ನಮಸ್ಕಾರ ಸ್ನೇಹಿತರ

ಯುಗಾದಿ 2022 ದ್ವಾದಶರಾಶಿಗಳಿಗೆ ಆದಾಯ ಎಷ್ಟು ಖರ್ಚೆಷ್ಟು ಒಂದು ಸಣ್ಣ ಪಕ್ಷಿನೋಟ ನೋಡೋಣ ಬನ್ನಿ
1) ಮೇಷ ರಾಶಿ:-14 ಆದಾಯ14 ಖರ್ಚು
2) ವೃಷಭ ರಾಶಿ:- 8 ಆದಾಯ 8 ವ್ಯಯ
3) ಮಿಥುನ ರಾಶಿ:- 11 ಆದಾಯ 5 ಖರ್ಚು
4) ಕಟಕ ರಾಶಿ:- 5 ಆದಾಯ 5 ವ್ಯಯ
5) ಸಿಂಹ ರಾಶಿ:- 8 ಆದಾಯ 14 ಖರ್ಚು
6)ಕನ್ಯಾ ರಾಶಿ:- 11ಆದಾಯ 5 ವ್ಯjಯ
7) ತುಲಾ ರಾಶಿ:- 8 ಆದಾಯ 8 ವ್ಯಯ
8) ವೃಶ್ಚಿಕ ರಾಶಿ:- 14 ಆದಾಯ 14ವ್ಯಯ
9) ಧನು ರಾಶಿ:-2 ಆದಾಯ 8 ವ್ಯಯ
10) ಮಕರ ರಾಶಿ:- 5 ಆದಾಯ 2 ವ್ಯಯ
11) ಕುಂಭ ರಾಶಿ:- 5 ಆದಾಯ 2ವ್ಯಯ
12) ಮೀನ ರಾಶಿ:-2ಆದಾಯ 8ವ್ಯಯ

ಉಗಾದಿಗೆ ಪಂಚಾಂಗವನ್ನು ಕೊಳ್ಳುವವರಾಗಿದ್ದರೆ, ಮತ್ತು ಪಂಚಾಂಗವನ್ನು ಓದುವುದರಲ್ಲಿ ಅಲ್ಪಸ್ವಲ್ಪ ಪರಿಣತಿ ಇದ್ದರೆ, ನೀವು ಗಮನಿಸಿರಬಹುದು.
ಈ ವರ್ಷದ ರಾಜ ಇಂತಹ ಗ್ರಹ, ಮಂತ್ರಿ ಇಂತಹ ಗ್ರಹ, ಸೇನಾಧಿಪತಿ ಇನ್ನಾವುದೋ ಗ್ರಹ, ಇತ್ಯಾದಿ, ಇತ್ಯಾದಿ.
ಹೌದು, ಈ ರಾಜ, ಮಂತ್ರಿಗಳನ್ನು ಹೇಗೆ ಗುರುತಿಸುತ್ತಾರೆ ?


 ನಾಯಕತ್ವ ತಿಳಿಯುವ ವಿಧಾನ* 

 1.  ರಾಜ.
ಯುಗಾದಿ ಪಾಡ್ಯವು  ಯಾವ ವಾರ ಬಂದಿರುತ್ತದೆಯೋ  ಆ ವಾರಾಧಿಪತಿಯನ್ನು  ರಾಜನೆಂದು ಪರಿಗಣಿಸುತ್ತಾರೆ.
ಈ ವರ್ಷ ಉಗಾದಿ ಹಬ್ಬವು  ಶನಿವಾರ ಬಂದಿರುವುದರಿಂದ, ಈ ವರ್ಷದ ರಾಜ - ಶನೈಚ್ಛರ.

2.. ಮಂತ್ರಿ 
ರವಿಯು ಮೇಷ ರಾಶಿಯನ್ನು 
ಯಾವ ವಾರ  ಪ್ರವೇಶಿಸುತ್ತಾನೆಯೋ  ಆ ವಾರದ ಅಧಿಪತಿ  ಮಂತ್ರಿಯಾಗುತ್ತಾನೆ.
ಈ ವರ್ಷ ರವಿಯು ಮೇಷ ರಾಶಿಯನ್ನು ಗುರುವಾರ ಪ್ರವೇಶಿಸುತ್ತಾನೆ.(14-04-2022) ಆದುದರಿಂದ ಈ ವರ್ಷ ಮಂತ್ರಿ - ಗುರು.

*3. ಸೇನಾಧಿಪತಿ :* 
ಸಿಂಹ ರಾಶಿಗೆ ರವಿಯು  ಯಾವ ವಾರ ಪ್ರವೇಶ ಮಾಡುತ್ತಾನೆಯೋ ಆ ವಾರದ ಅಧಿಪತಿಯೇ ಸೇನಾಧಿಪತಿ. 
ಈ ವರ್ಷ ರವಿಯು  ದಿನಾಂಕ 17-08-2022ರಂದು ಬುಧವಾರ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಆದುದರಿಂದ ಈ ವರ್ಷ ಸೇನಾಧಿಪತಿ - ಬುಧ.

*4.ಮೇಘಾಧಿಪತಿ:* 
ರವಿಯು   ಆರ್ದ್ರಾ ನಕ್ಷತ್ರವನ್ನು ಯಾವ ವಾರದಂದು  ಪ್ರವೇಶ ಮಾಡುತ್ತಾನೆಯೋ  ಆ ವಾರಾಧಿಪತಿ ಮೇಘಾಧಿಪತಿಯಾಗುತ್ತಾನೆ.
ಈ ವರ್ಷ ರವಿಯು ಆರ್ದ್ರಾ ನಕ್ಷತ್ರವನ್ನು ದಿನಾಂಕ 22-06-2022ರಂದು ಬುಧವಾರ ಪ್ರವೇಶಿಸುತ್ತಾನೆ. ಆದುದರಿಂದ ಈ ವರ್ಷದ ಮೇಘಾಧಿಪತಿ ‌ಬುಧ.

5. ಧಾನ್ಯಾಧಿಪತಿ:*
ರವಿಯು ಧನುಷ್  ರಾಶಿಯನ್ನು ಯಾವ ವಾರ  ಪ್ರವೇಶ ಮಾಡುತ್ತಾನೆಯೋ  ಆ ವಾರಾಧಿಪತಿ ಧಾನ್ಯಾಧಿಪತಿ.
ಈ ವರ್ಷ ರವಿಯು ದಿನಾಂಕ 16-12-2022ರಂದು ಶುಕ್ರವಾರ ಧನುಷ್ ರಾಶಿಯನ್ನು ಪ್ರವೇಶಿಸುತ್ತಾನೆ. ಆದುದರಿಂದ ಈ ವರ್ಷದ ಧಾನ್ಯಾಧಿಪತಿ ಶುಕ್ರ.

6. ರಸಾಧಿಪತಿ
ರವಿಯು ತುಲಾ ರಾಶಿಗೆ ಯಾವ ವಾರ  ಪ್ರವೇಶ ಮಾಡುತ್ತಾನೆಯೋ ಆ  ವಾರಾಧಿಪತಿ ‌ ರಸಾಧಿಪತಿಯಾಗುತ್ತಾನೆ.
ಈ ವರ್ಷ ರವಿಯು ದಿನಾಂಕ 1-11-2021ರಂದು ಮಂಗಳವಾರ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಆದುದರಿಂದ ಈ ವರ್ಷದ ರಸಾಧಿಪತಿ ಕುಜ.

*7. ಅರ್ಘಾಧಿಪತಿ:* 
ರವಿಯು  ಮಿಥುನ ರಾಶಿಗೆ ಯಾವ ವಾರ ಪ್ರವೇಶ ಮಾಡುತ್ತಾನೆಯೋ  ಆ ವಾರಾಧಿಪತಿ  ಅರ್ಘಾಧಿಪತಿ.
ಈ ವರ್ಷ ರವಿಯು ದಿನಾಂಕ 15-06-2022ರಂದು ಬುಧವಾರ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಆದುದರಿಂದ ಈ ವರ್ಷ ಅರ್ಘಾಧಿಪತಿ ಬುಧ.

8. ನೀರಸಾಧಿಪತಿ  
ರವಿಯು ಮಕರ ರಾಶಿಯನ್ನು ಯಾವ ವಾರ ಪ್ರವೇಶ ಮಾಡುತ್ತಾನೋ  ಆ ವಾರದ ಅಧಿಪತಿಯನ್ನು ನಿರಸಾಧಿಪತಿ  ಎನ್ನುತ್ತಾರೆ.
ಈ ವರ್ಷ ರವಿಯು ದಿನಾಂಕ 14-01-2022ರಂದು ಶನಿವಾರ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಆದುದರಿಂದ ಈ ವರ್ಷ ನೀರಸಾಧಿಪತಿ ಶನಿ ಆಗಿರುತ್ತಾನೆ.
ಈ ಗ್ರಹಗಳ ಈ ರೀತಿಯ ಆಧಿಪತ್ಯದಿಂದ ವರ್ಷದ ಫಲ ಏನು ಎನ್ನುವುದನ್ನು ಮುಂದಿನ ಕಂತಿನಲ್ಲಿ ಚರ್ಚಿಸೋಣ.
ನಮಸ್ಕಾರಗಳು.

ಕಲಶ ಪೂಜೆ

ಕಲಶ ಪೂಜೆಗೆ ಬಳಸಲಾಗುವ ಸಾಮಗ್ರಿಗಳ ಹಿಂದಿನ ವೈಜ್ಞಾನಿಕ ಕಾರಣ
ಕಲಶಗಳ ಕೆಳಗೆ ಅಕ್ಕಿಯನ್ನು ಹಾಕಬೇಕು.
ಅಕ್ಕಿಯುಶಾಂತಿಯ ಸಂಕೇತ. ಪ್ರತಿದಿನ ನಮ್ಮ ಹಸಿವನ್ನು ನೀಗಿಸುವ ಧಾನ್ಯಕ್ಕೆ ಕೃತಜ್ಞತೆ ತೋರಿಸುವ ಉದ್ದೇಶಕ್ಕಾಗಿ ಮತ್ತು ಏಕದಳಧಾನ್ಯವಾಗಿರುವ ಅಕ್ಕಿಯನ್ನು ಪೂಜೆ ಮಾಡುವ ಕಲಶಗಳ ಕೆಳಗೆ ಹಾಕುವುದು, . ಮನುಷ್ಯನಿಗೆ ಉಪಕಾರಿಯಾಗುವ ಎಲ್ಲ ವಸ್ತುಗಳು ದೈವರೂಪವೇ ಎಂದು ಅವುಗಳೆಲ್ಲವಕ್ಕೂ ದೇವರ ಸನ್ನಿಧಿಯಲ್ಲಿ ಸ್ಥಾನ ಕಲ್ಪಿಸಿದೆ ನಮ್ಮ ಧರ್ಮ.

ಕಲಶಕ್ಕೆ ತಾಮ್ರದ ಕಳಸವನ್ನು ಉಪಯೋಗಿಸುತ್ತೇವೆ.
ತಾಮ್ರವು ಲೋಹಗಳಲ್ಲೆಲ್ಲ ಅತುತ್ತಮವಾದದ್ದು. ಇದಕ್ಕೆ ವಿಷೇಶವಾದ ಗುಣಗಳಿರುವುದರಿಂದಲೇ ಇದಕ್ಕೆ ವಿಷೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ. ತಾಮ್ರದೊಂದಿಗೆ ನೀರು ಬೆರೆತಾಗ ಅಲ್ಲಿ ರಾಸಾಯನಿಕ ಕ್ರಿಯೆಉಂಟಾಗಿ ವಿಶಿಷ್ಟವಾದ ದ್ರಾವಣ ಉತ್ಪತ್ತಿಯಾಗುತ್ತದೆ. ಈ ದ್ರಾವಣದಿಂದ ಅನೇಕ ತರಹದ ಚರ್ಮರೋಗಗಳು ಗುಣವಾಗುತ್ತವೆಂದು ವೈಜ್ಞಾನಿಕವಾಗಿ ಸಾಬೀತು ಮಾಡಲಾಗಿದೆ. ಅಂತಹ ಉಪಯುಕ್ತವಾದ ಮತ್ತು ಮಹತ್ವದ್ದಾದ ಕಳಸವನ್ನು ಹೀಗಳೆಯುವುದು ಸಾಧುವಲ್ಲವೆಂಬುದು ನನ್ನ ಅಭಿಪ್ರಾಯ.

ಕಲಶದೊಳಗೆ ಧರ್ಬೆಯ ಕೂರ್ಚವನ್ನು ಹಾಕುತ್ತೇವೆ.
ನಾವು ಮಂತ್ರವನ್ನು ಉಚ್ಛಾರ ಮಾಡುವಾಗ ಕೆಲವು ಏರುಪೇರುಗಳನ್ನು ಗಮನಿಸಿರುತೇವೆ. ಈ ಏರು ಪೇರುಗಳನ್ನು ಸ್ವರಗಳೆನ್ನುತ್ತಾರೆ. ಸ್ವರಗಳನ್ನು ಛಂದೋಬದ್ಧವಾಗಿ ಹೇಳುವ ಮಂತ್ರಗಳು ಪ್ರಕೃತಿಯಲ್ಲಿನ ವಿದ್ಯುತ್ಕಾಂತೀಯ ಶಕ್ತಿಯನ್ನು {ಎಲೆಕ್ಟ್ರೋಮ್ಯಾಗ್ನೆಟೀಕ್ಪಾವರ್} ಸಂಯೋಜಿಸುತ್ತವೆ. ಈ ರೀತಿ ಸಂಯೋಜಿಸಲ್ಪಟ್ಟ ಶಕ್ತಿಯು ಕಲಶದೊಳಗಿಟ್ಟಿರುವ ಧರ್ಭೆಯಿಂದ ಆಕರ್ಶಿತಗೊಂಡು ಕಲಶದೊಳಗೆಸೇರುತ್ತದೆ. ಇದನ್ನೇ ಹಿಂದಿನ್ಕಾಲದವರು ದೈವಸಾನ್ನಿಧ್ಯವೆನ್ನುತ್ತಿದ್ದರು ಎಂದು ಕಾಣುತ್ತದೆ. ಇಂತಹ ದೈವಸಾನ್ನಿಧ್ಯಕ್ಕಾಗಿ ಧರ್ಬೆಯ ಕೂರ್ಚನ್ನು ಕಲಶದೊಳಗೆ ಹಾಕುತ್ತೇವೆ.

ಕಲಶದೊಳಗೆ ಮಾವಿನ ಸೊಪ್ಪನ್ನು ಹಾಕುತ್ತೇವೆ
ಮಾವಿನ ಎಲೆಗಳಲ್ಲಿ ಪತ್ರಹರಿತ್ತಿನ ಪ್ರಮಾಣ ಹೆಚ್ಚಾಗಿರುತ್ತದೆ. ಪತ್ರಹರಿತ್ತು ಹೆಚ್ಚಾಗಿರುವ ಎಲೆಗಳು ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದು ತಿಳಿದಿರುವ ಸಂಗತಿಯಾಗಿದೆ. ಶುಭ ಕಾರ್ಯಗಳು ಮನೆಯಲ್ಲಿ ಜರುಗುವಾಗ ಬಹಳ ಜನ ಸೇರುವುದು ಸಾಮಾನ್ಯವಾಗಿರುತ್ತದೆ. ಹಾಗೆ ಬಹಳ ಜನ ಸೇರಿದಾಗ ಅಷ್ಠೂಜನಕ್ಕೆ ಸರಿಹೊಂದುವ ಆಮ್ಲಜನಕ ವಾತಾವರಣದಲ್ಲಿ ಸೇರಿಸುವ ಸಲುವಾಗಿ ಮಾವಿನ ಸೊಪ್ಪು ಮತ್ತು ಬಾಳೆ ಎಲೆಗಳನ್ನು ಉಪಯೋಗಿಸುತ್ತಾರೆ . (ಮಾವಿನ ಎಲೆಗಳು ಮತ್ತು ಬಾಳೆ ಎಲೆಗಳು ಧೀರ್ಘಕಾಲದವರೆಗೆ ಆಮ್ಲಜನಕವನ್ನು ಉತ್ಪಾದಿಸುತ್ತವೆ) ಅಲ್ಲದೆ ಮಾವಿನ ಎಲೆಗಳಲ್ಲಿ ಔಷದೀಯ ಗುಣಗಳು ಹೇರಳವಾಗಿರುತ್ತವೆ ಮತ್ತು ಚರ್ಮರೋಗಗಳಿಗೆ ರಾಮಬಾಣವಾಗಿದೆ.

ಕಲಶದ ಮೇಲೆ ತೆಂಗಿನಕಾಯಿ ಇಡಬೇಕು

ಪರಮಾತ್ಮನು ಜ್ಯೋತಿ ಸ್ವರೂಪನಾಗಿದ್ದಾನೆ. ಜ್ಯೋತಿ ಸ್ವರೂಪನಾದ ಭಗವಂತನನ್ನು ಕಲಶದಲ್ಲಿ ಆವಾಹನೆ ಮಾಡುತ್ತೇವೆ. ಕಲಶವೂ ಜ್ಯೋತಿ ಸ್ವರೂಪದಂತೆ ಕಾಣುತ್ತದೆ. ತೆಂಗಿನಕಾಯಿ ಬಗ್ಗೆ ಹೇಳಬೇಕಾದದ್ದೇನೂ ಇಲ್ಲ. ತೆಂಗಿನ ಮರದ ಯಾವುದೇ ಭಾಗವೂ ಕೆಲಸಕ್ಕೆ ಬಾರದೇ ಇಲ್ಲ. ಆದ್ದರಿಂದಲೇ ಅದಕ್ಕೂ ದೈವಸ್ಥಾನವನ್ನು ಕೊಟ್ಟು ಕಲ್ಪ ವೃಕ್ಷವೆಂದಿದ್ದೇವೆ. ಅಂತಹ ಪವಿತ್ರವಾದ ಮರದಲ್ಲಿ ಹುಟ್ಟಿದ ತೆಂಗಿನ ಕಾಯಿಯನ್ನು ಪರಮಾತ್ಮನಿಗೆ ಅರ್ಪಿಸುವುದರಿಂದ ಧನ್ಯತೆಯನ್ನು ಪಡೆಯುವುದರ ಉದ್ದೇಶವನ್ನಿಟ್ಟುಕೊಂಡು ತೆಂಗಿನ ಕಾಯಿಯನ್ನು ಪೂಜೆಯಲ್ಲಿ ಕಲಶದ ಮೇಲೆ ಇಡುತ್ತೇವೆ


ಕಲಶ
ಕಲಶಸ್ಯ ಮುಖೇ ವಿಷ್ಣುಃ ಕಂಟೇ-ರುದ್ರ-ಸಮಸ್ರಿತಃ ಮುಲೆ-ತತ್ರಸ್ತಿತೊ ಬ್ರಂಹ
ಮಧ್ಯೆ ಮಾತ್ರು-ಗಣಃ-ಸ್ಮ್ರುತಃ ಕುಕ್ಷೊವ್ತು-ಸಾಗರ-ಸರ್ವೇ ಸಪ್ತ-ದ್ವಿಪ-ವಸುಂಧರ
ಋಗ್-ವೇದೋ ಯಜುರ್-ವೇದಹ ಸಾಮ-ವೇದೋ-ಹ್ಯಾಧರ್ವಣಾ
ಅಂಗೈಶ್ಚ-ಸಹಿತ-ಸರ್ವೇ ಕಲಶಂತು ಸಮಶ್ರಿತ: ಅತ್ರ ಗಾಯತ್ರಿ ಸಾವಿತ್ರಿ ಶಾಂತಿ: ಪುಶ್ಠಿ-ಕರೀತತಾ||
ಆಯಂತು ದೇವ ಪುಜಾರ್ಥಮ್ ದುರಿಥಕ್ಷಯ ಕಾರಕ: ಸರ್ವೇ ಸಮುದರಾ: ಶ್ರಿಥಹ: ತೀರ್ಥಾನಿ ಜಲ ಧನದಹ ಅತ್ರ ಸನ್ನಿಥ ಸಂತು:
ಗಂಗೇಚ-ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದಾ ಸಿಂಧು-ಕಾವೇರಿ ಜಲೆಸ್ಮಿನ್ ಸನಿಧಂ-ಕುರು:
ವಿಖ್ಯತ: ಪಂಚಗಂಗಾ ಪ್ರಕಿರ್ತಿತ: ಕಲಶೋದಕೇಣ ಪುಜಾ ದ್ರವಯಾನಿ ಸಮ್ಪ್ರೊಕ್ಶ್ಯ, ದೇವಂ, ಅತ್ಮಂಚ ಸಮ್ಪ್ರೊಕ್ಶ್ಯ

ಕಲಶದ ವೀಳ್ಯದೆಲೆ ಮತ್ತು ವಿಶೇಷಗಳು..

“ಕಲಶದ ವೀಳ್ಯದೆಲೆ”ಯನ್ನು, ಪೂಜೆಯ ನಂತರ ಏನು ಮಾಡಬೇಕು..?

ಕಲಶದ ವೀಳ್ಯದೆಲೆಯನ್ನು ಪ್ರಸಾದ ರೂಪವಾಗಿ ಮನೆಯ ಹಿರಿಯರು ಮಾತ್ರ ಹಾಕಿಕೊಳ್ಳಬೇಕು..
(ಹಿರಿಯರು ಯಾರು ಯಾರು ಎಂದು ತಿಳಿದು ಮಾಡಿ)
ಬೇರೆಯವರು ಹಾಕಿಕೊಳ್ಳಬಾರದು..
ಮಗಳು ಅಳಿಯ ಇದ್ದರೆ ಹಾಕಿಕೊಳ್ಳಬಹುದು ..

ಕಲಶದ ವೀಳ್ಯದೆಲೆಯನ್ನು ಒಣಗಿಸಿದರೆ , ಅಥವಾ ಕಸದಲ್ಲಿ ಗುಡಿಸಿದರೆ..
ಆ ಮನೆಗೆ ದಾರಿದ್ರ್ಯ ಬಂದು ಬಿಡುತ್ತದೆ..
ಕಲಶದೇವಿಯ ಶಾಪವಾಗಿ ಆ ಮನೆಯಲ್ಲಿ ಸಂಪಾದಿಸಿದ ಹಣ ಬೇರೆಯವರ ಪಾಲಾಗಿ, ತುಂಬಾ ಕಷ್ಟದ ಜೀವನ ಮಾಡುತ್ತೀರಿ..
ಸಾಲದಭಾದೆ ಇಂದ ನರಳುವಿರಿ..
ಶತೃಭಾಧೆ ಜಾಸ್ತಿಯಾಗುತ್ತದೆ ..

ಪೂಜಿಸಿದ ಕಲಶದ ವೀಳ್ಯದೆಲೆಯನ್ನು ತುಳಸೀ ಕಟ್ಟೆಗೆ ಹಾಕಿದರೆ,
ಅವರು ಮಾಡಿದ ಪಾಪಗಳೆಲ್ಲವೂ ನಿವಾರಣೆಯಾಗುತ್ತದೆ ..
ಬಹಳ ತೇಜೋವಂತರೂ ಕಾಂತಿವಂತರೂ ಆಗಿ, ನೆಮ್ಮದಿಯ ಜೀವನ ಮಾಡುತ್ತಾರೆ..
ಸರ್ವ ತೀರ್ಥಗಳೂ ತುಳಸಿಯಲ್ಲಿ ಇರುವುದರಿಂದ ಸರ್ವ ಶ್ರೇಷ್ಠ..
(ಯಾವ ಸಮಯದಲ್ಲಿ ಹಾಕಬೇಕು, ಯಾರು ಹಾಕಬೇಕು ತಿಳಿದು ಮಾಡಿ)

ಕಲಶದ ವೀಳ್ಯದೆಲೆಯನ್ನು ಪೂಜ್ಯ ಭಾವನೆಯಿಂದ , ಕುಲದೇವತಾ ಸ್ಮರಣೆ ಮಾಡಿ, ಹರಿಯುವ ನದಿಯಲ್ಲಿ ಬಿಟ್ಟರೆ ,
ಪೂಜಿಸಿದ ದೇವರು, ಕಲಶದ ದೇವರು, ಕುಲದೇವರ ಆಶೀರ್ವಾದ ಎಂದೆಂದೂ ಇದ್ದು ಇಷ್ಟಾರ್ಥ ಸಿದ್ಧಿಯಾಗುತ್ತದೆ..
(ಪೂರ್ವವಾಹಿನಿ, ಉತ್ತರವಾಹಿನಿ ನದಿಗಳಲ್ಲಿ ಮಾತ್ರ ಬಿಡಬೇಕು)
ನೆನೆದ ಕಾರ್ಯಗಳು ಬಹಳ ಬೇಗ ಈಡೇರುತ್ತವೆ..
ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇದ್ದು ಎಲ್ಲರೂ ಆರೋಗ್ಯವಂತರಾಗಿರುತ್ತಾರೆ..

ಕಲಶಕ್ಕೆ ಬಿಳೀ ವೀಳ್ಯದೆಲೆ ಇಟ್ಟರೆ ಸ್ತ್ರೀ ದೋಷ ಮತ್ತು ಶಾಪ ಉಂಟಾಗುತ್ತದೆ ..
ದಟ್ಟದಾರಿದ್ಯ ಅನುಭವಿಸುತ್ತಿರಿ .

ಕಲಶಕ್ಕೆ ಇಡೋ ವೀಳ್ಯದೆಲೆ ಹಸಿರು ಬಣ್ಣದ್ದಾಗಿರಬೇಕು..
ಎಳೆಯ ವೀಳ್ಯದೆಲೆ ಆಗಿರಬೇಕು..
ಹಸ್ತದ ಆಕಾರ ಇರಬೇಕು..

ಭಿನ್ನವಾಗಿರಬಾರದು..


೧. ಬ್ರಹ್ಮಧ್ವಜದ ಮೇಲಿನ ಕಲಶವನ್ನು ಏಕೆ ಮಗುಚಿಡುತ್ತಾರೆ ?
ಕಲಶದ ಮುಖವನ್ನು ಭೂಮಿಯ ಕಡೆಗೆ ಇಡುವುದರಿಂದ ತಾಮ್ರದ ಕಲಶದ ಟೊಳ್ಳಿನಿಂದ ಪ್ರಕ್ಷೇಪಿತಗೊಳ್ಳುವ ಲಹರಿಗಳಿಂದಾಗಿ ಕಲಶದಲ್ಲಿರುವ ಬೇವಿನ ಎಲೆ ಮತ್ತು ರೇಷ್ಮೆವಸ್ತ್ರ (ಬ್ರಹ್ಮಧ್ವಜದ ಮೇಲಿನ ರೇಷ್ಮೆವಸ್ತ್ರ) ಗಳು ಸಾತ್ತ್ವಿಕ ಲಹರಿಗಳಿಂದ ಭರಿತಗೊಳ್ಳುತ್ತವೆ. ಭೂಮಿಯ ಆಕರ್ಷಣಾಶಕ್ತಿಯಿಂದಾಗಿ ಈ ಪರಿವರ್ತನೆಯಾದ ಸಗುಣ ಶಕ್ತಿಯ ಪ್ರವಾಹವು ಭೂಮಿಯ ದಿಶೆಯತ್ತ ಸಂಕ್ರಮಿತಗೊಳ್ಳಲು ಮತ್ತು ಅದರಿಂದ ಭೂಮಿಯ ಮೇಲೆ ಸೂಕ್ಷ್ಮ-ಆಚ್ಛಾದನೆಯಾಗಲು ಸಹಾಯವಾಗುತ್ತದೆ. ಕಲಶವನ್ನು ಮಗುಚಿಡದೇ ನೆಟ್ಟಗೆ ಇಟ್ಟರೆ, ಸಂಪೂರ್ಣವಾಗಿ ಊರ್ಧ್ವ ದಿಕ್ಕಿನತ್ತ ಲಹರಿಗಳು ಪ್ರಕ್ಷೇಪಿತಗೊಳ್ಳುವುದರಿಂದ ಭೂಮಿಯ ಸಮೀಪದಲ್ಲಿನ ಕನಿಷ್ಠ ಹಾಗೂ ಮಧ್ಯಮ ಸ್ತರದ ಶುದ್ಧೀಕರಣವಾಗದಿರುವುದರಿಂದ ವಾಯುಮಂಡಲದಲ್ಲಿನ ಕೇವಲ ನಿರ್ದಿಷ್ಠ ಊರ್ಧ್ವ ಪಟ್ಟಿಯ ಶುದ್ಧೀಕರಣವಾಗಲು ಸಹಾಯವಾಗುತ್ತದೆ. ತದ್ವಿರುದ್ಧ ತಾಮ್ರದ ಕಲಶದ ಮುಖವನ್ನು ಭೂಮಿಯ ಕಡೆಗೆ ಮಗುಚಿಟ್ಟರೆ ಅದರಿಂದ ಭೂಮಿಯ ಸಮೀಪದ ಮತ್ತು ಮಧ್ಯಮ ಪಟ್ಟಿಯ ವಾಯುಮಂಡಲಕ್ಕೆ, ಅದರ ಜೊತೆಗೆ ಊರ್ಧ್ವಮಂಡಲಕ್ಕೆ ಈ ಲಹರಿಗಳ ಲಾಭವಾಗಲು ಸಹಾಯವಾಗುತ್ತದೆ.

೨. ತಾಮ್ರದ ಕಲಶಕ್ಕೆ ಬ್ರಹ್ಮಾಂಡದಲ್ಲಿನ ಸಾತ್ತ್ವಿಕ ಲಹರಿಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಿರುವುದು !
ಬ್ರಹ್ಮಧ್ವಜದ ಮೇಲಿರುವ ತಾಮ್ರದ ಕಲಶಕ್ಕೆ ಬ್ರಹ್ಮಾಂಡದಲ್ಲಿನ ಉಚ್ಚತತ್ತ್ವಗಳಿಗೆ ಸಂಬಂಧಿಸಿರುವ ಸಾತ್ತ್ವಿಕ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಿರುವುದರಿಂದ ಈ ಕಲಶದಿಂದ ಪ್ರಕ್ಷೇಪಿತಗೊಳ್ಳುವ ಸಾತ್ತ್ವಿಕ ಲಹರಿಗಳಿಂದಾಗಿ ಕಹಿಬೇವಿನ ಎಲೆಗಳಲ್ಲಿನ ಬಣ್ಣದ ಕಣಗಳು ಕಾರ್ಯನಿರತವಾಗಲು ಸಹಾಯವಾಗುತ್ತದೆ. ಈ ಎಲೆಗಳ ಬಣ್ಣದ ಕಣಗಳ ಮೂಲಕ ರಜೋಗುಣವಿರುವ ಶಿವ ಮತ್ತು ಶಕ್ತಿ ಲಹರಿಗಳು ವಾಯು ಮಂಡಲದಲ್ಲಿ ಪರಿಣಾಮಕಾರಿಯಾಗಿ ಪ್ರಕ್ಷೇಪಣೆಯಾಗಲು ಆರಂಭವಾಗುತ್ತವೆ.

೩. ತಾಮ್ರದ ಕಲಶದಿಂದ ಸಂಕ್ರಮಿತವಾಗುವ ನಿರ್ಗುಣ ಲಹರಿಗಳಿಂದಾಗಿ ಕಹಿಬೇವಿನ ಎಲೆ ಮತ್ತು ರೇಷ್ಮೆ ವಸ್ತ್ರ ಇವುಗಳಿಂದ ಪರಿಣಾಮಕಾರಿಯಾಗಿ ಗ್ರಹಣ ಮತ್ತು ಪ್ರಕ್ಷೇಪಣೆಯಾಗುವುದು
ತಾಮ್ರದ ಕಲಶದಿಂದ ಸಂಕ್ರಮಿತವಾಗುವ ನಿರ್ಗುಣ ಕಾರ್ಯನಿರತ ಲಹರಿಗಳು ಕಹಿಬೇವಿನ ಎಲೆಗಳ ಮಟ್ಟಕ್ಕೆ ಸಗುಣ ಲಹರಿಗಳಾಗಿ ಪರಿವರ್ತನೆಯಾಗುತ್ತವೆ. ಅನಂತರ ಈ ಲಹರಿಗಳು ರೇಷ್ಮೆವಸ್ತ್ರದ ಮೂಲಕ ಪರಿಣಾಮಕಾರಿ ಆಕರ್ಷಣೆಯಾಗಿ ಅವುಗಳು ಆವಶ್ಯಕತೆಯಂತೆ ಅಧೋದಿಕ್ಕಿನಲ್ಲಿ ಪ್ರಕ್ಷೇಪಿತಗೊಳ್ಳುತ್ತವೆ.

೪. ಕಹಿಬೇವಿನ ಎಲೆ, ಕಲಶ ಮತ್ತು ರೇಷ್ಮೆವಸ್ತ್ರ ಈ ಮೂರರಿಂದ ನಿರ್ಮಾಣವಾಗುವ ಲಹರಿಗಳಿಂದ ವಾಯುಮಂಡಲವು ಶುದ್ಧವಾಗುವುದು
ಕಹಿ ಬೇವಿನ ಎಲೆಗಳಿಂದ ಪ್ರಕ್ಷೇಪಿತವಾಗುವ ಶಿವ-ಶಕ್ತಿಗಳಿಗೆ ಸಂಬಂಧಿಸಿದ ಕಾರ್ಯನಿರತ ರಜೋಗುಣಿ ಲಹರಿಗಳಿಂದಾಗಿ ಅಷ್ಟದಿಕ್ಕುಗಳ ವಾಯುಮಂಡಲ ಮತ್ತು ತಾಮ್ರದ ಕಲಶದಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದಾಗಿ ಊರ್ಧ್ವದಿಶೆಯ ವಾಯುಮಂಡಲ ಮತ್ತು ರೇಷ್ಮೆ ವಸ್ತ್ರದಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದ ಅಧೋದಿಕ್ಕಿನ ವಾಯುಮಂಡಲ ಶುದ್ಧ ಮತ್ತು ಚೈತನ್ಯಮಯವಾಗಲು ಸಹಾಯವಾಗುತ್ತದೆ.

೫. ಕಲಶದ ಮುಖವು ಭೂಮಿಯ ಕಡೆಗೆ ಇದ್ದೂ ಊರ್ಧ್ವ ದಿಕ್ಕಿನ ವಾಯುಮಂಡಲವು ಶುದ್ಧವಾಗುವುದು
ಬ್ರಹ್ಮಧ್ವಜದೊಳಗಿನ ಘಟಕಗಳಿಗೆ ದೇವತ್ವವು ಪ್ರಾಪ್ತಿಯಾಗಿದ್ದರಿಂದ ತಾಮ್ರದ ಕಲಶದ ಟೊಳ್ಳಿನಲ್ಲಿ ಘನೀಕೃತವಾದ ನಾದಲಹರಿಗಳು ಕಾರ್ಯನಿರತವಾಗುತ್ತವೆ. ಈ ನಾದಲಹರಿಯಲ್ಲಿ ವಾಯು ಮತ್ತು ಆಕಾಶ ಈ ಎರಡು ಉಚ್ಚ ತತ್ತ್ವಗಳು ಸಮಾವೇಶಗೊಂಡಿದ್ದರಿಂದ ಲಹರಿಗಳ ಪ್ರಕ್ಷೇಪಣೆಯಿಂದಾಗಿ ಊರ್ಧ್ವ ದಿಶೆಯ ವಾಯುಮಂಡಲವು ಶುದ್ಧವಾಗುತ್ತದೆ.


ಶ್ರೀ ವೆಂಕಟೇಶ್ ಜ್ಯೋತಿಷ್ಯರು📱

Related Posts