🌸🌼ಬೆಳಗಿನ 🌅 ಸೂಳ್ನುಡಿ🌼🌸
*ತ್ಯಕ್ತ್ವೈಷಣಾತ್ರಯಮವೇಕ್ಷಿತ ಮೋಕ್ಷಮಾರ್ಗಾ*
*ಭೈಕ್ಷಾಮೃತೇನ ಪರಿಕಲ್ಪಿತ-ದೇಹ-ಯಾತ್ರಾಃ |*
*ಜ್ಯೋತಿಃ ಪರಾತ್ಪರತರಂ ಪರಮಾತ್ಮಸಂಜ್ಞಂ*
*ಧನ್ಯಾ ದ್ವಿಜಾರಹಸಿ ಹೃದ್ಯವಲೋಕಯಂತಿ ||*
(ಶ್ರೀ ಶಂಕರಾಚಾರ್ಯ- ಧನ್ಯಾಷ್ಟಕಮ್ ೫)
ಧನ, ಮಕ್ಕಳು ಹಾಗೂ ಪ್ರಪಂಚದೊಂದಿಗೆ ಸಂಗವನ್ನು ಮಾನಸಿಕವಾಗಿಯೂ ತೊರೆದು, ಮೋಕ್ಷಮಾರ್ಗದಲ್ಲಿ ಮುನ್ನಡೆಯುತ್ತಾ, ಭಿಕ್ಷೆಯಿಂದ ಭುಜಿಸುತ್ತ, ಆ ಮೂಲಕ ತಮ್ಮ ದೇಹಯಾತ್ರೆಯನ್ನು ಸಾಗಿಸುತ್ತ, ತಮ್ಮ ಹೃದಯದಲ್ಲಿ ಪರಮಶ್ರೇಷ್ಠವಾದ, ಪರಮಾತ್ಮನೆಂಬ ಜ್ಯೋತಿಯನ್ನು ಸದಾ ಅವಲೋಕಿಸುತ್ತಿರುವವರೇ ನಿಜವಾದ ದ್ವಿಜರು ಹಾಗೂ ಅವರೇ ಧನ್ಯತೆಯನ್ನು ಕಂಡವರು.
*🌷🌺🙏 ಶುಭದಿನವಾಗಲಿ! 🙏🌺🌷*