ಭಾಗ್ಯತರುವ ಸಂತಾನ :

ಪಂಚಮಾಧಿಪತಿಯು
ಅನುಕೂಲ ಸ್ಥಿತಿಯಲ್ಲಿ ತೃತೀಯ ಭಾವದಲ್ಲಿದ್ದರೆ.

ಕೆಲವು ಒಳ್ಳೆಯ ಗುಣವುಳ್ಳ
ಮಕ್ಕಳನ್ನು ಪಡೆಯುತ್ತಾರೆ.
ಸುಖಿಯು
ನಮ್ರತೆ ಉಳ್ಳವನು
ಸುಪ್ರಸಿದ್ಧನು ಪ್ರಿಯವಾಗಿ ಮಾತನಾಡುವವನು.
ಸಹೋದರರೊಂದಿಗೆ ಪುಣ್ಯ ಕಾರ್ಯಗಳನ್ನು ಮಾಡುವವನು.
ವಿದ್ವಾಂಸನು.
ಪರೋಪಕಾರಿ ಯು.
ಪರಾಕ್ರಮಿಯು ವಾದ-ವಿವಾದಗಳ ಯಶಸ್ಸಿಯನ್ನುಗಳಿಸುವವನು. ಮಾಯಾ ವಿದ್ಯೆಯಲ್ಲಿ ಪರಿಣಿತಿಯನ್ನು ಹೊಂದಿರುವವನು.
ಆಗುತ್ತಾನೆ.
ಸ್ವತಹ ಜಿಪುಣರಾಗಿದ್ದರು
ಅವನ ಸಂತಾನವು
ಚಿಕ್ಕಪ್ಪನ ಕುಟುಂಬವನ್ನು ಸಲಹು ವಂತಾಗುತ್ತದೆ.

ಬಾಧಕನಾಗಿ ತೃತಿಯ ದಲ್ಲಿದ್ದರೆ ಸಂತಾನ ನಾಶವಾಗುತ್ತದೆ.
ಸಹೋದರರೊಡನೆ
ವೈಮನಸ್ಯ ಉಂಟಾಗುತ್ತದೆ.
ಸಂತಾನದ ಕಾರಣದಿಂದ
ಕಷ್ಟಪಡುವವರಾಗುತ್ತಾರೆ.
ಸಹೋದರರಿಂದ ಅನುಕೂಲವೇ ರ್ಪಡುತ್ತದೆ.
ವೃತ್ತಿಜೀವನದಲ್ಲಿ ಅಡ್ಡಿ-ಆತಂಕಗಳು.
ಕಷ್ಟಕಾರ್ಪಣ್ಯಗಳು ಇರುತ್ತವೆ.
ಚಾಡಿಕೋರ ನಾಗಿ ಸಮಾಜಕ್ಕೆ ತೊಂದರೆ ಕೊಡುವವರು ಆಗುತ್ತಾರೆ.
ಪರರ ಮಾತುಗಳನ್ನು ಕೇಳುವವರು ಆಗುತ್ತಾರೆ.

ತಟಸ್ಥನಾಗಿ ತೃತಿಯ ಭಾವದಲ್ಲಿದ್ದರೆ ಮಿಶ್ರ ಫಲವುಂಟಾಗುತ್ತದೆ.

ಭಾಗ್ಯತರುವ ಸಂತಾನ :

9ನೇ ಮನೆಯಲ್ಲಿ ಗುರು ಮತ್ತು ಐದರ ಅಧಿಪತಿ ಯೊಂದಿಗೆ ಇದ್ದರೆ ಅಂತಹ ಮಗನು ಭಾಗ್ಯವಂತನು ಕೀರ್ತಿವಂತ ನು ಸರ್ವಶಕ್ತಿ ಶಾಲಿಯು
ಆಗಿರುತ್ತಾನೆ.
ಸಂತೋಷಕೊಡುವ ಸಂತಾನಪ್ರಾಪ್ತಿ :

ಪಂಚಮ ಸ್ಥಾನದಲ್ಲಿ ಶುಭಗ್ರಹಗಳಿದ್ದರೆ ಸಂತೋಷಕೊಡುವ ಸಂತಾನ ಪ್ರಾಪ್ತಿಯಾಗುತ್ತದೆ.
ಚಂದ್ರ ಮತ್ತು ಬುಧ ಸಾಂಸಾರಿಕ ಜೀವನದ ಮೇಲೆ ಅತೀ ಹೆಚ್ಚಿನ ಪ್ರಭಾವ ಬೀರುತ್ತವೆ ಈ ಎರಡೂ ಗ್ರಹಗಳು ಶುಕ್ರನ ಜೊತೆ ಇದ್ದರೆ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ….(ಇದು ಗ್ರಹ ಸ್ಥಿತ ರಾಶಿ ಮತ್ತು ಅನ್ಯ ಗ್ರಹ ದೃಷ್ಟಿಯ ಮೇಲೆ ಬದಲಾಗುತ್ತದೆ)

Related Posts