ಪಿತೃದೋಷ??
ಎನು ಈ ಪಿತೃ ದೋಷ ಇದು ಹೇಗೆ ಬರುವುದು ಇದರಿಂದ ಬಾದಕ ಇದಯೇ ಇದರಿಂದ ಮನುಷ್ಯ ತನ್ನ ಜೀವನದಲ್ಲಿ ಎಳಿಗೇ ಇಲ್ಲವೇ ಪಿತೃ ಅಂದರೆ ಕೇವಲ ನಮ್ಮ ತಂದೆ ತಾಯಿ ಮಾತ್ರವೇ ಇದರಲ್ಲಿ ಜೋತಿಷ್ಯ ಶಾಸ್ತ್ರದಲಿ ಪರಿಹಾರ ಇದೆಯೇ ನೋಡೋಣ ಬನ್ನಿ ಜೋತಿಷ್ಯ ಆಸ್ತಿಕರೇ

1 ಮೊದಲು ಪಿತೃ ದೋಷ ಅಂದರೇನು ತಿಳಿಯೋಣ??

ಸಾಮಾನ್ಯ ವಾಗಿ ನಾವು ತಿಳಿದಿರುವುದು ನಮ್ಮ ತಂದೆ ತಾಯಿಯ ಶ್ರಾದ್ಧಾ ಗಳನು ಮಾಡದೇ ಇದರೇ ದೂಷ ಅಂತ .ಇಲ್ಲಿ ಒಂದು ವಿಚಾರ ಅಂದರೆ ಇಲ್ಲಿ ಸ್ವಲ್ಪ ಧರ್ಮ ಶಾಸ್ತ್ರವನು ನೂಡಬೇಕು ಧರ್ಮ ಶಾಸ್ತ್ರದ ಪ್ರಕಾರ ಯಾರು ಮಾಸಿಕ ಮತ್ತು ಸಂವತ್ಸರ ಶ್ರಾದ್ಧಾ ಮಾಡದೇ ಇದರೇ ಅವರು ಸ್ವರ್ಗ ಪ್ರಾಪ್ತಿ ಆಗೂಲ ಅಂತ ಧರ್ಮ ಶಾಸ್ತ್ರ ಗರುಡ ಪುರಾಣ ಹೇಳುತ್ತದೆ ಅಂತ ನಂಬಿಕೆ ಇದೆ ಮತ್ತು ಇದರಿಂದ ದೋಷ ಅಂತ ಬಲವಾದ ನಂಬಿಕೆ. ಆದರೆ ಸತ್ಯ ವೇ ಬೇರೇ ಅವರು ಜೀವಂತ ವಾಗಿ ಇದಾಗ ಅವರನ್ನು ನಿಂದಿಸಿ ಮನಸ್ಸು ನೂಯಿಸಿ ಅವರನ್ನು ಆನಾಥ ಶ್ರಮಕೇ ಬಿಡುವುದರಿಂದ ಈ ಶಾಪ ಬರುವುದಿಲ್ಲ ಅಂತ ಅಂದುಕೋಂಡರೇ ಅದು ನಮ್ಮ ಮುರ್ಖತನವೇ ಸರಿ ಇದರಿಂದ ಅವರು ನೂಂದ ಮನಸ್ಸಿನಿಂದ ಹಾಕುವ ಶಾಪವೇ ಪಿತೃ ಶಾಪ ಅದು ದೋಷ ವಾಗಿ ಮನುಷ್ಯ ಜೀವನ ದಲಿ ಕಷ್ಟ ಬರಲು ಸಾಧ್ಯ ಇಗ ಹೇಳಿ ಈ ಶಾಪ ದೂಷಕೇ ಜೋತಿಷ್ಯ ಶಾಸ್ತ್ರ ಬೇಕೇ ಇ ದೂಷ ಕಂಡು ಹಿಡಿಯಲು .ಅಂಗೈ ಹುಣ್ಗೇ ಕನ್ನಡಿ ಬೇಕೇ ಅಂತ ಗಾದೆ ಇಲವೇ !!

2 ಪಿತೃ ಅಂದರೆ ಯಾರು??

ಮೊದಲನೆಯದಾಗಿ ಪಿತೃ ಅಂತ ಪದ ತಪ್ಪು ಯಾಕೆಂದರೆ ಅಲ್ಲಿ ಪಿತೃಗಳು ಬರುವುದು ಅಂದರೇ ಪಿತೃ(ತಂದೆ) ಪಿತಾಮಹ (ತಾತ) ಪ್ರಪಿತಮಹ (ಮುತ್ತಾತ)ಇವುರುಗಳಲಿ ಯಾರಿಂದ ದೋಷ ಅಂತ ತಿಳಿಯಲು ಜೋತಿಷ್ಯ ಶಾಸ್ತ್ರ ಬೇಕು ಅಲ್ಲವೇ

3 ಪಿತೃ ದೂಷ ಗ್ರಹಗಳ ಬಲಾಬಲ ಮೇಲೆ ಮತ್ತು ಪರಿಹಾರಗಳು !!

1 ಲಗ್ನ ಕುಂಡಲಿ ಯಲ್ಲಿ ಪಿತೃ ಕಾರಕ ರವಿ ಚಂದ್ರ ಮತ್ತು ಶನಿ ಇವುಗಳು ಮುಖ್ಯ ಕಾರಣ
2 ಲಗ್ನ ಅಧಿಪತಿ ಪಂಚಮ ನವಮ ಅಧಿಪತಿಗಳು ಮತ್ತು ಅದರಲ್ಲಿನ ಗ್ರಹಗಳ ಬಲಾಬಲ
3 ದಶಾಭುಕ್ತಿ ಅಷ್ಟಕ ವರ್ಗ ಮತ್ತು ದ್ವಾದಶಾಂಶ ಮತ್ತು ನವಾಂಶ ಕುಂಡಲಿಗಳ ತುಲನೇ
4 ಗೂಚಾರ ಯಾವ ಸಮಯದಲ್ಲಿ ದೂಷ ಬರುವುದು ಅಂತ ತಿಳಿಯಲು

ಇವುಗಳೆಲ್ಲ ತುಲನೇ ಮಾಡಿ ನಂತರ ಪಿತೃ ದೂಷ ವನ್ನು ಆತನಿಗೇ ಇದಯೇ ಅಥಾವ ಇಲ್ಲವೇ ಎಂದು ನಿರ್ಧಾರ ಮಾಡಬೇಕು. ಕೇವಲ ಲಗ್ನ ಕುಂಡಲಿ , ರವಿ ಶನಿ , ಶನಿ ಚಂದ್ರ , ಗ್ರಹಗಳು ಇದ್ದ ಮಾತ್ರಕೇ ದೋಷ ಬರುವುದಿಲ್ಲ ಮೇಲಿನ ಅಂಶವಲ್ಲ ಗಮನಿಸಿ ನಂತರ ಫಲ ಹೇಳುವುದು .ಇದೇಲ ನೂಡಿ ದೋಷ ಕಂಡು ಬಂದರೆ
ಈ ಕೕಳಕಂಡ ಪರಿಹಾರ ಮಾಡಿಕೊಳ್ಳಬಹುದು

1 ಸೂರ್ಯ ನಮಸ್ಕಾರ ಮತ್ತು ಸಂಕ್ರಮಣ ತಿಲ ತರ್ಪಣ

2 ಆದಿತ್ಯ ಹೃದಯ ಪಾರಾಯಣ ಪ್ರತಿ ದಿನ ಸೂರ್ಯ ಉದಯಕ್ಕೆ ಮುನ್ನ ಮತ್ತು ಸೂರ್ಯನಿಗೆ ಅರ್ಘ್ಯವನ್ನು
ಕೂಡುವುದು

3 ಗೂಧಿ ಧಾನ್ಯ ದಾನ ಮಾಡುವುದು ಎಕ್ಕದ ಹೂವುಗಳಿಂದ ಪೂಜೆ ಗಣಪತಿಗೆ ಮತ್ತು ಸೂರ್ಯ ನಿಗೇ

4 ಪ್ರತಿ ಶನಿವಾರ ಮಧ್ಯಾಹ್ನ ಊಟಕ್ಕೆ ಮುಂಚೆ ಕಾಗೇ ಗಳಿಗೆ ಆಹಾರ ಹಾಕುವುದು ನಂತರ ತಾವು ಸ್ವೀಕರಿಸಬೇಕು.ಇದು ದಿನ ನಿತ್ಯ ಮಾಡಿದರೂ ಒಳ್ಳೆಯ ಕೆಲಸ

5 ಕ್ಷೇತ್ರಗಳಲಿ ಅನ್ನದಾನ ಮಾಡುವುದು ಶೇರ್ಯಸ್ಕರ

6 ಸಂಗಮ ಸ್ನಾನ, ಸಮುದ್ರ ಸ್ನಾನ ಮಾಡುವುದು ಶೇರ್ಯಸ್ಕರ

7 ಶಿವನಿಗೇ ತಿಲ ಅಕ್ಷತೇ ಯಿಂದ ಪೂಜೆ

8 ಗುರು ಹಿರಿಯರಿಗೆ ಗೌರವ ಮರ್ಯಾದೆ ಕೂಡುವುದು

ಇವುಗಳೆಲ್ಲ ಎಲ್ಲರು ಮಾಡುವಂತಹ ಸುಲಭ ಪರಿಹಾರ ಇದರಿಂದ ಅವರ ಜೀವನದಲ್ಲಿನ ಶಾಪ ಪಾಪಗಳ ಎಲ್ಲ ಪರಿಹಾರವಾಗಿ ಸುಖ ಸಂತೂಷ ಜೀವನ ನಡೆಸಬಹುದು ಎಂಬದು ಸಂಶಯವಿಲ್ಲ ಕೇವಲ ಒಂದು ನಾರಾಯಣ ಬಲಿ,ಏಕಾದಶಿ, ಅಮಾವಾಸ್ಯೆಯ ದಿನ ಮಾಡುವ ಶ್ರಾದ್ಧಾ ಗಳಿಂದ ಪರಿಹಾರ ಸಾಧ್ಯವೇ ನಿವೇ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ
ನಮಸ್ಕಾರ ಧನ್ಯವಾದ
🙏🙏🙏🙏

Related Posts