ದೇಶವನ್ನು ಅಭಿವೃದ್ದಿಯ ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಬೆಂಗಳೂರಿನದ್ದು ಪ್ರಮುಖ ಪಾತ್ರ: ಸುರೇಶ್‌ ಪ್ರಭು, ಮಾಜಿ ಕೇಂದ್ರ ಸಚಿವ


*ದೇಶವನ್ನು ಅಭಿವೃದ್ದಿಯ ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಬೆಂಗಳೂರಿನದ್ದು ಪ್ರಮುಖ ಪಾತ್ರ: ಸುರೇಶ್‌ ಪ್ರಭು, ಮಾಜಿ ಕೇಂದ್ರ ಸಚಿವ*

– ವಿಶ್ವದ ತಾಂತ್ರಿಕ ಹಬ್‌ ಆಗಿ ಹೊರಹೊಮ್ಮಿರುವ ಬೆಂಗಳೂರು
– ಪ್ರಧಾನಿ ನರೇಂದ್ರ ಮೋದಿಯವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ

*ಬೆಂಗಳೂರು ಅ.19*: ವಿಶ್ವದ ತಾಂತ್ರಿಕ ಹಬ್‌ ಆಗಿರುವ ಬೆಂಗಳೂರು, ದೇಶವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರ ಕನಸು ನನಸು ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು *ಮಾಜಿ ಕೇಂದ್ರ ರೈಲ್ವೇ ಸಚಿವರಾದ ಸುರೇಶ್‌ ಪ್ರಭು* ಅಭಿಪ್ರಾಯಪಟ್ಟರು.

ವ್ಯವಹಾರ ಸಲಹಾ ಸಂಸ್ಥೆಯಾಗಿರುವ ಮಹೋಹರ್‌ ಚೌಧರಿ ಅಂಡ್‌ ಅಸೋಸಿಯೇಟ್ಸ್‌ ಒಂದು ಸಂಸ್ಥೆ ವ್ಯವಹಾರಿಕವಾಗಿ ವಿಶ್ವದಾದ್ಯಂತ ತನ್ನ ಸೇವೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಆಡಳಿತಾತ್ಮಕ ಸೇವೆಗಳನ್ನು ನೀಡುತ್ತಿದೆ. ದೇಶದಲ್ಲಿ ಇನ್ನು ಹಲವಾರು ಕಡೆ ರೆಡ್‌ ಟೇಪಿಸಮ್‌ ಇದೆ. ನಿಯಮಗಳು ಹಾಗೂ ಕಾನೂನುಗಳ ಹಲವಾರು ಅಡೆತಡೆಗಳಿವೆ. ಈ ಅಡೆತಡೆಗಳನ್ನ ಸರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಸಲಹಾ ಸಂಸ್ಥೇಗಳು ಮುಖ್ಯ ಪಾತ್ರವಹಿಸುತ್ತವೆ. ಒಂದು ಸಂಸ್ಥೆಯ ಅಭಿವೃದ್ದಿಗೆ ಅದರ ಆಡಳಿತ ಬಹಳ ಮುಖ್ಯ. ಸರಿಯಾದ ನೈತಿಕ ಮೌಲ್ಯಗಳನ್ನು ಹೊಂದಿರುವ ಸಣ್ಣ ಸಂಸ್ಥೇಗಳು ಕೂಡಾ ದೊಡ್ಡದನ್ನ ಸಾಧಿಸಬಲ್ಲವು. ಇದನ್ನ ಅಳವಡಿಸಿಕೊಂಡಿರುವ ಎಂಸಿಎ ನಂತಹ ಸಲಹಾ ಸಂಸ್ಥೆಗಳು ಅಭಿವೃದ್ದಿಯನ್ನು ಕಂಡಿವೆ ಎಂದು ಹೇಳಿದರು.

ಸಂಸ್ಥೆಯ ಸಂಸ್ಥಾಪಕರಾದ ಟಿ ಎನ್‌ ಮನೋಹರನ್‌ ಮಾತನಾಡಿ*, ಒಂದು ಸಂಸ್ಥೆ ಬೆಳವಣೆಗೆಗೆ ಅಗತ್ಯವಿರುವ ಆಡಳಿತಾತ್ಮಕ ಸೇವೆಗಳನ್ನು ನೀಡುತ್ತೇವೆ. ಬೇರೆ ಬೇರೆ ದೇಶಗಳಲ್ಲಿ ಹೇಗೆ ವ್ಯವಹಾರ ಪ್ರಾರಂಭಿಸಬೇಕು, ಬೇರೆ ದೇಶಗಳ ವ್ಯವಹಾರಗಳು ಇಲ್ಲಿ ಪ್ರಾರಂಭವಾಗಲು ಸಹಾಯಮಾಡುತ್ತೇವೆ. ನಮ್ಮ ದೇಶದ ಹೂಡಿಕೆಯ ಪರಿಸರದ ಬಗ್ಗೆ ತಿಳುವಳಿಕೆ ನೀಡಿ ಅವುಗಳ ಅಭಿವೃದ್ದಿಗೆ ಸಹಾಯ ಮಾಡುತ್ತಿದ್ದೇವೆ. ಹೊರ ದೇಶದ ಪ್ರಮುಖ ಸಂಸ್ಥೆಗಳನ್ನ ದೇಶಕ್ಕೆ ಕರೆತರುವ ಮೂಲಕ ಉದ್ಯೋಗಾವಕಾಶ ದೊರಕಿಸಿಕೊಡುವ ನಿಟ್ಟಿನಲ್ಲೂ ನಾವು ಕಾರ್ಯನಿರತರಾಗಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂಸಿಎ ಸಂಸ್ಥೆಯ ಮುಖ್ಯ ಪಾಲುದಾರರಾದ ಸಚಿನ್‌, ಮುಖ್ಯ ಮ್ಯಾನೇಜಿಂಗ್‌ ಪಾರ್ಟ್‌ನರ್‌ ಆದ ಯೋಗಾನಂಧ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Posts