ವರ ಮಹಾಲಕ್ಷ್ಮೀ ಹಬ್ಬದ ವ್ರತ ಕಥೆ ಓದಿ ಸಂಪೂರ್ಣ ಮಾಡಿ ಶ್ರೀ ಮಹಾಲಕ್ಷ್ಮಿ ಅನುಗ್ರಹಕ್ಕೆ ಪಾತ್ರರಾಗಿ 🙏🙏🙏🙏🙏🙏🙏🙏🙏🙏🙏🙏ಪೂರ್ವಕಾಲದಲ್ಲಿ ಸತ್ಯಲೋಕವಾಸಿಗಳಾದ ಋಷಿಶ್ರೇಷ್ಠರೆಲ್ಲರೂ ಸೇರಿ ಪುರಾಣಿಕ ಶಿಖಾಮಣಿಯಾದ ಸೂತಮಹರ್ಷಿಯನ್ನು ಕುರಿತು ಪುರಾಣ ಪುರುಷೋತ್ತಮರಾದ ತಾವು ತ್ರಿಕಾಲ ಜ್ಞಾನಿ.

Read More

🕉️ ಓಂ ಶ್ರೀ ಗುರುಭ್ಯೋ ನಮಃ 🕉️‌ ‌ ‌

*ವರಮಹಾಲಕ್ಷ್ಮಿಯನ್ನು ಪೂಜಿಸುವುದು ಹೇಗೆ..? ಇದು ಲಕ್ಷ್ಮಿ ಪೂಜೆಯ 32 ಹಂತಗಳು*

ಸದ್ಯದಲ್ಲಿಯೇ ದೇಶದಾದ್ಯಂತ ವರ ಮಹಾಲಕ್ಷ್ಮೀ ವ್ರತ ಪೂಜೆ. ವರಮಹಾಲಕ್ಷ್ಮಿ ಪೂಜೆಯಲ್ಲಿ ನಾನಾ ಹಂತಗಳಿವೆ. 16 ವರಮಹಾಲಕ್ಷ್ಮಿ ಪೂಜಾ ಹಂತಗಳನ್ನು ಒಳಗೊಂಡಿರುವ ಪೂಜೆಯನ್ನು ಶೋಡಶೋಪಚಾರವೆಂದು 32 ಹಂತಗಳನ್ನೊಳಗೊಂಡಿರುವ ವರಮಹಾಲಕ್ಷ್ಮಿ ಪೂಜೆಯನ್ನು ದ್ವಾತ್ರಿಂಶೋಪಚಾರ ಪೂಜೆಯೆಂದು ಕರೆಯಲಾಗುತ್ತದೆ. ದ್ವಾತ್ರಿಂಶೋಪಚಾರ ಪೂಜೆಯನ್ನು ಬಟ್ಟಿಶೋಪಚಾರ ಪೂಜೆಯೆಂದೂ ಕೂಡ ಕರೆಯಲಾಗುತ್ತದೆ. ವರಮಹಾಲಕ್ಷ್ಮಿ ಪೂಜೆಯ ಹಂತಗಳಾವುವು ತಿಳಿದುಕೊಳ್ಳಿ.

*ಧ್ಯಾನ*

ವರಮಹಾಲಕ್ಷ್ಮಿ ಪೂಜೆಯನ್ನು ಲಕ್ಷ್ಮಿಯ ಧ್ಯಾನದೊಂದಿಗೆ ಪ್ರಾರಂಭಿಸಬೇಕು. ನಿಮ್ಮ ಮುಂದೆ ಈಗಾಗಲೇ ಸ್ಥಾಪಿಸಲಾದ ಶ್ರೀ ವರಮಹಾಲಕ್ಷ್ಮಿ ಪ್ರತಿಮೆಯ ಮುಂದೆ ಕುಳಿತು ಧ್ಯಾನವನ್ನು ಮಾಡಬೇಕು. ವರಮಹಾಲಕ್ಷ್ಮಿಯನ್ನು ಈ ಮಂತ್ರದೊಂದಿಗೆ ಧ್ಯಾನಿಸಿ:

ಮಂತ್ರ: *ಕ್ಷೀರಸಾಗರ ಸಂಭೂತಂ ಕ್ಷೀರವರ್ಣಸಮಪ್ರಭಂ* |
*ಕ್ಷೀರವರ್ಣಾಸಮಂ ವಸ್ತ್ರಂ ದಧಾನಾಂ ಹರಿವಲ್ಲಭಂ* ||

*ಆವಾಹನ*

ಶ್ರೀ ವರಮಹಾಲಕ್ಷ್ಮಿ ಧ್ಯಾನವನ್ನು ಮಾಡಿದ ನಂತರ ಆವಾಹನ ಮುದ್ರದ ಮೂಲಕ ಲಕ್ಷ್ಮೀ ಮೂರ್ತಿಯ ಮುಂದೆ ಆವಾಹನ ಮಂತ್ರವನ್ನು ಅನುಸರಿಸಬೇಕು. ಆವಾಹನ ಮುದ್ರೆಯಲ್ಲಿ ಎರಡು ಅಂಗೈಗಳನ್ನು ಮುಂದಕ್ಕೆ ಚಾಚಿ ಎರಡೂ ಹೆಬ್ಬೆರಳುಗಳನ್ನು ಒಳಕ್ಕೆ ಮಡಚಿರಬೇಕು.

ಮಂತ್ರ: *ಬ್ರಾಹ್ಮೀ ಹಂಸ ಸಮಾರೂಢ ಧಾರಿಣ್ಯಕ್ಷಕಮಂಡಲು* |

*ವಿಷ್ಣು ತೇಜೋಧಿಕ ದೇವಿ ಸ ಮಾಮ್‌ ಪಾತು ವರಪ್ರದ* ||

*ಆಸನ*

ಶ್ರೀ ವರಮಹಾಲಕ್ಷ್ಮಿಯನ್ನು ಆವಾಹನ ಮಾಡಿದ ನಂತರ ಅಂಜಲಿಯಲ್ಲಿ ಅಂದರೆ ಎರಡೂ ಅಂಗೈಯನ್ನು ಜೋಡಿಸಿ 5 ಹೂವುಗಳನ್ನು ತೆಗೆದುಕೊಂಡು ಈ ಮಂತ್ರವನ್ನು ಜಪಿಸುತ್ತಾ ದೇವಿಗೆ ಆಸನ ಮಾಡಲು ಮೂರ್ತಿಯ ಮುಂದೆ ಇಡಬೇಕು.

ಮಂತ್ರ: *ಮಹೇಶ್ವರಿ ಮಹಾದೇವಿ ಆಸನಂ ತೇ ದದಾಮ್ಯಹಂ* |

*ಮಹೈಶ್ವರ್ಯಸಮಾಯುಕ್ತಂ ಬ್ರಾಹ್ಮಣಿ ಬ್ರಾಹ್ಮಣಃ ಪ್ರಿಯೇ* ||

*ಪಾದ್ಯ*

ಶ್ರೀ ವರಮಹಾಲಕ್ಷ್ಮಿಗೆ ಆಸನವನ್ನು ಅರ್ಪಿಸಿದ ನಂತರ ಆಕೆಯ ಪಾದಗಳನ್ನು ನೀರಿನಿಂದ ತೊಳೆಯಬೇಕು. ಪಾದಗಳನ್ನು ತೊಳೆಯುವಾಗ ಈ ಮಂತ್ರಗಳನ್ನು ತಪ್ಪದೇ ಜಪಿಸಿ.

ಮಂತ್ರ: *ಕುಮಾರ ಶಕ್ತಿ ಸಂಪನ್ನೆ ಕೌಮರಿ ಶಿಖಿವಾಹನೇ* |

*ಪಾದ್ಯಂ ದದಾಮ್ಯಹಂ ದೇವಿ ವರದೇ ವರಲಕ್ಷಣೇ* ||

*ಅರ್ಘ್ಯ*

ಲಕ್ಷ್ಮಿಯ ಪಾದಗಳನ್ನು ತೊಳೆದ ನಂತರ ಮಂತ್ರವನ್ನು ಜಪಿಸುತ್ತಾ ಶ್ರೀ ವರಮಹಾಲಕ್ಷ್ಮಿಯ ಮುಖ್ಯ ಅಭಿಷೇಕಕ್ಕೆ ನೀರನ್ನು ಅರ್ಪಿಸಿ.

ಮಂತ್ರ: *ತೀರ್ಥೋದಕೈರ್ಮಹಾದಿವ್ಯೈ ಪಾಪಸಂಹಾರಕಾರಕೈಃ* |

*ಅರ್ಘ್ಯಂ ಗೃಹಣ ಭೋ ಲಕ್ಷ್ಮಿ ದೇವಾನಾಮುಪಕಾರಿಣೀ* ||

*ಆಚಮನ*

ವರಮಹಾಲಕ್ಷ್ಮಿಗೆ ಅರ್ಘ್ಯವನ್ನು ನೀಡಿದ ನಂತರ ಮಂತ್ರವನ್ನು ಅನುಸರಿಸುತ್ತಾ ಆಚಮನಕ್ಕಾಗಿ ವರಮಹಾಲಕ್ಷ್ಮಿಗೆ ನೀರನ್ನು ಅರ್ಪಿಸಿ.

ಮಂತ್ರ: *ವೈಷ್ಣವೀ ವಿಷ್ಣುಸಂಯುಕ್ತೇ ಅಸಂಖ್ಯಾಯುಧಧಾರಿಣೀ* |

*ಆಚಮ್ಯತಾಂ ದೇವಪೂಜ್ಯೆ ವರದೇ ಅಸುರಮರ್ದಿನೀ* ||

*ಪಂಚಾಮೃತ ಸ್ನಾನ*
ಆಚಮನ ಪೂರ್ಣಗೊಂಡ ನಂತರ ಲಕ್ಷ್ಮೀ ದೇವಿಗೆ ಪಂಚಾಮೃತ ಸ್ನಾನವನ್ನು ಮಾಡಿಸಬೇಕು. ಪಂಚಾಮೃತ ಸ್ನಾನದ ಮಂತ್ರ ಹೀಗಿದೆ.

ಮಂತ್ರ: *ಪದ್ಮೇ ಪಂಚಾಮೃತೈಃ ಶುದ್ಧೈಃ ಸ್ನಪಯಿಷ್ಯೇ ಹರಿಪ್ರಿಯೇ* |

*ವರದೇ ಶಕ್ತಿ ಸಂಭೂತೇ ವರದೇವಿ ವರಪ್ರಿಯೇ* ||

*ಸ್ನಾನ*
ವರಲಕ್ಷ್ಮಿಗೆ ಪಂಚಾಮೃತ ಸ್ನಾನವನ್ನು ಮಾಡಿಸಿದ ನಂತರ ನೀರಿನಿಂದ ಆಕೆಗೆ ಸ್ನಾನವನ್ನು ಮಾಡಿಸಬೇಕು. ಲಕ್ಷ್ಮಿಯನ್ನು ನೀರಿನಿಂದ ಸ್ನಾನ ಮಾಡಿಸುವಾಗ ಈ ಮಂತ್ರವನ್ನು ಪಠಿಸಿ.

ಮಂತ್ರ: *ಗಂಗಾಜಲಂ ಸಮಾನೀತಂ ಸುಗಂಧೀ ದ್ರವ್ಯ ಸಮಾಯುತಂ* |

*ಸ್ನಾನಾರ್ಥಂ ತೇ ಮಯ ದತ್ತಂ ಗೃಹಣ ಪರಮೇಶ್ವರಿ* ||

*ವಸ್ತ್ರ*
ಸ್ನಾನದ ನಂತರ ದೇವಿಗೆ ಹೊಸ ವಸ್ತ್ರವನ್ನು ಧರಿಸಬೇಕು. ಆಕೆಗೆ ವಸ್ತ್ರವನ್ನು ಧರಿಸುವಾಗ ಪಠಿಸಬೇಕಾದ ಮಂತ್ರ ಹೀಗಿದೆ.

ಮಂತ್ರ: *ರಜತಾದ್ರಿಸಮಂ ದಿವ್ಯಂ ಕ್ಷೀರಸಾಗರ ಸನ್ನಿಭಂ* |

*ಚಂದ್ರಪ್ರಭಾಸಂ ದೇವಿ ವಸ್ತ್ರಂ ತೇ ಪ್ರದದಾಮ್ಯಹಂ* ||

*ಕಂಠಸೂತ್ರ*
ದೇವಿಯ ಕೊರಳಿಗೆ ಹಾರವನ್ನು ಧರಿಸುವಾಗ ಈ ಮಂತ್ರವನ್ನು ಪಠಿಸಿ, ನಂತರ ಹಾರವನ್ನು ಹಾಕಿರಿ.

ಮಂತ್ರ: *ಮಾಂಗಲ್ಯಮಣಿಸಂಯುಕ್ತಂ ಮುಕ್ತಫಲಸಮನ್ವಿತಂ* |

*ದತ್ತಂ ಮಂಗಲಸೂತ್ರಂ ತೇ ಗೃಹಣ ಸುರವಲ್ಲಭೇ* ||

*ಆಭರಣ*
ದೇವಿಗೆ ಆಭರಣವನ್ನು ಹಾಕುವಾಗ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: *ಸುವರ್ಣಭೂಷಿತಂ ದಿವ್ಯಂ ನಾನಾರತ್ನಸುಶೋಭಿತಂ* |

*ತ್ರೈಲೋಕ್ಯ ಭೂಷಿತೇ ದೇವಿ ಗೃಹಣಾಭರಣಂ ಶುಭಂ* ||

*ಗಂಧ ಸಮರ್ಪಣ*
ಲಕ್ಷ್ಮೀ ದೇವಿಗೆ ಗಂಧವನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: *ರಕ್ತಗಂಧಂ ಸುಗಂಧಧ್ಯಮಷ್ಟಗಂಧಸಮನ್ವಿತಂ* |

*ದಾಸ್ಯಾಮಿ ದೇವಿ ವರದೇ ಲಕ್ಷ್ಮಿರ್ದೇವಿ ಪ್ರಸಿದ ಮೇ* |

*ಸೌಭಾಗ್ಯ ದ್ರವ್ಯ*
ಲಕ್ಷ್ಮೀ ದೇವಿಗೆ ಅರಶಿಣ, ಕುಂಕುಮ, ಸಿಂಧೂರ, ಕಾಡಿಗೆ ಸೇರಿದಂತೆ ಇನ್ನಿತರ ಸೌಭಾಗ್ಯ ವಸ್ತುಗಳನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: *ಹರಿದ್ರಾಂ ಕುಂಕುಮಾಂ ಚೈವ ಸಿಂಧೂರಂ ಕಜ್ಜಲಾನ್ವಿತಂ* |

*ಸೌಭಾಗ್ಯದ್ರವ್ಯಸಮ್ಯುಕ್ತಂ ಗೃಹಣ ಪರಮೇಶ್ವರಿ* ||

*ಪುಷ್ಪ ಸಮರ್ಪಣೆ*
ದೇವಿಗೆ ಅಲಂಕಾರವನ್ನು ಮಾಡಿದ ನಂತರ ಈ ಮಂತ್ರದೊಂದಿಗೆ ಹೂವುಗಳನ್ನು ಅರ್ಪಿಸಬೇಕು.

ಮಂತ್ರ: *ನಾನಾವಿಧಾನಿ ಪುಷ್ಪಾಣಿ ನಾನಾ ವರ್ಣಯುತಾನಿ ಚ* |

*ಪುಷ್ಪಾಣಿ ತೇ ಪ್ರಯಚ್ಚಾಮಿ ಭಕ್ತಯಾ ದೇವಿ ವರಪ್ರದೇ* ||

*ಅಂಗ ಪೂಜನಾ*
ಈಗ ವರಲಕ್ಷ್ಮಿಯನ್ನು ಪೂಜಿಸಬೇಕು. ಗಂಧ, ಅಕ್ಷತೆ ಮತ್ತು ಪುಷ್ಪವನ್ನು ಎಡಗೈಯಲ್ಲಿ ತೆಗೆದುಕೊಂಡು ಮಂತ್ರವನ್ನು ಹೇಳುತ್ತ ಬಲಗೈಯಿಂದ ಶ್ರೀ ವರಲಕ್ಷ್ಮಿ ಮೂರ್ತಿಗೆ ಅರ್ಪಿಸಬೇಕು.

ಮಂತ್ರ: ಓಂ ವರಲಕ್ಷ್ಮ್ಯೈ ನಮಃ ಪಾದೌ ಪೂಜಯಾಮಿ |

ಓಂ ಕಮಲವಾಸಿನ್ಯೈ ನಮಃ ಗುಲ್ಫೌ ಪೂಜಯಾಮಿ |

ಓಂ ಪದ್ಮಲಯಾಯೈ ನಮಃ ಜಂಘೇ ಪೂಜಯಾಮಿ |

ಓಂ ಶ್ರೀಯ್ಯೈ ನಮಃ ಜಾನುನಿ ಪೂಜಯಾಮಿ |

ಓಂ ಇಂದಿರಾಯ್ಯೈ ನಮಃ ಉರು ಪೂಜಯಾಮಿ |

ಓಂ ಹರಿಪ್ರಿಯ್ಯೈ ನಮಃ ನಾಭಿ ಪೂಜಯಾಮಿ |

ಓಂ ಲೋಕದಾತ್ರ್ಯೈ ನಮಃ ಸ್ತಾನೌ ಪೂಜಯಾಮಿ |

ಓಂ ವಿದಾತ್ರ್ಯೈ ನಮಃ ಕಠಂ ಪೂಜಯಾಮಿ |

ಓಂ ದಾತ್ರ್ಯೈ ನಮಃ ನಾಸಾಂ ಪೂಜಯಾಮಿ |

ಓಂ ಸರಸ್ವತ್ಯೈ ನಮಃ ಮುಖಂ ಪೂಜಯಾಮಿ |

ಓಂ ಪದ್ಮಾನಿಧಯೇ ನಮಃ ನೇತ್ರೇ ಪೂಜಯಾಮಿ |

ಓಂ ಮಾಂಗಲ್ಯೈ ನಮಃ ಕರ್ಣೌ ಪೂಜಯಾಮಿ |

ಓಂ ಶ್ರೀ ಮಹಾಲಕ್ಷ್ಮ್ಯೈ ನಮಃ ಶಿರಃ ಪೂಜಯಾಮಿ |

ಓಂ ಶ್ರೀ ಮಹಾಕಾಳ್ಯೈ ನಮಃ ಸರ್ವಾಂಗಂ ಪೂಜಯಾಮಿ |

*ಧೂಪ*
ಲಕ್ಷ್ಮೀ ದೇವಿಗೆ ಧೂಪವನ್ನು ಬೆಳಗುವಾಗ ಈ ಮಂತ್ರವನ್ನು ಪಠಿಸಬೇಕು

ಮಂತ್ರ: *ಧೂಪಂ ದಾಸ್ಯಾಮಿ ತೇ ದೇವಿ ಗೋ ಘೃತೇನ ಸಮನ್ವಿತಂ* |

*ಪ್ರತಿಗ್ರಹಣ ಮಹಾದೇವಿ ಭಕ್ತಾನಾಂ ವರದಪ್ರಿಯೇ* |

*ದೀಪ*
ಲಕ್ಷ್ಮೀ ದೇವಿಗೆ ದೀಪವನ್ನು ಬೆಳಗುವಾಗ ಈ ಕೆಳಗಿನ ಮಂತ್ರವನ್ನು ಹೇಳಬೇಕು.

ಮಂತ್ರ: *ಸಾಜ್ಯಂ ಚ ವರ್ತಿ ಸಂಯುಕ್ತಂ ವಹ್ನಿನಾ ಯೋಜಿತಂ ಮಯಾ* |

*ದೀಪಂ ಗ್ರಹಣ ದೇವೇಶಿ ತ್ರೈಲೋಕ್ಯತಿಮಿರಾಪಹಂ* ||

*ನೈವೇದ್ಯ*
ದೀಪದ ನಂತರ ದೇವಿಗೆ ನೈವೇದ್ಯವನ್ನು ಈ ಮಂತ್ರದೊಂದಿಗೆ ಅರ್ಪಿಸಬೇಕು.

ಮಂತ್ರ: *ನೈವೇದ್ಯಂ ಪರಂ ದಿವ್ಯಂ ದೃಷ್ಟಿಪ್ರಿತಿಕರಂ ಶುಭಂ* |

*ಭಕ್ಷ್ಯಭೋಜ್ಯಾದಿಸಂಯುಕ್ತಂ ಪರಮಾನ್ನಾದಿಸಂಯುತಂ* ||

*ತಾಂಬೂಲ*
ಲಕ್ಷ್ಮೀ ದೇವಿಗೆ ಎಲೆ ಅಡಿಕೆಯ ತಾಂಬೂಲವನ್ನು ನೀಡುವಾಗ ಈ ಮಂತ್ರವನ್ನು ಹೇಳಬೇಕು.

ಮಂತ್ರ: *ನಾಗವಲ್ಲಿದಲೈರ್ಯುಕ್ತಂ ಚೂರ್ಣಕ್ರಮುಕಸಂಯುಕ್ತಂ* |

*ವರಲಕ್ಷ್ಮೀ ಗ್ರಹಣ ತ್ವಂ ತಾಂಬೂಲಂ ಪ್ರತಿಗೃಹ್ಯತಾಂ* ||

*ದಕ್ಷಿಣಾ*
ಲಕ್ಷ್ಮೀ ದೇವಿಗೆ ಉಡುಗೊರೆಯನ್ನು ನೀಡುವಾಗ ತಪ್ಪದೇ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: *ಸುವರ್ಣಂ ಸರ್ವಧಾತುನಾಂ ಶ್ರೇಷ್ಠಂ ದೇವಿ ಚ ತತ್ಸದಾ* |

*ಭಕ್ತಯಾ ದದಾಮಿ ವರದೇ ಸ್ವರ್ಣವೃಷ್ಠಿಂ ಚ ದೇಹಿ ಮೇ* ||

*ನೀರಾಜನ*
ನಂತರ ವರಮಹಾಲಕ್ಷ್ಮಿಗೆ ನೀರಾಜನ ಅಂದರೆ ಆರತಿಯನ್ನು ಬೆಳಗಬೇಕು. ನೀವು ಆರತಿಯನ್ನು ಬೆಳಗುವಾಗ ಈ ಮಂತ್ರವನ್ನು ಪಠಿಸುತ್ತ ಆರತಿಯನ್ನು ಬೆಳಗುವುದು ಉತ್ತಮ.

ಮಂತ್ರ: *ನೀರಾಜನಂ ಸುಮಂಗಲ್ಯಂ ಕರ್ಪೂರೇಣಾ ಸಮನ್ವಿತಂ* |

*ಚಂದ್ರಾರ್ಕವಹ್ನಿಸದೃಶಂ ಗ್ರಹಣ ದೇವಿ ನಮೋಸ್ತು ತೇ* ||

*ದೋರಕಬಂಧನ*
ದೋರಕಗ್ರಹಣದ ನಂತರ ಲಕ್ಷ್ಮೀ ಪೂಜೆಯನ್ನು ಮಾಡುವ ಭಕ್ತರು ದೋರಕ ಅಂದರೆ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು. ದಾರವನ್ನು ಕಟ್ಟುವಾಗ ಈ ಮಂತ್ರವನ್ನು ಜಪಿಸಿ.

ಮಂತ್ರ: *ಕರಿಷ್ಯಾಮಿ ವ್ರತಂ ದೇವಿ ತ್ವದ್‌ಭಕ್ತಸ್ತ್ವತ್ಪರಾಯಣ* |

*ಶ್ರೀಯಂ ದೇಹಿ ಯಶೋ ದೇಹಿ ಸೌಭಾಗ್ಯಂ ದೇಹಿ ಮೇ ಶುಭೇ* ||

*ಪುನರ್‌ ಅರ್ಘ್ಯ*
ಲಕ್ಷ್ಮೀ ದೇವಿಗೆ ದೋರಕಬಂಧನವನ್ನು ಮಾಡಿದ ನಂತರ, ಮತ್ತೊಮ್ಮೆ ದೇವಿಗೆ ಅರ್ಘ್ಯವನ್ನು ಅರ್ಪಿಸಬೇಕು. ದೇವಿಗೆ ಮತ್ತೊಮ್ಮೆ ಅರ್ಘ್ಯವನ್ನು ಅರ್ಪಿಸುವಾಗ ನಿಮ್ಮ ಮಂತ್ರ ಬೇರೆಯದ್ದಾಗಿರಬೇಕು. ಪುನರ್‌ ಅರ್ಘ್ಯವನ್ನು ನೀಡುವಾಗ ಜಪಿಸಬೇಕಾದ ಮಂತ್ರವಿದು.

ಮಂತ್ರ: *ಕ್ಷೀರಾರ್ಣವಸುತೇ ಲಕ್ಷ್ಮಿಶ್ಚಂದ್ರಸ್ಯ ಚ ಸಹೋದರಿ* |

*ಗ್ರಹಣಾರ್ಘ್ಯಂ ಮಹಾಲಕ್ಷ್ಮಿರ್ದೇವಿ ತುಭ್ಯಂ ನಮೋಸ್ತು ತೇ* ||

*ಬಿಲ್ವಪತ್ರ*
ವರಮಹಾಲಕ್ಷ್ಮಿ ಗೆ ಬಿಲ್ವ ಪತ್ರೆಯನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಿ.

ಮಂತ್ರ: *ಶ್ರೀವೃಕ್ಷಸ್ಯ ದಳಂ ದೇಹಿ ಮಹಾದೇವಪ್ರಿಯಂ ಸದಾ* |

*ಬಿಲ್ವಪತ್ರಂ ಪ್ರಯಚ್ಛಾಮಿ ಪವಿತ್ರಂ ತೇ ಸುನಿರ್ಮಲಂ* ||

*ಪ್ರದಕ್ಷಿಣಾ*
ಈಗ ನೀವು ದೇವಿಗೆ ಪ್ರದಕ್ಷಿಣೆಯನ್ನು ಹಾಕಬೇಕು. ಪ್ರದಕ್ಷಿಣೆಯನ್ನು ಯಾವಾಗಲೂ ನಿಮ್ಮ ಎಡದಿಂದ ಬಲಕ್ಕೆ ಹಾಕಬೇಕು. ಪ್ರದಕ್ಷಿಣೆಯನ್ನು ಹಾಕುವಾಗ ಪಠಿಸಬೇಕಾದ ಮಂತ್ರವಿದು.

ಮಂತ್ರ: *ಇಹ ಜನ್ಮನಿ ಯತ್ಪಾಪಂ ಮಮ ಜನ್ಮಾಂತರೇಷು ಚ* |

*ನಿವಾರಯ ಮಹಾದೇವಿ ಲಕ್ಷ್ಮೀ ನಾರಾಯಣ ಪ್ರಿಯೇ* ||

*ನಮಸ್ಕಾರ* ‌ ‌ ‌ ‌ ಲಕ್ಷ್ಮೀ ದೇವಿಗೆ ನಮಸ್ಕರಿಸುವ ಜಪಿಸಬೇಕಾದ ಮಂತ್ರವಿದು.

ಮಂತ್ರ: *ಕಾಮೋದರಿ ನಮಸ್ತೇಸ್ತು ನಮಸ್ತ್ರೈಲೋಕ್ಯನಾಯಿಕೇ* |

*ಹರಿಕಾಂತೇ ನಮಸ್ತೇಸ್ತು ತ್ರಾಹಿ ಮಾಮ್‌ ದುಃಖಸಾಗರಾತ್‌* ||

*ವ್ರತ ಸಮರ್ಪಣ*
‌ ಈ ಎಲ್ಲಾ ನಿಯಮಗಳು ಮುಗಿದ ನಂತರ ದೇವಿ ಲಕ್ಷ್ಮೀ ವ್ರತವನ್ನು ಸಮರ್ಪಿಸಬೇಕು. ವ್ರತ ಸಮರ್ಪಣೆಗೆ ನೀವು ಈ ಮಂತ್ರವನ್ನು ಹೇಳಿ.

ಮಂತ್ರ: *ಕ್ಷೀರಾರ್ಣವಸಮುದ್ಭೂತೆ ಕಮಲೇ ಕಮಲಾಲಯೇ* |

*ಪ್ರಯಚ್ಛ ಸರ್ವಕಾಮಾಂಶ್ಚ ವಿಷ್ಣು ವಿಷ್ಣು ವಕ್ಷಃ ಸ್ಥಲಾಲಯ* ||

*ಕ್ಷಮಾಪಣಾ*
ನೀವು ಪೂಜೆಯಲ್ಲಿ ತಿಳಿದು ಅಥವಾ ತಿಳಿಯದೆಯೋ ಮಾಡಿದ ತಪ್ಪಗಳಿಗೆ ಲಕ್ಷ್ಮಿಯಲ್ಲಿ ಕ್ಷಮೆಯನ್ನು ಕೇಳಲು ಈ ಮಂತ್ರವನ್ನು ಪಠಿಸಿ. ಇದರಿಂದ ಲಕ್ಷ್ಮಿ ನಿಮ್ಮ ತಪ್ಪುಗಳನ್ನು ಕ್ಷಮಿಸುವಳು.

ಮಂತ್ರ: *ಛತ್ರಂ ಚಾಮರಮಾಂದೋಲಂ ದತ್ತ್ವಾ ವ್ಯಜನದರ್ಪಣೆ* |

*ಗೀತಾವಾದಿತ್ರನೃತ್ಯೈಶ್ಚ ರಾಜಸಮ್ಮಾನನೈಸ್ತಥಾ* |

*ಕ್ಷಮಾಪಯೇ ಸೂಪಚಾರೈಃ ಸಮಭ್ಯರ್ಚ್ಯ ಮಹೇಶ್ವರೀ* ||

*ಪ್ರಾರ್ಥನಾ*
ಈಗ ಲಕ್ಷ್ಮೀ ದೇವಿಗೆ ಪ್ರಾರ್ಥನೆಯನ್ನು ಮಾಡಬೇಕು. ಪ್ರಾರ್ಥನೆ ಮಾಡುವ ಮಂತ್ರ.

ಮಂತ್ರ: *ವರಲಕ್ಷ್ಮೀರ್‌ ಮಹಾದೇವಿ ಸರ್ವಕಾಮ – ಪ್ರದಾಯಿನಿ* |

*ಯನ್ಮಯಾ ಚ ಕೃತಂ ದೇಹಿ ಪರಿಪೂರ್ಣಾಂ ಕುರುಶ್ವ ತತ್‌* |

*ವಾಯನಮಂತ್ರ*
ನಂತರ ಶ್ರೀ ವರಮಹಾಲಕ್ಷ್ಮಿಗೆ ಸಿಹಿಯನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: *ಏಕವಿಂಶತಿಪಕ್ವಾನ್ನಶರ್ಕರಾಘೃತಸಂಯುತಂ* |

*ವಾಯನಂ ತೆ ಪ್ರಯಚ್ಛಾಮಿ ಇಂದಿರಾ ಪ್ರಿಯತಾಮಿತಿ* |

*ಇಂದಿರಾ ಪ್ರತಿಗ್ರಹಣಾತಿ ಇಂದಿರಾ ವೈ ದದಾತಿ ಚ* |

*ಇಂದಿರಾ ತಾರಕೋಭಾಭ್ಯಾಮಿಂದಿರಾಯೈ ನಮೋಃ ನಮಃ* ||

*ಪೂಜಾ ಸಮರ್ಪಣ*
‌ ಪೂಜೆಯ ಕೊನೆಯದಾಗಿ ತಾಯಿ ಲಕ್ಷ್ಮಿಗೆ ಪೂಜೆಯನ್ನು ಸಮರ್ಪಿಸಬೇಕು. ಪೂಜೆಯನ್ನು ಸಮರ್ಪಿಸಲು ಈ ಮಂತ್ರವನ್ನು ಪಠಿಸಿ.

ಮಂತ್ರ: *ಪಂಚ ವಾಯನಕಾನೇವಂ ದದ್ಯಾದ್‌ ದಕ್ಷಿಣಾಯಾ ಯುತಾನ್‌* |

*ವಿಪ್ರಾಯ ಚಾಥ್‌ ಚತಯೇ ದೇವ್ಯೈ ತು ಬ್ರಹ್ಮಚಾರಿಣೇ* |

*ಸುವಾಸಿನ್ಯೈ ತತಸ್ತ್ವೇಕಂ ದಾಪಯೆಚ್ಛ ಯಥಾವಿಧಿ* ||

ಗುರುವಾರ ಭೀಮ ನ ಅಮಾವಾಸ್ಯೆ ಪ್ರಯುಕ್ತ ಈ ಮಾಹಿತಿ

ಆಷಾಢ ಮಾಸದ ಅಮವಾಸ್ಯೆಯಂದು ಭೀಮನ ಅಮವಾಸ್ಯೆ ಅಥವಾ ಭೀಮ ಅಮವಾಸ್ಯೆ ವ್ರತವನ್ನು ಮಾಡುತ್ತಾರೆ.

ಶಿವ ಮತ್ತು ಪಾರ್ವತಿಯ ಮೇಲೆ ಯುವ ಹುಡುಗಿಯೊಬ್ಬಳು ಇಟ್ಟಂತಹ ಭಕ್ತಿಯ ಕಥೆಯನ್ನು ಇದು ತಿಳಿಸುತ್ತದೆ.

ಮಹಿಳೆಯರು ಮತ್ತು ಹುಡುಗಿಯರು ಭೀಮನ ಅಮವಾಸ್ಯೆಯನ್ನು ತನ್ನ ಸಹೋದರ ಮತ್ತು ಪತಿಯ ಆರೋಗ್ಯ ಮತ್ತು ಆಯುಷ್ಯ ಹಾಗೂ ಅವರಿಗೆ ಅಭಿವೃದ್ಧಿಗಾಗಿ ಈ ವ್ರತವನ್ನು ಮಾಡುತ್ತಾರೆ.

ಈ ವ್ರತವು ಜನಪ್ರಿಯ ಕಥೆಯೊಂದನ್ನು ಹೊಂದಿದ್ದು ಜ್ಯೋತಿ ಭೀಮೇಶ್ವರ ಪೂಜೆ ಅಥವಾ ಭಾಗೀರಥಿ ನದಿ ಹೋಗಿ ಎಂದು ಕರೆಯಲಾಗಿದೆ.

ದಂತಕಥೆಯ ಪ್ರಕಾರ ಬ್ರಾಹ್ಮಣ ದಂಪತಿಗಳು ಕಾಶಿಗೆ ಹೋಗಿ ಶಿವನನ್ನು ಪೂಜಿಸಲು ನಿರ್ಧರಿಸುತ್ತಾರೆ. ಆದರೆ ಆ ದಂಪತಿಗಳಿಗೆ ಒಬ್ಬ ಮಗಳಿದ್ದು ಆಕೆಯನ್ನು ತಮ್ಮೊಂದಿಗೆ ಕರೆದೊಯ್ಯಲು ಅವರಿಗೆ ಇಷ್ಟವಾಗುವುದಿಲ್ಲ. ಏಕೆಂದರೆ ಆಕೆ ಬೆಳೆದ ಹುಡುಗಿಯಾದ್ದರಿಂದ ಆಕೆಯ ಜವಬ್ದಾರಿ ಮಾಡುವುದು ಕಷ್ಟ ಎಂದು ತಿಳಿದು ಮನೆಯಲ್ಲೇ ಆಕೆಯನ್ನು ಬಿಟ್ಟು ಹೋಗಲು ನಿರ್ಧರಿಸುತ್ತಾರೆ.

ಅವರ ಹಿರಿಯ ಮಗ ವಿವಾಹಿತನಾಗಿದ್ದರಿಂದ ಪುತ್ರನ ಮನೆಯಲ್ಲಿ ಮಗಳನ್ನು ಬಿಟ್ಟು ಹೋಗಲು ದಂಪತಿಗಳು ನಿರ್ಧರಿಸುತ್ತಾರೆ. ಇನ್ನು ಅವರು ಮರಳಿ ಬರದೇ ಇದ್ದಲ್ಲಿ ಮಗಳಿಗೆ ಮದುವೆ ಮಾಡಿಸು ಎಂದು ತಿಳಿಸಿ ಹೋಗುತ್ತಾರೆ.

ವರ್ಷಗಳು ಕಳೆದರೂ ದಂಪತಿಗಳು ಹಿಂತಿರುಗಿ ಬರುವುದಿಲ್ಲ. ಆದರೆ ಪುತ್ರನು ತಂಗಿಯ ಮದುವೆ ಮಾಡಲು ಮನಸ್ಸು ಮಾಡುವುದಿಲ್ಲ ಏಕೆಂದರೆ ಇದರಿಂದ ಸುಮ್ಮನೆ ಹಣ ಖರ್ಚು ಎಂದು ಭಾವಿಸುತ್ತಾನೆ.

ಆದರೆ ಪುತ್ರನ ಕಣ್ಣು ತಂಗಿಯ ಹೆಸರಿನಲ್ಲಿದ್ದ ಆಸ್ತಿಯ ಮೇಲಿತ್ತು ಅದನ್ನು ಆತ ಕಳೆದುಕೊಳ್ಳುವ ಮನಸ್ಸು ಮಾಡುವುದಿಲ್ಲ.

ಆ ಪ್ರದೇಶದ ರಾಜನು ಒಮ್ಮೆ ವಿಚಿತ್ರ ಘೋಷಣೆಯನ್ನು ಮಾಡುತ್ತಾನೆ. ತನ್ನ ಮಗನು ಸತ್ತಿದ್ದು ಆತನ ಸಂಸ್ಕಾರವನ್ನು ಮಾಡುವ ಮೊದಲು ಆತನಿಗೆ ವಿವಾಹ ಮಾಡಬೇಕು ಹೀಗಾಗಿ ಪ್ರಜೆಗಳು ಮನಸ್ಸು ಮಾಡಬೇಕು ಎಂದು ತಿಳಿಸುತ್ತಾನೆ.

ಈ ವಿಚಿತ್ರ ಘೋಷಣೆಯನ್ನು ಯಾರೂ ಸಮ್ಮತಿಸುವುದಿಲ್ಲ ಆದರೆ ದುರಾಸೆಯ ಅಣ್ಣನು ರಾಜನ ಮರಣ ಹೊಂದಿದ ಮಗನಿಗೆ ತಂಗಿಯನ್ನು ವಿವಾಹ ಮಾಡಲು ನಿರ್ಧರಿಸುತ್ತಾನೆ.

ಅಂತೆಯೇ ಆಕೆಯನ್ನು ಅಣಿಗೊಳಿಸಿ ರಾಜನ ಬಳಿ ಕರೆದುಕೊಂಡು ಬರುತ್ತಾರೆ ಮತ್ತು ಬದಲಿಗೆ ರಾಜನಿಂದ ಹಣವನ್ನು ಪಡೆದುಕೊಳ್ಳುತ್ತಾನೆ. ವಿವಾಹದ ನಂತರ ರಾಜ, ವಧು ಮತ್ತು ಸೈನಿಕರು ರಾಜಕುಮಾರನ ಹೆಣವನ್ನು ಸುಡಲು ಭಾಗೀರಥಿ ನದಿ ತಟಕ್ಕೆ ಕರೆದುಕೊಂಡು ಬರುತ್ತಾರೆ.

ಈ ಸಂದರ್ಭದಲ್ಲಿ ಅತೀವ ಮಳೆ ಉಂಟಾಗುತ್ತದೆ. ಆ ಹುಡುಗಿಯನ್ನು ಬಿಟ್ಟು ಹೆಣದ ಸಮೀಪದಿಂದ ಉಳಿದವರೆಲ್ಲರೂ ಮಳೆಯಿಂದ ತಪ್ಪಿಸಿಕೊಳ್ಳಲು ಓಡುತ್ತಾರೆ. ಹುಡುಗಿಯು ಈಗ ರಾಜಕುಮಾರಿಯಾಗಿದ್ದರಿಂದ ರಾಜಕುಮಾರನ ತಂದೆಯು ಆಕೆಯನ್ನು ಹೆಣವನ್ನು ಬಿಟ್ಟು ಬರುವಂತೆ ತಿಳಿಸುತ್ತಾನೆ.

ಆದರೆ ಪತಿಯ ಹೆಣವನ್ನು ಬಿಟ್ಟು ತಾನು ಬರುವುದಿಲ್ಲವೆಂದು ಹುಡುಗಿ ಹೇಳುತ್ತಾಳೆ. ರಾಜಕುಮಾರನ ಶವವನ್ನು ನೋಡುತ್ತಾ ಆಕೆ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾಳೆ ತನ್ನ ತಂದೆ ತಾಯಿ ತನ್ನ ಜೊತೆಗಿರುತ್ತಿದ್ದರೆ ಈ ರೀತಿ ಸಂಭವಿಸುತ್ತಿರಲಿಲ್ಲವೆಂದು.

ರಾತ್ರಿ ಕಳೆಯಿತು ಮತ್ತು ಮರುದಿನ ಆಷಾಢ ಅಮವಾಸ್ಯೆಯಾಗಿತ್ತು ಮತ್ತು ಪೂಜಾ ದಿನವಾಗಿತ್ತು. ತನ್ನ ಪೋಷಕರನ್ನು ನೆನೆದು ಆಕೆ ವ್ರತವನ್ನು ಮಾಡುತ್ತಾಳೆ.

ಸ್ನಾನವನ್ನು ಮಾಡಿ ನದಿ ತಟದಿಂದ ಮಣ್ಣನ್ನು ತೆಗೆದುಕೊಂಡು ಎರಡು ಕಾಳಿಕಾಂಬ ದೀಪಗಳನ್ನು ಮಾಡುತ್ತಾಳೆ. ಬಿದ್ದ ಮರದಿಂದ ನಾರನ್ನು ಸಿದ್ಧ ಮಾಡುತ್ತಾಳೆ ಮತ್ತು ಪೋಷಕರು ಅನುಸರಿಸುವ ವಿಧಾನವನ್ನು ಆಕೆ ಕೂಡ ಅನುಸರಿಸುತ್ತಾಳೆ. ಕಡುಬಿನ ಬದಲಿಗೆ ಆಕೆ ಮಣ್ಣಿನ ಮುದ್ದೆಗಳನ್ನು ತಯಾರಿಸುತ್ತಾಳೆ.

ಆಕೆ ಪೂಜೆಯನ್ನು ಮಾಡುತ್ತಿರುವಾಗ ಯುವ ದಂಪತಿಗಳು ಅಲ್ಲಿಗೆ ಬರುತ್ತಾರೆ ಮತ್ತು ಆಕೆ ಏನು ಮಾಡುತ್ತಿದ್ದಾಳೆ ಎಂದು ಕೇಳುತ್ತಾರೆ. ಶವದ ಮುಂದೆ ಆಕೆ ಪೂಜೆಯನ್ನು ಏಕೆ ಮಾಡುತ್ತಿದ್ದಾಳೆ ಎಂದು ಆ ಯುವ ದಂಪತಿ ಹುಡುಗಿಯನ್ನು ಕೇಳುತ್ತಾರೆ.

ತನ್ನ ವಿಧಿಯನ್ನು ಆ ದಂಪತಿಗಳಿಗೆ ಆಕೆ ವಿವರಿಸುತ್ತಾಳೆ ಮತ್ತು ತಾನೀಗ ಒಂಟಿಯಾಗಿದ್ದು ಮಣ್ಣಿನ ಮುದ್ದೆಗಳನ್ನು ಒಡೆಯುವವರು ಯಾರೂ ಇಲ್ಲ ಎಂದು ಹೇಳುತ್ತಾಳೆ. ಯುವಕನು ಅದನ್ನು ತಾನು ಒಡೆಯುವುದಾಗಿ ಹೇಳುತ್ತಾನೆ. ಆ ಮುದ್ದೆಯನ್ನು ಒಡೆದು ಆತ ದೀರ್ಘ ಸುಮಂಗಲಿ ಭವ ಎಂದು ಹರಸುತ್ತಾನೆ (ದೀರ್ಘ ಮತ್ತು ಆನಂದಕರ ವೈವಾಹಿಕ ಜೀವನ ನಿನ್ನದಾಗಲಿ)

ಆಗ ಹುಡುಗಿಯು ನಗುತ್ತಾ ತನ್ನ ಪತಿ ಮರಣ ಹೊಂದಿದ್ದು ಇದು ಹೇಗೆ ನಡೆಯಲು ಸಾಧ್ಯ ಎಂದು ಕೇಳುತ್ತಾಳೆ. ಮರಣ ಹೊಂದಿದ ರಾಜಕುಮಾರನತ್ತ ಅವರು ನೋಡಿ ಆತ ನಿದ್ದೆ ಮಾಡಿದ್ದು ನೀನು ಏಕೆ ಅವನನ್ನು ಎಚ್ಚರಗೊಳಿಸಬಾರದು ಎಂದು ಕೇಳುತ್ತಾರೆ. ಹೋಗಿ ಅವನನ್ನು ಎಬ್ಬಿಸು ಎಂದು ಹೇಳುತ್ತಾರೆ.

ಆಶ್ಚರ್ಯದಿಂದ ಆಕೆ ರಾಜಕುಮಾರನನ್ನು ನೋಡುತ್ತಾಳೆ ಮತ್ತು ಆತ ಕಣ್ಣುಗಳನ್ನು ತೆರೆಯುತ್ತಿರುತ್ತಾನೆ. ಆಕೆಗೆ ತನ್ನ ಕಣ್ಣುಗಳನ್ನೇ ನಂಬಲು ಆಗುವುದಿಲ್ಲ. ಕೂಡಲೇ ಅಲ್ಲಿಗೆ ಬಂದಿದ್ದ ಯುವ ದಂಪತಿಗಳು ಯಾರು ಎಂದು ಅವರಿಗೆ ಗೊತ್ತಾಗುತ್ತದೆ ಆದರೆ ಅಷ್ಟೊತ್ತಿಗೆ ಅವರು ಹೋಗಿರುತ್ತಾರೆ.

ದಿವ್ಯ ದಂಪತಿಗಳಾದ ಶಿವ ಪಾರ್ವತಿಯರಿಗೆ ಆಕೆ ಮನಸ್ಸಿನಲ್ಲಿಯೇ ವಂದಿಸುತ್ತಾಳೆ ಮತ್ತು ನಡೆದ ಸಂಗತಿಯನ್ನು ರಾಜಕುಮಾರನಿಗೆ ತಿಳಿಸುತ್ತಾಳೆ. ಹೆಣವನ್ನು ಸುಡಲು ರಾಜ ಮತ್ತು ಪರಿವಾರದವರು ಬಂದಾಗ ರಾಜಕುಮಾರ ಮತ್ತು ಆತನ ಪತ್ನಿ ಶಿವ ಪಾರ್ವತಿಯನ್ನು ನೆನೆಯುತ್ತಿರುವುದನ್ನು ಅವರು ನೋಡುತ್ತಾರೆ.

ಈ ಸುದ್ದಿ ಕೂಡಲೇ ಊರಿನಲ್ಲಿ ಹರಡುತ್ತದೆ ಮತ್ತು ಆಷಾಢ ಮಾಸದಲ್ಲಿ ಭೀಮನ ಅಮವಾಸ್ಯೆಯನ್ನು ಮಾಡಲು ಜನರು ಆರಂಭಿಸುತ್ತಾರೆ. ಕಾಳಿಕಾಂಬ ದೀಪಗಳೊಂದಿಗೆ ಈ ವ್ರತವನ್ನು ಮಾಡಬೇಕು. ಮಣ್ಣಿನಿಂದಲೇ ತಯಾರಿಸಿದ ದೀಪಗಳನ್ನು ಕಾಳಿಕಾಂಬ ದೀಪ ಎಂದು ಕರೆಯುತ್ತಾರೆ.

ಈ ದಿನದಂದು ಮದುವೆಯಾಗಿರುವ ಮತ್ತು ಮದುವೆಯಾಗದ ಮಹಿಳೆಯರು ಶಿವ ಹಾಗೂ ಪಾರ್ವತಿಯಲ್ಲಿ ತಮ್ಮ ಕುಟುಂಬದ ಪುರುಷರಿಗೆ ಸುಖ, ಸಮೃದ್ಧಿ ಮತ್ತು ಆರೋಗ್ಯ ನೀಡಲೆಂದು ಪ್ರಾರ್ಥಿಸುತ್ತಾರೆ.

ಮದುವೆಯಾಗಿರುವ ಮಹಿಳೆಯರು ತಮ್ಮ ಸಂಬಂಧವು ಶಿವ-ಪಾರ್ವತಿಯಷ್ಟೇ ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸುತ್ತಾರೆ. ಅಲ್ಲದೆ ಈ ದಿನದಂದು ಮಹಿಳೆಯರು ಕಡುಬು ಮಾಡಿಕೊಂಡು ಅದರಲ್ಲಿ ನಾಣ್ಯವನ್ನು ಅಡಗಿಸಿಡುತ್ತಾರೆ. ಪೂಜೆ ಕೊನೆಗೊಂಡ ಬಳಿಕ ಬಾಲಕರು ಮತ್ತು ಪುರುಷರು ಕಡುಬನ್ನು ಒಡೆದು ಅದರಲ್ಲಿನ ನಾಣ್ಯವನ್ನು ತೆಗೆಯುತ್ತಾರೆ.

ಇದರ ಹಿಂದೆ ತುಂಬಾ ಆಸಕ್ತಿದಾಯಕ ಕಥೆಯಿದೆ. ಹಿಂದಿನ ಕಾಲದಲ್ಲಿ ಹುಡುಗಿಯನ್ನು ರಾಜನ ಪ್ರೇತ್ಮತ್ಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಆ ಹುಡುಗಿ ಶಿವ ಮತ್ತು ಪಾರ್ವತಿಯನ್ನು ತುಂಬಾ ಪೂಜಿಸುತ್ತಿದ್ದಳು.

ಇದರಿಂದ ಶಿವ ಮತ್ತು ಪಾರ್ವತಿ ಆಕೆಯ ಭಕ್ತಿಗೆ ಒಲಿದು ಪ್ರತ್ಯಕ್ಷರಾಗಿ ರಾಜನಿಗೆ ಪುನರ್ಜೀವ ನೀಡುತ್ತಾರೆ. ಶಿವನು ಈ ಸಂದರ್ಭದಲ್ಲಿ ಮಣ್ಣಿನ ಕಡುಬನ್ನು ತುಂಡು ಮಾಡುತ್ತಾನೆ. ಇದನ್ನು ದೀರ್ಘಾಯುಷ್ಯ ಮತ್ತು ಸಮೃದ್ಧಿಯ ಸಂಕೇತವೆನ್ನಲಾಗುತ್ತದೆ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
🕉️sri ಶ್ರೀ ವೆಂಕಟೇಶ ಜ್ಯೋತಿಷಿ 📱9482655011🙏🙏🙏🙏🙏

ನಾಗರ ಪಂಚಮಿ ನಾಡಿಗೆ ದೊಡ್ಡದು !
ಶ್ರಾವಣಮಾಸದ ಶುಕ್ಲ ಪಕ್ಷ ದ ಪಂಚಮಿ ತಿಥಿಯಂದು ನಾಗರಪಂಚಮಿ ಹಬ್ಬದ ಆಚರಣೆ. ಬೆನ್ನಿಗೆ ಹಬ್ಬಗಳ ಸಾಲನ್ನು ಕಟ್ಟಿಕೊಂಡು ಬರುವ ನಾಗರಪಂಚಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಮಳೆಗಾಲದಲ್ಲಿ ಹುತ್ತಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ಹಾವುಗಳು ಅನಿವಾರ್ಯವಾಗಿ ಹೊರಬರುತ್ತವೆ. ಹಾಗೂ ಅವುಗಳಿಗೆ ಇದು ವಂಶಾಭಿವೃದ್ಧಿಯ ಕಾಲವೂ ಆಗಿರುವುದರಿಂದ ಈ ಸಮಯದಲ್ಲೇ ನಾಗಪೂಜೆ ಮಾಡುವ ನಮ್ಮ ಹಿರಿಯರ ವಿಚಾರ ನಿಜಕ್ಕೂ ಅರ್ಥಪೂರ್ಣ.
ಹಬ್ಬಕ್ಕೆ ಮುನ್ನವೇ ತವರಿಗೆ ಬಂದ ಹೆಣ್ಣು ಮಕ್ಕಳು ತಾಯಿ, ಅತ್ತಿಗೆ, ನಾದಿನಿಯರ ಜೊತೆ ಸೇರಿ ಹಬ್ಬದ ತಯಾರಿಯಲ್ಲಿ ತೊಡಗುತ್ತಾರೆ. ತಂಬಿಟ್ಟು, ಶೇಂಗಾ ಉಂಡಿ ತಯಾರಿ ಸಂಭ್ರಮ ಆರಂಭವಾಗುತ್ತದೆ. ಅರಳಿನ ಜೋಳ ಹುರಿದು ಅರಳು ಮಾಡುವುದು, ಅವುಗಳನ್ನು ಬೀಸಿ ಅರಳಿಟ್ಟು ಮಾಡುವುದು, ಅರಳಿನ ಉಂಡಿ, ನವಣೆ ಉಂಡಿ , ದಾಣಿ ಉಂಡಿ ಹೀಗೆ ತರಹೇವಾರಿ ಸಿಹಿಗಳೂ, ಜೊತೆಗೆ ಚಕ್ಕುಲಿ, ಅವಲಕ್ಕಿ ಚೂಡಾಗಳೂ ತಯಾರಾಗುತ್ತವೆ. ನಾಗರಪಂಚಮಿಗೆ ಅಳಿಯನೇನಾದರೂ ಅತ್ತೆಯ ಮನೆಗೆ ಬಂದರೆ ‘ನಾಗರಪಂಚಮಿಗೆ ನಾಚಿಗ್ಗೆಟ್ಟ ಅಳಿಯಾ.’ ಎಂಬ ಉಪಾಧಿ ಪಕ್ಕಾ. ಆದ್ದರಿಂದ ಹೆಣ್ಣು ಮಕ್ಕಳು ಕೆಲದಿನಗಳ ಮಟ್ಟಿಗೆ ತವರಿನಲ್ಲಿ ಸ್ವತಂತ್ರರು!
ಅಧ್ಯಾತ್ಮದ ಹಿನ್ನೆಲೆ :-
ಅಧ್ಯಾತ್ಮದ ಹಿನ್ನೆಲೆಯಲ್ಲಿ ನೋಡುವುದಾದರೆ ಅಧ್ಯಾತ್ಮ ಸಾಧಕರಿಗೆ ಇದು ಸ್ಫೂರ್ತಿಯ ಪುಷ್ಟಿ ತುಂಬುವ ಮಾಸ. ಕುಂಡಲಿನಿಯ ಶಕ್ತಿ ಜಾಗೃತ ಮಾಡಿಕೊಳ್ಳಲು ಅತ್ಯಂತ ಸೂಕ್ತ ಕಾಲ. ಮೂಲಾಧಾರ ಚಕ್ರದಲ್ಲಿ ಮಲಗಿರುವ ಆ ಶಕ್ತಿ, ಸಾಧನೆಯಿಂದ ಎಲ್ಲ ಚಕ್ರಗಳನ್ನು ದಾಟಿ ಎದ್ದು ನಿಂತು ನಾಗರ ಹೆಡೆ ಕಂಡಂತೆ ಕಾಣುತ್ತದೆ ಎಂಬ ಪ್ರತೀತಿ.
ಪೌರಾಣಿಕ ಹಿನ್ನೆಲೆ :-
ಪೌರಾಣಿಕ ಹಿನ್ನೆಲೆಯಲ್ಲಿ ನೋಡುವುದಾದರೆ ಪರೀಕ್ಷಿತನ ಮಗ ಜನಮೇಜಯ, ತನ್ನ ತಂದೆಯನ್ನು ಕೊಂದ ತಕ್ಷ ಕನ ಸಂತತಿ ನಾಶವಾಗಬೇಕೆಂದು ಸರ್ಪಯಾಗ ಮಾಡಿಸುತ್ತಾನೆ. ಆ ಯಾಗಕ್ಕೆ ಅನೇಕ ಸರ್ಪಗಳು ಆಹುತಿಯಾಗುತ್ತವೆ. ಆಗ ಸರ್ಪರಾಜ ವಾಸುಕಿ ಬ್ರಹ್ಮನ ಮೊರೆಹೋಗುತ್ತಾನೆ. ತಮ್ಮ ತಾಯಿಯ ಶಾಪವೇ ಇದಕ್ಕೆಲ್ಲಾ ಕಾರಣ ಎಂದು ವಾಸುಕಿಗೆ ತಿಳಿಯುತ್ತದೆ. ‘ಜರಾತ್ಕಾರು ಮುನಿಗೆ ನಿನ್ನ ತಂಗಿಯನ್ನು ಕೊಟ್ಟು ಮದುವೆ ಮಾಡು. ಅವಳಿಂದ ಜನಿಸುವ ಆಸ್ತಿಕನು ನಿಮ್ಮ ಶಾಪ ವಿಮೋಚನೆ ಮಾಡುತ್ತಾನೆ.’ ಎಂದು ಬ್ರಹ್ಮ ಹೇಳುತ್ತಾನೆ. ಬ್ರಹ್ಮನ ಮಾತಿನಂತೆ ಆಸ್ತಿಕನ ಜನನವಾಗುತ್ತದೆ. ಅಲ್ಲಿಯವರೆಗೂ ಸರ್ಪಯಾಗದಲ್ಲಿ ಸರ್ಪಗಳ ಆಹುತಿ ನಡೆದೇ ಇರುತ್ತದೆ. ಕೊನೆಗೊಂದು ದಿನ ಜನಮೇಜಯನ ಯಾಗಶಾಲೆಗೆ ಆಸ್ತಿಕಮುನಿ ಬರುತ್ತಾನೆ. ಅವನ ಮನಃಪರಿವರ್ತನೆ ಮಾಡಿ ಯಜ್ಞ ನಿಲ್ಲಿಸುತ್ತಾನೆ. ಆಗ ಸರ್ಪಗಳ ಸಂತತಿ ಉಳಿಯುವಂತಾಗುತ್ತದೆ. ಇದೆಲ್ಲ ನಡೆದದ್ದು ಶ್ರಾವಣಮಾಸದ ಪಂಚಮಿ ದಿನದಂದು ಎನ್ನುವ ನಂಬಿಕೆ ಇದೆ. ಹಾಗಾಗಿ ನಾಗಗಳಿಗೆ ಆಸ್ತಿಕನ ವರದಾನವಾದ ಶ್ರಾವಣ ಶುದ್ಧ ಪಂಚಮಿಯನ್ನು ನಾಗರಪಂಚಮಿ ಎಂದು ಆಚರಿಸಲಾಗುತ್ತದೆ ಎಂಬುದು ಪ್ರತೀತಿ.
ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

ನಮ್ಮಲ್ಲಿ ಹೆಚ್ಚಿನವರಿಗೆ ಹಸು ಮತ್ತು ಎಮ್ಮೆಯ ಹಾಲಿನ ವ್ಯತ್ಯಾಸ ಅರ್ಥವಾಗುವುದಿಲ್ಲ…* ಹೆಚ್ಚಿನವರಿಗೆ ಗೊತ್ತಿಲ್ಲ.
🐃 ಎಮ್ಮೆ ಕೆಸರನ್ನು ಪ್ರೀತಿಸುತ್ತದೆ.
🐂 ಹಸು ತನ್ನ ಸಗಣಿ ಮೇಲೆ ಕೂಡ ಕೂರುವುದಿಲ್ಲ. ಹಸು ಶುದ್ಧತೆಯನ್ನು ಪ್ರೀತಿಸುತ್ತದೆ.
🐃 ಎಮ್ಮೆಯನ್ನು 2ಕಿಮೀ ದೂರ ತೆಗೆದುಕೊಂಡು ಹೋಗಿ ಬಿಟ್ಟರೆ, ಮನೆಗೆ ಹಿಂತಿರುಗುವುದಿಲ್ಲ. ಪವರ್ ಮೆಮೊರಿ ಶೂನ್ಯವಾಗಿದೆ.
🐂 ನಾವು ಹಸುವನ್ನು 5ಕಿ.ಮೀ. ದೂರ ಬಿಟ್ಟರೂ, ಅದು ಮನೆಗೆ ಹಿಂದಿರುಗುತ್ತದೆ.. ಹಸುವಿನ ಹಾಲಿಗೆ ನೆನಪಿನ ಶಕ್ತಿ ಇದೆ.
🐃 ಹತ್ತು ಎಮ್ಮೆಗಳನ್ನು ಕಟ್ಟಿಹಾಕಿ ಅವುಗಳ ಮಕ್ಕಳನ್ನು ಬಿಟ್ಟರೆ ಒಂದು ಮರಿಯೂ ತನ್ನ ತಾಯಿಯನ್ನು ಗುರುತಿಸುವುದಿಲ್ಲ.
🐂 ಆದರೆ ಹಸುವಿನ ಕರು, ಕೆಲವು ನೂರು ಹಸುಗಳ ಮಧ್ಯೆ ತಾಯಿಯನ್ನು ಗುರುತಿಸಬಲ್ಲದು.
🐃 ಹಾಲು ತೆಗೆಯುವಾಗ ಎಮ್ಮೆ ತನ್ನೆಲ್ಲ ಹಾಲನ್ನು ಕೊಡುತ್ತದೆ.
🐂 ಹಸು ತನ್ನ ಮರಿಗೆ ಸ್ವಲ್ಪ ಹಾಲನ್ನು ಬಚ್ಚಿಡುತ್ತದೆ. ಇದು ಮರಿ ಕುಡಿಯುವಾಗ ಮಾತ್ರ ಸಂಗ್ರಹವಾಗಿರುವ ಹಾಲನ್ನು ಬಿಡುಗಡೆ ಮಾಡುತ್ತದೆ. ಹಸುವಿನ ಹಾಲಿನಲ್ಲಿ ಮೃದುತ್ವವಿದೆ
🐃 ಎಮ್ಮೆ ಬಿಸಿಲು ಅಥವಾ ಶಾಖವನ್ನು ತಡೆದುಕೊಳ್ಳುವುದಿಲ್ಲ.
🐂 ಹಸು ಏಪ್ರಿಲ್-ಮೇ ಸೂರ್ಯನನ್ನೂ ಸಹ ತಡೆದುಕೊಳ್ಳಬಲ್ಲದು.
🐃 ಎಮ್ಮೆ ದೊಡ್ಡದಾಗಿದೆ ಮತ್ತು ಸೋಮಾರಿಯಾಗಿದೆ ಮತ್ತು ಬೇಗನೆ ಕಿರುಚುವುದಿಲ್ಲ. ಇದರ ಹಾಲು ದಪ್ಪವಾಗಿರುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ನಾವು ಅದರ ಹಾಲನ್ನು ಸೇವಿಸಿದಾಗ ಅದೇ ಸೋಮಾರಿತನ ಮತ್ತು ಅಜೀರ್ಣ ಉಂಟಾಗುತ್ತದೆ. ಹಾಲುಕರೆಯುವ ಸಮಯದಲ್ಲಿ ಮಾಲೀಕರು ಕರುವನ್ನು ಸಾಕುತ್ತಾರೆ.
🐂 ತಾಯಿಯಿಂದ ಬೇರ್ಪಟ್ಟ ಕರುವನ್ನು ನಿಭಾಯಿಸುವುದು ತುಂಬಾ ಕಷ್ಟ. ಹಾಲುಣಿಸುವ ಸಮಯದಲ್ಲಿ ಕರುವನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಅದು ತಾಯಿಯಿಂದ ತನ್ನ ಪಾಲಿನ ಹಾಲನ್ನು ಕುಡಿದು ಮುಗಿದ ನಂತರವೂ. ಆ ಕಾಳಜಿ ಮತ್ತು ಮೃದುತ್ವವು ಅದರ ಹಾಲಿನಲ್ಲಿ ಹಂಚಲ್ಪಟ್ಟಿದೆ.
ಹಸುವಿನ ಬೆನ್ನ ಮೇಲಿರುವ “ಸೂರ್ಯ ಕೇತು ನರ” ಬಿಸಿಲಿರುವಾಗ ಜಾಗೃತವಾಗುತ್ತದೆ. ಈ ನರವು ಸೂರ್ಯ, ನಕ್ಷತ್ರಗಳು, ಚಂದ್ರ ಮತ್ತು ಬ್ರಹ್ಮಾಂಡದಿಂದ “ಕಾಸ್ಮಿಕ್ ಶಕ್ತಿಯನ್ನು” ಹೀರಿಕೊಳ್ಳುತ್ತದೆ. ಆದ್ದರಿಂದಲೇ ಹಸುವಿನ ಹಾಲಿಗೆ ರೋಗಗಳನ್ನು ಹೋಗಲಾಡಿಸುವ ಶಕ್ತಿಯಿದೆ. ವಿಶ್ವದಲ್ಲಿ ಯಾವುದೇ ಜೀವಿಯು ಅಂತಹ ಶಕ್ತಿಯನ್ನು ಹೊಂದಿಲ್ಲ.
ವಾಸ್ತವವಾಗಿ, ಹಸುವಿನ ಹಾಲು ಸೇವಿಸಿದಾಗ ನಿಮ್ಮ ದೇಹವನ್ನು ಬಿಸಿ ಮಾಡುವುದಿಲ್ಲ. ಎಮ್ಮೆಯ ಹಾಲು ದಟ್ಟವಾಗಿರುತ್ತದೆ, ಸೇವಿಸಿದಾಗ ದೇಹವು ಬಿಸಿಯಾಗುತ್ತದೆ ಮತ್ತು ನಮ್ಮ ದೇಹದಲ್ಲಿನ ಸಕ್ಕರೆಯೂ ಹೆಚ್ಚಾಗುತ್ತದೆ (ಜೆರ್ಸಿ ಹಾಲಿನಲ್ಲಿ ಹೆಚ್ಚು) ಸಕ್ಕರೆಯ ಮಟ್ಟವು ಹೆಚ್ಚಾಗುವುದರಿಂದ ಇದು ಸಕ್ಕರೆ ರೋಗಿಗಳಿಗೆ ಒಳ್ಳೆಯದಲ್ಲ. ಆದರೆ ಹಸುವಿನ ಹಾಲು ಸೇವಿಸಿದಾಗ ಅದಕ್ಕೆ ವಿರುದ್ಧವಾಗಿರುತ್ತದೆ.
ನಾವು ಎಲ್ಲದರಲ್ಲೂ ಕೊಬ್ಬಿನಂಶವನ್ನು ನೋಡುತ್ತೇವೆ. ನಾವು ಜಾಹೀರಾತಿನ ಸಲಹೆಯನ್ನು ಅನುಸರಿಸುತ್ತೇವೆ, ಸಂಸ್ಕರಿಸಿದ ಎಣ್ಣೆಯು ಕೊಲೆಸ್ಟ್ರಾಲ್ ಅನ್ನು ಉಂಟುಮಾಡುವುದಿಲ್ಲ, ನಾವು ಆ ಎಣ್ಣೆಯನ್ನು ಬಳಸುತ್ತೇವೆ. ಆದರೆ ವಾಸ್ತವವೆಂದರೆ ನಾವು ಪಾವತಿಸಿ ಮನೆಗೆ ಬರುತ್ತೇವೆ, ಎಮ್ಮೆಯ ಹಾಲಿನಲ್ಲಿ ಹೆಚ್ಚಿನ ಕೊಬ್ಬಿನಂಶವಿದೆ, ಇದು ಕೊಲೆಸ್ಟ್ರಾಲ್‌ಗೂ (ಕೊಬ್ಬಿನ ಅಂಶ) ಕಾರಣವಾಗಿದೆ.
🐃 ಎಮ್ಮೆ ಹಾಲನ್ನು ಒಲೆಯ ಮೇಲೆ ಇಟ್ಟು ಸ್ವಲ್ಪ ಬಿಸಿ ಮಾಡಿದಾಗ ಅದರಲ್ಲಿನ ಮೂರು ಮತ್ತು ನಾಲ್ಕನೆಯ ಪೋಷಕಾಂಶಗಳು ಆವಿಯಾಗುತ್ತದೆ.
🐂 ಹಸುವಿನ ಹಾಲನ್ನು ಎಷ್ಟು ಬಾರಿ ಕುದಿಸಿದರೂ ಅದರಲ್ಲಿರುವ ಪೌಷ್ಟಿಕ ಗುಣಗಳು ನಾಶವಾಗುವುದಿಲ್ಲ.
🙏 ದಯವಿಟ್ಟು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ ನಾವು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೇವೆ ❤️

ನಮ್ಮಲ್ಲಿ ಹೆಚ್ಚಿನವರಿಗೆ ಹಸು ಮತ್ತು ಎಮ್ಮೆಯ ಹಾಲಿನ ವ್ಯತ್ಯಾಸ ಅರ್ಥವಾಗುವುದಿಲ್ಲ…* ಹೆಚ್ಚಿನವರಿಗೆ ಗೊತ್ತಿಲ್ಲ.🐃 ಎಮ್ಮೆ ಕೆಸರನ್ನು ಪ್ರೀತಿಸುತ್ತದೆ.🐂 ಹಸು ತನ್ನ ಸಗಣಿ ಮೇಲೆ ಕೂಡ ಕೂರುವುದಿಲ್ಲ. ಹಸು ಶುದ್ಧತೆಯನ್ನು ಪ್ರೀತಿಸುತ್ತದೆ. 🐃 ಎಮ್ಮೆಯನ್ನು 2ಕಿಮೀ

Read More

ಬೇಡ ಜಂಗಮ ಮೀಸಲಾತಿ ಸುಳ್ಳಿನ ಪ್ರತಿಪಾದನೆಯ ಹುಸಿ ಹೋರಾಟಕ್ಕೆ ಸಂವಿಧಾನ ಬದ್ಧ ಹೋರಾಟ ಬೆಂಗಳೂರ್ ಪ್ರೀಡಂ ಪಾರ್ಕ್ ಜುಲೈ 28,2022 ಬೆಳಗ್ಗೆ 10ಕೆ ವೀರಶೈವ ಲಿಂಗಾಯತ ಸಮುದಾಯದವರು “ಸತ್ಯದ ಪ್ರತಿಪಾದನೆ ” ಎoಬ ಹೆಸರನಲ್ಲಿ

Read More

“””””””””””ಧಾರ್ಮಿಕ ಆಚರಣೇ ಏಕೇ”””””””””””””💠 ನಾವು ಸಂದ್ಯಾವಂದನೆ ಮಾಡುವುದೇಕೆ?ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ “ಸಂಧ್ಯಾವಂದನೆ”. ಸಂಧ್ಯಾವಂದನೆ ಮಾಡುವುದರಿಂದ

Read More

” ನಮಗೆ ಏಟು ಬಿದ್ದಿರುವುದು ಶತ್ರುಗಳಿಂದ ಮಾತ್ರವಲ್ಲ , ಮಿತ್ರರಿಂದ ಸಹ . ಹೀಗಾಗಿ ನಮ್ಮ ರೊಟ್ಟಿಯ ರುಚಿ ಸ್ವಲ್ಪ ಕಹಿ ಆಗಿದೆ “ಪಾಬ್ಲೋ ನೆರೂಡಾ ( Pablo Neruda )ಸಾಹಿತ್ಯದ ನೊಬೆಲ್ ಪ್ರಶಸ್ತಿ

Read More

*ವಾಹನ ತಪಾಸಣೆ ಪೊಲೀಸ್ ಸಿಬ್ಬಂದಿಗೆ ರವಿಕಾಂತೇಗೌಡ ಖಡಕ್ ಎಚ್ಚರಿಕೆ. ಆದೇಶ ಉಲ್ಲಂಘಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ.* ಬೆಂಗಳೂರು “ದಾಖಲೆ ಪರಿಶೀಲನೆ ನೆಪದಲ್ಲಿ ಅನಗತ್ಯವಾಗಿ ವಾಹನ ಸವಾರರನ್ನು ತಡೆದು ತೊಂದರೆ ಕೊಡುವ ಪೊಲೀಸರ ವಿರುದ್ಧ ಕ್ರಮ

Read More