ಎಷ್ಟೋ ಮಂದಿ ಮನೆಯಲ್ಲಿ ಅನೇಕ ವಿಧದ ದೀಪಗಳನ್ನು ಆರಾಧನೆ ಮಾಡುತ್ತಾರೆ . ಹೌದು ಮನೆಯಲ್ಲಿ ದೀಪಾರಾಧನೆ ಮಾಡುವುದು ತುಂಬ ಸತ್ಕಾರ್ಯ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ . ತಪ್ಪದೆ ಮನೆಯಲ್ಲಿ ದಿನಕ್ಕೆ 2 ಬಾರಿ ದೀಪಾರಾಧನೆ ಮಾಡುವುದು ತುಂಬಾ ಒಳ್ಳೆಯದು ಅಂತ ಹೇಳುತ್ತದೆ ಶಾಸ್ತ್ರ ಮತ್ತು ನಮ್ಮ ಒಂದು ಸಂಸ್ಕೃತಿಯ ಪದ್ಧತಿಯೂ ಕೂಡ ಇದಾಗಿರುತ್ತದೆ. ಮನೆಯಲ್ಲಿ ದೀಪಾರಾಧನೆ ಮಾಡುವುದರಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು ಮತ್ತು ದೀಪಾರಾಧನೆಯ ಹಿಂದಿರುವ ವೈಜ್ಞಾನಿಕ ಕಾರಣ.

ಅಂದರೆ ಮನೆಯಲ್ಲಿ ದೀಪಗಳನ್ನು ಉರಿಸುವುದರಿಂದ ಮನೆಯ ವಾತಾವರಣ ಸ್ವಚ್ಛವಾಗಿರುತ್ತದೆ. ಹೇಗೆ ಅಂದರೆ ದೀಪಗಳನ್ನು ಮನೆಯಲ್ಲಿ ಇರಿಸುವುದರಿಂದ ಈ ದೀಪದ ಉಷ್ಣಾಂಶ ಮನೆಯ ಸುತ್ತ ಇರುವ ಮನೆಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಸ್ ನ ಪ್ರಭಾವವನ್ನು ಕಡಿಮೆ ಮಾಡುತ್ತದೆ.ಈ ಕಾರಣದಿಂದಾಗಿ ಮನೆಯಲ್ಲಿ ದೀಪಾರಾಧನೆ ಮಾಡಬೇಕು ಅಂತ ಕೂಡ ಹೇಳುವುದು.ಇನ್ನೂ ನಮ್ಮ ಸಂಸ್ಕೃತಿಯ ವಿಚಾರಕ್ಕೆ ಬರುವುದಾದರೆ ನಮ್ಮ ಶಾಸ್ತ್ರಗಳು ಹೇಳುವುದೇನೆಂದರೆ ಒಂದೊಂದು ಕೋರಿಕೆಗೂ ಕೂಡ ಒಂದೊಂದು ವಿಧದ ದೀಪಾರಾಧನೆಯನ್ನು ಮಾಡಲಾಗುತ್ತದೆ.

ಇನ್ನೂ ಯಾರ ಮನೆಯಲ್ಲಿ ಗಂಡ ಹೆಂಡತಿಯ ಕಲಹ ಇರುತ್ತದೆ ಅಂಥವರು ಅಮ್ಮನವರ ದೇವಾಲಯಕ್ಕೆ ಹೋಗಿ ನಿಂಬೆಹಣ್ಣಿನ ದೀಪವನ್ನು ಆರಾಧಿಸಿ ಬರಬೇಕು. ಕಾಮಾಕ್ಷಿ ದೀಪವನ್ನು ಕೇಳಿದ್ದೀರಾ ಕಾಮಾಕ್ಷಿ ದೀಪವನ್ನು ಮನೆಯಲ್ಲಿ ಸುಮ್ಮನೆ ಆರಾಧಿಸುವುದಲ್ಲಾ.ಕಾಮಾಕ್ಷಿ ದೀಪವನ್ನು ಮನೆಯಲ್ಲಿ ಹಚ್ಚುವುದಕ್ಕೂ ಕೂಡ ಇಂತಹದ್ದೆ ಸಮಯ ಎಂದು ಇರುತ್ತದೆ ಮತ್ತು ಕಾಮಾಕ್ಷಿ ದೀಪವನ್ನು ಆರಾಧಿಸುವಾಗ ಕೆಲವೊಂದು ಕ್ರಮಗಳನ್ನು ಪಾಲಿಸಬೇಕು.

ಹಾಗಾದರೆ ಆ ಕ್ರಮಗಳು ಯಾವುವು ಎಂಬುದನ್ನು ನಾವು ಈ ಮಾಹಿತಿಯ ಮೂಲಕ ನಿಮಗೆ ತಿಳಿಸಿಕೊಡುತ್ತೇವೆ ನಿಮ್ಮ ಮನೆಯಲ್ಲಿ ಕೂಡ ಕಾಮಾಕ್ಷಿ ದೀಪ ವನ್ನು ನೀವು ಬೆಳಗುತ್ತಿದ್ದರೆ ತಪ್ಪದೆ ಈ ವಿಚಾರವನ್ನು ತಿಳಿದು ಇದನ್ನು ನೀವು ದೀಪಾರಾಧನೆ ಮಾಡುವ ವೇಳೆ ಪಾಲಿಸಿ.ಹೌದು ಇಷ್ಟಾರ್ಥಗಳ ನೆರವೇರಿಕೆಗಾಗಿ ಕಾಮಾಕ್ಷಿ ದೀಪವನು ಮನೆಯಲ್ಲಿ ಬೆಳಗಲಾಗುತ್ತದೆ ಈ ಕಾಮಾಕ್ಷಿ ದೀಪವನ್ನು ಕಾಮಾಕ್ಷಿ ದೀಪಾಲೆ ಕಂಬವೆ ಸಿಗುತ್ತದೆ.

ಅದನ್ನು ತರುವಾಗ ಅದೆಷ್ಟು ಅದರ ಬಗ್ಗೆ ತಿಳಿದು ನಂತರ ಅದನ್ನು ಮನೆಗೆ ತಂದು ದೀಪಾರಾಧನೆ ಮಾಡುವುದು ತುಂಬಾ ಒಳ್ಳೆಯದು.
ಈಗ ವಿಚಾರಕ್ಕೆ ಬರುವುದಾದರೆ ಕಾಮಾಕ್ಷಿ ದೀಪವನ್ನು ಬೆಳಗುವುದಕ್ಕೆ ಉತ್ತಮ ಸಮಯ ಅಂದರೆ, ಅದು ಸಂಜೆಯ ಗೋಧೂಳಿ ಸಮಯ. ಈ ಸಮಯದಲ್ಲಿ ಕಾಮಾಕ್ಷಿ ದೀಪವನ್ನು ಆರಾಧಿಸಬೇಕು ಹಾಗೆ ಕಾಮಾಕ್ಷಿ ದೀಪವನು ಪ್ರತಿದಿನ ಬೆಳಗುವವರು ವಾರದಲ್ಲಿ ಎರಡು ದಿವಸ ಅಂದರೆ ಅದು ಮಂಗಳವಾರ ಮತ್ತು ಶುಕ್ರವಾರ ದಿವಸಗಳಂದು ಆಗಿರಬಹುದು ಅಥವಾ ನಿಮಗೆ ಅನುಕೂಲ ಆಗುವ ದಿವಸಗಳಂತೆ ವಾರದಲ್ಲಿ ಎರಡು ದಿವಸ ಕಾಮಾಕ್ಷಿ ದೀಪವನ್ನು ಆರಾಧಿಸುವಾಗ ಕಾಮಾಕ್ಷಿ ದೀಪಕ್ಕೆ ತಾಂಬೂಲವನ್ನು ನೀಡಬೇಕು.

ತಾಂಬೂಲ ಅಂದರೆ ಎರಡು ಎಲೆ ಅಡಿಕೆ ಮತ್ತು ಒಂದು ರೂಪಾಯಿಯ ನಾಣ್ಯ ಇಟ್ಟು ಬಾಳೆಹಣ್ಣನ್ನು ಇರಿಸಿ, ಇದನ್ನು ತಾಂಬೂಲದ ರೀತಿಯಲ್ಲಿ ಕಾಮಾಕ್ಷಿ ದೀಪಕ್ಕೆ ಸಮರ್ಪಿಸಬೇಕು, ಅಂದರೆ ದೀಪದ ಮುಂದೆ ಇಟ್ಟು ದೀಪಾರಾಧನೆ ಮಾಡಿ ಪೂಜೆಯನ್ನು ಸಲ್ಲಿಸಬೇಕು.ಈ ರೀತಿ ಕಾಮಾಕ್ಷಿ ದೀಪವನ್ನ ಮನೆಯಲ್ಲಿ ಹಚ್ಚುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಮತ್ತು ಕಾಮಾಕ್ಷಿ ದೀಪವನ್ನು ಹಚ್ಚುವ ಕ್ರಮ ಇದ್ದಾಗಿರುತ್ತದೆ ಧನ್ಯವಾದಗಳು.
ಶ್ರೀ ವೆಂಕಟೇಶ್ ಜ್ಯೋತಿಷ್ಯರು 📱9482655011🕉️🙏🙏

Related Posts