ಪಾಪ ಮತ್ತು ಪುಣ್ಯಗಳ ಫಲ

“ಪಾಪ ಮತ್ತು ಪುಣ್ಯಗಳ ಫಲದ ಅನುಭವಿಸುವಿಕೆಯು –
ಕರ್ಮ ಸಿದ್ಧಾಂತದಲ್ಲಿ ಉಲ್ಲೇಖವು :-“

ನಾವು ನಮ್ಮ ಈ ಜನ್ಮದಲ್ಲಿ ಮರಣಿಸುವ ಸಮಯದವರೆಗೆ ಹಲವು ಹಂತಗಳಲ್ಲಿ ನಮ್ಮ ಬದುಕಿನ ಚಿತ್ರಣವು ಹಲವು ಸ್ವರೂಪಗಳ ಫಲವನ್ನು ಅನುಭವಿಸಬಹುದು. ನಾವು ಹುಟ್ಟಿನಿಂದ ನಾನಾ ಬಗೆಯ ಫಲವನ್ನು ಪಡೆಯುತ್ತಿದ್ದು, ಇಂದು ಹಣವಿದ್ದು ನಾಳೆ ಹಣವನ್ನು ಕಳೆದುಕೊಳ್ಳಬೇಕಾದ ಸಂಧರ್ಭ ಬರಬಹುದು. ನಮ್ಮ ಜೀವನವು ದಿಕ್ಕು ತಪ್ಪಿದಾಗ ಅದಕ್ಕೆ ನಾನಾ ಬಗೆಯ ಕಾರಣಗಳನ್ನು ಹುಡುಕುತ್ತಾ ಹೋಗುತ್ತೇವೆ ಅಥವಾ ಮತ್ತೊಬ್ಬ ವ್ಯಕ್ತಿಯ ಮೇಲೆ ದೋಷಾರೋಪಣೆ ಮಾಡುತ್ತೇವೆ. ಆದರೆ, ಇಲ್ಲಿ ನಾವು ಏನು ಅನುಭವಿಸಬೇಕೆಂದು ನಮ್ಮ ಕರ್ಮ ಸಿದ್ಧಾಂತದಲ್ಲಿ ಉಲ್ಲೇಖವಾಗಿರುತ್ತದೆಯೋ ಅದೇ ಕರ್ಮವನ್ನು ಸ್ವೀಕರಿಸಬೇಕಾಗುತ್ತದೆ.

ಹಾಗಾಗೀ ನಮ್ಮ ಜೀವನದ ಏಳಿಗೆ ಅಥವಾ ಅವನತಿಗೆ ಮತ್ತೊಬ್ಬನ ಮೇಲೆ ಬೆರಳು ತೋರಿಸಿ ಉಪಯೋಗವಿಲ್ಲ. ಇಲ್ಲಿ ನಾವು ನಮ್ಮ ಪಾಪ ಮತ್ತು ಪುಣ್ಯಗಳನ್ನು ಅನುಭವಿಸಬೇಕೆ ಹೊರತು ಮತ್ತೊಬ್ಬನ ಪಾಪ ಅಥವಾ ಪುಣ್ಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಕರ್ಮಫಲವನ್ನು ನಾವೇ ಅನುಭವಿಸಬೇಕು. ಅಂದರೆ, ನಮ್ಮೊಳಗಿನ ನಾನಾ ದೋಷಗಳು, ನಮ್ಮನ್ನು ಕಿತ್ತು ತಿನ್ನುವ ಬಡತನ, ನಮ್ಮೊಳಗಿನ ಅಜ್ಞಾನ, ನಮ್ಮನ್ನಾವರಿಸುವ ನಾನಾ ಕಾಯಿಲೆಗಳಿಗೆ ನಮ್ಮ ಪೂರ್ವ ಜನ್ಮದ ಕರ್ಮಗಳು ಕಾರಣವಾಗುತ್ತದೆ. 🙏

Related Posts