ದ್ರೌಪದಿ ಮುರ್ಮು ನಮ್ಮ ಭಾರತದ ಮುಂದಿನ ರಾಷ್ಟ್ರಪತಿ.

ಸಂಘರ್ಷದ ಮೂಲಕ ಬದುಕು ಕಟ್ಟಿಕೊಂಡು ಎಕಾಂಗಿಯಾಗಿ ಆಲದ ಮರದ ರೀತಿ ರಾಜಕೀಯದಲ್ಲಿ ಬೆಳೆದು ನಿಂತ ಫೈರ್ ಬ್ರಾಂಡ್ ವನವಾಸಿ ಮಹಿಳೆ ದ್ರೌಪದಿ ಮುರ್ಮು ನಮ್ಮ ಭಾರತದ ಮುಂದಿನ ರಾಷ್ಟ್ರಪತಿ.

ಬಿಜೆಪಿ ಮುಂದಾಳತ್ವದ NDA ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಸಾಮಾನ್ಯ ಹೆಣ್ಣು ಮಗಳಲ್ಲ.ಟ್ರೈಬಲ್ ಗಳ ನಡುವೆ ಅಸಾಮಾನ್ಯಳಾಗಿ ಬೆಳೆದ ಫೈರ್ ಬ್ರಾಂಡ್ ನಾಯಕಿ.ದ್ರೌಪದಿ ಮುರ್ಮು ಅಂದಿನ ಕಾಲಕ್ಕೆ ರಮಾದೇವಿ ಕಾಲೇಜಿನಲ್ಲಿ ಗ್ರಾಜುಯೇಶನ್ ಮುಗಿಸಿ 1979 ರಿಂದ 1983 ರ ವರೆಗೆ ಒಡಿಸ್ಸಾ ಸರ್ಕಾರದಲ್ಲಿ ನೀರಾವರಿ ಹಾಗೂ ವಿದ್ಯುತ್ ಇಲಾಖೆಯಲ್ಲಿ ಜ್ಯೂನಿಯರ್ ಆಗಿ ಕೆಲಸ ಮಾಡಿದವರು.ಕಾಡಿನಲ್ಲಿ ಬೆಳೆದು ಸಂಘರ್ಷದ ಮೂಲಕ ಬದುಕು ಕಟ್ಟಿಕೊಂಡ ದ್ರೌಪದಿ ಮುರ್ಮು ಇಲ್ಲಿಯ ತಕನ ಬಂದು ಮುಟ್ಟಿದ್ದೆ ಒಂದು ದೊಡ್ಡ ಸಾಧನೆ.ಆದರೆ ಸಿಕ್ಕ ಕೆಲಸದಿಂದ ತಾನು ನೆಮ್ಮದಿಯಾಗಿ ಬದುಕಬಹುದೆ ಹೊರತು ತನ್ನ ಸಮುದಾಯವಲ್ಲ ಎನ್ನುವ ಸತ್ಯವನ್ನರಿತು ತನ್ನ ಸಮುದಾಯದ ಹೆಣ್ಣು ಮಕ್ಕಳ ಬದುಕು ಕಟ್ಟುವ ಚಲದಿಂದ,ವನವಾಸಿಗಳಿಗೆ ನಾಯಕತ್ವ ಕೊಡುವ ಹಠದಿಂದ ಆಕೆ ಆಯ್ದುಕೊಂಡಿದ್ದು ರಾಜಕೀಯ ಕ್ಷೇತ್ರ.ಸೇವಾ ಆಕಾಂಕ್ಷಿಯಾಗಿ ಅರಬಿಂದೋ ಇಂಟರ್ಗಲ್ ಎಜುಕೇಶನ್ ಸೆಂಟರ್ ನಲ್ಲಿ ಸಹಾಯಕಿ ಪ್ರೋಫೇಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವಾಗಲೆ ಆಕೆ 1997 ರ ರಾಯರಂಗ್ ಪುರದಲ್ಲಿ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದು NAC ಯ ಉಪಾಧ್ಯಕ್ಷರಾಗಿ ಟ್ರೈಬಲ್ ಜಗತ್ತಿನ ನಾಯಕಿಯಾಗಿ ಹೊರ ಹೊಮ್ಮಿದ್ದರು.

ಬೂತ್ ಮಟ್ಟದ ಕಾರ್ಯಕರ್ತೆಯಾಗಿ ತನ್ನ ಸ್ವಂತ ಪರಿಶ್ರಮದಿಂದ ಬೆಳೆದು ಭಾರತೀಯ ಜನತಾ ಪಾರ್ಟಿಯ ರಾಯ್ ರಂಗ್ ಕ್ಷೇತ್ರದಿಂದ 2000 ರಿಂದ ಎರಡು ಬಾರಿ ಶಾಸಕಿಯಾಗಿ,ಒಡಿಸ್ಸಾ ಸರ್ಕಾರದಲ್ಲಿ ಎರಡು ಬಾರಿ ಹಲವು ಖಾತೆಗಳ ಮಂತ್ರಿಯಾಗಿ, ಒಡಿಸ್ಸಾ ರಾಜ್ಯದ ಬೆಸ್ಟ್ ಶಾಸಕಿಯಾಗಿ ನಿಲಕಂಠ ಪ್ರಶಸ್ತಿ ಪಡೆದ ಗಟ್ಟಿಗಿತ್ತಿ ಹೆಣ್ಣು ಮಗಳು ದ್ರೌಪದಿ ಮುರ್ಮು.ಭಾರತೀಯ ಜನತಾ ಪಾರ್ಟಿಯ ST ಮೊರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ 2002 -2006 ರ ವರೆಗೆ ಹಾಗೂ 2006-2009 ಒಡಿಸ್ಸಾದ ST ಮೋರ್ಚಾ ಅಧ್ಯಕ್ಷರಾಗಿ, 2013-2015 ST ಮೊರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಒಡಿಸ್ಸಾದಾದ್ಯದಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಿ,ಜರ್ಖಾಂಡ್ ರಾಜ್ಯದ ಮೊದಲ ಮಹಿಳಾ ಗವರ್ನರ್ ಆಗಿ ಸಾಮಾಜಿಕವಾಗಿ,ರಾಜಕೀಯವಾಗಿ ಅತ್ಯಂತ ಶ್ರೇಷ್ಠತೆಯ ಎತ್ತರಕ್ಕೆ ಎರಿರುವ ದ್ರೌಪದಿ ಮುರ್ಮು ಸ್ವಂತ ಶಕ್ತಿಯ ಆಧಾರದ ಮೇಲೆ ಭಾರತದ ಮುಂದಿನ ರಾಷ್ಟ್ರಪತಿಯಾಗಲಿದ್ದಾರೆ.

ಸಾಮಾಜಿಕ ನ್ಯಾಯದ ಭರವಸೆಯನ್ನು ಮತ್ತಷ್ಟು ಗಟ್ಟಿಗೊಳಿಸಿ,ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ಪೂರ್ಣಗೊಳಿಸುತ್ತ,ಕಟ್ಟ ಕಡೆಯ ವ್ಯಕ್ತಿಯು ದೇಶದ ಸರ್ವ ಶ್ರೇಷ್ಠ ಹುದ್ದೆಯನ್ನು ಅಲಂಕರಿಸಬಹುದು ಎಂದು ಜಗತ್ತಿಗೆ ತೋರಿಸುವ ಮೂಲಕ ಭಾರತ ಎಂದಿಗೂ ಒಂದು ಸರ್ವ ಶ್ರೇಷ್ಠ ರಾಷ್ಟ್ರ ಎನ್ನುವುದನ್ನು ಸಾಬೀತು ಪಡಿಸಿ, ವನವಾಸಿ ಹೆಣ್ಣುಮಗಳೊಬ್ಬಳನ್ನು ರಾಷ್ಟ್ರಪತಿ ಮಾಡುತ್ತಿರುವ ಭಾರತೀಯ ಜನತಾ ಪಾರ್ಟಿಯ ನಾಯಕತ್ವಕ್ಕೆ ನಮನಗಳು….

Related Posts