ಲಾಭಗಳು
ಅರಿಶಿನದ ನಾಲ್ಕು ಗಮನಾರ್ಹ ಲಾಭಗಳನ್ನು ಪಟ್ಟಿ ಮಾಡಿದ್ದೇವೆ.
ಪ್ರಕೃತಿ ಮಾತೆ ನಮಗೆ ನೀಡಿರುವ ಈ ಅದ್ಭುತವಾದ ಕೊಡುಗೆಯನ್ನು ದಿನಕ್ಕೆ ಕೇವಲ ಒಂದು ಚಿಟಿಕೆಯಷ್ಟು ಬಳಸುವುದರಿಂದ ಏನೇನು ಲಾಭಗಳಿವೆ ಎಂಬುದನ್ನು ವಿವರಿಸಿದ್ದೇವೆ.
ಉಪಯೋಗಗಳು
ಅರಿಶಿನ ಪುಡಿಯನ್ನು ನಮ್ಮ ದೇಶದಲ್ಲಿ ಬೆಳೆ ಸಾರು ಮತ್ತು ಪಲ್ಯಗಳಿಗೆ ಬಣ್ಣವನ್ನು ಸೇರಿಸಲು ಬಳಸಲಾಗುತ್ತದೆ. ಇದು ಎಲ್ಲಾ ರೀತಿಯ ಭಾರತೀಯ ಭಕ್ಷ್ಯಗಳೊಂದಿಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ ಮತ್ತು ಅವುಗಳ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅರಿಶಿನ ನೀರು ಅಥವಾ ಅರಿಶಿನ ಚಹಾವನ್ನು ಸಹ ಈ ಪುಡಿಯನ್ನು ಬಳಸಿ ತಯಾರಿಸಲಾಗುತ್ತದೆ.
- ಅರಿಶಿನ ಪುಡಿ ಮತ್ತು ಹಸಿ ಅರಿಶಿನ ಬೇರುಗಳು ಒಂದೇ ಪದಾರ್ಥದ ಎರಡು ರೂಪಗಳಾಗಿವೆ. ಅರಿಶಿನ ಬೇರು ಅರಿಶಿನ ಪುಡಿಯ ಹಸಿ ರೂಪವಾಗಿದೆ. ಇದು ಕರ್ಕ್ಯುಮಿನ್ನ ಹೆಚ್ಚಿನ ಸಾಂದ್ರತೆಯನ್ನು ಹೊಂದಿದೆ. ಇದು ಆರೋಗ್ಯದ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಹೆಚ್ಚು ಶಕ್ತಿಯುತವಾಗಿದೆ.
- ಹಸಿ ಅರಿಶಿನವು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
- 2018 ರಲ್ಲಿ ‘ಫುಡ್ಸ್’ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು ಹಸಿ ಅರಿಶಿನವನ್ನು ನಿಯಮಿತವಾಗಿ ಸೇವಿಸುವುದರಿಂದ ಕೆರಳಿಸುವ ಕರುಳಿನ ಸಹಲಕ್ಷಣಗಳು ಮತ್ತು ಹೊಟ್ಟೆ ಉಬ್ಬುವ ರೋಗಲಕ್ಷಣಗಳನ್ನು ಕಡಿಮೆ ಮಾಡುವ ಮೂಲಕ ಜೀರ್ಣಕಾರಿ ಪ್ರಯೋಜನಗಳನ್ನು ನೀಡುತ್ತದೆ ಎಂದು ಕಂಡುಹಿಡಿದಿದೆ.
- ಅರಿಶಿನವು ಒಂದು ಮಸಾಲೆಯಾಗಿದ್ದು ಅದು ಅಪಧಮನಿಗಳ ಗೋಡೆಗಳ ಮೇಲೆ ಸಂಗ್ರಹವಾಗುವ ಪ್ಲೇಕ್ ಅನ್ನು ಕಡಿಮೆ ಮಾಡುತ್ತದೆ. ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಅನ್ನು ಒಡೆಯುತ್ತದೆ. ಇದಕ್ಕಾಗಿ ನೀವು ಅರಿಶಿನವನ್ನು ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಕುಡಿಯಬಹುದು.
- ಅರಿಶಿನವನ್ನು ಕರ್ಕುಮಾ ಲಾಂಗಾ ಸಸ್ಯದ ಮೂಲದಿಂದ ಪಡೆಯಲಾಗಿದೆ. ಇದು ಭಾರತೀಯ ಪಾಕಪದ್ಧತಿಯ ಆಂತರಿಕ ಭಾಗವಾಗಿದೆ. ಅರಿಶಿನ ಪುಡಿಯು ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದರೂ, ಕಚ್ಚಾ ಅರಿಶಿನದ ಕೊಂಬು ಕೂಡಾ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಅರಿಶಿನ ಪುಡಿ ಮತ್ತು ಅರಿಶಿನ ಬೇರಿನ ನಡುವಿನ ವ್ಯತ್ಯಾಸ ಅವುಗಳ ಉಪಯೋಗಗಳು ಯಾವುವು ತಿಳಿಯೋಣ.
ಅರಿಶಿನದಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ಕುರ್ಕ್ಯುಮಿನ್ ಎಂಬ ಸಂಯುಕ್ತವಿದೆ ಎನ್ನುವುದನ್ನು ಇತ್ತೀಚಿನ ಸಂಶೋಧನೆಗಳು ತೋರಿಸಿಕೊಟ್ಟಿವೆ. ಯೋಗಿ ಮತ್ತು ದಾರ್ಶನಿಕರಾದ ಸದ್ಗುರುಗಳು, ಅರಿಶಿನದ ನಾಲ್ಕು ಗಮನಾರ್ಹ ಲಾಭಗಳನ್ನು ಪಟ್ಟಿ ಮಾಡಿದ್ದಾರೆ ಮತ್ತು ಒಂದು ಚಿಟಿಕೆಯಷ್ಟು ಅರಿಶಿನ ಸೇವಿಸುವುದು ಏನೇನು ಲಾಭಗಳನ್ನು ತರಬಲ್ಲುದು ಎಂಬುದನ್ನು ವಿವರಿಸಿದ್ದಾರೆ.
#1 ಅರಿಶಿನದ ಶುದ್ಧಕಾರಕ ಆರೋಗ್ಯ ಲಾಭಗಳು
ಅರಿಶಿನವು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ನಿಮ್ಮ ಚೈತನ್ಯಶಕ್ತಿಗಳಿಗೆ ಶುಭ್ರತೆಯನ್ನು ತರುತ್ತದೆ. ಅರಿಶಿನವು ದೇಹಕ್ಕೆ ಲಾಭದಾಯಕವಷ್ಟೇ ಅಲ್ಲದೇ ನಿಮ್ಮ ಪ್ರಾಣಮಯ ಕೋಶದ ಮೇಲೂ ದೊಡ್ಡ ಪರಿಣಾಮವನ್ನು ಹೊಂದಿದೆ. ಅದು ರಕ್ತ, ಶರೀರ ಮತ್ತು ಶಕ್ತಿ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ. ಬಾಹ್ಯ ಶುದ್ಧೀಕರಣಕ್ಕೆ ಸ್ನಾನದ ನೀರಿಗೆ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ಸ್ನಾನ ಮಾಡಿ – ನಿಮ್ಮ ಶರೀರ ಚೈತನ್ಯಶೀಲವಾಗಿ ಹೊಳೆಯುವುದನ್ನು ನೀವು ಕಾಣುವಿರಿ.
#2 ಅರಿಶಿನದ ಕಫ ನಿರೋಧಕ ಆರೋಗ್ಯ ಲಾಭಗಳು
ಶೀತ ಸಂಬಂಧೀ ರೋಗಗಳಿಂದ ಬಳಲುತ್ತಿರುವವರು ಪ್ರತಿದಿನ ಮೂಗು ಕಟ್ಟಿದ ತೊಂದರೆಯನ್ನು ಅನುಭವಿಸುತ್ತಿರುತ್ತಾರೆ. ಅಂತಹವರು ಬೇವು, ಕಾಳು ಮೆಣಸು, ಜೇನು ತುಪ್ಪ ಮತ್ತು ಅರಿಶಿನದ ಬಳಕೆಯಿಂದ ಅಪಾರವಾದ ಲಾಭವನ್ನು ಪಡೆಯಬಹುದು. 10-12 ಕಾಳು ಮೆಣಸನ್ನು ಕುಟ್ಟಿ ಇಡೀ ರಾತ್ರಿ (8 ರಿಂದ 12 ಗಂಟೆಗಳ ಕಾಲ) ಜೇನು ತುಪ್ಪದಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಈ ಮಿಶ್ರಣವನ್ನು ಕಾಳು ಮೆಣಸಿನ ಸಮೇತ ಜಗಿದು ತಿನ್ನಬೇಕು. ಜೇನು ತುಪ್ಪದೊಂದಿಗೆ ಸ್ವಲ್ಪ ಅರಿಶಿನವನ್ನು ಬೆರೆಸಿ ಸೇವಿಸಿದರೂ ಲಾಭವಾಗುತ್ತದೆ.
ವಿಶೇಷ ಸೂಚನೆ 🌻
ಎಲ್ಲಾ ಡೈರಿ ಉತ್ಪನ್ನಗಳನ್ನು ತ್ಯಜಿಸಿದರೆ, ಕಫವು ಸಹಜವಾಗಿಯೇ ಕಡಿಮೆಯಾಗುತ್ತದೆ.
#3 ಅರಿಶಿನದ ಕ್ಯಾನ್ಸರ್ ನಿರೋಧಕ ಆರೋಗ್ಯ ಲಾಭಗಳು
ಕ್ಯಾನ್ಸರ್ ಒಂದು ಖಾಯಿಲೆಯಲ್ಲ. ಕ್ಯಾನ್ಸರ್ ಎಂದರೆ ನಿಮ್ಮ ಶರೀರ ನಿಮ್ಮ ವಿರುದ್ಧವೇ ಕೆಲಸ ಮಾಡುತ್ತಿದೆ ಎಂದರ್ಥ; ಕೆಲವು ಜೀವಕೋಶಗಳು ನಿಮ್ಮ ವಿರುದ್ಧ ತಿರುಗಿಬಿದ್ದಿವೆ. ಇದನ್ನು ತಡೆಗಟ್ಟಲು ಶರೀರವನ್ನು ನಿಯಮಿತವಾಗಿ ಶುದ್ಧೀಕರಿಸುವುದು ಒಳ್ಳೆಯದು. ಬರೀ ಹೊಟ್ಟೆಗೆ ಅರಿಶಿನವನ್ನು ಸೇವಿಸುವುದು ಒಂದು ಪರಿಣಾಮಕಾರಿ ಶುದ್ಧೀಕರಣದ ವಿಧಾನ.
ಕ್ಯಾನ್ಸರ್ ಬಂದ ನಂತರ ಇದು ಅಷ್ಟು ಪರಿಣಾಮಕಾರಿ ಇಲ್ಲದಿರಬಹುದು. ಆದರೆ ಒಂದು ಗೋಲಿ ಗಾತ್ರದ ಅರಿಶಿನದ ಉಂಡೆ ಮತ್ತು ಬೇವಿನ ಪುಡಿಯ ಉಂಡೆಯನ್ನು ಮುಂಜಾನೆ ಬರೀ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಮ್ಮ ಶರೀರ ಶುದ್ಧೀಕರಣಗೊಂಡು, ಕ್ಯಾನ್ಸರ್ ಜೀವಕೋಶಗಳನ್ನು ನಾಶ ಮಾಡುತ್ತದೆ.
#4 ಯೋಗ ಸಾಧನೆಯಲ್ಲಿ ಅರಿಶಿನದ ಲಾಭಗಳು
ನಿಮ್ಮ ಶರೀರವನ್ನೊಳಗೊಂಡು, ಭೂಮಿಯಿಂದ ಎರವಲು ಪಡೆದ ಎಲ್ಲವೂ ನಿರ್ದಿಷ್ಟ ಒಂದು ಪ್ರಮಾಣದ ಜಡತೆಯನ್ನು ಹೊಂದಿರುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು, ಜಡತೆಯ ಮಟ್ಟವನ್ನು ಕನಿಷ್ಟ ಮಟ್ಟದಲ್ಲಿಟ್ಟುಕೊಳ್ಳುವುದು ಮುಖ್ಯ. ನಿಮ್ಮ ಆಧ್ಯಾತ್ಮಿಕ ಸಾಧನೆ ಪರಿಣಾಮಕಾರಿಯಾಗಿದೆಯೇ ಎಂಬುದನ್ನು, ನೀವು ಎಷ್ಟು ನಿದ್ರಿಸುತ್ತೀರಿ ಮತ್ತು ಎಷ್ಟು ಚುರುಕಾಗಿರುತ್ತೀರಿ ಎಂಬುದನ್ನು ಆಧರಿಸಿ ಅಳೆಯುವಾಗ, ನೀವು ಎಷ್ಟು ಜಡತೆಯನ್ನು ಉತ್ಪಾದಿಸುತ್ತಿದ್ದೀರಿ ಎನ್ನುವುದನ್ನು ಪರೀಕ್ಷಿಸುತ್ತೇವೆ. ಒಂದು ನಿರ್ದಿಷ್ಟ ಪ್ರಮಾಣದ ಶಕ್ತಿಯು ಜೀವಕೋಶಗಳ ಹಂತವನ್ನು ಪ್ರವೇಶಿಸಲು ಶರೀರವು ಅನುವು ಮಾಡಿಕೊಡದಿದ್ದರೆ, ಜಡತೆಯ ಪ್ರಮಾಣವು ವೃದ್ಧಿಸುತ್ತದೆ. ಬೇವು ಮತ್ತು ಅರಿಶಿನದ ಸಂಮಿಶ್ರಣವು ಶರೀರದ ಜೀವಕೋಶಗಳ ರಚನೆಯನ್ನು ಹಿಗ್ಗಿಸುವುದರ ಮೂಲಕ ಶಕ್ತಿಯು ಪ್ರತಿಯೊಂದು ಸೂಕ್ಷ್ಮ ಸಂದನ್ನೂ ಪ್ರವೇಶಿಸಿ ತುಂಬುವಂತಾಗುತ್ತದೆ. ಬೇವು ಮತ್ತು ಅರಿಶಿನ ಹೀಗೆ ಶರೀರಕ್ಕೆ ಬೆಂಬಲ ನೀಡುತ್ತವೆ, ಆದರೆ ಆಧ್ಯಾತ್ಮಿಕ ಸಾಧನೆಯು ತಾನಾಗಿಯೇ ಕೂಡ ಇದನ್ನು ಸಾಧ್ಯವಾಗಿಸುತ್ತದೆ.
ಆಧ್ಯಾತ್ಮಿಕ ಸಾಧನೆಯಲ್ಲದೇ, ಮತ್ತಿತರ ವಿಧಾನಗಳಿಂದಲೂ – ಉದಾಹರಣೆಗೆ ಕಾಫಿ ಅಥವಾ ನಿಕೋಟಿನ್ ಗಳಂತಹ ಉತ್ತೇಜಕಗಳು – ನೀವು ಅಪಾರ ಪ್ರಮಾಣದ ಶಕ್ತಿಯನ್ನು ಉತ್ಪತ್ತಿ ಮಾಡಲು ಸಾಧ್ಯವಿದೆ. ಆದರೆ ಅವು ಜೀವಕೋಶಗಳನ್ನು ಹಿಗ್ಗಿಸಿ ಅವುಗಳಲ್ಲಿ ಶಕ್ತಿಯನ್ನು ಸಂಚಯಿಸಿ ದೀರ್ಘಕಾಲದಲ್ಲಿ ಬಿಡುಗಡೆ ಆಗುವಂತೆ ಮಾಡಲಾರವು. ಶಕ್ತಿಯು ಶೇಖರಣೆಯಾಗುವ ಬದಲು ತಕ್ಷಣ ವ್ಯರ್ಥವಾಗುವುದರಿಂದ ಅದು ಶರೀರಕ್ಕಷ್ಟೇ ಅಲ್ಲದೇ, ಮನಸ್ಸಿಗೆ, ನೀವು ಮಾಡುವ ಚಟುವಟಿಕೆಗೆ ಮತ್ತು ನಿಮ್ಮ ಸುತ್ತಲಿನ ಪ್ರಪಂಚಕ್ಕೆ ಹಾನಿಕಾರವಾಗುತ್ತದೆ. ನಾವು ನಮ್ಮ ಶರೀರದಲ್ಲಿ ಶಕ್ತಿಯನ್ನು ಉತ್ಪಾದಿಸಿದಾಗ, ಅದು ಸುಮ್ಮನೆ ಒಮ್ಮೆಲೆ ಸ್ಫೋಟವಾಗದಂತೆ ಹಿಡಿದಿಟ್ಟು ಅಗತ್ಯವಿದ್ದಾಗ ಬಿಡುಗಡೆಯಾಗುವಂತೆ ಮಾಡುವುದು ಅತ್ಯಂತ ಮುಖ್ಯ.
ಬೇವು ಮತ್ತು ಅರಿಶಿನವನ್ನು ಬೆಚ್ಚಗಿನ ನೀರಿನೊಂದಿಗೆ, ಸ್ವಲ್ಪ ಜೇನು ತುಪ್ಪ ಬೆರೆಸಿ ಸೇವಿಸುವುದು ಜೀವಕೋಶಗಳನ್ನು ಹಿಗ್ಗಿಸಿ ಶಕ್ತಿಯನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಸಾಧನೆಯನ್ನು ಮಾಡುವಾಗ, ಈ ಹಿಗ್ಗುವಿಕೆಯು ಮಾಂಸಖಂಡಗಳಿಗೆ ನಮ್ಯತೆಯನ್ನು ತರುತ್ತದೆ.
ನಮ್ಯತೆಯು ನಿಮ್ಮ ಶರೀರವನ್ನು ಹೆಚ್ಚು ಶಕ್ತಿಯುತ ಸಾಧ್ಯತೆಯನ್ನಾಗಿ ರೂಪಿಸಲು ಅನುವು ಮಾಡಿಕೊಡುತ್ತದೆ. ನೀವು ಆಸನಗಳನ್ನು ಮಾಡುವಾಗ ಅದನ್ನು ಅನುಭವಿಸುವಿರಿ – ಶರೀರವು ವಿಭಿನ್ನ ರೀತಿಯ ಶಕ್ತಿಯಿಂದ ಕಂಪಿಸುತ್ತದೆ
ಅರಿಶಿನವು ಚರ್ಮವನ್ನು ನಯ ಹಾಗೂ ಕಾಂತಿಯುತವಾಗಿಸುವುದು. ಚರ್ಮದಲ್ಲಿ ಇರುವಂತಹ ಕಲೆಗಳನ್ನು ಇದು ತೆಗೆಯುವುದು. ಇಸುಬಿನಂತಹ ಕೆಲವೊಂದು ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡುವುದು ಮತ್ತು ಇದರಲ್ಲಿ ಇರುವಂತಹ ನಂಜು ನಿರೋಧಕ ಗುಣವು ಗಾಯ ಮತ್ತು ಸುಟ್ಟ ಕಲೆಗಳಿಗೆ ತುಂಬಾ ಪರಿಣಾಮಕಾರಿ. ಅರಿಶಿನ ಎಲೆಯಿಂದಲೂ ಲಾಭಗಳು ಇವೆ.
ಕಾನ್ಸುಮೆರ್ ನ್ಯೂಸ್
Consumer News 6361528300