶ್ರೀಮಾನಸೋಲ್ಲಾಸ ಗ್ರಂಥ ಹೇಳುತ್ತದೆ.

💎 ಬ್ರಹ್ಮತತ್ತ್ವವನ್ನು ಬಯಸುವ ವೃದ್ಧರಾದ ಋಷಿಗಳ ಗುಂಪಿನಿಂದ ಆವೃತನಾದ ಜ್ಞಾನಮುದ್ರೆಯನ್ನು ಧರಿಸಿ ಆನಂದಮೂರ್ತಿಯೂ ಮೌನರೂಪ ವ್ಯಾಖ್ಯಾನದಿಂದ ಬ್ರಹ್ಮತತ್ತ್ವವನ್ನು ಪ್ರಕಟಿಸುತ್ತಿರುವ ತರುಣನೂ ಆದ ದಕ್ಷಿಣಾಮೂರ್ತಿಯನ್ನು ಸ್ಮರಿಸಬೇಕೆಂದು ಶ್ರೀತತ್ತ್ವಸುಧೆ ತಿಳಿಸುತ್ತದೆ.

💎 #ಉಪನಿಷದ್_ವಾಕ್ಯ
ವೀಣೆ ಮುತ್ತಿನ ಜಪಮಾಲೆ ಪುಸ್ತಕ ಜ್ಞಾನಮುದ್ರೆ ಅಥವಾ ಅಗ್ನಿನಾಗಗಳನ್ನು ಚತುರ್ಭುಜಗಳಲ್ಲಿ ಧರಿಸಿ ಬೆಳ್ಳಿಯಂತೆ ಶುಭ್ರವರ್ಣದಿಂದ ಕೂಡಿದ ಭಸ್ಮಲೇಪಿತ ಶರೀರವುಳ್ಳವನೂ ತ್ರಿಲೋಚನನೂ ತಲೆಯಲ್ಲಿ ಚಂದ್ರಕಲೆಯುಳ್ಳವನೂ ಕಿರೀಟಧಾರಿಯೂ ಯೋಗಾಸನಾರೂಢನೂ ಆಗಿರುವಂತೆ ಈ ದೇವತೆಯ ಸ್ವರೂಪ ದಕ್ಷಿಣಾಮೂರ್ತಿ ಉಪನಿಷತ್ತಿನಲ್ಲಿ ವರ್ಣಿತವಾಗಿದೆ.
ಜ್ಞಾನಾಧಿದೈವವಾದುದರಿಂದ ಮೇಧಾ ದಕ್ಷಿಣಮೂರ್ತಿ ಎಂಬ ಹೆಸರು ಮಂತ್ರೋದ್ಧಾರದಲ್ಲಿ ಕಂಡುಬರುತ್ತದೆ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ತನ್ನಲ್ಲಿ ಸಂಹರಿಸಿಕೊಂಡು ಸ್ವಾತ್ಮಾನಂದ ಸುಖದಲ್ಲಿ ವಿಹರಿಸುವ ಈಶ್ವರನ ಸ್ವರೂಪವೇ ದಕ್ಷಿಣಾಮೂರ್ತಿ. ಈ ದಕ್ಷಿಣ ಮುಖನಾದ ಶಿವ ಪ್ರತ್ಯಕ್ಷನಾದರೆ ತತ್ತ್ವಜ್ಞಾನ ಸಿದ್ಧಿಸುತ್ತದೆ.

Related Posts