ತೆಂಗಿನಕಾಯಿ ಮತ್ತು ವಿಶೇಷತೆ”..
ಧರ್ಮಶಾಸ್ತ್ರಗಳಲ್ಲಿ ಹೇಳಿದೆ. “ತಾಂಬೂಲದ ಜೊತೆ ತೆಂಗಿನಕಾಯಿ ಇಟ್ಟು ದಾನ ಮಾಡಿದರೆ “ಅಶ್ವಮೇಧಯಾಗದ ” ಫಲ ಬರುತ್ತದೆ..
ತೆಂಗಿನಕಾಯಿಯಲ್ಲಿ 5 ತರಹ ಇದೆ..
- ಎಳನೀರು ಕಾಯಿ..
- ಸಿಪ್ಪೆ ಸುಲಿದ ತೆಂಗಿನಕಾಯಿ ..
- ಒಣಕೊಬ್ಬರಿ ಕಾಯಿ..
- ಶ್ರೀಫಲ
- ವಿಶೇಷ ತೆಂಗಿನಕಾಯಿ ..
ಶ್ರೀಫಲ : ಇದು ಸಮುದ್ರ ದಂಡೆಯ ಮೇಲೆ ದೊರಕುವ ಅಪರೂಪದ “ತೆಂಗಿನಕಾಯಿ ಆಕಾರದ ಚಿಕ್ಕ ಫಲ. ಇದನ್ನು ಮನೆಯಲ್ಲಿ ಅಥವಾ ವ್ಯಾಪಾರ ಸ್ಥಳದಲ್ಲಿ ಇಟ್ಟು ಪೂಜಿಸಿದರೆ, ಧನಕನಕ ಅಭಿವೃದ್ಧಿಯಾಗುತ್ತದೆ.., ಬಡತನ ನಿವಾರಣೆಯಾಗಿ, ಶ್ರೀಮಂತಿಕೆ ಪ್ರಾಪ್ತಿಯಾಗುತ್ತದೆ…
ವಿಶೇಷ ತೆಂಗಿನಕಾಯಿಗಳು ಅಂದರೆ ಗರ್ಭ ತೆಂಗಿನಕಾಯಿ, ಪೂರ್ಣಫಲ.. ಇತ್ಯಾದಿ. ಗರ್ಭ ತೆಂಗಿನಕಾಯಿ ಅಂದರೆ, ತೆಂಗಿನಕಾಯಿ ಒಳಗೆ ಮತ್ತೊಂದು ಚಿಕ್ಕ ತೆಂಗಿನಕಾಯಿ ಇರೋದಕ್ಕೆ ಗರ್ಭತೆಂಗಿನಕಾಯಿ ಅಂತಾರೆ..
- ಎಳನೀರು ಕಾಯಿಯನ್ನು ಪೂಜಿಸಿದರೆ ದೈವಬಲ ಜಾಸ್ತಿಯಾಗುತ್ತದೆ ..
- ಎಳನೀರು ಕಾಯಿಯನ್ನು 3 ದಿನ, 8, 12.. ದಿನ ಪೂಜಿಸುತ್ತಾ ಬಂದರೆ ಮನೆಯ ದಾರಿದ್ರ್ಯ ಮತ್ತು ಬಡತನ ನಿವಾರಣೆಯಾಗುತ್ತದೆ ..
- ಎಳನೀರು ಕಾಯಿಯನ್ನು ಕೊಟ್ಟು ಈಶ್ವರನಿಗೆ ಅಭಿಷೇಕ ಮಾಡಿಸಿದರೆ, kidney problems solve aaguttade..
- Throat infection ಇರುವವರು ಯಾರಿಗಾದರೂ ಎಳನೀರನ್ನು ಕುಡಿಯಲು ಕೊಟ್ಟರೆ, ಬಹಳ ಬೇಗ ವಾಸಿಯಾಗುತ್ತದೆ ..
- ದೇಹದಲ್ಲಿ fluid ಆಗಾಗ ಕಡಿಮೆ ಆಗುತ್ತಿದ್ದರೆ , ಅಂಥವರು ದುರ್ಗಾದೇವಿಗೆ , ಎಳನೀರಿನಿಂದ ಅಭಿಷೇಕ ಮಾಡಿಸುತ್ತಾ ಬಂದರೆ, ದೇಹದಲ್ಲಿ fluid ಜಾಸ್ತಿಯಾಗುತ್ತದೆ ..
- ಯಾರಿಗಾದರೂ ಬಿಕ್ಕಳಿಗೆ ಆಗಾಗ ಬರುತ್ತಿದ್ದರೆ, ಈಶ್ವರ ದೇವರಿಗೆ ಎಳನೀರಿನಿಂದ ಅಭಿಷೇಕ ಮಾಡಿಸಿದರೆ ಬಿಕ್ಕಳಿಕೆ ಬರುವುದಿಲ್ಲ..
- ಎಳನೀರು ಕಾಯಿಯನ್ನು ಬ್ರಾಹ್ಮಣರಿಗೆ, ಗುರುಗಳಿಗೆ, ಆಚಾರ್ಯರಿಗೆ , ಯತಿಗಳಿಗೆ .. ಕೊಟ್ಟು ನಮಸ್ಕಾರ ಮಾಡಿದರೆ, ನಿಮ್ಮ ಸಕಲ ಕಾರ್ಯಗಳೂ ಬಹಳ ಬೇಗ ಯಶಸ್ವಿಯಾಗಿ, ಸಕಲ ಕಷ್ಟಗಳಿಂದಲೂ ಬಿಡುಗಡೆ ಹೊಂದಿ, ಕೀರ್ತಿವಂತರಾಗಿ ಜಯಶೀಲರಾಗುತ್ತೀರಿ…
- ಬಿಸಿಲಿನಿಂದ ಬಂದ ಅತಿಥಿಗಳಿಗೆ ಕುಡಿಯಲು ಎಳನೀರು ಕೊಟ್ಟರೆ, ಆ ಮನೆಯ ಸಕಲ ವಾಸ್ತು ದೋಷಗಳೂ ನಿವಾರಣೆಯಾಗುತ್ತದೆ …