ಅತಿಯಾದ ಬೊಜ್ಜಿನ ಸಮಸ್ಯೆ ಅದರಲ್ಲೂ ಹೊಟ್ಟೆಯ ಬೊಜ್ಜು ನಮ್ಮ ಹಲವಾರು ಅನಾರೋಗ್ಯಕ್ಕೆ ಮೂಲ ಕಾರಣ.
ಇತ್ತೀಚೆಗೆ ಬಹುತೇಕ ಜನರು ಏಜೆಂಟ್ ಗಳ ಕಮಿಷನ್ ಆಸೆಯ ಮಾತಿಗೆ ಮರುಳಾಗಿ ತಿಂಗಳಿಗೆ ಹತ್ತಾರು ಸಾವಿರ ಕೊಟ್ಟು ಯಾವುದ್ಯಾವುದೋ shake ಗಳನ್ನು ಕುಡಿದು ಕಿಡ್ನಿ ತೊಂದರೆ ತಂದುಕೊಳ್ಳುತ್ತಿದ್ದಾರೆ. ಆದರೆ ದೇಹದ ತೂಕ ಹೆಚ್ಚಾಗಿದ್ದಾಗ ಅದನ್ನು ಹಲವು ವಿಶಿಷ್ಟವಾದ ಯೋಗಸನಗಳನ್ನು ಮಾಡುವುದರ ಮೂಲಕ ಕಡಿಮೆ ಮಾಡಿಕೊಳ್ಳುವುದು ಅತ್ಯಂತ ಸುಲಭವಾದ, ಖರ್ಚಿಲ್ಲದ ಉಪಾಯ.
ಯೋಗದ ಇನ್ನಿತರ ಉಪಯೋಗಗಳು ಎಂದರೆ, ಯೋಗ ಮಾಡುವುದರಿಂದ ದೇಹದಲ್ಲಿ ಮಾಂಸ ಖಂಡಗಳ ಸಾಂದ್ರತೆ ಹೆಚ್ಚುವುದರ ಜೊತೆಗೆ ದೇಹಕ್ಕೆ ಒಳ್ಳೆಯ ಆಕಾರ ದೊರಕುತ್ತದೆ, ಉಸಿರಾಟದ ಸಮಸ್ಯೆಗಳು ದೂರವಾಗಿ, ದೇಹಕ್ಕೆ ಶಕ್ತಿ ಮತ್ತು ಹೊಸ ರೀತಿಯ ಹುರುಪು ದೊರೆಯುತ್ತದೆ, ಅತಿಯಾದ ದೇಹದ ತೂಕ ಹತೋಟಿಗೆ ಬರುತ್ತದೆ, ಹೃದಯದ ಆರೋಗ್ಯ ಉತ್ತಮಗೊಂಡು ದೇಹದಲ್ಲಿ ರಕ್ತ ಸಂಚಾರ ಸರಾಗವಾಗುತ್ತದೆ. ಇತರ ಹಲವು ಬೊಜ್ಜು ( Obesity ) ಸಂಬಂದಿ ತೊಂದರೆಗಳು ಬಹು ಬೇಗನೆ ವಾಸಿಯಾಗುತ್ತವೆ.
ಕೆಲವು ಸುಲಭವಾದ ಯೋಗಾಭ್ಯಾಸಗಳು ನಿಮಗೆ ಉತ್ತಮ ಪ್ರತಿಫಲ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಲೇಖನದಲ್ಲಿ ಅಂತಹ 10 ಯೋಗಾಸನಗಳನ್ನು ಕೊಟ್ಟಿದ್ದೇನೆ. ಪ್ರತಿಯೊಂದು ಆಸನದಲ್ಲಿ ದಿನಕ್ಕೊಂದು ಸಲ ಪ್ರಾರಂಭದಲ್ಲಿ 10 – 15 ಸೆಕೆಂಡ್ಗಳ ಕಾಲ ಇರುವಂತೆ ನಿಧಾನವಾಗಿ ಕಲಿತುಕೊಂಡು ನಂತರ 30 – 45 ಸೆಕೆಂಡ್ ವರೆಗೆ ಹೆಚ್ಚಿಸಿಕೊಳ್ಳಿ. ವಾರದಲ್ಲಿ ನಿಮಗೇ ವ್ಯತ್ಯಾಸ ಗೊತ್ತಾಗುತ್ತದೆ.
ಯೋಗಾಭ್ಯಾಸ ಬೆಳಿಗ್ಗೆ ಸೂರ್ಯೋದಯ ಮತ್ತು ಸಂಜೆಯ ಸೂರ್ಯಾಸ್ತದ ಹೊತ್ತಿಗೆ ಮಾತ್ರ ಮಾಡಿ. ನೆಲದ ಮೇಲೆ ಜಾರದ ರಬ್ಬರ್ ಮ್ಯಾಟ್ ಹಾಸಿಕೊಳ್ಳಿ. ಒಮ್ಮೆ ಅಭ್ಯಾಸ ಆದ ನಂತರ ಎರಡೂ ಹೊತ್ತು ಅಭ್ಯಾಸ ಮಾಡಿ. ಮಂಡಿ ನೋವು ( Osteoarthritis ), ಬೆನ್ನು ನೋವು ( slip disc ), ಕುತ್ತಿಗೆ ನೋವು ( Spondylitis ) ಸಮಸ್ಯೆ ಇರುವವರು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಿ.
ಯೋಗಸನಗಳ ಬಗ್ಗೆ ಏನು ಗೊತ್ತಿಲ್ಲದವರು ದಯವಿಟ್ಟು ನಮ್ಮ ಹತ್ತಿರದ ಯೋಗ ಕ್ಲಾಸ್ಗೆ ಸೇರಿ ಕಲಿತುಕೊಳ್ಳಿ. ಅಲ್ಲಿ ಉಸಿರಾಟದ ಕ್ರಮದ ಸಹಿತ basics ಹೇಳಿಕೊಡುತ್ತಾರೆ. ಯೋಗಾಸನದಲ್ಲಿ ಆಸನಗಳನ್ನು ಮಾಡುವಾಗ ಪ್ರತೀ ಹಂತದಲ್ಲೂ ಉಸಿರಾಟದ ಕ್ರಮ ಸಹ ಅಷ್ಟೇ ಮುಖ್ಯ.