ನವದೆಹಲಿ, ಅಕ್ಟೋಬರ್ 25: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದೆೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತಕ್ಷಣವೇ ಎಲ್ಲಾ ಭಾರತೀಯರು ಉಕ್ರೇನ್ ತೊರೆಯುವಂತೆ ಸಲಹೆೆಯನ್ನು ನೀಡಿದೆ.

ಕಳೆದ ವಾರವಷ್ಟೇ ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ನಂತರ ಇದೇ ರೀತಿಯ ಸಲಹೆಯನ್ನು ನೀಡಲಾಗಿತ್ತು. ಅದಾದ ನಂತರ ಒಂದು ವಾರದಲ್ಲಿ ಎರಡನೇ ಬಾರಿ ಹೊಸ ಸಲಹೆಯನ್ನು ಹೊರಡಿಸಲಾಗಿದೆ.

https://380f3dcfaf1f0e47bb985a6d3878b153.safeframe.googlesyndication.com/safeframe/1-0-38/html/container.html

“ಅಕ್ಟೋಬರ್ 19 ರಂದು ರಾಯಭಾರ ಕಚೇರಿ ನೀಡಿದ ಸಲಹೆಯ ಮುಂದುವರಿಕೆಯಾಗಿ, ಉಕ್ರೇನ್‌ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ಲಭ್ಯವಿರುವ ವಿಧಾನಗಳ ಮೂಲಕ ತಕ್ಷಣವೇ ಉಕ್ರೇನ್ ತೊರೆಯುವಂತೆ ಸೂಚಿಸಲಾಗಿದೆ,” ಎಂದು ರಾಯಭಾರ ಕಚೇರಿ ತಿಳಿಸಿದೆ.

Recommended Video

https://geo.dailymotion.com/player/x1gwb.html?video=x8evyeb&autoplay=true&mute=true&loop=false

ಪಾಕ್ ಕ್ರಿಕೆಟ್ ಪ್ರೇಮಿಗೆ ಗೂಗಲ್ CEO ಸುಂದರ್ ಪಿಚ್ಚೈ ಕೊಟ್ಟ ಕೌಂಟರ್ ಈಗ ವೈರಲ್

ಕಚ್ಚಾ ತೈಲ; ಸೌದಿ ಅರೇಬಿಯಾಕ್ಕೆ ತಕ್ಕ ಪಾಠ ಕಲಿಸಲು ಮುಂದಾದ ಒಪೆಕ್ ರಾಷ್ಟ್ರಗಳು?

ಕಚ್ಚಾ ತೈಲ; ಸೌದಿ ಅರೇಬಿಯಾಕ್ಕೆ ತಕ್ಕ ಪಾಠ ಕಲಿಸಲು ಮುಂದಾದ ಒಪೆಕ್ ರಾಷ್ಟ್ರಗಳು?

ಈಗಾಗಲೇ ಉಕ್ರೇನ್ ತೊರೆದಿರುವ ಕೆಲವು ಭಾರತೀಯರು:

ಈ ಹಿಂದಿನ ಸಲಹೆಯ ಮೇರೆಗೆ ಕೆಲವು ಭಾರತೀಯ ಪ್ರಜೆಗಳು ಈಗಾಗಲೇ ಉಕ್ರೇನ್ ಅನ್ನು ತೊರೆದಿದ್ದಾರೆ. ದೇಶದಿಂದ ನಿರ್ಗಮಿಸಲು ಉಕ್ರೇನಿಯನ್ ಗಡಿಗೆ ಪ್ರಯಾಣಿಸಲು ಯಾವುದೇ ಮಾರ್ಗದರ್ಶನ ಅಥವಾ ಸಹಾಯಕ್ಕಾಗಿ ಭಾರತೀಯ ಪ್ರಜೆಗಳನ್ನು ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.

ಸುಮಾರು ಮೂರು ವಾರಗಳ ಹಿಂದೆ ಕ್ರೈಮಿಯಾದಲ್ಲಿ ಸಂಭವಿಸಿದ ಬೃಹತ್ ಸ್ಫೋಟಕ್ಕೆ ಪ್ರತಿಕ್ರಿಯೆಯಾಗಿ ಮಾಸ್ಕೋ ವಿವಿಧ ಉಕ್ರೇನಿಯನ್ ನಗರಗಳನ್ನು ಗುರಿಯಾಗಿಟ್ಟುಕೊಂಡು ಪ್ರತೀಕಾರದ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ. ಇದರಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಹಗೆತನದ ತೀವ್ರವಾಗಿದೆ.

ಮಾತುಕತೆ ಮೂಲಕ ಸಂಘರ್ಷ ಪರಿಹಾರಕ್ಕೆ ಒತ್ತಾಯ:

Advertisement

ಕೀವ್ ಸ್ಫೋಟಕ್ಕೆ ಮಾಸ್ಕೋ ಕಾರಣ ಎಂದು ಆರೋಪಿಸಲಾಗುತ್ತಿದೆ. ಇದರ ಮಧ್ಯೆ ರಾಜತಾಂತ್ರಿಕತೆ ಮಾತುಕತೆಯ ಮೂಲಕ ಸಂಘರ್ಷಕ್ಕೆ ಪರಿಹಾರವನ್ನು ಕಂಡುಕೊಳ್ಳುವಂತೆ ಭಾರತವು ಒತ್ತಾಯಿಸುತ್ತಿದೆ.

ಉಕ್ರೇನ್‌ನಿಂದ ರಷ್ಯಾದ ಮೇಲೆ ಪ್ರತಿದಾಳಿ

ಕಳೆದ ಎಂಟು ತಿಂಗಳಿನಿಂದಲೂ ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಮುಂದುವರಿದಿದೆ. ಉಕ್ರೇನ್ ಪೂರ್ವ ಮತ್ತು ದಕ್ಷಿಣದಲ್ಲಿ ಪ್ರಮುಖ ಪ್ರತಿ-ದಾಳಿಗಳನ್ನು ನಡೆಸುತ್ತಿದೆ. ಈ ಸಂಘರ್ಷದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದು, ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ಉಕ್ರೇನಿಯನ್ ನಗರಗಳು ಪೀಸ್ ಪೀಸ್ ಆಗಿವೆ. ಜಾಗತಿಕ ಆರ್ಥಿಕತೆಯನ್ನೇ ಶೇಕ್ ಮಾಡಿದೆ. ಉಕ್ರೇನಿಯನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಆಂಡ್ರಿ ಯೆರ್ಮಾಕ್, ರಷ್ಯಾ ಅಲ್ಲಿ ಪ್ರಚಾರ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದು ಆರೋಪಿಸಿದರು.

null

Comments 

MORE 

Related Posts