ಪ್ರೇಮ ಮಂಜರಿ ಎಂಬ ಕವನ ಸಂಕಲನ ಮತ್ತು ಪ್ರೇಮ ಪಲ್ಲಕ್ಕಿ ಕಾದಂಬರಿ ಲೋಕಾರ್ಪಣ ಸಮಾರಂಭ.
ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಲೇಖಕಿ ವಿ. ಮಂಜುಳ ಪಾಟೀಲ್ ರವರ ಪ್ರೇಮ ಮಂಜರಿ ಮತ್ತು ಪ್ರೇಮಪಲ್ಲಕ್ಕಿ ಪುಸ್ತಕ ಲೋಕಾರ್ಪಣಾ ಸಮಾರಂಭವನ್ನು ಶ್ರೀ ಡಾ. ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು.. ಶ್ರೀಮದ್ ರಾಜಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಲನ ಚಿತ್ರ ನಟ , ನಿರ್ಮಾಪಕ , ಭಾರತ ಸಾರಥಿ ಕನ್ನಡ ದಿನ ಪತ್ರಿಕೆಯ ಸಂಪಾದಕರಾದ ಶ್ರೀ ಗಂಡಸಿ ಸದಾನಂದ ಸ್ವಾಮಿ,
ಇತಿಹಾಸ ತಜ್ಞ ಮತ್ತು ಸಾಹಿತಿ ಶ್ರೀ ತಲಕಾಡು ಚಿಕ್ಕರಂಗೇಗೌಡ ರು, ಪತ್ರಿಕಾ ಸಂಪಾದಕ ಶ್ರೀ ಧನಂಜಯ,ಉದ್ಯಮಿ ಶಶಿಕಾಂತ ರಾವ್ ಹಾಗೂ ಪಟೇಲ್ ವೀರಭದ್ರಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.