🕉️🕉️🕉️🕉️🕉️🕉️🕉️🕉️

ಸ್ತ್ರೀ ಜಾತಕದಲ್ಲಿ ಆಭರಣಗಳಲ್ಲಿ ಆಸಕ್ತಿಯ ಯೋಗಗಳು

ಕೇಲವು ಯೋಗಗಳು ಮಹಿಳೆಯರನ್ನು ಆಭರಣಗಳತ್ತ ಹೆಚ್ಚು ಆಕರ್ಷಿಸಿದರೆ …

ಇನ್ನೂ ಕೆಲವು ಗ್ರಹ ಯೋಗಗಳು ಆಭರಣಗಳ ಕುರಿತು ಕಡಿಮೆ ಆಸಕ್ತಿ ಇರುವಂತೆ ಪ್ರಭಾವ ಬೀರುತ್ತದೆ ..

ಒಂದು ವೇಳೆ ಮಹಿಳೆಯ ಕುಂಡಲಿಯಲ್ಲಿ ಇವೆರಡೂ ರೀತಿಯ ಯೋಗಗಳಿರದಿದ್ದರೆ ಇಂಥ ಮಹಿಳೆ ಆಭರಣಗಳ ಕುರಿತು ಸಾಮಾನ್ಯವಾದ ಆಸಕ್ತಿಯನ್ನು ಹೊಂದಿರುತ್ತಾರೆ….

ಜ್ಯೋತಿಷ್ಯದಲ್ಲಿ ಶುಕ್ರ ಗ್ರಹ ಮತ್ತು ಚತುರ್ಥ ಭಾವ ಆಭರಣಗಳಿಗೆ ಸಂಬಂಧಿಸಿದೆ …

ವೃಷಭ ಮತ್ತು ತುಲಾ ಲಗ್ನ ಅಥವಾ ರಾಶಿಯಿಂದ ಮಹಿಳೆಯರಿಗೆ ಆಭರಣ ಅಧಿಕ ಇಷ್ಟವೆಂದು ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ತಿಳಿಯಲಾಗಿದೆ…

ಮಹಿಳಾ ಕುಂಡಲಿಯಲ್ಲಿನ ಲಗ್ನೇಶ ಭರಣಿ ಪುಬ್ಬ ಪೂರ್ವಾಷಾಢ ನಕ್ಷತ್ರದಲ್ಲಿ ಸ್ಥಿತನಿದ್ದರೆ ಮಹಿಳೆಗೆ ಆಭರಣದ ಮೇಲೆ ಅಧಿಕ ಒಲವಿರುತ್ತದೆ…

ಕುಂಡಲಿಯಲ್ಲಿ ಶುಕ್ರ
ಲಗ್ನ ಚತುರ್ಥ ಪಂಚಮ ಸಪ್ತಮ ಏಕದಶ ಅಥವಾ ದ್ವಾದಶ ಭಾವದಲ್ಲಿ ಸ್ಥಿತನಾಗಿದ್ದರೆ ಮಹಿಳೆಗೆ ಆಭರಣಗಳು ಅತ್ಯಧಿಕ ಇಷ್ಟವಾಗುತ್ತದೆ …

ಮಹಿಳೆಯ ಕುಂಡಲಿಯಲ್ಲಿ ಒಂದು ವೇಳೆ ಶುಕ್ರ ಚತುರ್ಥ ಭಾವದಲ್ಲಿ ವೃಷಭ ತುಲಾ ಅಥವಾ ಮೀನ ರಾಶಿಯಲ್ಲಿ ಸ್ಥಿತನಾಗಿದ್ದರೆ
ಅಂದರೆ ಮಹಿಳೆಯದು ಕಟಕ ಧನಸ್ಸು ಅಥವಾ ಕುಂಭ ಲಗ್ನ ಕುಂಡಲಿ ಆಗಿದ್ದರೆ ಇಂಥ ಮಹಿಳೆಗೆ ಆಭರಣಗಳು ತುಂಬಾ ಇಷ್ಟವಾಗುತ್ತದೆ

ಮಹಿಳೆಯ ಕುಂಡಲಿಯಲ್ಲಿ ಲಗ್ನೇಶ ಶುಕ್ರನೊಡನೆ ಯುತಿ ದೃಷ್ಟಿ ಅಥವಾ ರಾಶಿ ಸಂಬಂಧ ಹೊಂದಿದರೆ ಇಂಥ ಮಹಿಳೆಗೆ ಆಭರಣಗಳು ತುಂಬಾ ಇಷ್ಟವಾಗುತ್ತದೆ ..

ಮಹಿಳೆಯ ಕುಂಡಲಿಯಲ್ಲಿ ಶುಕ್ರ
ಚತುರ್ಥೇಶನೊಡನೆ ಯುತಿ ದೃಷ್ಟಿ ಅಥವಾ ರಾಶಿ ಪರಿವರ್ತನೆಯ ಸಂಬಂಧ ಹೊಂದಿದರೆ ಮಹಿಳೆ ಆಭರಣಗಳನ್ನು ತುಂಬ ಇಷ್ಟ ಪಡುತ್ತಾಳೆ …

ಮಹಿಳೆಯ ಜನ್ಮ ಕುಂಡಲಿಯಲ್ಲಿ ಶುಕ್ರ ಚತುಥೇ೯ಶನ ನಕ್ಷತ್ರದಲ್ಲಿ ಸ್ಥಿತನಾಗಿದ್ದರೆ ಇಂಥ ಶುಕ್ರ ಮಹಿಳೆಯ ಆಭರಣದ ಅಪೇಕ್ಷೆಯನ್ನು ಇಚ್ಛಿಸುತ್ತಾನೆ …

ಮಹಿಳೆಯ ಜನ್ಮಕುಂಡಲಿಯಲ್ಲಿ ಚತುರ್ಥೇಶ
ಶುಕ್ರ ನಕ್ಷತ್ರದಲ್ಲಿ ಸ್ಥಿತನಿದ್ದರೆ ಮತ್ತು ಶುಕ್ರ ಚತುರ್ಥ ಭಾವದಲ್ಲಿ ಸ್ಥಿತನಾಗಿದ್ದರೆ ಇಂತಹ ಸ್ಥಿತಿ ಆಭರಣಗಳನ್ನು ಹೆಚ್ಚು ಇಷ್ಟಪಡುವಂತೆ ಪ್ರೇರೇಪಿಸುತ್ತದೆ …

ಜನ್ಮ ಕುಂಡಲಿಯಲ್ಲಿ ಸಪ್ತಮ ಭಾವದಲ್ಲಿ ಬಲಿಷ್ಠ ಶುಕ್ರ ಸ್ಥಿತನಾಗಿದ್ದರೆ ಇಂಥ ಮಹಿಳೆ ಅಪೇಕ್ಷೆಗಿಂತ ಅಧಿಕ ಆಭರಣಗಳನ್ನು ಇಷ್ಟಪಡುತ್ತಾಳೆ …

ಜನ್ಮ ಕುಂಡಲಿಯಲ್ಲಿ ಶುಕ್ರ ಮತ್ತು ಚಂದ್ರರ ಮಧ್ಯೆ ಯುತಿ ದೃಷ್ಟಿ ರಾಶಿ ಪರಿವರ್ತನೆ ಅಥವಾ ನಕ್ಷತ್ರಗಳಿಗೆ ಸಂಬಂಧ ಉಂಟಾಗಿದ್ದರೆ ಮಹಿಳಾ ಜಾತಕಿ ಆಭರಣಗಳನ್ನು ಹೆಚ್ಚು ಇಷ್ಟಪಡುತ್ತಾರೆ …

ಇನ್ನೂ ಕೆಲವು ಗ್ರಹಯೋಗಗಳು ಮಹಿಳೆಯರಲ್ಲಿ ಆಭರಣಗಳ ಕುರಿತು ಕಡಿಮೆ ಇಚ್ಚೆ ಇರುವಂತೆ ಮಾಡುತ್ತದೆ

ಮಹಿಳೆಯ ಕುಂಡಲಿಯಲ್ಲಿ ಶನಿಯು ಭಾಗ್ಯ ಭಾವದಲ್ಲಿ ಸ್ಥಿತನಾಗಿದ್ದರೆ ಇಂಥ ಮಹಿಳೆಗೆ ಆಭರಣಗಳ ಕುರಿತು ಕಡಿಮೆ ಆಸಕ್ತಿ ಇರುತ್ತದೆ

ಶುಕ್ರನು ಶನಿಯೊಡನೆ ಯುತಿ ಹೊಂದಿದ್ದರೆ ಮತ್ತು ಶನಿಯು ಸಂಬಂಧ ಲಗ್ನೇಶನೊಡನೆ ಕೂಡ ಉಂಟಾಗಿದ್ದರೆ
ಇಂಥ ಸ್ಥಿತಿಯಲ್ಲಿ ಮಹಿಳೆಗೆ ಆಭರಣಗಳಲ್ಲಿ ಕಡಿಮೆ ಆಸಕ್ತಿ ಇರುತ್ತದೆ

ಸಾಮಾನ್ಯವಾಗಿ ಮಕರ ಮತ್ತು ಕುಂಭ ಲಗ್ನ ಅಥವಾ ರಾಶಿಯ ಮಹಿಳೆಯರಿಗೆ ಆಭರಣಗಳ ಕುರಿತು ಆಸಕ್ತಿ ಕಡಿಮೆ ಇರುತ್ತದೆ…

ಲಗ್ನೇಶ ದುರ್ಬಲನಾಗಿದ್ದರೆ ಅಥವಾ ಶನಿಯೊಡನೆ ದೃಷ್ಟಿ ಇತ್ಯಾದಿ ಸಂಬಂಧ ಹೊಂದಿದರೆ ಜಾತಕಿಗೆ ಆಭರಣಗಳ ಕುರಿತು ಕಡಿಮೆ ಇಷ್ಟವಿರುತ್ತದೆ

ಲಗ್ನೇಶ ಶನಿಯ ನಕ್ಷೇತ್ರದಲ್ಲಿ ಇದ್ದರೂ ಕೂಡ ಜಾತಕಿಗೆ ಆಭರಣಗಳ ಕುರಿತು ಕಡಿಮೆ ಆಸಕ್ತಿ ಇರುತ್ತದೆ

ಚತುರ್ಥ ಭಾವದಲ್ಲಿ ಶನಿ ಸ್ಥಿತನಾಗಿದ್ದರೆ ಮತ್ತು ಚತುರ್ಥೇಶ ದುರ್ಬಲನಾಗಿದ್ದರೆ ಮಹಿಳೆಗೆ ಆಭರಣಗಳ ಕುರಿತು ಕಡಿಮೆ ಆಸಕ್ತಿ ಇರುತ್ತದೆ …

ಈ ಮೇಲಿನ ಎರಡೂ ಸ್ಥಿತಿಗಳಲ್ಲಿ ಯಾವುದಾದರೊಂದು ಮಹಿಳೆಯ ಕುಂಡಲಿಯಲ್ಲಿ ಇರದಿದ್ದರೆ
ಅಂಥ ಮಹಿಳೆ ಸಾಮಾನ್ಯ ರೂಪದಿಂದ ಆಭರಣಗಳಲ್ಲಿ ಆಸಕ್ತಿ ಹೊಂದಿರುತ್ತಾಳೆ ಎಂದು ತಿಳಿಯಬಹುದು..

Related Posts