ಕೇಳಿದವರಿಗಾಗಿ ಮತ್ತೆ ಹಾಕಿದೆ

ತಾಂಬೂಲ ವಿಚಾರಧಾರೆ

ವೀಳ್ಯದೆಲೆ ತಾಂಬೂಲ ಕೊಡೋವಾಗ, ವೀಳ್ಯದೆಲೆ ಆಗಿ ಹೋಗಿದೆ, ಏನು ಅಂದುಕೊಳ್ಳಬೇಡಿ ಅಂಥ ಬರೀ ಹಣ್ಣು ಅಥವಾ ತೆಂಗಿನಕಾಯಿ ಕೊಟ್ಟರೆ. ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ ಶುಭಕಾರ್ಯಗಳಾದರೆ ತುಂಬಾ ತೊಂದರೆಗಳಾಗುತ್ತವೆ, ಜನಸಹಾಯ ದೊರೆಯುವುದಿಲ್ಲ. ಹಣಕಾಸಿಗೆ ಪರಾದಾಟವಾಗುತ್ತದೆ.

  1. ನೀವು ಕೊಡುವ ತಾಂಬೂಲದ ವೀಳ್ಯದೆಲೆ ಒಣಗಿದರೆ ಅತಿಯಾದ ನಷ್ಟ. ಅನಾರೋಗ್ಯವಾಗುತ್ತದೆ, ನಿಮ್ಮ ಕಾರ್ಯಗಳು ಅರ್ಧಕ್ಕೇ ನಿಂತು ಹೋಗುತ್ತವೆ.
  2. ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸದೇ, ಯಾವುದೋ ಮೂಲೆಯಲ್ಲಿ ಇಟ್ಟುಬಿಟ್ಟರೆ, ಸಮಾಜದಲ್ಲಿ, ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ, ಮಕ್ಕಳಿಗೆ ಮರೆವಿನ ರೋಗ ಬರುತ್ತದೆ.
  3. ಯಾರಾದರೂ ತಾಂಬೂಲ ಕೊಟ್ಟಾಗ ಮನೆಗೆ ತರದೆ ಎಲ್ಲಿಯಾದರೂ ಬಿಟ್ಟು ಬಂದರೆ. ನಿಮ್ಮ ಕಾರ್ಯಗಳು ತುಂಬಾ ನಿಧಾನವಾಗುತ್ತದೆ, ವಿವಾಹ ಕಾರ್ಯಗಳಿಗೆ ಅಡಚಣೆಯಾಗುತ್ತದೆ, ಶುಭ ಕಾರ್ಯ ನಿಧಾನವಾಗುತ್ತದೆ. ಮಕ್ಕಳ ಮಾನಸಿಕ ಬೆಳವಣಿಕೆ ಕಮ್ಮಿಯಾಗುತ್ತದೆ.
  4. ತಾಂಬೂಲ ಕೆಳಗೆ ಬಿದ್ದರೆ ನಿಮ್ಮ ಕೆಲಸಗಳು ಇನ್ನೇನು ಆಯಿತು ಅನ್ನೋ ಸಮಯದಲ್ಲಿ ಅರ್ಧಕ್ಕೇ ನಿಂತುಹೋಗುತ್ತದೆ.
  5. ತಾಂಬೂಲ ಕೊಡುವಾಗ ವೀಳ್ಯದೆಲೆ ಅಡಿಕೆ ಕೊಳೆತಿದ್ದರೆ, ದರಿದ್ರರಾಗುತ್ತೀರಿ, ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ. ಯಾರ ಮನೆಯಲ್ಲಿ ತಾಂಬೂಲ ಕೊಟ್ಟರೂ ಮೊದಲು ತಂದು ದೇವರ ಮುಂದೆ ಇಟ್ಟು ನಮಸ್ಕರಿಸಿ, ಆನಂತರ ಸರಿಯಾದ ರೀತಿಯಲ್ಲಿ ಉಪಯೋಗಿಸಿ.

“ವಿವಿಧ ರೀತಿಯ ತಾಂಬೂಲಗಳು”… !

ತಾಂಬೂಲಗಳಲ್ಲಿ ಮೂರು ರೀತಿಯ ತಾಂಬೂಲಗಳಿವೆ..
೧. ಫಲ ತಾಂಬೂಲ..
೨. ಪೂರ್ಣಫಲ ತಾಂಬೂಲ..
೩. ಸಾಮೂಹಿಕ ತಾಂಬೂಲ..

” ಫಲ ತಾಂಬೂಲ” : ತಾಂಬೂಲದಲ್ಲಿ ಹಣ್ಣನ್ನು ಇಟ್ಟು ಕೊಡುವುದೇ ಫಲತಾಂಬೂಲ..

ಫಲ ತಾಂಬೂಲದಲ್ಲಿ ಎರಡು ವಿಧಗಳಿವೆ.
೧. ಫಲ ತಾಂಬೂಲ..
೨. ಪಂಚಫಲ ತಾಂಬೂಲ ..

೧. ಫಲ ತಾಂಬೂಲ :
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ಒಂದೇ ಜಾತಿಯ ಹಣ್ಣು(ಎರಡು)
**
೨. ಪಂಚಫಲ ತಾಂಬೂಲ ::
ಐದು ವೀಳ್ಯದೆಲೆ
ಐದು ಅಡಿಕೆ
ಯಥಾ ಶಕ್ತಿ ದಕ್ಷಿಣೆ
ಐದು ಜಾತಿಯ ಹಣ್ಣುಗಳು..
(5-5 ಬೇಕಾದರು ಕೊಡಬಹುದು)


“ಪೂರ್ಣಫಲ ತಾಂಬೂಲ”..
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ಒಂದು ಪೂರ್ಣಫಲ..
**

” ಸಾಮೂಹಿಕ ತಾಂಬೂಲ” :
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ತೆಂಗಿನಕಾಯಿ ಅಥವಾ ಹಣ್ಣು..!

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

Related Posts