ಸರ್ ಎಂ. ವಿಶ್ವೇಶ್ವರಯ್ಯ ಗಾಂಧೀಜಿಯವರ ಭೇಟಿ

ಒಂದು ಸಲ ಸರ್ ಎಂ. ವಿಶ್ವೇಶ್ವರಯ್ಯ ಗಾಂಧೀಜಿಯವರನ್ನು ಭೇಟಿ ಮಾಡಿದರು. ಅವರಿಗಾಗಿ ತೋರಿಸಿದ ಕುರ್ಚಿಯ ಮೇಲೆ ಕುಳಿತರು. ಗಾಂಧೀಜಿ ನಕ್ಕರು. ಎಂ.ವಿ. ನಗುವಿಗೆ ಕಾರಣ ಕೇಳಿದರು. ಗಾಂಧಿ ಉತ್ತರಿಸಿದರು:

“ನೀವು ಸೂಟ್ ಹಾಕಿದ್ದೀರಿ. ಕೈಯಲ್ಲಿ ಚಿನ್ನದ ಹಿಡಿಯಿರುವ ಬೆತ್ತ ಹಿಡಿದಿದ್ದೀರಿ. ಜೇಬಲ್ಲಿ ಚಿನ್ನದ ವಾಚ್ ಇಟ್ಕೊಂಡಿದ್ದೀರಿ. ಅದಕ್ಕೇ ನಿಮಗೆ ನೆಲದ ಮೇಲೆ ಕೂರಲಾಗುವುದಿಲ್ಲ. ನಾನು ಈ ದೇಶದ ಬಡವರಲ್ಲೊಬ್ಬ. ನನಗೆ ಹಾಕಲು ಒಂದೇ ಜೊತೆ ಬಟ್ಟೆಯಿದೆ. ಕೂರಲೂ ಕುರ್ಚಿಯಿಲ್ಲ. ಅದಕ್ಕೇ ನೆಲದ ಮೇಲೆ ಕೂರುತ್ತೇನೆ”.

ಸರ್ ಎಂ. ವಿ. ಉತ್ತರಿಸಿದರು:

“ಮಹಾತ್ಮಾ, ನಾನೊಬ್ಬ ಬಡ ಪುರೋಹಿತರ ಮಗ. ಎರಡು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿ ಬೆಳೆದವನು. ಒಮ್ಮೆ ಇಂಗ್ಲಿಷ್ ಅಧಿಕಾರಿಯೊಬ್ಬರು ಕುದುರೆಗಾಡಿಯ ಮೇಲೆ ಕೂತು ಕೈಯಲ್ಲಿ ಚಿನ್ನದ ಹಿಡಿಯಿದ್ದ ಬೆತ್ತ ಹಿಡಿದು ಬರುತ್ತಿದ್ದುದನ್ನು, ಜನರೆಲ್ಲಾ ಆತನನ್ನು ಕಣ್ಣು ಬಾಯಿ ಬಿಟ್ಟುಕೊಂಡು ಬೆರಗಾಗಿ ನೋಡುತ್ತಿದ್ದುದನ್ನು ಕಂಡೆ. ಆ ಕ್ಷಣವೇ ನಾನು ಅವರಿಗಿಂತ ಮೇಲೇರಬೇಕು ಅಂತ ನಿರ್ಧರಿಸಿದೆ. ಕಷ್ಟಪಟ್ಟು ಓದಿದೆ, ಈ ಸ್ಥಾನಕ್ಕೆ ಏರಿದೆ.

ನಮ್ಮ ದೇಶದ ಜನ ನಿಮ್ಮ ತರ ಯೋಚಿಸಿದರೆ, ಭವಿಷ್ಯದಲ್ಲಿ ನಾವೆಲ್ಲ ನೆಲದ ಮೇಲೆ ಕುಳಿತಿರಬೇಕಾಗುತ್ತೆ. ಬೇರೆಯವರು ನಮ್ಮನ್ನ ಆಳುವಂತಾಗುತ್ತದೆ!”

(ಅನುವಾದ)

ಎಂಥಾ ಉತ್ತರ ರೀ ಇದೂ !!! ಸಾರ್ವಕಾಲಿಕ ಸತ್ಯ ಇದು!!🙏

Related Posts