ಜೀವನದ ಸತ್ಯದರ್ಶನ …

ಹುಟ್ಟು: ನಾವು ಕೇಳದೇ ಸಿಗುವ ವರ !
ಸಾವು: ನಾವು ಹೇಳದೇ ಹೋಗುವ ಜಾಗ !
ಬಾಲ್ಯ: ಮೈಮರೆತು ಆಡುವ ಸ್ವರ್ಗ.
ಯೌವನ: ಅರಿವಿದ್ದರೂ ಅರಿಯದ ಮಾಯೆ!
ಮುಪ್ಪು: ಕಡೆಯ ಆಟ. !
ಸ್ನೇಹ: ಶಾಶ್ವತವಾಗಿ ಉಳಿಯೋ ಬಂಧ.!
ಪ್ರೀತಿ: ಪ್ರಾಣಕ್ಕೆ ಹಿತವಾದ ಅನುಬಂಧ.
ಪ್ರೇಮ: ತ್ಯಾಗಕ್ಕೆಸ್ಪೂರ್ತಿ.
ಕರುಣೆ: ಕಾಣುವ ದೇವರು.
ಮಮತೆ: ಕರುಳಿನ ಬಳ್ಳಿ.
ದ್ವೇಷ: ಉರಿಯುವ ಕೊಳ್ಳಿ.
ತ್ಯಾಗ: ದೀಪ.
ಉಸಿರು: ಮೌನದಲೆ ಜೊತೆಗಿರುವ ಗೆಳೆಯ.
ಹ್ರದಯ: ಎಚ್ಚರಿಕೆ ಗಂಟೆ.
ಕಣ್ಣು: ಸೃಷ್ಟಿಯ ಕನ್ನಡಿ.
ಮಾತು: ಬೇಸರ ನೀಗುವ ವಿದ್ಯೆ.
ಮೌನ: ಭಾಷೆಗೂ ನಿಲುಕದ ಭಾವ.
ಕಣ್ಣೀರು: ಅಸ್ತ್ರ.
ನೋವು: ಅಸಹಾಯಕತೆ!
ನಗು: ಔಷಧಿ.
ಹಣ: ಅವಶ್ಯಕತೆ.!
ಗುಣ: ಆಸ್ತಿ.
ಕಲೆ: ಜ್ಞಾನ.
ಧರ್ಮ: ಬುನಾದಿ.
ಕರ್ಮ: ಕಾಣದಾ ಕೈ ಆಟ.
ಕಾಯಕ: ದೇಹ, ಮನಸಿಗೆ ಮಿತ್ರ.
ಸಂಸ್ಕೃತಿ: ನೆಲೆ
ಸಾಧನೆ: ಜೀವಕ್ಕೆ ಜೀವನಕ್ಕೆ ಬೆಲೆ….
ತಾರುಣ್ಯ, ಮುಪ್ಪು; ತಾನಾಗಿ ಬರುವುದು
ಪಾಪ,ಪುಣ್ಯ; ಜೊತೆಯಲ್ಲೇ ಬರುವುದು.
ಆಸೆ ,ದುಃಖ ತಡೆಯಿಲ್ಲದೇ ಬರುವುದು.
ಹಸಿವು,ದಾಹ ಅನಿವಾರ್ಯವಾಗಿ ಬರುವುದು.
ದ್ವೇಷ, ಸಿಟ್ಟು ನಾಶಕ್ಕಾಗಿ ಬರುವುದು..

🙏🏻🙏🏻🙏🏻

Related Posts