🔔🕉🔔🌹
||ಶ್ರೀ ವಿಷ್ಣುಸಹಸ್ರನಾಮ||
||श्री विष्णुसहस्रनाम||

🌹🔔🕉🔔🌹
*||ಶ್ರೀ ವಿಷ್ಣುಸಹಸ್ರನಾಮ||*
*||श्री विष्णुसहस्रनाम||*
******************
*ಚಿಂತನೆ ॐ ನಾಮ – 956*
*भावनम् ॐ नामन् – 956*
******************
*ಪ್ರಾಣದ:*
*प्राणद:*
******************
*ॐ श्री ಪ್ರಾಣದಾಯ ನಮ:*
*ॐ श्री प्राणदाय नमः*
****************
ಪ್ರಾಣದ: = ಪ್ರಾಣದಾನ ಮಾಡುವವ, ಜೀವನ ವೃಕ್ಷ, ಜೀವ ನೀಡುವವನು, ಜೀವರನ್ನು ಕಾಪಾಡುವವನು, ಜೀವರನ್ನು ರಕ್ಷಣೆ ಮಾಡುವನನು, ಪ್ರಾಣಗಳನ್ನು ಅನುಗ್ರಹಿಸುವವನು, ಇತ್ಯಾದಿ.,

ಪ್ರಾಣ (ಪ್ರ + ಅನ) (ಪ್ರ + ಆ + ಣ) + ದ = ಪ್ರಾಣದ:.

ಪ್ರಾಣ = ಉಸಿರು, ಜೀವಧಾರಕ ಅಂಗ, ಶಕ್ತಿ, ಗಾಳಿ, ಜೀವ, ವಾಯು, ಬಲ, ಸಾರ, ಸತ್ವ, ಆತ್ಮ, ಶರೀರದೊಳಗಿನ ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನ ಎಂಬ ಪಂಚಪ್ರಾಣ ವಾಯುಗಳು, ಬಹಳ ಪ್ರಿಯವಾದ ವಸ್ತು, ಇತ್ಯಾದಿ.,

ದ = ಕೊಡುವವನು ಮತ್ತು ಕಸಿದುಕೊಳ್ಳುವವನು ಎನ್ನುವ ತದ್ವಿರುದ್ಧವಾದ ಎರಡೂ ಅರ್ಥವಿರುವ ಪದ. ಹಾಗೂ ಈ ಅರ್ಥಗಳೂ ಇವೆ:- ಕ್ಷಮೆ, ಶೋಧನೆ, ಶುದ್ಧಿಮಾಡು, ದಾನ, ಕೊಡುಗೆ, ರಕ್ಷಣೆ, ಕತ್ತರಿಸು, ಇತ್ಯಾದಿ.,

ಪ್ರ = ಉತ್ತಮವಾದ, ನಿರ್ದಿಷ್ಟವಾದ, ಸ್ಪುಟವಾದ, ಸ್ಪಷ್ಟತೆ, ಉತ್ಕರ್ಷ, ಶ್ರೇಷ್ಠತೆ, ಸ್ವಚ್ಛತೆ, ನಿರ್ಮಲ, ಇತ್ಯಾದಿ.,

ಅನ = ಪ್ರಾಣವಾಯು, ಉಸಿರು, ಶ್ವಾಸ, ಜೀವ, ಇತ್ಯಾದಿ.,

ಆ = ಪರಿಪೂರ್ಣ, ಸ್ಮರಣೆ, ನೆನಪು, ಅನುಕಂಪ, ದಯೆ, ಇತ್ಯಾದಿ.,

ಣ = ಆನಂದ, ಬಲ, ಜ್ಞಾನ, ಭೂಷಣ, ಇತ್ಯಾದಿ.,

ನಮಗೆ ದೇಹದಲ್ಲಿ ಪ್ರಾಣಶಕ್ತಿಯನ್ನು ತುಂಬಿ, ಇಂದ್ರಿಯಗಳನ್ನು ಕೊಟ್ಟು, ಬದುಕಿಗೆ ಬೇಕಾದ ಕಲೆಯನ್ನು ಕೊಡುವವನು; ಕೊನೆಗೆ ಬೌದ್ಧಿಕ ಶರೀರವನ್ನು ಕಸಿದುಕೊಂಡು, ಮುಕ್ತಿಯನ್ನು ದಯಪಾಲಿಸುವ ಭಗವಂತ “ಪ್ರಾಣದ:”.

*”ಪ್ರಾಣಾನ್ ದಿಗಭಿಮಾನಿನ: ಇಂದ್ರಾದೀನ್ ದಯತೇ ದಯತೇ ರಕ್ಷತೀತಿ ಪ್ರಾಣದ:||”* ಪೂರ್ವದಿಕ್ಕಿಗೆ ಸಪತ್ನೀಕರಾದ ಇಂದ್ರಾಗ್ನಿಗಳೂ, ಪಶ್ಚಿಮದಿಕ್ಕಿಗೆ ಸಪತ್ನೀಕರಾದ ವರುಣ ವಾಯುಗಳೂ, ಉತ್ತರದಿಕ್ಕಿಗೆ ಸಪತ್ನೀಕರಾದ ಶೇಷಮಿತ್ರರೂ, ಊರ್ಧ್ವದಿಕ್ಕಿಗೆ ಸಪತ್ನಿಕರಾದ ಗರುಡಮನ್ಮಥರೂ ಅಭಿಮಾನಿ ದೇವತೆಗಳೆನಿಸಿದ್ದು, ಆಯಾ ದಿಕ್ಕುಗಳಲ್ಲಿ ಇರುವವರನ್ನು ಪ್ರೇರಿಸುವ ಪ್ರಯುಕ್ತ ‘ಪ್ರಾಣ’ ಎನಿಸಿರುವರು – ಎಂದು ಪ್ರಜಾಪತಿ ಸಂಹಿತೆ ತಿಳಿಸಿದೆ. ಹೀಗೆ ಇಂದ್ರನೇ ಮುಂತಾದ ‘ಪ್ರಾಣ’ರನ್ನು ಸಂರಕ್ಷಿಸುವ ಭಗವಂತ “ಪ್ರಾಣದ:” ಎಂದು ಕರೆಯಲ್ಪಡುತ್ತಾನೆ.

*”ಪ್ರಕೃಷ್ಟ: ಅಣ: ಮೋಕ್ಷಂ ಪ್ರತಿಗತಿ: ಪ್ರಾಣಸ್ತಂ ಯೋಗ್ಯೇಭ್ಯ: ದದಾತೀತಿ ಪ್ರಾಣದ:||”* ಯೋಗ್ಯರನ್ನು ಮೋಕ್ಷಕ್ಕೆ ಕೊಂಡೊಯ್ಯುವ ಪ್ರಯುಕ್ತ ‘ಪ್ರಾಣ’ ಎನಿಸಿರುವ ವಾಸುದೇವನೇ, ಮೋಕ್ಷಯೋಗ್ಯರಿಗೆ ಮೋಕ್ಷವನ್ನು ಕುರಿತು ಪ್ರಕೃಷ್ಟವಾದ ಗತಿಯನ್ನು ಅನುಗ್ರಹಿಸುವ ಭಗವಂತ “ಪ್ರಾಣದ:”.

*”ಪ್ರಾಣಂ ಸೂರ್ಯಂ ಪ್ರಣೇತೃತಯಾ ಜಗತ: ದದಾತೀತಿ ಪ್ರಾಣದ:||”* ಬೆಳಕನ್ನು ನೀಡಿ ಜಗತ್ತನ್ನು ಪ್ರೇರಿಸುವ ಪ್ರಯುಕ್ತ ಸೂರ್ಯನೂ ‘ಪ್ರಾಣ’ ಎನಿಸಿರುವನೆಂದು ಬ್ರಹ್ಮತರ್ಕವು ತಿಳಿಸಿದೆ. ಇಂತಹ ಸೂರ್ಯನನ್ನು ಸಷ್ಟಿಸಿ ಜಗತ್ತಿಗೆ ನೀಡಿರುವನು ಭಗವಂತನೇ. ಹೀಗೆ ಸೂರ್ಯನನ್ನು ನೇತಾರನನ್ನಾಗಿ ಜಗತ್ತಿಗೆ ನೀಡಿರುವ ಭಗವಂತ “ಪ್ರಾಣದ:”.

ಮರಣವನ್ನು ಹೊಂದಿದ ಪರೀಕ್ಷಿತನೇ ಮೊದಲಾದವರಿಗೆ ಪ್ರಾಣದಾನವನ್ನು ಮಾಡಿದವನು;
ಪ್ರಾಣಗಳನ್ನು ಕೊಡುವವನು;
ಪ್ರಾಣಗಳನ್ನು ಚಲಿಸುವಂತೆ ಮಾಡುವವನು;
ಮೃತ್ಯುರೂಪದಿಂದ ಪ್ರಾಣಗಳನ್ನು ಹರಣ ಮಾಡುವವನು;
ಪ್ರಾಣಗಳನ್ನು ಶುದ್ಧ ಮಾಡುವವನು;
ಸುರಾಸುರರಿಗೆ ಪ್ರಾಣವನ್ನು ಮತ್ತು ಬಲವನ್ನು ಕೊಡುವವನು;
ಸುರಾಸುರರ ಪ್ರಾಣವನ್ನು ಮತ್ತು ಬಲವನ್ನು ನಾಶ ಮಾಡುವವನು;
ಪ್ರಳಯಕಾಲದಲ್ಲಿ ಪ್ರಾಣಿಗಳ ಪ್ರಾಣಗಳನ್ನು ನಾಶಮಾಡುವವನು;
ನಮ್ಮ ಇಂದ್ರಿಯ, ಶರೀರ, ಮನಸ್ಸು, ಬುದ್ಧಿಗಳಿಗೆ ಪ್ರಾಣಶಕ್ತಿ ನೀಡುವವನು;
ತನ್ನ ಸಾನ್ನಿಧ್ಯದಿಂದ ದೇಹದಲ್ಲಿ ಎಲ್ಲಾ ವಿಧದ ಚಟುವಟಿಕೆಗಳು ನಡೆಯುವಂತೆ ಮಾಡುವವನು;
ಅಂತ್ಯಕಾಲದಲ್ಲಿ ಪ್ರಾಣಗಳನ್ನು ಹರಣ ಮಾಡುವವನು;
ಸಾಧಕರ ಸದ್ವಿಚಾರಗಳಿಗೆ ಬಲ ನೀಡಿ, ದುಷ್ಟ ವಿಚಾರಗಳನ್ನು ನಾಶ ಮಾಡುವವನು;
ದೇವತೆಗಳಿಗೆ ಪ್ರಾಣಶಕ್ತಿ ನೀಡಿ ರಾಕ್ಷಸರ ಪ್ರಾಣ ಖಂಡಿಸುವವನು;
ಪ್ರಾಣಕ್ಕೆ ಪ್ರಾಣ ಕೊಡುವವನು;
ಪ್ರಾಣಪೋಷಣೆ ಮಾಡುವವನು;
ಪ್ರಾಣತತ್ವಕ್ಕೂ ಅನುಗ್ರಹ ಮಾಡುವವನು;
ಪ್ರಾಣದೇವರಿಗೂ ಪ್ರಾಣನೀಡುವ ಮಹಾಪ್ರಾಣನು;
ತನ್ನ ನಿಜಭಕ್ತರಿಗೆ ಪೂರ್ಣಾನಂದದ ಅನುಭವವನ್ನು ಕೊಡುವವನು;
ಪ್ರಾಣಸಂಧಾನ ಮಾಡುವವನು;
ವಿಷಯವಿಷದಿಂದ ಮೂರ್ಛಿತರಾಗಿ ನಷ್ಟಾತ್ಮರಾದವರಿಗೆ ಆತ್ಮೋಜ್ಜೀವನವನ್ನು ಉಂಟು ಮಾಡುವವನು;
ಅಧಿಕವಾಗಿ ಗತಿಯನ್ನು ಕೊಡುವವನು;
ಚತುರ್ಮುಖನಿಗೆ ತೇಜಸ್ಸು-ರೂಪ-ಶಬ್ದಗಳನ್ನು ಅಧಿಕವಾಗಿ ಕೊಡುವವನು;
ಸಂಜೀವಕನು;
ಪ್ರಾಣಗಳ ವ್ಯಾಪಾರವನ್ನು ಮಾಡಿಸುವವನು;
ಪ್ರಾಣಗಳನ್ನು ಕಾಲರೂಪದಿಂದ ಖಂಡಿಸುವವನು;
ಪ್ರಾಣಗಳನ್ನು ಉದ್ದೀಪನಗೊಳಿಸುವವನು;
ಸೂರಿಗಳೇ ಮುಂತಾದವರಿಗೆ ತನ್ನ ದರ್ಶನಾನುಭವ – ಸೇವೆಗಳಿಗೆ ಅನುಗುಣವಾದ ಬಲವನ್ನು ಕೊಡುವವನು;
ಸಮುದ್ರಮಥನದ ಸಮಯದಲ್ಲಿ ಕೂರ್ಮರೂಪಿಯಾಗಿ ದೇವತೆಗಳಿಗೆ ಬಲವನ್ನು ಕೊಟ್ಟವನು;
ಶೋಕವನ್ನು ಖಂಡಿಸುವವನು;
ನಿಷ್ಕ್ರಿಯವಾದ ಜಡ ಪ್ರಪಂಚಕ್ಕೆ ಚಲನೆ ಕೊಟ್ಟವನು;
ಜಗತ್ತಿನ ನಿಯಾಮಕ ಶಕ್ತಿಯಾಗಿ ಪ್ರಾಣವನ್ನು ಕೊಟ್ಟವನು;
ಮುಖ್ಯಪ್ರಾಣವನ್ನು ವಿಶೇಷವಾಗಿ ರಕ್ಷಿಸುವವನು;
ಪ್ರಕೃಷ್ಟ ಶಬ್ದಗಳನ್ನೊಳಗೊಂಡ ವೇದವನ್ನು ಸಂರಕ್ಷಿಸುತ್ತಿರುವವನು;
ರಾಮಾವತಾರದಲ್ಲಿ ಮೃತವಾದ ಸೇನೆಗೆ ಪ್ರಾಣವನ್ನು ಅನುಗ್ರಹಿಸಿದ್ದವನು;
ಆದುದರಿಂದ ಭಗವಂತನಿಗೆ “ಪ್ರಾಣದ:” ಎಂದು ಹೆಸರು.

“ಕಾಂತಾದಿವಿಷಯವ್ಯಾಪ್ತ್ಯಾ ನಷ್ಟಾತ್ಮಭ್ಯ: ಕೃಪಾವಶಾತ್|
ಸದಾತ್ಮೋಜ್ಜೀವನಂ ಯೋಸೌ ದದಾತಿ ಪ್ರಾಣದ: ಸ್ಮೃತ:||”.

“ಸೂರಿಭ್ಯ: ಪರಿಚರ್ಯಾದೌ ಬಲದ: ಪ್ರಾಣದ: ಸ್ಮೃತ:||”.

“ಮರುತಾಂ ಬಲದಾನಾದ್ಧಿ ಸಮುದ್ರಮಥನೇ ಭೃಶಮ್|
ಪ್ರಾಣದಶ್ಚ ಸಮುದ್ದಿಷ್ಟ: ಕೂರ್ಮರೂಪತಯಾ ಹಿ ಸ:||”.

“ಅಣ: ಶಬ್ದ:, ‘ಅಣ ಶಬ್ದೇ’ ಪ್ರಕೃಷ್ಣಾ: ಅಣಾ: ಯಸ್ಮಿನ್ ಸ: ಪ್ರಾಣ: ಪ್ರಕೃಷ್ಟಶಬ್ದೋಪೇತ: ವೇದ:| ತಂ ದಯತೇ ಇತಿ ಪ್ರಾಣದ:||”.
******************
*||ಬೃಹತೀಸಹಸ್ರದಲ್ಲಿ*
*ಶ್ರೀವಿಷ್ಣುಸಹಸ್ರನಾಮ||*

*||ಓಂ ಪ್ರಾಣದಾಯ ನಮ: ಓಂ||*

*ಓಂ ಶುನಂ ಹುವೇಮ ಮಘವಾನಮಿಂದ್ರ ಮಸ್ಮಿನ್ ಭರೇ ನೃತಮಂ ವಾಜಸಾತೌ|| ಶೃಣ್ವಂತಮುಗ್ರಮೂತಯೇ ಸಮತ್ಸುಘ್ನಂತಂ ವೃತ್ರಾಣಿ||*

ತಾತ್ಪರ್ಯ:-

ಹರಿಯೇ, ನೀನು ನಿಜಸ್ವರೂಪಿ, ಸಂಪತ್ತಿಗಂತೂ ನಿರವಧಿಕ ಪ್ರಭು. ಯುದ್ಧಗಳಲ್ಲಿ ಭಕ್ತರನ್ನು ರಕ್ಷಿಸಲು ಮುಂದಾಗಿರುವವನು. ಭಕ್ತರು ನೀಡಿದರೆ ಆಹ್ವಾನ, ಆ ಕೂಡಲೇ ಅವರಿಗೆ ಅವನ ರಕ್ಷಣ, ಇದು ಹರಿಯ ಸಂಕಲ್ಪ. ಅವನು ಅಸುರರ ಗುಂಪನ್ನು ಕೊಲ್ಲುತ್ತಾನೆ. ನಾಯಕರಿಗೂ ನೇತಾರ. ಭಯಂಕರನಾದ ಇಂದ್ರನು ಯುದ್ಧರಂಗಕ್ಕೆ ಬಂದರೆ ವಿಜಯ ಕಟ್ಟಿಟ್ಟ ಬುತ್ತಿ. ಜೀವನರಂಗಕ್ಕೆ ಬಂದರೆ ಅನ್ನಲಾಭ, ಆಯುರ್ಲಾಭ, ಜ್ಞಾನಲಾಭ. ಹೀಗಾಗಿ ಕರೆಯೋಣ. ಕರೆದು ಎಲ್ನಲವನ್ನು ಪಡೆಯೋಣ!

*ನಾಮನಿರ್ವಚನ:-*

*”ಸಮತ್ಸು ಘ್ನಂತಂ ವೃತ್ರಾಣಿ”* ಯುದ್ಧಗಳಲ್ಲಿ ಶತ್ರುಗಳನ್ನು ಕೊಲ್ಲುವವನು *”ಶುನಂ ಹುವೇಮ”* ಆ ಸುಖಮಯವನ್ನು ಆಹ್ವಾನಿಸುತ್ತೇವೆ ಎಂಬ ಈ ಮಂತ್ರಭಾಗವು ಶತ್ರುಗಳ ಪ್ರಾಣಗಳನ್ನು ದರದರನೇ ಸೀಳುವುದರಿಂದ ಹಾಗೂ ಪ್ರಾಣಕಾರಣವಾದ ಅನ್ನಾದಿಗಳನ್ನು ಭಕ್ತರಿಗೆ ಕೊಡುವುದರಿಂದ ವಿಷ್ಣುವನ್ನು “ಪ್ರಾಣದ:” ಎನ್ನುತ್ತಿದೆ. ವೃತ್ರಾದಿಪ್ರಾಣಾನ್ ದ್ಯತೀತಿ ಖಂಡಯತೀತಿ ಪ್ರಾಣದ: ಪ್ರಾಣನ ಹೇತುತ್ವಾತ್ ಪ್ರಾಣಾ: ಅನ್ನಾದೀನಿ, ತಾನಿ ಭಕ್ತೇಭ್ಯೋ ದದಾತೀತಿ “ಪ್ರಾಣದ:” ಅತ್ರ ವರ್ಣಿತ:.
🌹🔔🕉🔔🌹
ಶ್ರೀಕೃಷ್ಣಾರ್ಪಣಮಸ್ತು.
श्रीकृष्णार्पणमस्तु.

||ಸರ್ವೇ ಜನಾ: ಸುಖಿನೋ ಭವಂತು||
||सर्वे जना: सुखिनो भवंतु||

||ನಾಹಂ ಕರ್ತಾ ಹರಿ: ಕರ್ತಾ:||
||नाहं कर्ता हरि: कर्ता:||
******************
ಸಂಗ್ರಹ/संग्रह/Collection.

ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga.
**************
****************
🌹🔔🕉🔔🌹

Related Posts