ಅರವತ್ತು ವರ್ಷ ದಾಟಿದವರಿಗೆ ಸದ್ಗುರು ಜಗ್ಗಿ ವಾಸುದೇವ್ ರವರು ನೀಡಿದ ಸಲಹೆಗಳು … 👇👇👇
ಇನ್ನು ಹೆಚ್ಚು ವರ್ಷ ನಾವು ಬದುಕದೇ ಇರುವುದರಿಂದ, ನಾವು ಎಲ್ಲವನ್ನೂ ನಮ್ಮ ಜೊತೆ ಹೊತ್ತುಕೊಂಡು ಹೋಗಲಾಗದೇ ಇರುವುದರಿಂದ ನಾವು ಬಹಳ ಉಳಿತಾಯ ಮಾಡಬೇಕಿಲ್ಲ.
ಖರ್ಚು ಮಾಡುವ ಸಂಗತಿಗಳಿಗೆ ಹಣ ಖರ್ಚು ಮಾಡಿ. ಆನಂದಿಸಬೇಕಾದುದನ್ನು ಆನಂದಿಸಿ. ಏನು ದಾನ ಮಾಡಲು ಸಾಧ್ಯವೋ ಅದನ್ನು ದಾನ ಮಾಡಿ.
ನಾವು ಹೋದ ನಂತರ ಏನಾದೀತು ಎಂಬ ಚಿಂತೆ ಇಟ್ಟುಕೊಳ್ಳಬೇಡಿ. ಏಕೆಂದರೆ ನಾವು ಮಣ್ಣಿಗೆ ಮರಳಿದಾಗ ನಮಗೆ ಹೊಗಳಿಕೆ, ಟೀಕೆ
ಎರಡೂ ಅಂಟುವುದಿಲ್ಲ. ಪ್ರಾಪಂಚಿಕ ಜೀವನ ಮತ್ತು ನೀವು ಕಷ್ಟಪಟ್ಟು ಗಳಿಸಿದ ಸಂಪತ್ತು ಎರಡನ್ನೂ ಆನಂದಿಸುವ ಸಮಯ ಮುಗಿದು ಹೋಗಿರುತ್ತದೆ.
ನಿಮ್ಮ ಮಕ್ಕಳ ಬಗ್ಗೆ ವಿಪರೀತ ಚಿಂತಿಸಬೇಡಿ. ಅವರಿಗೆ ಅವರದೇ ಆದ ನಿಯತಿ ಇರುತ್ತದೆ. ಅವರ ಹಾದಿಯನ್ನು ಅವರು ಕಂಡುಕೊಳ್ಳುತ್ತಾರೆ. ಅವರಿಗಾಗಿ ಲಕ್ಷ್ಯ ತೋರಿ,ಅವರನ್ನು ಪ್ರೀತಿಸಿ, ಅವರಿಗೆ ಕಾಣಿಕೆಗಳನ್ನು ನೀಡಿ. ನಿಮಗೆ ಸಾಧ್ಯ ಆಗುವಾಗ ನಿಮ್ಮ (ಉಳಿದುಕೊಂಡಿರುವ) ಹಣದಲ್ಲಿ ಆನಂದ ಪಡಿ. ಜೀವನ ತೊಟ್ಟಿಲಿನಿಂದ ಸ್ಮಶಾನದವರೆಗೆ ಕೇವಲ ಕೆಲಸ ಮಾಡುವುದಕ್ಕಿಂತ ಹೆಚ್ಚಿನದು.
ಅರವತ್ತು ವರ್ಷದವರೇ… ನಿಮ್ಮ ಆರೋಗ್ಯಕ್ಕೆ ನಿಮ್ಮ ಹಣ ಸಂಪಾದನೆ ಸಮಾನವಲ್ಲ. ಹೆಚ್ಚಿನ ಕೆಲಸ ಮಾಡಿ ಬೇಗನೆ ಮರಣದತ್ತ ಧಾವಿಸದಿರಿ. ಏಕೆಂದರೆ ನಿಮ್ಮ ಹಣಕ್ಕೆ ನಿಮ್ಮ ಆರೋಗ್ಯವನ್ನು ಕೊಳ್ಳುವ ಶಕ್ತಿ ಇಲ್ಲದಿರಬಹುದು.
ಹಣ ಸಂಪಾದನೆಯನ್ನು ಯಾವಾಗ ನಿಲ್ಲಿಸಬೇಕು… ಎಷ್ಟು ಹಣ ಸಾಕು ಎನ್ನುವ ಅವಗಾಹನೆ ಇರಲಿ.
ಸಾವಿರಾರು ಎಕರೆ ಫಲವತ್ತಾದ ಜಮೀನು ಇದ್ದರೂ ನೀವು ಮುಕ್ಕಾಲು ಕಿಲೋ (ಅಕ್ಕಿ) ಮಾತ್ರ ಸೇವಿಸಬಲ್ಲಿರಿ. ಸಾವಿರ ಮಹಲುಗಳಿದ್ದರೂ ರಾತ್ರಿ ವಿಶ್ರಾಂತಿ ಪಡೆಯಲು ನಿಮಗೆ ಎಂಟು ಚದರ ಸ್ಥಳ ಸಾಕು.
ಆದ್ದರಿಂದ ಸಾಕಷ್ಟು ಆಹಾರ ಮತ್ತು ಸಾಕಷ್ಟು ಹಣ ಇದ್ದರೆ ಅದು ಸಾಕು. ನೀವು ಸುಖದಿಂದ ಜೀವಿಸಬೇಕು. ಪ್ರತಿ ಕುಟುಂಬಕ್ಕೂ ಅದರದೇ ಆದ ಸಮಸ್ಯೆಗಳಿರುತ್ತವೆ.
ಸಮಾಜದಲ್ಲಿನ ಪ್ರತಿಷ್ಠೆ ಮತ್ತು ಕೀರ್ತಿ ಇವುಗಳ ಬಗ್ಗೆ ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಯಾರ ಮಕ್ಕಳು ಚೆನ್ನಾಗಿದ್ದಾರೆಂದು ಚಿಂತಿಸುವುದು ಇತ್ಯಾದಿ ಬೇಕಿಲ್ಲ. ನಿಮ್ಮ ಸುಖ, ಆರೋಗ್ಯ, ಆನಂದ, ಜೀವನದ ಗುಣಮಟ್ಟ ಮತ್ತು ಆಯಸ್ಸು ಇವುಗಳ ಬಗ್ಗೆ ಇತರರಿಗೆ ಸವಾಲು ಹಾಕಿ.
ನೀವು ಮಾರ್ಪಡಿಸಲಾಗದ ವಿಷಯಗಳ ಬಗ್ಗೆ ಚಿಂತೆ ಮಾಡಬೇಡಿ. ಏಕೆಂದರೆ ಅದು ನಿಮಗೆ ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ. ನಿಮ್ಮ ಆರೋಗ್ಯ ಹಾಳಾಗಬಹುದು.
ನಿಮ್ಮ ಯೋಗಕ್ಷೇಮವನ್ನು ನೀವೇ ಸೃಷ್ಟಿಸಿಕೊಳ್ಳಬೇಕು. ಸುಖವಿರುವ ನಿಮ್ಮದೇ ಸ್ಥಳವನ್ನು ಹುಡುಕಿಕೊಳ್ಳಬೇಕು. ನಿಮ್ಮ ಮೂಡ್ ಮತ್ತು ಆರೋಗ್ಯ ಚೆನ್ನಾಗಿರುವವರೆಗೂ ಸಂತೋಷದ ಸಂಗತಿಗಳ ಬಗ್ಗೆ ಆಲೋಚಿಸಿ,ದಿನವೂ ಖುಷಿ ಸಂಗತಿಗಳನ್ನು ಮಾಡಿ. ಹಾಗೆ ಮಾಡುವುದನ್ನು ಆನಂದಿಸಿ. ಆಗ ನಿಮ್ಮ ಸಮಯ ದಿನವೂ ಆನಂದದಿಂದ ಕಳೆಯುತ್ತದೆ.
ಒಂದು ದಿನ ಸಂತೋಷ ಇಲ್ಲದಿದ್ದರೆ ಆ ದಿನ ನಷ್ಟ. ಸಂತೋಷದಿಂದ ಕಳೆದ ದಿನ… ಆ ದಿನ ಲಾಭ.
ಒಳ್ಳೆಯ ಚೈತನ್ಯ ಇದ್ದರೆ ರೋಗ ಗುಣವಾಗುತ್ತದೆ. ಸಂತಸದ ಚೈತನ್ಯ ಇದ್ದರೆ ರೋಗ ವೇಗವಾಗಿ ಗುಣವಾಗುತ್ತದೆ.
ಬಲು ಹೆಚ್ಚಿನ ಆನಂದದ ಚೈತನ್ಯ ಇದ್ದರೆ ರೋಗ ಬರುವುದೇ ಇಲ್ಲ.
ಒಳ್ಳೆಯ ಮೂಡ್, ಒಂದಿಷ್ಟು ಕಸರತ್ತು, ಸೂರ್ಯನ ಬೆಳಕು, ಆಹಾರದಲ್ಲಿ ವೈವಿಧ್ಯ, ವಿಟಮಿನ್ ಮತ್ತು ಮಿನರಲ್ ಸೇವನೆ… ಇನ್ನೂ 20-30 ವರ್ಷಗಳ ಆರೋಗ್ಯಕರ ಜೀವನ ನಿಮ್ಮದಾಗುವ ಭರವಸೆ.
ಎಲ್ಲಕ್ಕಿಂತ ಮುಖ್ಯವಾಗಿ
ನಿಮ್ಮ ಸುತ್ತಲಿನ ಒಳ್ಳೆಯತನವನ್ನು ಅನುಭವಿಸಿ, ಆನಂದಿಸಿ. ನಿಮ್ಮ ಜೀವನ ಸಂಗಾತಿಯನ್ನು ಇಷ್ಟ ಪಡಿ. ಅವರೇ ನಿಮ್ಮನ್ನು ಯೌವನದಲ್ಲಿ ಇರಿಸುವುದು. ನೀವು ಎಲ್ಲರಿಗೂ ಬೇಕು ಎನಿಸುವಂತೆ ಮಾಡುವುದು. ಅವರಿಲ್ಲದೇ ನೀವು ಕಳೆದುಹೋಗುತ್ತೀರಿ.
ಮುಂದಿನ ಸುಖಮಯ ವರ್ಷಗಳಿಗೆ, ನಿಮಗೆ (60 ಆದವರಿಗೆ ಮತ್ತು ಇನ್ನೇನು 60 ಮುಟ್ಟುತ್ತಿರುವವರಿಗೆ) ಶುಭಾಶಯಗಳು.
……..✍️ ಸಂಗ್ರಹ
(ಆಂಗ್ಲ ಪತ್ರಿಕೆಯಿಂದ )