ಈರುಳಿ ರಸ

ಆರೋಗ್ಯವಂತರಾಗಿರಲು ಮತ್ತು ರೋಗ ಮುಕ್ತವಾಗಿರಲು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರಗಳ ಸೇವನೆ ಮಾಡುವುದು ಬಹಳ ಮುಖ್ಯ. ಎಲ್ಲರಿಗೂ ತಿಳಿದಿರುವಂತೆ ತಾಜಾ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಲಾಭಗಳನ್ನು ಪಡೆಯಬಹುದು.

ಕೆಮ್ಮು ಮತ್ತು ನೆಗಡಿ ಸಮಸ್ಯೆಗೆ ಈರುಳ್ಳಿ ರಸದಿಂದ ಮನೆ ಮದ್ದು

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಹಸಿ ಈರುಳ್ಳಿ ರಸವನ್ನು ಸೇವಿಸಿ. ನಿಮ್ಮ ಸಲಾಡ್‌ನಲ್ಲಿ ಹಸಿ ಈರುಳ್ಳಿಯನ್ನು ಸೇರಿಸಿ ಅಥವಾ ಅಡುಗೆಗಳಲ್ಲಿ ಈರುಳ್ಳಿಯನ್ನು ಬಳಸಿ.

ಪರಂಪರಾಗತ ಆಯುರ್ವೇದ ರವರ ದಿನಕ್ಕೊಂದು ಆರೋಗ್ಯ ಮಾಹಿತಿನಿಮಗೆ ಗೊತ್ತಿರಲಿ, ಬೆಲ್ಲದಲ್ಲಿ ಅಪಾರ ಪ್ರಮಾಣದ ಕಬ್ಬಿಣಾಂಶ ಹಾಗೂ ವಿಟಮಿನ್ ಸಿ ಅಂಶಗಳು ಇರುವುದರಿಂದ, ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ನಮ್ಮ ದೇಹದ ತಾಪಮಾನವನ್ನು ಸಮತೋಲನ ಮಾಡುತ್ತದೆ.
ಸಾಧ್ಯವಾದಷ್ಟು ಸಾವಯುವ ಬೆಲ್ಲಕ್ಕೆ ಹೆಚ್ಚು ಒತ್ತುಕೊಡುವುದು ಒಳ್ಳೆಯದು. ಕೊಂಚ ದುಬಾರಿ ಆದರೂ ಪರವಾಗಿಲ್ಲ,ಇದರಲ್ಲಿ ಯಾವುದೇ ರಾಸಾಯನಿಕ ಅಂಶಗಳು ಇರುವುದಿಲ್ಲ.
ಇನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಗೆ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ, ಸ್ವಲ್ಪ ಸಾವಯವ ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯುವುದರಿಂದ ಅನೇಕ ಬಗೆಯ ಆರೋಗ್ಯ ಪ್ರಯೋಜನಗಳನ್ನು ನಾವು ನಿರೀಕ್ಷೆ ಮಾಡಬಹುದು, ಅವು ಯಾವುದು ಎಂಬುದನ್ನು ಮುಂದೆ ಓದಿ

ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು
ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು

ಈಗಾಗಲೇ ಹೇಳಿದ ಹಾಗೆ, ಸಾವಯವ ಬೆಲ್ಲದಲ್ಲಿ ದೇಹದ ತಾಪಮಾನವನ್ನು ಸಮತೋಲನ ಗೊಳಿಸುವ ಗುಣ ಲಕ್ಷಣಗಳು ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಅದರಲ್ಲೂ ಬೆಲ್ಲಬೆರೆಸಿ ನೀರು ಕುಡಿಯುವುದರಿಂದ, ದೇಹದಲ್ಲಿನ ರಕ್ತನಾಳಗಳು ಹಿಗ್ಗುತ್ತವೆ.
ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಚಾರ ಉಂಟಾಗಿ ಮೆಟಬಾಲಿಸಂ ಪ್ರಕ್ರಿಯೆ ಚುರುಕಾಗಿ ನಡೆದು ನಮ್ಮ ದೇಹದಿಂದ ವಿಷಕಾರಿ ಅಂಶಗಳು ಮತ್ತು ತ್ಯಾಜ್ಯಗಳು ಹೊರ ಹೋಗಲು ಅನುಕೂಲವಾಗುತ್ತದೆ. ಇದರಿಂದಾಗಿ ಜೀರ್ಣ ಕ್ರಿಯೆ ಪ್ರಕ್ರಿಯೆಗಳು ಸರಾಗವಾಗಿ ನಡೆದು, ಆರೋಗ್ಯವನ್ನು ಉತ್ತಮವಾಗಿ ಕಾಯ್ದುಕೊಳ್ಳಲು ನೆರವಾಗುತ್ತದೆ.
ರೋಗಗಳಿಂದ ಮುಕ್ತಿ ಪಡೆದುಕೊಳ್ಳಬಹುದು
ರೋಗಗಳಿಂದ ಮುಕ್ತಿ ಪಡೆದುಕೊಳ್ಳಬಹುದು
ಚಳಿಗಾಲದಲ್ಲಿ ಬೀಸುವ ತಂಪಾದ ವಾತಾವರಣದಿಂದಾಗಿ ಶೀತ ಕೆಮ್ಮು, ಜ್ವರ ಸಾಮಾನ್ಯವಾಗಿ ಕಾಡುತ್ತದೆ. ಅಲ್ಲದೇ ಈ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿ ಕೂಡ ಕುಂದುತ್ತದೆ. ಇಂತಹ ಸಮಯದಲ್ಲಿ ಆರೋಗ್ಯವೃದ್ಧಿಸುವ ಆಹಾರ ಪದಾರ್ಥಗಳನ್ನು ಜಾಸ್ತಿ ಸೇವನೆ ಮಾಡಬೇಕಾಗುತ್ತದೆ, ಅಲ್ಲದೇ ರೋಗನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ.
ಹಾಗಾಗಿ ಈ ಸಮಯದಲ್ಲಿ ಬೆಲ್ಲದ ನೀರು ಸೇವನೆ ಮಾಡುವುದರಿಂದ ಅದರಲ್ಲಿರುವ ಅನುಕೂಲಕರ ವಿಟಮಿನ್ ಮತ್ತು ಖನಿಜಾಂಶಗಳು ಅಂಶಗಳು, ಚಳಿಗಾಲದಲ್ಲಿ ಕಾಡುವ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ, ಜೊತೆಗೆ ಸೋಂಕುಗಳ ವಿರುದ್ಧ ನಮಗೆ ರಕ್ಷಣೆ ನೀಡುತ್ತದೆ.

ಅಜೀರ್ಣ ಸಮಸ್ಯೆ ನಿವಾರಿಸಲು
ಸಾಮಾನ್ಯವಾಗಿ ಮಳೆಗಾಲದಲ್ಲಿ ಹಾಗೂ ಚಳಿಗಾಲದಲ್ಲಿ ಜೀರ್ಣಶಕ್ತಿ ಸಮಸ್ಯೆ ಕಾಡುವುದು ಸಹಜ. ಈ ಸಮಯಲ್ಲಿ ಕೆಲವೊಮ್ಮೆ ನಾವು ಸೇವಿಸುವ ಯಾವುದೇ ಆಹಾರ ಜೀರ್ಣವಾಗಲು,ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ನಮ್ಮ ದೇಹದ ವಿಷಕಾರಿ ಅಂಶಗಳು ದೀರ್ಘಕಾಲ ದೇಹದಲ್ಲಿ ಉಳಿಯುತ್ತವೆ.
ಹಾಗಾಗಿ ಈ ಸಮಯದಲ್ಲಿ ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಂಡು, ಅಜೀರ್ಣತೆ ಹಾಗೂ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸಬೇಕೆಂದರೆ, ಕೆಲವೊಂದು ನಾರಿನಾಂಶ ಇರುವ ಆಹಾರಗಳನ್ನು ಸೇವನೆ ಮಾಡುವುದರ ಜೊತೆಗೆ, ದೇಹಕ್ಕೆ ಬೇಕಾಗುವ ವಿಟಮಿನ್ ಅಂಶಗಳು, ಖನಿಜಾಂಶಗಳು, ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ ಅಂಶದ ಜೊತೆಗೆ ಅನೇಕ ಬಗೆಯ ವಿಟಮಿನ್ ಅಂಶಗಳಾದ ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಬಿ6 ಮತ್ತು ವಿಟಮಿನ್-ಸಿ ಅಂಶಗಳನ್ನು ಹೆಚ್ಚಾಗಿ ಹೊಂದಿರುವ ಮಿತವಾಗಿ ಬೆಲ್ಲ ಸೇವನೆಯನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಅದರಲ್ಲೂ ಬೆಲ್ಲ ಬೆರೆಸಿದ ನೀರು, ಮಿತವಾಗಿ ಕುಡಿಯುವುದರಿಂದ, ಹೊಟ್ಟೆಯಲ್ಲಿ ಆಹಾರವನ್ನು ಜೀರ್ಣ ಮಾಡಲು ಅಗತ್ಯವಾಗಿ ಬೇಕಾದ ಜೀರ್ಣರಸಗಳು ಉತ್ಪತ್ತಿಯಾಗುತ್ತವೆ. ಮುಂದಿನ ಜೀರ್ಣ ಪ್ರಕ್ರಿಯೆ ಸರಾಗವಾಗಿ ನಡೆಯಲು ಇದು ಅನುಕೂಲವಾಗುತ್ತದೆ.

ಮಧುಮೇಹಿಗಳು ಗಮನಿಸಬೇಕಾದ ಅಂಶ
ನೆನಪಿಡಿ, ಒಂದು ವೇಳೆ ನಿಮಗೆ ಸಕ್ಕರೆ ಕಾಯಿಲೆ ಇದ್ದರೆ, ಅಥವಾ ಈಗಾಗಲೇ ಮಧುಮೇಹಕ್ಕೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಬೆಲ್ಲವನ್ನು ಸೇವಿಸುವ ಮೊದಲು ನಿಮ್ಮ ಹತ್ತಿರದ ವೈದ್ಯರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆದುಕೊಳ್ಳಿ. ಮೊದಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಿಕೊಳ್ಳಿ ನಂತರ ಅವರಿಂದ ಸೂಕ್ತವಾದ ಮಾಹಿತಿಯನ್ನು ಪಡೆದುಕೊಳ್ಳಿ. ಸಾಧ್ಯವಾದರೆ ಮಧುಮೇಹಿಗಳು ಬೆಲ್ಲದಿಂದ ದೂರವಿದ್ದರೆ ಒಳ್ಳೆಯದು.


Manoharv Shetty ಅವರ ಬಗ್ಗೆ
Manoharv Shetty
No Designation
Read More

ಮುಂದಿನ ಲೇಖನ
ನುಗ್ಗೆಸೊಪ್ಪು ಮಧುಮೇಹ, ಕೊಲೆಸ್ಟ್ರಾಲ್‌, ಬಿಪಿ ಸಮಸ್ಯೆಗೆ ಬಹಳ ಒಳ್ಳೆಯದು
ಕ್ಯಾನ್ಸರ್‌ನಿಂದ ನಮ್ಮನ್ನು ಕಾಪಾಡುವ ಪವರ್‌ಫುಲ್ ತರಕಾರಿ ಜ್ಯೂಸ್‌ಗಳು
ಯೋನಿ ಅನಾರೋಗ್ಯಕರವಾಗಿದೆ ಎಂದು ತಿಳಿಸುವ 7 ಚಿಹ್ನೆಗಳಿವು….
ಸಾಫ್ಟ್ ಡ್ರಿಂಕ್ಸ್-ಸ್ವೀಟ್ಸ್ ಜಾಸ್ತಿ ಸೇವಿಸಿದರೆ, ಹೃದಯ-ಲಿವರ್‌ಗೆ ಹಾನಿ!!
ಕಿಡ್ನಿ, ಲಿವರ್, ಕಣ್ಣು, ಹೃದಯದ ಆರೋಗ್ಯ ಕಾಪಾಡುವ ಆಹಾರಗಳು

ಮತ್ತಷ್ಟು ಸಲಹೆ ಸೂಚನೆಗಳಿಗೆ ನಮ್ಮನ್ನು ವಾಟ್ಸಾಪ್ನಲ್ಲಿ ಸಂಪರ್ಕಿಸಿ

https://wa.me/qr/JCJE76QXDINTA1
6361528300

ಧನ್ಯವಾದಗಳು

Related Posts