ಹಿಂದೂಗಳಿಗೆ ಕನಿಷ್ಠ ಇದರ ಜ್ಞಾನ ಇರಬೇಕು ಅದು ನಮ್ಮ ಇಚ್ಛೆ.ಅದು ನಿಮಗೆ ಇದೆ ಆದರೂ ನನ್ನ ಆಸೆ ದಯವಿಟ್ಟು ಮತ್ತೊಮ್ಮೆ ಓದಿ 🙏
ಪ್ರಶ್ನೆ:
ವೇದವೆಂದರೇನು ?
ಉತ್ತರ:
*ವೇದವೆಂದರೆ ಜ್ಞಾನ.*
ಪ್ರಶ್ನೆ:
ವೇದಜ್ಞಾನವನ್ನು ನೀಡಿದವರು ಯಾರು ?
ಉತ್ತರ:
*ಸಾಕ್ಷಾತ್ ಭಗವಂತ*
ಪ್ರಶ್ನೆ:
ಭಗವಂತ ವೇದಜ್ಞಾನವನ್ನು ಎಂದು ನೀಡಿದ ?
ಉತ್ತರ:
*ಸೃಷ್ಟಿಯ ಆರಂಭದಲ್ಲೇ ಭಗವಂತ ವೇದಜ್ಞಾನವನ್ನು ನೀಡಿದ.*
ಪ್ರಶ್ನೆ:
ಭಗವಂತ ವೇದಜ್ಞಾನವನ್ನೇಕೆ ನೀಡಿದ ?
ಉತ್ತರ:
*ಮಾನವಕುಲದ ಒಳಿತಿಗಾಗಿ ನೀಡಿದ.*
ಪ್ರಶ್ನೆ:
ವೇದಗಳೆಷ್ಟು?
ಉತ್ತರ:
*ನಾಲ್ಕು*
*ಋಗ್ವೇದ*🙏
*ಯಜುರ್ವೇದ*🙏
*ಸಾಮವೇದ*🙏
*ಅಥರ್ವವೇದ.*🙏
ಪ್ರಶ್ನೆ:
ವೇದಗಳ ಜ್ಞಾನವನ್ನು ಭಗವಂತ ಯಾರಿಗೆ ನೀಡಿದ ?
ಉತ್ತರ:
*ನಾಲ್ಕು ಋಷಿಗಳಿಗೆ.*
ಪ್ರಶ್ನೆ:
ವೇದಗಳ ಜ್ಞಾನವನ್ನು ಭಗವಂತ ಋಷಿಗಳಿಗೆ ಹೇಗೆ ನೀಡಿದ ?
ಉತ್ತರ:
*ಯೋಗಾವಸ್ಥೆಯ ಸಮಾಧಿ ಸ್ಥಿತಿಯಲ್ಲಿ.*
ಪ್ರಶ್ನೆ:
ವೇದಗಳಲ್ಲಿ ಎಂತಹ ಜ್ಞಾನವಿದೆ ?
ಉತ್ತರ:
*ಎಲ್ಲ ಸತ್ಯ ವಿದ್ಯೆಗಳು,ಜ್ಞಾನ ಹಾಗೂ ವಿಜ್ಞಾನ*
ಪ್ರಶ್ನೆ:
ವೇದಗಳ ಜ್ಞಾನವನ್ನು ಮೊದಲು ಪಡೆದವರು ಯಾರಾರು ?
ಉತ್ತರ:
*ಅಗ್ನಿ-ಋಗ್ವೇದ*🙏
*ವಾಯು-ಯಜುರ್ವೇದ*🙏
*ಆದಿತ್ಯ-ಸಾಮವೇದ*🙏
*ಅಂಗಿರಾ-ಅಥರ್ವವೇದ*🙏
ಪ್ರಶ್ನೆ:
ಋಗ್ವೇದದ ಪ್ರಮುಖ ವಿಷಯ ಯಾವುದು ?
ಉತ್ತರ:
*ಜ್ಞಾನ*
ಪ್ರಶ್ನೆ:
ಯಜುರ್ವೇದದ ಪ್ರಮುಖ ವಿಷಯ ಯಾವುದು ?
ಉತ್ತರ:
*ಕರ್ಮ*🙏
ಪ್ರಶ್ನೆ:
ಸಾಮವೇದದ ಪ್ರಮುಖ ವಿಷಯ ಯಾವುದು ?
ಉತ್ತರ:
*ಉಪಾಸನೆ*🙏
ಪ್ರಶ್ನೆ:
ಅಥರ್ವವೇದದ ಪ್ರಮುಖ ವಿಷಯ ಯಾವುದು ?
ಉತ್ತರ:
*ವಿಜ್ಞಾನ*🙏
ಪ್ರಶ್ನೆ:
ವೇದವನ್ನು ಓದುವ ಅಧಿಕಾರ ಯಾರಿಗಿದೆ ?
ಉತ್ತರ:
*ಉತ್ತಮ ಸಂಸ್ಕಾರ ಹಾಗೂ ಕಾಯಿಕ,ವಾಚಿಕ,ಮಾನಸಿಕ ಪರಿಶುದ್ಧಿಯಿರುವವರಿಗಷ್ಟೇ*
ಪ್ರಶ್ನೆ:
ವೇದಗಳಲ್ಲಿ ಮೂರ್ತಿಪೂಜೆಯ ವಿಧಾನವಿದೆಯೇ ?
ಉತ್ತರ:
*ಖಂಡಿತವಾಗಲೂ ಇಲ್ಲ.*
ಪ್ರಶ್ನೆ:
ವೇದಗಳಲ್ಲಿ ಅವತಾರವಾದದ ಪ್ರಮಾಣವಿದೆಯೇ ?
ಉತ್ತರ:
*ಇಲ್ಲ*
ಪ್ರಶ್ನೆ:
ವೇದಗಳಲ್ಲಿ ಜಾತಿಪದ್ಧತಿಯನ್ನು ಹೇಳಲಾಗಿದೆಯೇ ?
ಉತ್ತರ:
*ಎಲ್ಲೂ ಇಲ್ಲ.*
ಪ್ರಶ್ನೆ:
ವೇದಗಳಲ್ಲಿ ಪ್ರಾಣಿಹತ್ಯೆಯನ್ನು ಸಮರ್ಥಿಸಲಾಗಿದೆಯೇ ?
ಉತ್ತರ:
*ಖಂಡಿತಾ ಇಲ್ಲ.*
ಪ್ರಶ್ನೆ:
ಅತಿದೊಡ್ಡ ವೇದ ಯಾವುದು ?
ಉತ್ತರ:
*ಋಗ್ವೇದ*
ಪ್ರಶ್ನೆ:
ವೇದಗಳ ಇತಿಹಾಸವೆಷ್ಟಿರಬಹುದು ?
ಉತ್ತರ:
*ಸುಮಾರು ಒಂದು ಅರಬ್ ೯೬ ಕೋಟಿ ವರ್ಷಕ್ಕಿಂತಲೂ ಮುಂಚೆ.*
ಪ್ರಶ್ನೆ:
ವೇದಾರ್ಥವನ್ನು ಅರಿಯಲು ದರ್ಶನಶಾಸ್ತ್ರಗಳ ಅವಶ್ಯಯಕತೆಯಿದೆಯೇ ?
ಉತ್ತರ:
*ಖಂಡಿತಾ ಇದೆ.*
ಪ್ರಶ್ನೆ:
ದರ್ಶನ ಶಾಸ್ತ್ರಗಳೆಷ್ಟಿವೆ ? ಅವುಗಳ ಪ್ರವರ್ತಕರು ಯಾರು ?
ಉತ್ತರ:
*ಷಟ್ (ಆರು) ದರ್ಶನಗಳಿವೆ.*
*ನ್ಯಾಯದರ್ಶನ-ಗೌತಮ ಮುನಿಗಳು*🙏
*ವೈಶೇಷಿಕ ದರ್ಶನ- ಕಣಾದ ಮುನಿಗಳು*🙏
*ಯೋಗದರ್ಶನ-ಪತಂಜಲಿ ಮುನಿಗಳು*🙏
*ಮೀಮಾಂಸಾದರ್ಶನ- ಜೈಮಿನಿ ಮುನಿಗಳು*🙏
*ಸಾಂಖ್ಯದರ್ಶನ*ಕಪಿಲ ಮುನಿಗಳು*
*ವೇದಾಂತದರ್ಶನ-ವ್ಯಾಸ ಮುನಿಗಳು*🙏
ಪ್ರಶ್ನೆ:
ದರ್ಶನಗಳಲ್ಲಿರುವ ವಿಷಯಗಳೇನು ?
ಉತ್ತರ: *ಆತ್ಮಾ, ಪರಮಾತ್ಮಾ, ಪ್ರಕೃತಿ, ಜಗತ್ತಿನ ಉತ್ಪತ್ತಿ, ಮೋಕ್ಷ, ಭೌತಿಕ ಹಾಗೂ ಆಧ್ಯಾತ್ಮಿಕ ಜ್ಞಾನ ಮುಂತಾದವು.*🙏
ಪ್ರಶ್ನೆ:
ಪ್ರಾಮಾಣಿಕ ಉಪನಿಷತ್ತುಗಳೆಷ್ಟು ?
ಉತ್ತರ:
*ಕೇವಲ ಹನ್ನೊಂದು.*
ಪ್ರಶ್ನೆ:
ಉಪನಿಷತ್ತಿನ ಹೆಸರುಗಳು ?

ಉತ್ತರ:
*ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ಐತರೇಯ, ತೈತ್ತರೀಯ, ಛಾಂದೋಗ್ಯ, ಬೃಹದಾರಣ್ಯಕ ಹಾಗೂ ಶ್ವೇತಾಶ್ವತರ*🙏
ಪ್ರಶ್ನೆ:
ಉಪನಿಷತ್ತುಗಳಲ್ಲಿರುವ ವಿಷಯಗಳ ಆಧಾರ ಯಾವುದು ?
ಉತ್ತರ:
*ವೇದಗಳು*
ಪ್ರಶ್ನೆ:
ವೇದಾಂಗಗಳೆಷ್ಟು ? ಅವು ಯಾವವು ?

ಉತ್ತರ:
*ಆರು*
ಅವು:
*ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ ಹಾಗೂ ಕಲ್ಪ*🙏
ಪ್ರಶ್ನೆ:
ವೇದಾಂಗಗಳ ಪ್ರಯೋಜನವೇನು ?
ಉತ್ತರ:
*ವೇದಾರ್ಥವನ್ನು ತಿಳಿಯಲು.*
🌕ಲೋಕಾಃ ಸಮಸ್ತಾಃ ಸುಖಿನೋ ಭವಂತು.

✋🤚 ನೀವು ಓದಿರುವುದಕ್ಕೆ ವಂದನೆಗಳ
ಉಚಿತ ಕಾನೂನು ಸಲಹೆಗಾರರು .

Related Posts