ಶ್ರೀಮತಿ ಶಾಲಿನಿ ಕಾಳೆ

ಶ್ರೀಮತಿ ಶಾಲಿನಿ ಕಾಳೆ ಯವರು ಸಮಾಜಕ್ಕೆ ನೀಡಿದ ಸೇವೆ ಗಣನೀಯವಾದುದು ಅವಳ ಮುಖಂಡತ್ವದಲ್ಲಿ ಕಟ್ಟಿದ ಶ್ರೀ ಶಾರದಾಂಬ ಮಹಿಳೆ ಮಂಡ ಳ ಸಮಾಜದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದೆ ಎಂದರೆ ತಪ್ಪಾಗಲಾರದು ಆದಷ್ಟು ಹೆಂಗಳೆಯರ ಜೀವನ ರೂಪಿಸುವಲ್ಲಿ ಸಹಕಾರಿಯಾಗಿದೆ ಸಮಾಜದ ಕಟ್ಟ ಕಡೆಯ ಮಹಿಳೆ ಕೂಡ ಸ್ವಾವಲಂಬಿಯಾಗಿ ಜೀವನ ಸಾಗಿಸಲು ಪ್ರೇರಣೆ ನೀಡಿದ್ದಾರೆ ಇಂತಹ ವೃದ್ಧ ಮಹಿಳೆಯನ್ನು ಗುರುತಿಸಿ ಸಾರ್ವಜನಿಕವಾಗಿ ಸನ್ಮಾನಿಸುವ ರವೀಂದ್ರ ಶೆಟ್ಟಿ ಬಾಳೇಗುಳಿ ರವರ ಕೃತರ್ಥ್ ವ ಶಕ್ತಿ ಮೆಚ್ಚುವಂಥದ್ದು ಸಂಘಟನೆ ಕಾರ್ಯಗಳಿಗೆ ಎಲ್ಲರಿಗೂ ನನ್ನ ತುಂಬು ಹೃದಯದ ಕೃತಜ್ಞತೆಗಳು

ಕೈಯ್ಯಮುಗಿದು ಚಪ್ಪಾಳೆ ತಟ್ಟಿ
ನನ್ನದೊಂದು ಅಭಿಮಾನದ ಬಿಂದು ನಿಮಗೆll
ಸಾಧನೆಯ ಹಾದಿಯಲ್ಲಿ
ನಿಮಗಾರು ಸಾಟಿ ಇಲ್ಲಿ
ಕೋಟಿ ಕೋಟಿ ಅಭಿಮಾನಿಗಳ ಹೃದಯದಲ್ಲಿ ನಿಮ್ಮ ಹೆಸರು ಹಸಿರಾಗಲಿ ll
ಮಲ್ಲಿಗೆ ಮನಸಿನ ನಿರ್ಮಲ ಹೃದಯದ ಮಗುವಿನ ನಗುವಿನ ಶಾಲಿನಿ ಅಕ್ಕ ನಗುನಗುತ ಬಾಳಲಿ ದರಿಯಲಿ ಜೊತೆಯಲ್ಲಿ ದೇವರ ಕೃಪೆ ಇರಲಿ l

👏🏻🌹🌹🙏🏻ಎಂದು ಹಾರೈಸುವ ರವಿ ಜಿ ಶೆಟ್ಟಿ.👏🏻🌹🌹🙏🏻

💐🙏🏻💐

Rama Uluvare ಅಂಕೋಲಾ ವೈಶ್ಯ ಸಮಾಜದ ಮುದ್ದಿನ ಮಗಳಾಗಿ ಕಾಳೆ ಕುಟುಂಬದ ಮಮತೆಯ ಗ್ರಹಿಣಿ ನೀವಾಗಿ ಮಹಿಳಾ ಮಂಡಲದ ಆಧಾರಸ್ತಂಭವೇ ತಾವಾಗಿ ಸಾಧನೆಗೈದ ಸಾಧಕರೆ ನಿಮಗಿದು ನಮ್ಮಯ ಚಪ್ಪಾಳೆll
ಬಾಲವಿಕಾಸ ಶಾಲೆಯ ತೆರೆದು ಸಾವಿರಾರು ಮಕ್ಕಳಿಗೆ ಅಕ್ಷರ ಜ್ಞಾನವ ಬಳಿದು ಸಂಗೀತ ಭರತನಾಟ್ಯದ ತರಬೇತಿಯ ಮೂಲಕ ವಿದ್ಯಾರ್ಥಿಗಳಿಗೆ ರಸದೌತಣ ಉಣಬಡಿಸಿದ ಸಾಧಕರೆ ನಿಮಗಿದೋ ನಮ್ಮ ತುಂಬು ಹೃದಯದ ವಂದನೆ ಅಭಿನಂದನೆll
ಕರುಣೆಯಲ್ಲಿ ಕಲ್ಪವೃಕ್ಷ ವಾಗಿ ಪ್ರೀತಿಯಲ್ಲಿ ಅಮೃತಕ್ಕು ಮಿಗಿಲಾಗಿ ಸ್ನೇಹದಲ್ಲಿ ಹಾಲಿಗಿಂತ ಬಿಳುಪಾಗಿ ಸದಾ ಹಸನ್ಮುಖಿಯಾಗಿ ಇರುವ ನಮ್ಮೆಲ್ಲರ ಪ್ರೀತಿಯ ಶಾಲಿನಿ ಅಕ್ಕ ಎಂದೇ ಹೆಸರಾಗಿರುವ ಸಾಧಕರೆ ನೀವು ನೂರಾರು ವರುಷ ಸದಾ ನಗುನಗುತ ಬಾಳಲೆಂದು ಆ ದೇವರಲ್ಲಿ ನನ್ನದೊಂದು ಪ್ರಾರ್ಥನೆll🌹💐👏🏻🙏🏻

ಹುಟ್ಟುತ್ತಾರೆ ಮಿತಿಯಿಲ್ಲದಷ್ಟು
ಬೆಳೆಯುತ್ತಾರೆ ಲೆಕ್ಕವಿಲ್ಲದಷ್ಟು
ಸಾಧನೆಗೈದವರು ಎಷ್ಟುll ಅಂಕೋಲಾದಲ್ಲಿ ಹುಟ್ಟಿ ವೈಶ್ಯ ಸಮಾಜದಲ್ಲಿ ಬೆಳೆದು ಎಷ್ಟು ಎನ್ನೋ ಲಿಸ್ಟಿನಲ್ಲಿ ನೀವು ಫಸ್ಟುll

ಏಳುಬೀಳು ಕಷ್ಟ ಸಹಿಸಿ
ಸಂಘ ಸಂಸ್ಥೆ ಕಟ್ಟಿ ಬೆಳೆಸಿ
ಮಹಿಳೆಯರಿಗೆಲ್ಲ ನೀವೇ ಬೆಸ್ಟ್l lಇಂದಿನ ಮಹಿಳೆಯರಿಗೂ ಮುಂದಿನ ಯುವತಿಯರಿಗೂ ನಿಮ್ಮ ಮಾರ್ಗದರ್ಶನವೇ ಸ್ವೀಟ್ಅಷ್ಟು ನೀವೇ ಅಂತರಾಳದಲ್ಲಿ ಕುಳಿತಿರುವ ಗೆಸ್ಟ್ ll🌹💐👏🏻🙏🏻

🦚🌷®itesh Ravi Shetti🌷🦚

ಡಿ.ಜಿ. ಶೆಟ್ಟಿ
ವಿಶ್ರಾಂತ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ

ಆದರ್ಶ ಮಹಿಳೆ ಶಾಲಿನಿ ಕಾಳೆ
*************************

ಕನ್ನಡ ವೈಶ್ಯ ಸಮಾಜದ ಆದರ್ಶ ಮಹಿಳೆ|
ಎನಿಸಿ ಕೊಂಡಿಹರು ಶ್ರೀಮತಿ ಶಾಲಿನಿ ಕಾಳೆ |
ಸಮಾಜ ಸೇವೆಯೆ ಇವರ ಉಸಿರು ಕೇಳೇ|
ಅಭಿನಂದನೆಗಳು ಹರಿದು ಬರುತಿದೆ ಬಹಳೇ||೧||

ಒಂದಿನಿತು ಅಹಮಿಲ್ಲ ಹೊಗಳಿಕೆಯು ಬೇಕಿಲ್ಲ|
ಹಗಲಿರಳು ದುಡಿದರೂ ದಣಿವೆಂಬುದೇ ಇಲ್ಲ|
ಜನ ಸೇವೆಯೇ ಜನಾರ್ಧನ ಸೇವೆ , ಸೊಲ್ಲ|
ನಂಬಿ, ಜನಾದರಣೀಯರಾಗಿಹರಲ್ಲ||೨||

ಅಭಿವೃದ್ಧಿ ಬಯಸಿ ಮಹಿಳೆಯರ ಮಕ್ಕಳ|
ಸಂಸ್ಥಾಪಿಸಿದರು ಶ್ರೀ ಶಾರದಾಂಬಾ ಮಹಿಳಾ ಮಂಡಳ|
ಹೊಲಿಗೆ, ಕಸೂತಿ ತರಬೇತಿ, ಕುಂಕುಮ ತಯಾರಿಕೆ, ಹಪ್ಪಳ|
ಜೊತೆಯಲಿ ಗುಡಿಕೈಗಾರಿಕೆಗೆ ವತ್ತು ನೀಡಿದರಸದಳ||೩||

ಕನ್ನಡ ವೈಶ್ಯ ವಿದ್ಯಾನಿಧಿ ಸಂಸ್ಥೆಯ ನಿರ್ದೇಶಕರಾಗಿ|
ಶ್ರೀ ಶಾರದಾಂಬಾ ಮಹಿಳಾ ಮಂಡಳದ ಅಧ್ಯಕ್ಷರಾಗಿ|
ಸನಾತನ ಧರ್ಮದ ನಿಜ ಪ್ರವರ್ತಕರಾಗಿ |
ಜೀವನ ಸವೆಸಿದರು ಅಧ್ಯಾತ್ಮಿಕ ಚಿಂತಕರಾಗಿ||೪||

ಭಾರತೀಯ ಸೇವಾದಳದ ಸದಸ್ಯರಾಗಿ|
ಈಶ್ವರೀಯ ವಿಶ್ವವಿದ್ಯಾಲಯದ ಸೇವಾಕರ್ತರಾಗಿ|
ಸರಕಾರಿ ಬಾಲವಾಡಿ, ಪಿ.ಎಂ. ಶಾಲಾ ಶಿಕ್ಷಕಿಯರಾಗಿ|
ಸೇವೆ ಸಲ್ಲಿಸಿಹರಿವರು ಯಶಸ್ವಿಯಾಗಿ||೫||

ಬಾಲ ವಿಕಾಸ ಕೇಂದ್ರ ತೆರೆದರು ಬಾಲಕರಿಗಾಗಿ|
ಭರತನಾಟ್ಯ, ಸಂಗೀತ ಶಾಲೆ ನಡೆಸಿದರು ಕಲಾ ಪೋಷಕರಾಗಿ||
ಪಾಕ ಶಾಸ್ತ್ರ ಸ್ಪರ್ಧೆ ಏರ್ಪಡಿಸಿದರು ಮನೆ ಅಡುಗೆ ಪ್ರೋತ್ಸಾಹಕ್ಕಾಗಿ|
ಯೋಗಾಭ್ಯಾಸವೂ ರೂಢಿಸಿದರು ಸದೃಢ ಆರೋಗ್ಯಕ್ಕಾಗಿ||೬||

ಸರಳ, ಸಜ್ಜನ, ಮೃದುಮಿತ ಭಾಷಿಗಳಿವರು|
ಅಪರೂಪದಲಿ ಬಲು ಅಪರೂಪ ಇಂಥವರು|
ಗೌರವಾದರದಿಂದ ಗೌರವಿಸಿ ನಾವೆಲ್ಲರು|
ಪ್ರಾರ್ಥಿಸುವೆವು ಆಯುಷ್ಯ ‘ಆರೋಗ್ಯ ವೃದ್ಧಿಸಲೆಂದು ದೇವರು||೭||

ಡಿ.ಜಿ. ಶೆಟ್ಟಿ
ವಿಶ್ರಾಂತ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ
ಅಂಕೋಲಾ

💐💐💐💐ಅಭಿನಂದನೆಗಳು 💐💐💐💐 ಡಾ ವಿನಯಕುಮಾರ ವಿಶ್ವ ವೈಶ್ಯ ವಿಶಿಷ್ಟ ವೇದಿಕೆ

Related Posts