ಶುಭಕಾರ್ಯಕ್ಕೆ ತಿಥಿ ರಾಶಿ ನಕ್ಷತ್ರ ನೋಡೋದ್ಯಾಕೆ? ಏನಿದು ದೈವ ರಹಸ್ಯ?
ಜ್ಯೋತಿಷ್ಯಕ್ಕೆ ಅದರದೇ ಆದ ಮಹತ್ವವಿದೆ. ಮಹಾಮುನಿಗಳು ದಿವ್ಯ ಜ್ಞಾನದಿಂದ ಆಕಾಶಕಾಯ ರಶ್ಮಿಜ ಮಾನವನ ಮೇಲೆ ಹೇಗೆ ಪರಿಣಾಮ ಬಿರುತ್ತದೆ. ಹೇಗೆ ಸುಖ ದುಃಖಗಳಿಗೆ ಕಾರಣ ಆಗುತ್ತದೆ ಎನ್ನುವುದನ್ನು ಅರಿತುಕೊಟ್ಟ ಮಹಾ ಶಾಸ್ತ್ರ. ಸುಖ-ದುಃಖ ಕಷ್ಟ-ನಷ್ಟ ಏರುಪೇರು ಜೀವನದ ಆಗು ಹೋಗುಗಳ ಇತ್ಯಾದಿಗಳನ್ನು ಮಾನವನಿಗೆ ಸೂಚಿಸುವುದೇ ಜ್ಯೋತಿಷ್ಯ. ಇದರಿಂದ ಪ್ರತಿಯೊಬ್ಬರ ಭವಿಷ್ಯ ತಿಳಿಯಬಹುದು. ಜ್ಯೋತಿಷ್ಯಶಾಸ್ತ್ರದಲ್ಲಿ ತಿಥಿ ರಾಶಿ ನಕ್ಷತ್ರಗಳಿಗೆ ಅಗ್ರಸ್ಥಾನವಿದೆ.ಇವುಗಳ ಚಲನೆಯನ್ನು ನೋಡಿ ಶುಭಕಾರ್ಯಕ್ಕೆ ಮುನ್ನುಡಿಯನ್ನು ಬರೆಯುವುದು.
ತಿಥಿ ವಾರ ನಕ್ಷತ್ರ ಯೋಗ ಕರ್ಣ ಇದು 5 ಯೋಗಗಳು ಪಂಚಾಂಗ.
1, ತಿಥಿಯಿಂದ ಶ್ರೇಯಸ್ಸು ಸಂಪತ್ತು
೨, ನಕ್ಷತ್ರದಿಂದ ಪಾಪ ಹರಣ
೩,ವಾರದಿಂದ ಆಯಸ್ಸು ವೃದ್ಧಿ
4, ಯೋಗದಿಂದ ಯೋಗ ಪರಿಹಾರ
5, ಕರಣನಿಂದ ಕಾರ್ಯಸಿದ್ದಿ ಉಂಟಾಗುತ್ತದೆ.
ಯಾವುದೇ ವ್ಯಕ್ತಿ ಆಗಲಿ ಆತನ ಜನ್ಮ ಕಾರ್ಯದ ಆಧಾರವಾಗಿಟ್ಟುಕೊಂಡು ಪಂಚಾಂಗದ ಸಹಾಯದಿಂದ ಈ ಎಲ್ಲಾ ಅಂಶಗಳನ್ನು ಅರಿತರೆ ಜ್ಯೋತಿಷಿಗಳು.ದಿನಕ್ಕೆ 60 ಘಳಿಗೆಗಳು ಒಂದು ಘಳಿಗೆಗೆ 24 ನಿಮಿಷ.ಅದರೆ ಎಲ್ಲಾ ತಿಥಿಗಳು 60 ಘಳಿಗೆ ಇರುವುದಿಲ್ಲ.ಕೆಲವೊಂದು ತಿಥಿ ಕಡಿಮೆ ಇದ್ದಾರೆ ಕೆಲವು ತಿಥಿಗಳು ಹೆಚ್ಚಾಗಿ ಇರುತ್ತವೆ.60 ಘಳಿಗೆಗಿಂತ ಕಡಿಮೆ ಇರುವ ತಿಥಿಗಳು ಜೊತೆಯಾಗಿ ಬಂದಾಗ ಒಂದು ತಿಥಿ ಮೇಲೆ ಇನ್ನೊಂದು ತಿಥಿ ಬರುತ್ತದೆ.ಅಂದರೆ 5 ದಿನಗಳಲ್ಲಿ 6 ತಿಥಿಗಳು ಮುಗಿದು ಹೋಗಬಹುದು.
ಕೆಲವೊಮ್ಮೆ 60 ಘಳಿಗೆಗಿಂತ ಹೆಚ್ಚಾಗಿದ್ದಗಾ ಒಂದೇ ತಿಥಿಯು ಎರಡು ದಿನ ಬರುತ್ತೆ.ಇದರಿಂದ ಎರಡು ಪಾಂಡ್ಯ ಎರಡು ಏಕಾದಶಿ ಬರುವುದು.ಶುಭ ದೇವತೆಗಳು ಇರುವ ತಿಥಿಗಳಲ್ಲಿ ಶುಭ ಕಾರ್ಯವನ್ನು ನೀರ್ವಿಘ್ನವಾಗಿ ನಡೆಸಬಹುದು ಮತ್ತು ಪಾಪ ದೇವತೆಗಳು ಇರುವ ತಿಥಿಯಲ್ಲಿ ಶುಭ ಕಾರ್ಯವನ್ನು ಮಾಡಲೇ ಬಾರದು.ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಎರಡರಲ್ಲಿ ಅಗ್ನಿ ದೇವತ ಪ್ರತೀಕರ ಆಗಿರುತ್ತಾನೆ.
ದಕ್ಷ ಪ್ರಜಪತಿಗೆ 60 ಹೆಣ್ಣು ಮಕ್ಕಳು. ಅವರಲ್ಲಿ 27 ಮಕ್ಕಳನ್ನು ಚಂದ್ರನಿಗೆ ಕೊಟ್ಟು ವಿವಾಹ ಮಾಡಿದ ಪ್ರಜಪತಿ.ಚಂದ್ರನ ಹೆಂಡದಿರೆ 27 ನಕ್ಷತ್ರಗಳು.ಈ ನಕ್ಷತ್ರಗಳ ಹೆಸರು ಹೇಳುವುದು ಸ್ತ್ರೀಲಿಂಗವಲ್ಲ.ಚಂದ್ರ ಪ್ರತಿದಿನ ನಕ್ಷತ್ರದಿಂದ ನಕ್ಷತ್ರಕ್ಕೆ ಸಂಚಾರಿಸುತ್ತಾನೆ.ಒಂದು ದಿನದ ಕಾಲ ಒಂದು ನಕ್ಷತ್ರದಲ್ಲಿ ಇರುತ್ತಾನೆ.ಇದನ್ನು ನಿತ್ಯ ನಕ್ಷತ್ರ ಎಂದು ಹೇಳಲಾಗುತ್ತದೆ. ಸೂರ್ಯನು ಒಂದು ನಕ್ಷತ್ರದಲ್ಲಿ ಇರುತ್ತಾನೆ ಅದನ್ನು ಮಹಾ ನಕ್ಷತ್ರ ಎಂದು ಹೇಳಲಾಗುತ್ತದೆ.
ಇನ್ನು ಕರಣ ಹಾಗೂ ಯೋಗಗಳಿಗೆ ಯೋಗವೆಂಬ ಶಬ್ದತೆ 25 ಕೋಶಕ್ಕಿಂತಲೂ ಹೆಚ್ಚು ಅರ್ಥ ವಿದೆ.ಪಂಚಾಂಗದಲ್ಲಿ ಯೋಗವೆಂಬ ಶಬ್ದವು ರೂಢನಾಮವಾಗಿ ವಿಶ್ಕಂಬಾವಿ 27 ಯೋಗವನ್ನು ಒಳಗೊಂಡಿದೆ.ನಕ್ಷತ್ರದಂತೆ ಯೋಗವು ಸಾಮಾನ್ಯವಾಗಿ 60 ಘಳಿಗೆಯೊಂದಿಗೆ ನಿತ್ಯವೂ ಬದಲು ಆಗುತ್ತದೆ.ಒಟ್ಟು 17 ಕರಣ ಗಳು ಇವೇ.ಒಂದು ತಿಥಿಗೆ ಎರಡು ಕರಣಗಳು. ಒಂದು ತಿಥಿಯ ಪೂರ್ಣಕಾಲ 60 ಘಳಿಗೆ ಇದ್ದಾರೆ.30 ಘಳಿಗೆಯನ್ನು ಹಂಚಿಕೊಂಡು ಎರಡು ಕರಣ ಇರುತ್ತವೆ.ಹೀಗಾಗಿ ಎಲ್ಲಾ ಶುಭ ಸಮಾರಂಭಗಳಿಗೆ ಪಂಚಾಂಗ ನೋಡುವುದು ಬಹಳ ಮುಖ್ಯ.ಯಾವ ಗ್ರಹಗಳು ಯಾವ ದಿಕ್ಕಿನಲ್ಲಿ ಸಂಚಾರಿಸುತ್ತವೆ ಎನ್ನುವುದು ಪಂಚಾಂಗದಲ್ಲಿ ನಿಕರವಾಗಿ ತಿಳಿಯುತ್ತದೆ.ತಿಥಿ ನಕ್ಷತ್ರ ನೋಡಿ ಶುಭ ಕಾರ್ಯ ಇಡುವುದು.
ಮಾತೃಭೂಮಿ ಹಿಂದೂ ಸ್ಪಂದನೆ
ನಮ್ಮವರಿಂದ ನಮಗಾಗಿ ಸಮಸ್ತ ಹಿಂದೂಗಳ ಹೆಮ್ಮೆ