ನಮೋ ನಮೋ ದೇವಲ ಮಹರ್ಷಿ ಭಕ್ತಿ ಗೀತೆಯ ಚಿತ್ರೀಕರಣ ಮತ್ತು ಈ ಭಕ್ತಿ ಗೀತೆಯ ಬಿಡುಗಡೆ ಸಮಾರಂಭ

ದೇವಲ ಮಹರ್ಷಿ ಭಕ್ತಿಗೀತೆ ಬಿಡುಗಡೆ
ದಿನಾಂಕ 24-11-2023 ಶುಕ್ರವಾರ ಸಂಜೆ 6 ಗಂಟೆಗೆ ಬೆಂಗಳೂರಿನ ವಸಂತಪುರದಲ್ಲಿರುವ ದೇವಾಂಗ ಸೇವಾ ಸಮಾಜ ಕರ್ನಾಟಕ (ರಿ) ದ ವತಿಯಿಂದ ನಮೋ ನಮೋ ದೇವಲ ಮಹರ್ಷಿ ಭಕ್ತಿ ಗೀತೆಯ ಚಿತ್ರೀಕರಣ ಮತ್ತು ಈ ಭಕ್ತಿ ಗೀತೆಯ ಬಿಡುಗಡೆ ಸಮಾರಂಭವು ಅದ್ದೂರಿಯಾಗಿ ಆಚರಿಸಿದ್ದು ನಮ್ಮ ಸಮಾಜದ ಹೆಮ್ಮೆಯ ಸಂಗತಿ. ಗಾಯಕ, ಸಂಗೀತ ಸಂಯೋಜಕ, ಸಾಹಿತಿ, ಮತ್ತು ಸೇವಾ ಸಮಾಜದ ನಿರ್ದೇಶಕರಾದ ಶ್ರೀ ಸುರೇಶ್ ರವರು ಗೀತೆ ರಚನೆ ಮಾಡಿ ಹಾಡಿದ್ದಾರೆ. ಸಹ ಗಾಯಕರಾಗಿ ಕುದೂರು ರಾಜಶೇಖರ್ ರವರು, ಶ್ರೀಮತಿ ಶೋಭಾ ಮುರುಳಿಕೃಷ್ಣರವರು, ಶ್ರೀಮತಿ ಎಚ್,ಆರ್ ವಿಜಯಲಕ್ಷ್ಮಿ ರವರು, ಶ್ರೀಮತಿ ಸವಿತಾ ರವರು ಹಾಡಿದ್ದಾರೆ. ಈ ಹಾಡಿಗೆ ಸೇವಾ ಸಮಾಜದ ಅಧ್ಯಕ್ಷರಾದ ಶ್ರೀಯುತ ಎಂ, ಪಿ ಉಮಾಶಂಕರ್ ಅವರು ಸುರೇಶ್ ರವರು ಹಾಡಿರುವ ಭಕ್ತಿಗೀತೆಗೆ ಉತ್ತಮ ರೀತಿಯಲ್ಲಿ ನಟಿಸಿದ್ದಾರೆ. ಸಹ ಗಾಯಕರಾಗಿ ಎಲ್ಲಾ ಪದಾಧಿಕಾರಿಗಳು ಮತ್ತು ನಿರ್ದೇಶಕರುಗಳು ಚಿತ್ರೀಕರಣದಲ್ಲಿ ಪಾಲ್ಗೊಂಡು ಮನಮುಟ್ಟುವ ರೀತಿಯಲ್ಲಿ ನಟನೆ ಮಾಡಿದ್ದಾರೆ. ಈ ಚಿತ್ರೀಕರಣವು ಸಂಜೆ 5 ಗಂಟೆ ಯಿಂದ 7 ಗಂಟೆಯವರೆಗೂ ನಡೆಯಿತು. ನಂತರ ದೇವಲ ಮಹರ್ಷಿ ಜಯಂತಿ ಯನ್ನು ದೇವಲ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಅರ್ಪಿಸುವುದರೊಂದಿಗೆ ವ್ಯವಸ್ಥಿತ ರೀತಿಯಲ್ಲಿ ಆಚರಿಸಲಾಯಿತು.

Shobha


ಈ ಸುಂದರ ಸಮಾರಂಭಕ್ಕೆ ನೇಕಾರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಚ್,ಎಸ್ ಕುಮಾರಸ್ವಾಮಿ ಮತ್ತು ಪದಾಧಿಕಾರಿಗಳು ಆಗಮಿಸಿದ್ದರು. ಕೋಟೆ ನಾಯಕನಹಳ್ಳಿ ಕವಿ ಪರಪ್ಪನವರು ಹಾಗೂ ವಸಂತಪುರದ ಸುತ್ತಮುತ್ತಲಿರುವ ದೇವಾಂಗ ನೇಕಾರ ಸಮಾಜದ ಬಂಧುಗಳು ಸಾಕ್ಷಿಯಾಗಿ ಯಶಸ್ವಿಗೆ ಕಾರಣೀಭೂತರಾಗಿದ್ದರು.
ಸಂಜೆ 7:30 ಗಂಟೆಗೆ ದೇವಾಂಗ ಸೇವಾ ಸಮಾಜದ ಹಿರಿಯರು ಮಾರ್ಗದರ್ಶಕರು ನಿವೃತ್ತ ಗೌರವಾಧ್ಯಕ್ಷರಾದ ಶ್ರೀಯುತ ಕೆ, ಜಿ ವೆಂಕಟರಮಣಪ್ಪರವರು ಹಾಗೂ ಅಧ್ಯಕ್ಷರಾದ ಶ್ರೀಯುತ ಎಂ, ಪಿ ಉಮಾಶಂಕರ್ ರವರು ತಮ್ಮ ಅಮೃತ ಹಸ್ತದಿಂದ ದೇವಾಂಗ ಸೇವಾ ಸಮಾಜ ನಿರ್ಮಾಣ ಮಾಡಿರುವ ನಮೋ ನಮೋ ದೇವಲ ಮಹರ್ಷಿ ಭಕ್ತಿ ಗೀತೆಯ ಬಿಡುಗಡೆ ನೆರವೇರಿಸಿದರು. ಮತ್ತು ದೇವಾಂಗ ಸೇವಾ ಸಮಾಜದ ಹೆಣ್ಣು ಮಕ್ಕಳ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸುವುದರೊಂದಿಗೆ ಧನ್ಯವಾದಗಳನ್ನು ತಿಳಿಸಿದರು.
ಛಾಯಾಗ್ರಾಹಕರು ಮತ್ತು ಅವರ ತಂಡ ಎಲ್ಲೂ ಲೋಪವಾಗದ ರೀತಿಯಲ್ಲಿ ಚಿತ್ರೀಕರಣ ಮಾಡಿ ಮುಕ್ತಾಯಗೊಳಿಸಿದರು. ಶ್ರೀ ಸುರೇಶ್ ರವರು ಚಿತ್ರೀಕರಣ ದಲ್ಲಿ ಭಾಗವಹಿಸಿ ಯಶಸ್ವಿಯಾಗಲು ಸಹಕರಿಸಿದ ಎಲ್ಲಾ ಸಮಾಜದ ಬಂಧುಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು ಕೊನೆಯಲ್ಲಿ ಪ್ರಸಾದದ ವ್ಯವಸ್ಥೆಯು ತುಂಬಾ ಅಚ್ಚುಕಟ್ಟಾಗಿತ್ತು. ದೇವಾಂಗ ಸೇವಾ ಸಮಾಜವನ್ನು ತೊಡಗಿಸಿಕೊಂಡು ಚಿತ್ರಕೀಕರಿಸಿದ್ದಕ್ಕಾಗಿ ಸಮಾಜದ ಎಲ್ಲಾ ಬಂಧುಗಳು ಶ್ರೀ ಸುರೇಶ್ ರವರನ್ನು ಶ್ಲಾಘಿಸಿದರು.
ಶ್ರೀಮತಿ ಶೋಭಾ ಮುರುಳಿಕೃಷ್ಣ
ಬೆಂಗಳೂರು

Consumer News

Related Posts