ಮನವೂ ಸಂತಸದಿಂದ ನಗುವಂತೆ ಇರಲಿ.

ನೀರು ಎಷ್ಟು ಕುಡಿಯೋಣ?

ಬಹಳಷ್ಟು ಜನರಿಗೆ ನೀರು ಹೇಗೆ,ಎಷ್ಟು ಕುಡಿಯಬೇಕು? ಊಟ ಮಾಡುವ ಮೊದಲು ಕುಡಿಯಬೇಕೋ?ಆಮೇಲೆ ಕುಡಿಯಬೇಕೋ? ಮಧ್ಯ ದಲ್ಲಿ ಕುಡಿಯಬಾರದೋ? ಎಂಬ ಹಲವಾರು ಪ್ರಶ್ನೆ ಗಳು ಕಾಡುತ್ತವೆ.

ಕೆಲವರು ಮೂರು, ನಾಲ್ಕು ,ಐದು ಲೀಟರ್ ನೀರು ಒಂದು ದಿನಕ್ಕೆ ಕುಡಿಯುತ್ತಾರೆ.
ಇನ್ನು ಕೆಲವರು ಕುಡಿಯುವುದೇ ಇಲ್ಲ.

ಮುಂಜಾನೆ ಎದ್ದಕೂಡಲೆ ಕುಡಿದರೆ ಒಳ್ಳೆಯದು ಅಂತ ಕೆಲವರು.
ಹಾಗಾದರೆ? ಒಂದುಸಾರಿ ಈ ಪ್ರಶ್ನೆಗೆ ಉತ್ತರ ನೀವೆ ನಿಮಗಾಗಿ ಕೇಳಿಕೊಂಡಲ್ಲಿ,ನೀವುಗಳೆ ಅದಕ್ಕೆ ಸರಿಯಾಗಿ ಉತ್ತರ ಕಂಡುಕೊಳ್ಳುತ್ತೀರ.

ಸ್ನೇಹಿತರೆ ನಾವು ಕೂಡಾ ಕಾಡಿನ ಪ್ರಾಣಿಗಳಂತೆ ಇರಬೇಕಿತ್ತು; ಆದರೇ,ನಾಡಿನ ಪ್ರಾಣಿಗಳಾಗಿ ನಮ್ಮದೇ ಆಹಾರ ವ್ಯವಸ್ಥೆ ಮಾಡಿಕೊಂಡಿದ್ದೇವೆ.ಅದು ದೇಹಕ್ಕೆ ಎಷ್ಟು ಉತ್ತಮವೋ? ವಿಷವೋ? ತಿಳಿಯುವುದು ಕಷ್ಟ ಕಷ್ಟ.
ಕಾರಣ ವಿಷವೆಂದರೇ? ನಮಗೆ ಇಷ್ಟ ಇಷ್ಟ..
ಅಲ್ಲವೆ?

ಎಲ್ಲಾ ಪ್ರಾಣಿಗಳು ನೀರು ಇರುವ ಜಾಗನೋಡಿ ವಾಸಿಸುತ್ತವೆ.ನಾವು ಹಾಗೇ ತಾನೆ.
*ಈಗ ನಮ್ಮ ಹೊಟ್ಟೆ ಒಂದು ಮಿಕ್ಸಿ ಅಂದುಕೊಳ್ಳಿ, ಮಿಕ್ಸಿಗೆ ಎಷ್ಟು ಲೋಡು ಹಾಕಬೇಕು ಅಷ್ಟೆ ಲೋಡು ಹಾಕಬೇಕು.
ಮಿಕ್ಸಿಗೆ ನೀರು ಹಾಕದೇ ಅರೆಯಲು ಬರುತ್ತದೆಯೇ? ಇಲ್ಲಾ ಸ್ವಲ್ಪ ಪ್ರಮಾಣ ನೀರು ಬೇಕು, ಮಿಕ್ಸಿಯಲ್ಲಿ ಹೆಚ್ಚು ನೀರು ಹಾಕಿ,ಕಡಿಮೆ ಆಹಾರ ಹಾಕಿ ರುಬ್ಬಿದರೆ ಏನು ಆಗುತ್ತದೆ? ಮುಚ್ಚಳ ಹಾರುತ್ತದೆ ,ಆಹಾರ ನುಣ್ಣಗೆ ಆಗಲ್ಲ. ಹೊಟ್ಟೆಯಲ್ಲೂ ಇದೆ ಆಗಿರಬಹುದು ಅಲ್ಲವಾ?
ಸರಿಯಾಗಿ ಜೀವಸತ್ವಗಳು ದೇಹ ಸೇರಬೇಕಾದರೆ? ಸೇವಿಸಿದ ಆಹಾರಕ್ಕೆ ಅನುಗುಣವಾಗಿ ನೀರು ಸೇವಿಸಬೇಕು.
ಅದನ್ನು ನಾಲಿಗೆಯೆ ಕೇಳಿ ಪಡಿಯುತ್ತದೆ.

ಇಷ್ಟೆ ,ನಾವು ಕೂಡಾ ನೀರಿನ ಬಗ್ಗೆ ತಿಳಿಯಬೇಕಾದುದು.

ಆಮೇಲೆ ,ನಮ್ಮ ದೇಹ ತನಗೆ ಎಷ್ಟು ನೀರು ಬೇಕು ಎಂದು ಕೇಳುತ್ತದೆ,ನಾಲಿಗೆ ಒಣಗುತ್ತದೆ,ಅಷ್ಟು ಕುಡಿದರೆ ಆಯಿತು.

ನೀರು ಕುಡಿಲಿಲ್ಲ,ನೀರು ಕುಡಿಲಿಲ್ಲ ಎಂಬ ಮಾನಸಿಕ ಹಟಕ್ಕೆ ಬಿದ್ದು ಆಹಾರಕ್ಕಿಂತ ಹೆಚ್ಚು ನೀರು ಕುಡಿದರೆ? ಪ್ರಯೋಜನ ಏನು?

ಹಸಿಹಸಿ ಆಹಾರ ತಿಂದರೇ? ನೀರು ಬೇಕಾದಷ್ಟು ಅದರ ಮೂಲಕವೇ ಸಿಗುತ್ತದೆ.ನೀರು ಮೇಲೆ ಸೇವಿಸುವ ಅಗತ್ಯ ಕಡಿಮೆ ಬೀಳುತ್ತದೆ.ಬೇಯಿಸಿದ ಆಹಾರಕ್ಕೆ, ಬ್ರೆಡ್,ಬನ್ ಇಂಥಹ ರೆಡಿಮೇಡ್ ಪುಡ್ ಗೆ ಎಷ್ಟು ನೀರು ಬೇಕಾಗಬಹುದು?

ನಾವು ಸೇವಿಸುವ ಆಹಾರ ಬೇಯಿಸಿ ಸಿದ್ದವಾದುದು,ಪಚನ ಕ್ರಿಯೆ ಗೆ ಬಹಳ ಸುಲಭ ವಾಗುವ ವಿಧ ಇದು.ಅದಕ್ಕೆ ತುಂಬಾ ತುಂಬಾ ಹೊಟ್ಟೆ ತುಂಬಾ ತಿಂದಷ್ಟು ರೋಗ ಹೆಚ್ಚು.
ಕಡಿಮೆ ತಿಂದರೆ ಆರೋಗ್ಯ.

ಕಡಿಮೆ ಎಂದರೇ? ಹೊಟ್ಟೆ ತುಂಬುವ ಕೊನೆಯ ಎರಡು ತುತ್ತು ಕಡಿಮೆ ಅಂತ.
ಸಂಪೂರ್ಣ ಉಪವಾಸ ಇರೋದು ಅಂತ ಅಲ್ಲ.ಉಪವಾಸ ಮಾಡುವ ಕ್ರಮ ಕೂಡಾ ಉತ್ತಮವೆ, ಆರೋಗ್ಯ ನಮ್ಮದು ಹೇಗಿದೆ ನೋಡಿಕೊಂಡು ಮಾಡುವುದು.

ಒಟ್ಟಾರೆ ನೀರು ನಿಮ್ಮ ನಾಲಿಗೆ ಕೇಳಿದಷ್ಟು ಕುಡಿಯುದು ಉತ್ತಮ. ಅತೀ ಹೆಚ್ಚು,ಅತಿ ಕಡಿಮೆಯೂ ಕುಡಿಯಬಾರದು,ಎಲ್ಲವೂ ನೀವು ನೀವು ತಿಂದ ಆಹಾರದ ಮೇಲೆ ನಿರ್ಧಾರ ವಾಗುತ್ತದೆ ವಿನಃ, ಯಾರೋ ದಿನಕ್ಕೆ ನಾಲ್ಕು ಲೀಟರ್ ನೀರು ಕುಡಿಯಿರಿ ಎಂದರೆ? ಕಂಠಪೂರ್ತಿ ಕುಡಿಯುತ್ತಾ ಇರೋದು ಅಂತ ನಾ? ನೀವೆ ಆಲೋಚನೆ ಮಾಡಿ.
.

ನಮಸ್ತೆ ಸ್ನೇಹಿತರೆ

ಮನುಷ್ಯನ ಆರೋಗ್ಯ ಕೇವಲ ಔಷಧಗಳು, ಚಿಕಿತ್ಸೆ ಗಳು,ಮನೆಮದ್ದುಗಳು,ಆಹಾರ,ಯೋಗ,ವ್ಯಾಯಾಮ, ಕೆಲಸ,ಇನ್ನೂ ಹಲವಾರು ಅದು ಮಾಡಿ ಇದು ಮಾಡಿ,ಮಾಡಿ ಕೊನೆಗೆ ಎಲ್ಲವೂ ಬೇಸರ ಬರೋತರ ಆಗುತ್ತದೆ. ನಮ್ಮ ದೇಹಕ್ಕೆ ಯಾವುದು ತಾಗೋದೇ ಇಲ್ಲ, ಇವತ್ತು ಸಂಪೂರ್ಣ ಚನ್ನಾಗಿರುತ್ತೇವೆ ನಾಳೆ ಹೇಗೋ? ಅನ್ನುವಂಥಹ ಬದುಕು ಇಂದಿನ ದಿನ ಅನುಭವಿಸುತ್ತೇವೆ…

ದೇಹ ಮತ್ತು ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ಆರೋಗ್ಯ ಕಾಪಾಡಿಕೊಂಡು ಬದುಕುವುದು ಬಹಳ ಕಷ್ಟ. ಕಾರಣ ಮನಸಿಗೆ ಪಿಸ್ಸಾ,ಬರ್ಗರ್, ಮಂಚೂರಿಗಳು ಬೇಕು ಬೇಕು ಅನಿಸತ್ತೆ.. ಹಾಗೇ, ಶುಗರ್ ಬಂದಾಗಲೇ ಸಕ್ಕರೆ ತಿನ್ನಬೇಕು ಅನಿಸುತ್ತದೆ.. ಬಿಪಿ ಇದ್ದಾಗಲೇ ಉಪ್ಪು,ಖಾರ ನಾಲಿಗೆ ಕೇಳಿದಂತೆ.ಛೇ ಹೇಗಿದ್ದರೂ ಏನೋ ಕೊರಗು ಕಂಡ್ರಿ..

ಹಾಗಾದರೇ? ನಾವು ದುಡಿಯೋದೆ ತಿನ್ನೊಕೆ ಅಲ್ಲವಾ? ತಿಂದರೇ ದೇಹ ತಡಿಯಲ್ಲ, ಅಯ್ಯೋ? ವ್ಯಾಯಾಮ,ಯೋಗ ಅವೆಲ್ಲಾ ಮಾಡಲು ಕೂಡಾ ಸಮಯ ಇರಲ್ಲ. ಒಂದು ಹತ್ತು ತರದ ಮಾತ್ರೆಗಳು ಮನೆಯಲ್ಲಿ ಪಿಕ್ಸ್…

ಇವೆಲ್ಲಾ ಇರೋದೆ ಬಿಡಿ..ಹಾಗಾದರೆ ನಾವು ಯಾವಾಗಲೂ ಖುಷಿ ಆಗಿರಲು ಏನಪ್ಪಾ ಮಾಡೋದು?
ನಿಜವಾಗಿ ನಮ್ಮ ಸಂತೋಷ, ದೇಹದ ಲವಲವಿಕೆ ಹೆಚ್ಚಿಸಿ ನಮ್ಮ ಆರೋಗ್ಯ ಹೆಚ್ಚುವುದು. ನಮ್ಮ ಸಂತೋಷಗಳು ನಮ್ಮ ಉತ್ತಮ ಹವ್ಯಾಸದಿಂದ ಸಿಗುತ್ತದೆ.

ಆರೋಗ್ಯ ಎಂದರೇ? ಬರೀ ಔಷಧಿ ಒಂದೇ ಅಲ್ಲ; ನಮ್ಮ ಉತ್ತಮ ಹವ್ಯಾಸಗಳು ಕೂಡಾ ಹೌದು. ಹಾಡು, ಸಂಗೀತ,ಕಲೆ, ಸಾಹಿತ್ಯ,ಆಟಗಳು, ನೃತ್ಯ, ಎಷ್ಟೊಂದು ಇವೆ. ಕೊನೆಯ ಪಕ್ಷ ನಮ್ಮ ಹವ್ಯಾಸಗಳು ಇವು ಇಲ್ಲದಾಗ ಇವೆಲ್ಲವನ್ನ ಆಸ್ವಾದಿಸುವ ಉತ್ತಮ ಗುಣವನ್ನ ಹೊಂದಿದ್ದರೂ ಸಾಕು ಆರೋಗ್ಯ ವೃದ್ಧಿಯಾಗುತ್ತದೆ.

ಸಹಜವಾಗಿ ಸಂಗೀತ ಮನುಷ್ಯನ ಅದ್ಭುತ ಸಂಗಾತಿ. ನಾಲಿಗೆ ಗುನುಗುವ ಸ್ವರ,ತಾಳ,ಲಯ ಇಲ್ಲದ ಹಾಡು ಕೂಡಾ ನಮ್ಮ ಆರೋಗ್ಯದ ಸಹಪಾಠಿ ಎನ್ನಬಹುದು. ಆದರೇ,ಎಲ್ಲದರಲ್ಲೂ ಉತ್ತಮವಾದುದನ್ನೆ ಆಯ್ಕೆ ಮಾಡಿಕೊಳ್ಳುವ ಮನಸ್ಸು ನಮ್ಮದಾಗಿರಬೇಕಷ್ಟೆ..

ಉತ್ತಮವಾದ ಮನಸ್ಸು ಸದೃಡ ಆರೋಗ್ಯದ ಗುಟ್ಟು..

ಎಲ್ಲರ ಮನವೂ ಸಂತಸದಿಂದ ನಗುವಂತೆ ಇರಲಿ.

ಧನ್ಯವಾದಗಳು


ಧನ್ಯವಾದಗಳು

Related Posts