625/625 ಅಂಕಗಳಿಕೆಯೊಂದೇ ಗುರಿ ಅಲ್ಲ, ಸಾರ್ಥಕ್ಯವೂ ಅಲ್ಲ!
ಅರ್ಹತೆ, ಪ್ರತಿಭೆಗಳಿಂದ 625/625 ಅಂಕ ಗಳಿಸಿದರೆ ಅಭಿನಂದನಾರ್ಹವೇ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅದೊಂದೇ ಜೀವನದ ಸಾರ್ಥಕತೆಯದಾಗಲೀ ಸಾಮರ್ಥ್ಯದ್ದಾಗಲೀ ಮಾನದಂಡ ಅಲ್ಲ.
ಶಿವಮೊಗ್ಗ ನಗರದ ಸಾಂದೀಪನಿ ಪ್ರೌಢಶಾಲೆಯ ವಿದ್ಯಾರ್ಥಿನಿ, ಇದೀಗ ಎಸ್ಸೆಸ್ಸೆಲ್ಸಿಯಲ್ಲಿ 623/625 ಅಂಕಗಳೊಂದಿಗೆ ಉತ್ತೀರ್ಣಳಾಗಿರುವ ಪ್ರತಿಭಾವಂತ ಹುಡುಗಿ ಪ್ರಣಮ್ಯಳೇ ಇದಕ್ಕೆ ಮಾದರಿ. 👏👍
ಈ ದಿನ ಪ್ರಣಮ್ಯಾ ನನಗೆ ವಾಟ್ಸ್ಯಾಪ್‌ನಲ್ಲಿ ಕಳುಹಿಸಿದ ಧ್ವನಿಸಂದೇಶ ಹೀಗಿದೆ: “ನಮಸ್ತೇ ಸರ್. ನಾನು ಪ್ರಣಮ್ಯಾ. ಎಕ್ಸಾಮ್ ಎಲ್ಲ ಮುಗಿದು ಇವತ್ತು ರಿಸಲ್ಟ್ ಬಂದಿದೆ. ಎಕ್ಸಾಮ್ ಟೈಮಲ್ಲಿ ನಿಮ್ಮ ಲೇಖನಗಳನ್ನು ಓದೋಕ್ಕಾಗಿರಲಿಲ್ಲ. ಅದಕ್ಕೆ ಅಮ್ಮ ಎಲ್ಲ ಪೇಪರ್‌ಕ್ಲಿಪ್ಪಿಂಗ್ಸ್ ಕಟ್ ಮಾಡಿ ಸಂಗ್ರಹಿಸಿಟ್ಟಿದ್ರು. ಈಗ ಒಂದೊಂದೇ ಲೇಖನ ಓದ್ತಿದ್ದೀನಿ, ತುಂಬ ಚೆನ್ನಾಗಿದೆ. ಮತ್ತೆ, “ಬ್ರಹ್ಮಪುರಿಯ ಭಿಕ್ಷುಕ” ಪುಸ್ತಕ ಓದ್ಬೇಕು ಅಂದ್ಕೊಂಡಿದ್ದೆ, ಅದನ್ನೂ ಓದ್ತಾ ಇದ್ದೇನೆ. ಆರ್.ಕೆ.ನಾರಾಯಣ್ ಅವ್ರದ್ದು “ಸ್ವಾಮಿ ಏಂಡ್ ಹಿಸ್ ಫ್ರೆಂಡ್ಸ್” ಓದಿದ್ದೆ; ಅದು ತುಂಬ ಇಷ್ಟ ಆಗಿತ್ತು ಅದರ ಒಂದು ಕಥೆ ನಮಗೆ ಇಂಗ್ಲಿಷ್ ಟೆಕ್ಸ್ಟ್‌ಬುಕ್ಕಲ್ಲೂ ಇತ್ತು. ಅವ್ರದ್ದೇ ಈಗ “ಮ್ಯಾನ್ ಈಟರ್ ಆಫ್ ಮಾಲ್ಗುಡಿ” ಮತ್ತು “ಗೈಡ್” ಓದಿದೆ, ತುಂಬ ಚೆನ್ನಾಗಿದೆ. ಕಾಲೇಜು ಸ್ಟಾರ್ಟ್ ಆಗೋದ್ರೊಳಗೆ “ಚೆನ್ನಭೈರಾದೇವಿ”ನೂ ಓದ್ಬೇಕು ಅಂದ್ಕೊಂಡಿದ್ದೇನೆ. ಮತ್ತೆ, ಗೀತಾಪರಿವಾರದ ಉಚಿತ ಆನ್‌ಲೈನ್ ಗೀತಾಕ್ಲಾಸುಗಳಲ್ಲಿ ತಾಂತ್ರಿಕ ಸಹಾಯಕಿಯಾಗಿ ಸೇವೆ ಸಲ್ಲಿಸ್ಲಿಕ್ಕೆ ನೋಂದಾಯಿಸಿಕೊಂಡಿದ್ದೇನೆ. ಸೆಲೆಕ್ಟ್ ಆಗ್ತೀನೋ ಇಲ್ವೋ ಗೊತ್ತಿಲ್ಲ, ರಿಜಿಸ್ಟರ್ ಅಂತೂ ಮಾಡಿದ್ದೇನೆ. ಥ್ಯಾಂಕ್ಯೂ ಸರ್.”
ಪ್ರಣಮ್ಯಾಗೆ ನಾನು ಈರೀತಿ ಉತ್ತರ ಬರೆದೆ: “Excellent Pranamya! My hearty congratulations to you! 623/625 is awesome! It truly reflects your intellect, learning power, and determination. I am not a big fan of 625/625 (or “out of out” what they call). There is ALWAYS scope for improvement- and that only makes our life purposeful and meaningful. 625/625 is NOT the entirety of life. From your audio message itself one can make out what all you have planned to do in these holidays and moving forward. For me, these are the real moments of pride. Believe me, you telling you scored 625/625 would NOT have made me more happy! I ALWAYS wish you the very best in your future endeavors. I see you as ಉಜ್ಜ್ವಲ ಭಾರತದ ಭವ್ಯ ಪ್ರಜೆ! 👏👏👍👍💐💐 Congratulations once again, to you and to your parents and teachers, and classmates, and well-wishers.👍😊”
ಅದಕ್ಕೆ ಉತ್ತರಿಸುತ್ತ ಪ್ರಣಮ್ಯಾ ಬರೆದಳು: “Thank you for your encouraging words sir🙏🏻. Actually I lost 2 marks by my own mistakes. In next exams I should be alert.”
“See! It’s God’s wish so that you learn this “lesson of life, lesson of learning from mistakes”! If you were to score 625/625 you would have seriously missed this lesson! That’s exactly what I meant by “There is always scope for improvement in life. 625/625 marks in SSLC in NOT the entirety of life. Always proud of you!” ಎಂದು ನನ್ನ ಉತ್ತರ. ಪ್ರಣಮ್ಯಾಳಿಂದ “🙏🏻🙏🏻” ಇಮೊಜಿಯೊಂದಿಗೆ ಸಂವಾದ ಮುಕ್ತಾಯ.
ಈಗವಳು ತನ್ನ ಚಿತ್ರಕಲೆಯಲ್ಲಿ, ಆಟೋಟಗಳಲ್ಲಿ, ಇನ್ನಷ್ಟು ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿಮುಗಿಸುವುದರಲ್ಲಿ, ಮನೆಕೆಲಸಗಳಲ್ಲಿ ಅಮ್ಮ-ಅಪ್ಪನಿಗೆ ನೆರವಾಗುವುದರಲ್ಲಿ, “ಉಜ್ಜ್ವಲ ಭಾರತದ ಭವ್ಯ ಪ್ರಜೆ”ಯಾಗಲು ಬೇಕಾದ ಬೇರೆಲ್ಲ ರಚನಾತ್ಮಕ ಚಟುವಟಿಕೆಗಳಲ್ಲಿ ಮಗ್ನಳಾಗಿದ್ದಾಳೆ. ನನ್ನ ಪ್ರಕಾರ ಪ್ರಣಮ್ಯಾ ಒಬ್ಬ ಆದರ್ಶ, ಅನುಕರಣೀಯ ವಿದ್ಯಾರ್ಥಿನಿ. ಅವಳಿಗೆ ಮತ್ತು ಅವಳಂಥ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಶುಭಹಾರೈಕೆ. 💐💐
- ಶ್ರೀವತ್ಸ ಜೋಶಿ. ವಾಷಿಂಗ್ಟನ್ ಡಿಸಿ.
8 ಮೇ 2023.