ಓಂ ಶ್ರೀ ಗುರುಭ್ಯೋ ನಮಃ ಶುಭೋದಯ ಶುಭ ಮಂಗಳವಾರ

☆☆ ಶರನ್ನವರಾತ್ರಿ – ನವರಾತ್ರಿ ದುರ್ಗಾದೇವಿಯ ಒಂಭತ್ತನೇ ಸ್ವರೂಪ – ಸಿದ್ಧಿದಾತ್ರೀ ☆☆
ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ |
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ||
ಜಗನ್ಮಾತೆ ದುರ್ಗಾದೇವಿಯ ಒಂಭತ್ತನೇ ಶಕ್ತಿ ಸ್ವರೂಪವು ಸಿದ್ಧಿದಾತ್ರೀ ಎಂದಾಗಿದೆ. ಇವಳು ಎಲ್ಲ ಪ್ರಕಾರದ ಸಿದ್ಧಿಗಳನ್ನು ಕೊಡುವಂತಹವಳು. ಮಾರ್ಕಂಡೇಯ ಪುರಾಣಕ್ಕನುಸಾರ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ ಮತ್ತು ವಶಿತ್ವ ಹೀಗೆ ಎಂಟು ಸಿದ್ಧಿಗಳು ಇವೆ. ಬ್ರಹ್ಮವೈವರ್ತಪುರಾಣದ ಶ್ರೀಕೃಷ್ಣಜನ್ಮಖಂಡದಲ್ಲಿ ಈ ಸಂಖ್ಯೆ ಹದಿನೆಂಟು ಎಂದು ತಿಳಿಸಲಾಗಿದೆ. ಅವು ಇಂತಿವೆ–

  1. ಅಣಿಮಾ 2. ಲಘಿಮಾ 3. ಪ್ರಾಪ್ತಿ 4. ಪ್ರಾಕಾಮ್ಯ 5. ಮಹಿಮಾ 6. ಈಶಿತ್ವ-ವಶಿತ್ವ
  2. ಸರ್ವಕಾಮಾವಸಾಯಿತಾ 8. ಸರ್ವಜ್ಞತ್ವ 9. ದೂರ ಶ್ರವಣ 10. ಪರಕಾಯ ಪ್ರವೇಶನ
  3. ವಾಕ್ ಸಿದ್ಧಿ 12. ಕಲ್ಪವೃಕ್ಷತ್ವ 13. ಸೃಷ್ಟಿ 14. ಸಂಹಾರಕರಣಸಾಮರ್ಥ್ಯ 15. ಅಮರತ್ವ 16. ಸರ್ವನ್ಯಾಯ ಕತ್ವ 17. ಭಾವನಾ 18. ಸಿದ್ಧಿ
    ಜಗಜ್ಜನನೀ ಸಿದ್ಧಿದಾತ್ರೀ ದೇವಿಯು ಭಕ್ತರಿಗೆ ಮತ್ತು ಸಾಧಕರಿಗೆ ಇವೆಲ್ಲ ಸಿದ್ಧಿಗಳನ್ನು ಕೊಡಲು ಸಮರ್ಥಳಾಗಿದ್ದಾಳೆ. ದೇವೀಪುರಾಣಕ್ಕನುಸಾರ ಭಗವಂತನಾದ ಶಿವನು ಇವಳ ಕೃಪೆಯಿಂದಲೇ ಇವೆಲ್ಲ ಸಿದ್ಧಿಗಳನ್ನು ಪಡೆದುಕೊಂಡಿದ್ದನು. ಇವಳ ಅನುಕಂಪದಿಂದಲೇ ಶಿವನ ಅರ್ಧ ಶರೀರವು ದೇವಿಯದಾಗಿತ್ತು. ಇದೇ ಕಾರಣದಿಂದ ಅವನು ಜಗತ್ತಿನಲ್ಲಿ ‘ಅರ್ಧನಾರೀಶ್ವರ’ ಎಂಬ ಹೆಸರಿನಿಂದ ಪ್ರಸಿದ್ಧನಾದನು. ಸಿದ್ಧಿದಾತ್ರಿಗೆ ನಾಲ್ಕು ಭುಜಗಳಿದ್ದು, ವಾಹನ ಸಿಂಹವಾಗಿದೆ. ಇವಳು ಕಮಲಪುಷ್ಪದ ಮೇಲೆಯೂ ವಿರಾಜಮಾನಳಾಗುತ್ತಾಳೆ. ಇವಳ ಕೆಳಗಿನ ಬಲಗೈಯಲ್ಲಿ ಚಕ್ರ, ಮೇಲಿನ ಕೈಯಲ್ಲಿ ಗದೆ ಇದೆ. ಎಡಗಡೆಯ ಕೆಳಗಿನ ಕೈಯಲ್ಲಿ ಶಂಖ ಮತ್ತು ಮೇಲಿನ ಕೈಯಲ್ಲಿ ಕಮಲ ಪುಷ್ಪವಿದೆ.
    ನವರಾತ್ರಿಯ ಒಂಭತ್ತನೆಯ ದಿನ ಇವಳ ಉಪಾಸನೆ ಮಾಡಲಾಗುತ್ತದೆ. ಈ ದಿನ ಶಾಸ್ತ್ರೀಯ ವಿಧಿ-ವಿಧಾನಗಳಿಂದ ಹಾಗೂ ಪೂರ್ಣನಿಷ್ಠೆಯಿಂದ ಒಡಗೂಡಿ ಸಾಧನೆ ಮಾಡುವ ಸಾಧಕರಿಗೆ ಎಲ್ಲ ಸಿದ್ಧಿಗಳು ಪ್ರಾಪ್ತವಾಗುತ್ತವೆ. ಸೃಷ್ಟಿಯಲ್ಲಿ ಅವನಿಗಾಗಿ ಯಾವುದೂ ಅಗಮ್ಯವಾಗಿ ಉಳಿಯುವುದಿಲ್ಲ. ಬ್ರಹ್ಮಾಂಡದ ಮೇಲೆ ವಿಜಯವನ್ನು ಪಡೆಯುವ ಸಾಮರ್ಥ್ಯ ಅವನಲ್ಲಿ ಬಂದು ಬಿಡುತ್ತದೆ.
    ಪ್ರತಿಯೋರ್ವ ಮನುಷ್ಯನು ತಾಯಿ ಸಿದ್ಧಿದಾತ್ರಿಯ ಕೃಪೆಯನ್ನು ಪಡೆದುಕೊಳ್ಳಲು ನಿರಂತರ ಪ್ರಯತ್ನ ಮಾಡಬೇಕು. ಅವಳ ಆರಾಧನೆಯ ಕಡೆಗೆ ಮುಂದುವರಿಯಬೇಕು. ಇವಳ ಕೃಪೆಯಿಂದ ಅತ್ಯಂತ ದುಃಖರೂಪೀ ಸಂಸಾರದಿಂದ ನಿರ್ಲಿಪ್ತನಾಗಿದ್ದುಕೊಂಡು ಎಲ್ಲ ಸುಖಗಳನ್ನು ಭೋಗಿಸುತ್ತಾ ಅವನು ಮೋಕ್ಷವನ್ನು ಪಡೆಯಬಲ್ಲನು.
    ನವದುರ್ಗೆಯರಲ್ಲಿ ಸಿದ್ಧಿದಾತ್ರಿ ದೇವಿಯು ಕೊನೆಯವಳಾಗಿದ್ದಾಳೆ. ಬೇರೆ ಎಂಟು ದುರ್ಗೆಯರ ಪೂಜೆ-ಉಪಾಸನೆಯನ್ನು ಶಾಸ್ತ್ರೀಯ ವಿಧಿ-ವಿಧಾನಕ್ಕನುಸಾರ ಮಾಡುತ್ತಾ ಭಕ್ತರು ನವರಾತ್ರೆಯ ಒಂಭತ್ತನೇ ದಿನ ಇವಳ ಉಪಾಸನೆಯಲ್ಲಿ ಪ್ರವೃತ್ತರಾಗುತ್ತಾರೆ. ಈ ಸಿದ್ಧಿದಾತ್ರೀ ದೇವಿಯ ಉಪಾಸನೆಯನ್ನು ಪೂರ್ಣಗೊಳಿಸಿದ ಬಳಿಕ ಭಕ್ತರ, ಸಾಧಕರ ಲೌಕಿಕ-ಪಾರಲೌಕಿಕ ಎಲ್ಲ ಪ್ರಕಾರದ ಕಾಮನೆಗಳು ಪೂರ್ತಿ ಆಗಿ ಹೋಗುತ್ತದೆ. ಸಿದ್ಧಿದಾತ್ರೀ ಮಾತೆಯ ಕೃಪಾಪಾತ್ರನಾದ ಭಕ್ತನಲ್ಲಿ ಅವನು ಪೂರ್ಣವಾಗಿಸಲು ಬಯಸುವಂತಹ ಯಾವುದೇ ಕಾಮನೆಗಳು ಬಾಕಿ ಉಳಿಯುವುದಿಲ್ಲ. ಅವನು ಎಲ್ಲ ಸಾಂಸಾರಿಕ ಇಚ್ಛೆಗಳಿಂದ, ಆವಶ್ಯಕತೆಗಳಿಂದ, ಸ್ಪೃಹೆಗಳಿಂದ ಮೇಲಕ್ಕೆದ್ದು ಮಾನಸಿಕವಾಗಿ ಭಗವತಿಯ ದಿವ್ಯ ಲೋಕಗಳಲ್ಲಿ ಸಂಚರಿಸುತ್ತಾ, ಅವಳ ಕೃಪಾರಸ ಪೀಯೂಷವನ್ನು ನಿರಂತರ ಪಾನ ಮಾಡುತ್ತಾ ವಿಷಯ ಭೋಗ ಶೂನ್ಯನಾಗುತ್ತಾನೆ. ತಾಯಿ ಭಗವತಿಯ ಪರಮ ಸಾನ್ನಿಧ್ಯವೇ ಅವನಿಗೆ ಸರ್ವಸ್ವವಾಗುತ್ತದೆ. ಈ ಪರಮ ಪದವನ್ನು ಪಡೆದ ನಂತರ ಅವನಿಗೆ ಬೇರಾವುದರ ಆವಶ್ಯಕತೆಯೂ ಉಳಿಯುವುದಿಲ್ಲ.
    ಭಗವತಿ ಸಿದ್ಧಿದಾತ್ರಿಯ ಚರಣಗಳ ಸಾನಿಧ್ಯವನ್ನು ಪಡೆಯಲು ನಾವು ನಿರಂತರ ನಿಯಮನಿಷ್ಠರಾಗಿ ಅವಳ ಉಪಾಸನೆ ಮಾಡಬೇಕು. ಇದರಿಂದ ಸಂಸಾರದ ಅಸಾರತೆಯನ್ನು ನೀಗಿ ಪರಮ ಶಾಂತಿದಾಯಕ ಅಮೃತ ಪದ ಪ್ರಾಪ್ತವಾಗುತ್ತದೆ.
    ಶಿವಾರ್ಪಣಮಸ್ತು ಶುಭವಾಗಲಿ

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
ಆಯುಧ ಪೂಜೆ ಮಹಾನವಮಿ ದಸರಾ ಹಬ್ಬದ ಶುಭಾಶಯಗಳು ಸಹೃದಯಿ ಸದಸ್ಯರೆಲ್ಲಾರಿಗು.
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
ಮಹಾನವಮಿ ಆಯುಧ ಪೂಜಾವಿಧಿ

ದುರ್ಗಾದೇವಿಯು ಅಷ್ಟಭುಜಗಳಿಂದ ಕೂಡಿದವಳಾಗಿ ಅವತರಿಸಿದಳು. ಇಂತಹ ದುರ್ಗೆಯನ್ನು ಅವಳು ಧರಿಸಿರುವ ಆಯುಧಗಳಾದ ಬಿಲ್ಲು ,ಶೂಲ ,ಬಾಣ ,ಗುರಾಣಿ ,ಕತ್ತಿ ,ಶಂಖ ,ಚಕ್ರ , ಗದೆಗಳನ್ನು ಮಹಾನವಮಿಯಂದು ಪೂಜಿಸಬೇಕು .

ಛುರಿಕಾ ಪೂಜಾ
ಸರ್ವಾಯುಧಾನಾಂ ಪ್ರಥಮಂ ನಿರ್ಮಿತಾಸಿ ಪಿನಾಕಿನಾ |
ಶೂಲಾಯುಧಾನ್ ವಿನಿಷ್ಕೃತ್ಯ ಕೃತ್ವಾ ಮುಷ್ಠಿಗ್ರಹಂ ಶುಭಂ ||
ಛುರಿಕೆ ರಕ್ಷ ಮಾಂ ನಿತ್ಯಂ ಶಾಂತಿ ಯಚ್ಛ ನಮೋಸ್ತು ತೇ ||

ಕಠಾರಿಕಾ ಪೂಜೆ –
ರಕ್ಷಾಂಗಾನಿ ಗಜಾನ್ ರಕ್ಷ ರಕ್ಷ ವಾಜಿಧನಾನಿ ಚ |
ಮಮ ದೇಹಂ ಸದಾ ರಕ್ಷ ಕಟ್ಟಾರಕ ನಮೋಸ್ತುತೇ ||

ಶಂಖ ಪೂಜಾ –
ಪುಣ್ಯಸ್ತ್ವಂ ಶಂಖ ಪುಣ್ಯಾನಾಂ ಮಂಗಲಾನಾಂ ಚ ಮಂಗಲಂ |
ವಿಷ್ಣುನಾ ವಿಧೃತೋ ನಿತ್ಯಮತಃ ಶಾಂತಿಂ ಪ್ರಯಚ್ಛ ಮೇ ||

ಇಂತಹ ದಿವಸಗಳಲ್ಲಿ ಆಯುಧಗಳನ್ನು ಇರಿಸಿ ಕಲಶವನ್ನು ಸ್ಥಾಪಿಸಿ ದುರ್ಗಾ ದೇವಿಹಾಗೂ ನರಸಿಂಹದೇವರನ್ನು ಶೋಡಷೋಚಾರಪೂಜೆಗಳಿಂದ ಪೂಜಿಸಬೇಕು.

ಕಲಶ ಪ್ರಾರ್ಥನ ಮಂತ್ರ
ದೇವದಾನವ ಸಂವಾದೇ ಮಥ್ಯಮಾನಂ ಮಹೋದಧೌ |
ಉತ್ಪನ್ನೋಸಿ ತದಾ ಕುಂಭ ವಿಧೃತೋ ವಿಷ್ಣುನಾ ಸ್ವಯಂ ||

ತ್ವಯಿ ತಿಷ್ಠಂತಿ ಭೂತಾನಿ ತ್ವಯಿ ಪ್ರಾಣಾಃ ಪ್ರತಿಷ್ಠಿತಾಃ |
ತ್ವತ್ಪ್ರಸಾದಾತ್ ಇಮಂ ಯಜ್ಞಂ ಕರ್ತುಮೀಹೇ ಜಲೊಧ್ಭವ ||

ದುರ್ಗಾ ವಿಸರ್ಜನೆ
ವಿಜಯದಶಮಿಯಂದು ದುರ್ಗಾದೇವಿಯ ವಿಸರ್ಜನೆಯನ್ನು ಮಾಡಬೇಕು.

ಎರಡು ದಿವಸ ದಶಮಿ ಯೋಗವಿದ್ದರೆ ಹಿಂದಿನ ದಿನದ ಶ್ರವಣಾನಕ್ಷತ್ರದ ಅಂತ್ಯಭಾಗದಲ್ಲಿ ವಿಸರ್ಜನೆ. ತಮಗೆ ಜೀವನ ನೀಡುವ ಯಂತ್ರಗಳು, ವಾಹನಗಳು ಮುಂತಾದ ಜೀವನೋಪಾಯ ಸಾಧನಗಳನ್ನು ಮಹಾನವಮಿಯದಿನ ಪೂಜಿಸಬೇಕು.

ಮಹಾನವಮಿಯಲ್ಲಿ ಪೂಜಿಸಲ್ಪಡುವ ದುರ್ಗಾರೂಪವು ಸುಭದ್ರಾ ಎಂದು ಹೆಸರು ಈ ಸುಭದ್ರೆಯು ಉಪಯುಕ್ತವಾದ ಸಾಧನಗಳಲ್ಲಿ ಇದ್ದು. ನಮಗೆ ಜಯಾದಿಗಳನ್ನು. ನೀಡಿ ಸುಭದ್ರವಾದ ಜೀವನಕೂಡುವಳು ಎಂದೇ ಸುಭದ್ರೆ ಎಂದು ಕರೆಯಲ್ಪಡುವಳು ಮಹನವಮಿಯ ದಿನ ಮಹಿಷಾಸುರಮರ್ಧಿನಿಯು ಅವತರಿಸಿ ಲೋಕೋದ್ಧಾರವನ್ನು ಮಾಡಿದಳು .

ಭವಿಷ್ಯತಿ ನ ದಾರಿದ್ರ್ಯಂ ನ ಚೈವಾಷ್ಟ ವಿಯೋಜನಂ |
ಶತ್ರುತೋ ನ ಭಯಂ ತಸ್ಯ ದಸ್ಯುತೋ ವಾ ನ. ರಾಜತಃ

ಆಯುಧಾದಿಗಳನ್ನು ಪೂಜಿಸುವುಧರಿಂದ ಇಷ್ಟಾರ್ಥ ಗಳು ಸಿದ್ಧಿಸುವುವು ದಾರಿದ್ರ್ಯ ,ಪರಿಹಾರ ,ಇಷ್ಟ ವಸ್ತುವು ನಮ್ಮನ್ನು ಬಿಟ್ಟು ಹೋಗದೆ ಇರುವುದು .ಶತ್ರು ,ಬೆಂಕಿ ,ನೀರು ,ಗಾಳಿ.,ಕಳ್ಳ , ಶತ್ರುಗಳಿಂದ ಭಯವಿರುವುದಿಲ್ಲ.

▬▬▬ஜ۩۞۩ஜ▬▬▬▬▬▬ஜ۩۞۩ஜ▬▬ ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Related Posts