ಸರಕಾರದ ಅನುಮತಿ ಇಲ್ಲದೆ
ಎರಡನೇಯ ಮದುವೆಯಾಗಬಾರದು.
ಅಸ್ಸಾಂ.
ರಾಜ್ಯದಲ್ಲಿ ಸರ್ಕಾರದ ಯಾವುದೇ ಅಧಿಕಾರಿ/ಉದ್ಯೋಗಿ ಈಗ ಸರ್ಕಾರದ ಪೂರ್ವಾನುಮತಿ ಇಲ್ಲದೆ 2ನೇ ಬಾರಿಗೆ ಮದುವೆಯಾಗುವಂತಿಲ್ಲ ಎಂದು ಅಸ್ಸಾಂ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ, ಯಾವುದೇ ಉದ್ಯೋಗಿ ಸರ್ಕಾರ ಮಾಡಿರುವ ಕಟ್ಟುನಿಟ್ಟಿನ ನಿಯಮಗಳನ್ನು ಉಲ್ಲಂಘಿಸಿ, 2ನೇ ಬಾರಿಗೆ ಮದುವೆಯಾದವರು ಭಾರೀ ದಂಡವನ್ನು ಪಾವತಿಸುವುದರ ಜೊತೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಅಲ್ಲದೆ, ಆರೋಪಿಗಳು ಇಲಾಖಾವಾರು ವಿಚಾರಣೆಯನ್ನೂ ಎದುರಿಸಬೇಕಾಗಬಹುದು ಎಂದಿದೆ.