ಲೇಖನ. ಮಧುಸೂದನ. ಕಲಿಭಟ್. ಧಾರವಾಡ. ನುಡಿಮುತ್ತು.
ಗಡಿಯಾರ ಎಷ್ಟೇ ಮೌಲ್ಯದಾಗಿದ್ದರೂ ಅದು ಸಮಯವನ್ನು ನಿಯಂತ್ರಿಸಲು ಸಾಧ್ಯವಿಲ್ಲ.
ಅದೇ ರೀತಿ ಮನುಷ್ಯ ಎಷ್ಟೇ ಬಲಶಾಲಿ ಆಗಿದ್ದರೂ ಅವನ ವಿಧಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ.
ಮೇಲಿನವಾಕ್ಯದ ಸಾರಂಶ ಏನೆಂದರೆ, ಜಗತ್ತಿನಲ್ಲಿ, ಮಾನವನ ಮೊದಲು ಮಾಡಿ ಎಲ್ಲ ಜೀವಿ, ವಸ್ತು ತಮ್ಮ ವಿಧಿ ಮೀರಿ ನಡೆಯಲು ಸಾಧ್ಯವಿಲ್ಲ.
ಗಡಿಯಾರವು ಒಂದು ಯಂತ್ರ. ನಮ್ಮ ಅನುಕೂಲಕ್ಕೆ ಸಮಯ ಸುಚಿ ಎಂದು ಅದನ್ನು ಇಟ್ಟಿರುತ್ತೇವೆ. ಒಂದೊಂದು ಸಲ ಅದು ಹಿಂದೆ ಮುಂದೆ ಸಮಯ ತೋರಿಸುವದು. ಏಕೆಂದರೆ ಅದರಲ್ಲಿ ಕಂಡು ಬರುವ ಯಾಂತ್ರಿಕ ದೋಷ.
ನಿಜವಾದ ಕಾಲ ತೋರಿಸುವವರು ಸೂರ್ಯ ಚಂದ್ರ. ಅವರೂ ಸಹಿತ ಕಾಲನಾಮಕ ಪರಮಾತ್ಮನ ಅಧೀನದಲ್ಲಿ ಇದ್ದಾರೆ. ಗಡಿಯಾರ ಹೆಚ್ಚು ಕಡಿಮೆ ಕಾಲ ತೋರಿಸಿದರೆ ಕಾಲ ಎಂದು ಬದಲಾಗುವದಿಲ್ಲ.
ಜಗತ್ತಿನಲ್ಲಿ ಎಲ್ಲ ಜೀವಿ ಮತ್ತು ವಸ್ತುಗಳಿಗೆ ಅವುಗಳದೇ ಆದ ಹಣೆ ಬರಹ ವಿಧಿ ಇರುವದು. ಒಂದು ಬಂಡೇಕಲ್ಲು ಇರುವದು. ಪಕ್ಕಕೆ ಇನ್ನೊಂದು ಕಲ್ಲು ಇರುತ್ತದೆ. ಶಿಲ್ಪಿ ತನಗೆ ಸೂಕ್ತವಾದ, ನಾಣ್ಯತೆಯಿದ್ದ ಕಲ್ಲನ್ನೇ ತೆಗೆದುಕೊಂಡು ಕಟೆದು ಮೂರ್ತಿ ಮಾಡುತ್ತಾನೆ. ಆ ಕಲ್ಲಿನ ವಿಧಿಯಲ್ಲಿ ದೇವರ ವಿಗ್ರಹ ವಾಗಿ ಪೂಜೇಗೋlಲ್ಲ ಬೇಕೆಂದು ಇರುತ್ತದೆ. ಇನ್ನೊಂದಕ್ಕೆ ಇಲ್ಲ. ಆದ್ದರಿಂದ ವಿಧಿಯನ್ನು ವಿರೋಧಿಸಲು ನಮ್ಮಿಂದ ಸಾಧ್ಯವಿಲ್ಲ. ಅದನ್ನೇ ಸರ್ವಜ್ಞ ಕವಿಯು ವಿಧಿಯ ಬಗ್ಗೆ ಒಂದು ವಚನವನ್ನೇ ಬರೆದಿರುವನು.
ವಾರಣಾಸಿಯಲಿರಲಿ ವಾರಿಧಿಯ ನಡುವಿರಲಿ
ವೀರಭದ್ರನಾ ನೆರೆ ಇರಲಿ ವಿಧಿಯಾಟ ತಾ
ತೋರದೆ ಬಿಡದು ಸರ್ವಜ್ಞ.