🌸🌼ಚಾಣಕ್ಯ ನೀತಿ 🌼🌸
*ನಿರ್ಧನಂ ಪುರುಷಂ ವೇಶ್ಯಾ*
*ಪ್ರಜಾಭಗ್ನಂ ನೃಪಂ ತ್ಯಜೇತ್ |*
*ಖಗೋ ವೀತಫಲಂ ವೃಕ್ಷಂ*
*ಭುಕ್ತ್ವಾ ಚಾಭ್ಯಗತೋ ಗೃಹಮ್ ||*
(ಚಾಣಕ್ಯನೀತಿ)
ಹಣವಿಲ್ಲದವನನ್ನು ವೇಶ್ಯೆಯರೂ, ಸೋತುಹೋದ ರಾಜನನ್ನು ಪ್ರಜೆಗಳೂ, ಹಣ್ಣುಗಳಿಲ್ಲದ ಮರವನ್ನು ಹಕ್ಕಿಗಳೂ, ತಿಂದುಂಡ ಬಳಿಕ ಮನೆಯನ್ನು ಆಹ್ವಾನಿತರೂ ಬಿಟ್ಟುಬಿಡುತ್ತಾರೆ.
‘ಸರ್ವಂ ಸ್ವಾರ್ಥಮಯಂ ಜಗತ್ |’ ಸಮಾಜದಲ್ಲಿ ನಡೆಯುವ ವ್ಯವಹಾರವೇ ಹೀಗೆ. ತಮಗೆ ಬೇಕಾದದ್ದು ದೊರೆತ ಮೇಲೆ ನಿಂತೇನು ಪ್ರಯೋಜನ? ‘ಕಾರ್ಯಾಂತೇ ನಿಷ್ಪ್ರಯೋಜಕಾಃ |’ ಕೆಲಸ ಕೈಗೂಡಿದ ಮೇಲೆ ನಿಷ್ಪ್ರಯೋಜಕರು.
*🌷🌺🙏 ಶುಭದಿನವಾಗಲಿ! 🙏🌺🌷*